For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಣ್ಣ ಹೀಗಿದ್ದರೆ ಜೀವನ ಸುಖಮಯವಾಗಿರುತ್ತದೆಯಂತೆ!

|

ಕಾಲ ಬದಲಾದಂತೆಲ್ಲಾ ವಿಜ್ಞಾನ ಎಷ್ಟೇ ಮುಂದುವರೆದರೂ ಕೆಲವು ಮಾತ್ರವಲ್ಲ ಹಲವು ಹಳೆಯ ಪದ್ದತಿಗಳು ಇಂದಿಗೂ ಚಾಲ್ತಿಯಲ್ಲಿವೆ . ಏಕೆಂದರೆ ಅವುಗಳಿಗೆ ಇರುವ ಶಕ್ತಿ ಅಂತಹುದು ವಿಜ್ಞಾನವನ್ನೇ ಬೆರಗು ಗೊಳಿಸುವಂತಹ ಸೋಗು ಅವುಗಳಲ್ಲಿ ಅಡಗಿದೆ ಎಲ್ಲವನ್ನೂ ತರ್ಕದ ತಟ್ಟೆಯಲ್ಲಿ ತೂಗಿ ನೋಡುವ ವಿಜ್ಞಾನ ಕೂಡ ಇದರ ಮುಂದೆ ಕೆಲವೊಮ್ಮೆ ತಲೆತಗ್ಗಿಸಿ ನಿಂತುಕೊಳ್ಳಬೇಕಾಗುತ್ತದೆ . ಆಗಿನ ಕಾಲದ ನಮ್ಮ ಹಿರಿಯರು ಯಾವುದೇ ಕಂಪ್ಯೂಟರ್ ಇಲ್ಲದೆ ಸ್ವತಃ ತಮ್ಮ ಬುದ್ಧಿ ಶಕ್ತಿಯಿಂದ ಕಂಡು ಹಿಡಿದ ಬೆಲೆ ಕಟ್ಟಲಾಗದ ಸಾಧನಗಳಿವು .

ಅದರಲ್ಲಿ ವಾಸ್ತು ಶಾಸ್ತ್ರ ಕೂಡ ಒಂದು ಮನೆ ಕಟ್ಟಲು ವೈಜ್ಞಾನಿಕವಾಗಿ ಒಬ್ಬ ಇಂಜಿನಿಯರ್ ಬಂದು ಮನೆಯ ಡಿಸೈನ್ ಈ ರೀತಿ ಬರಲಿ ಆ ರೀತಿ ಬರಲಿ ಎಂದು ಪ್ಲಾನ್ ಹಾಕಿ ಕೊಟ್ಟು ಹೋಗಬಹುದಷ್ಟೆ . ಆದರೆ ಅವನು ಬರುವ ಮುಂಚೆಯೇ ಒಬ್ಬ ವಾಸ್ತು ತಜ್ಞ ಬಂದು ಡಿಸೈನ್ ಹೇಗೇ ಮಾಡಿಸಿಕೊಂಡರೂ ಅಗ್ನಿ ಮೂಲೆಯಲ್ಲಿ ಅಡುಗೆ ಮನೆ , ಪೂರ್