Just In
Don't Miss
- News
ಬಿಜೆಪಿ ವಿರುದ್ಧ ಗರಂ; ಪದ್ಮಶ್ರೀ ವಾಪಸ್ ಕೊಡುವೆ ಎಂದ ಮೊಗುಲಯ್ಯ
- Sports
ಮುಂಬೈ ಗೆದ್ದರೆ ಆರ್ಸಿಬಿ ಪ್ಲೇಆಫ್ಗೆ; ಡೆಲ್ಲಿ ಸೋಲಿಸಿ ಎಂದು ರೋಹಿತ್ ಪಡೆಗೆ ಮನವಿ ಇಟ್ಟ ಕೊಹ್ಲಿ!
- Technology
ಜಿಯೋ ಫೈಬರ್ ಕನೆಕ್ಷನ್ಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೀಗೆ ಮಾಡಿ!
- Automobiles
ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ
- Finance
ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂ. ಪಡೆದ ಇಮುದ್ರಾ!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Movies
ಬಾಡಿ ಶೇಮಿಂಗ್ ಇದೆ, ಒತ್ತಡ ಬೇಡ: ನಟಿ ಮಯೂರಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Vastu Tips for Wallet : ನಿಮ್ಮ ಪರ್ಸ್‌ನಲ್ಲಿ ಇವುಗಳನ್ನು ಇಡಲೇಬೇಡಿ ಬೇಡಿ, ಇಟ್ಟರೆ ಸಾಲ, ಖರ್ಚು ಹೆಚ್ಚುತ್ತೆ
ಪರ್ಸ್ ಅನ್ನು ನಮ್ಮ ಹಣ, ಕ್ರೆಡಿಟ್, ಡೆಬಿಟ್ ಕಾರ್ಡ್ ಇಟ್ಟುಕೊಳ್ಳಲು ಬಳಸುತ್ತೇವೆ. ಕೆಲವರು ಹೇಳ್ತಾಇರುತ್ತಾರೆ, ನನ್ನ ಪರ್ಸನಲ್ಲಿ ಹಣವೇ ಉಳಿಯಲ್ಲ, ಅದರಲ್ಲಿ ಎಷ್ಟೇ ಹಣವಿರಲಿ ಖರ್ಚಾಗುತ್ತಲೇ ಇರುತ್ತದೆ, 10 ರುಪಾಯಿ ಉಳಿಯುವುದು ಕಷ್ಟವಾಗುವುದು. ನೀವು ವಾಸ್ತು ಶಾಸ್ತ್ರ ನಂಬುವುದಾದರೆ ನಿಮ್ಮ ಪರ್ಸ್‌ನಲ್ಲಿ ಹಣ ಉಳಿಯದಿರಲು ನೀವು ಮಾಡುತ್ತಿರುವ ಕೆಲವೊಂದು ತಪ್ಪುಗಳಾಗಿರುತ್ತದೆ. ಆ ಕಾರಣದಿಂದಲೇ ಆ ಪರ್ಸ್‌ನಲ್ಲಿ ಹಣವಿಟ್ಟರೆ ಅದಕ್ಕೆ ತಕ್ಕ ಖರ್ಚು ಬರುತ್ತಲೇ ಇರುತ್ತದೆ.
ಆ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ಆರ್ಥಿಕ ಸಂಕಷ್ಟ ಎದುರಾಗುವುದು. ಯಾವೆಲ್ಲಾ ವಸ್ತುಗಳನ್ನು ಪರ್ಸ್‌ನಲ್ಲಿ ಇಡಲೇಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ ನೋಡಿ:

1. ನೋಟು ಮತ್ತು ಚಿಲ್ಲರೆ
ನೋಟು ಮತ್ತು ಚಿಲ್ಲರೆ ಎರಡನ್ನೂ ಜೊತೆಗೆ ಇಡುವ ಅಭ್ಯಾಸ ನಮ್ಮಲ್ಲಿ ಹೆಚ್ಚಿನವರಿಗೆ ಇರುತ್ತದೆ. ಆದರೆ ಇವೆರಡನ್ನು ಒಟ್ಟಿಗೆ ಇಡಬಾರದಂತೆ, ಚಿಲ್ಲರೆ ಶಬ್ದಕ್ಕೆ ಲಕ್ಷ್ಮಿ ಚಂಚಲೆಯಾಗುತ್ತಾಳೆ. ನೀವು ಚಿಲ್ಲರೆಯನ್ನು ಪ್ರತ್ಯೇಕವಾಗಿ ಒಂದು ಪರ್ಸ್‌ನಲ್ಲಿ ಇಡಬಹುದು, ಆದರೆ ಎರಡು ಒಟ್ಟಿಗೆ ಇಡಬೇಡಿ.

2. ಮರಣವೊಂದಿದವರ ಫೋಟೋ
ನಮ್ಮ ಜೀವನಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಮರಣವೊಂದಿದಾಗ ಅವರ ಫೋಟೋವನ್ನು ಕೆಲವರು ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ, ಅದು ಅವರಿಗೆ ಆ ವ್ಯಕ್ತಿ ಮೇಲೆ ಇರುವ ಅಟ್ಯಾಚ್‌ಮೆಂಟ್ ತೋರಿಸುತ್ತದೆ. ಆದರೆ ಎಷ್ಟೇ ಪ್ರೀತಿಯ ವ್ಯಕ್ತಿಯಾಗಿರಲಿ ಅವರ ಫೋಟೋವನ್ನು ಪರ್ಸ್‌ನಲ್ಲಿ ಇಡಬೇಡಿ. ಹಾಗೇ ಇಟ್ಟರೆ ವಾಸ್ತು ದೋಷ ಉಂಟಾಗಿ ಆರ್ಥಿಕ ತೊಂದರೆ ಉಂಟಾಗುವುದು.

3. ಕೀ
ಕೀಯನ್ನು ಪರ್ಸ್ ಒಳಗಡೆ ಇಡುವ ಅಭ್ಯಾಸ ಹೆಚ್ಚಿನವರಲ್ಲಿ ಇರುತ್ತದೆ, ಅಂಥ ಅಭ್ಯಾಸ ನಿಮ್ಮಲ್ಲಿ ಇದ್ದರೆ ಬದಲಾಯಿಸಿ. ವಾಸ್ತು ಶಾಸ್ತ್ರ ಪ್ರಕಾರ ಕೀಯನ್ನು ಪರ್ಸ್‌ನಲ್ಲಿ ಇಡುವುದು ಒಳ್ಳೆಯದಲ್ಲ, ಇದರಿಂದ ಸಮಸ್ಯೆಗಳು ಹೆಚ್ಚಾಗಿ ಖರ್ಚು ಹೆಚ್ಚುವುದು.

4. ದೇವರ ಫೋಟೋ
ದೇವರ ಫೋಟೋ ಇಡಬಾರದು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು. ಆದರೆ ಅದು ಸತ್ಯ. ಯಾವುದೇ ದೇವರ ಫೋಟೋವನ್ನು ಪರ್ಸ್‌ನಲ್ಲಿ ಇಡಬೇಡಿ. ಇದರಿಂದ ಸಾಲ ಹೆಚ್ಚುವುದು.ಬದುಕಿನಲ್ಲಿ ತೊಂದರೆಗಳು ಹೆಚ್ಚುವುದು.

5. ಹಳೆಯ ಬಿಲ್‌ಗಳು
ರೆಸ್ಟೋರೆಂಟ್‌ನಲ್ಲಿ ತಿಂದದ್ದು, ಸಿನಿಮಾಗೆ ಹೋಗಿದ್ದು, ಏನಾದರೂ ಖರೀದಿಸಿದ್ದು ಅದೂ ಇದೂ ನಮ್ಮ ಪರ್ಸ್‌ನಲ್ಲಿ ಒಂದಲ್ಲಾ ಒಂದು ಬಿಲ್ ಇದ್ದೇ ಇರುತ್ತದೆ. ಹಾಗೇನದರೂ ಇದ್ದರೆ ಅವುಗಳನ್ನು ತೆಗೆಯಿರಿ. ಹಳೆಯ ಬಿಲ್‌ಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ಆರ್ಥಿಕ ತೊಂದರೆ ಉಂಟಾಗುವುದು.

6. ನೋಟ್‌ಗಳನ್ನು ಮಡಚಿ ಇಡಬೇಡಿ
ಪರ್ಸ್‌ನಲ್ಲಿ ನೋಡುಗಳನ್ನು ಮಡಚಿ ಇಡುವ ಅಭ್ಯಾಸ ಇದ್ದರೆ ಅದನ್ನು ಬಿಡಿ. ಪರ್ಸ್‌ನಲ್ಲಿ ಮಾತ್ರವಲ್ಲ ಎಲ್ಲೇ ಆದರೂ ನೋಡುಗಳನ್ನು ಮಡಚಿ ಇಡಬೇಡಿ.

7. ಹರಿದ ನೋಡುಗಳನ್ನು ಇಡಬೇಡಿ
ಇನ್ನು ನಿಮ್ಮ ಬಳಿ ಹರಿದ ನೋಟುಗಳಿದ್ದರೆ ಅದನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ.

8. ಯಾವ ಪಾಕೆಟ್‌ನಲ್ಲಿ ಪರ್ಸ್ ಇಡಬೇಕು?
ನೀವು ಪರ್ಸ್ ಅನ್ನು ಎಡ ಬದಿಯ ಪಾಕೆಟ್‌ನಲ್ಲಿ ಇಡುವುದು ಒಳ್ಳೆಯದು ಎಂಬುವುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಎಡ ಬದಿಯ ಪಾಕೆಟ್‌ನಲ್ಲಿ ಇಡುವುದರಿಂದ ಹಣದ ಉಳಿತಾಯವಾಗುತ್ತದೆ ಅಲ್ಲದೆ ಅನಗ್ಯತ ಖರ್ಚುಗಳು ಬರುವುದು ಕಡಿಮೆಯಾಗುವುದು.

9. ಶ್ರೀ ಯಂತ್ರ ಇಟ್ಟುಕೊಳ್ಳಬಹುದೇ?
ಶ್ರೀ ಯಂತ್ರ ಲಕ್ಷ್ಮಿಯನ್ನು ಆಕರ್ಷಿಸುತ್ತಾಳೆ, ಆದ್ದರಿಂದ ಅದನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಿ.
ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಗಳನ್ನು ವಾಸ್ತುಶಾಸ್ತ್ರ ಆಧಾರಿಸಿ ನೀಡಲಾಗಿದೆ, ಹೆಚ್ಚಿನ ಮಾಹಿತಿಗೆ ವಾಸ್ತು ತಜ್ಞರ ಸಲಹೆ ಪಡೆಯಬಹುದು.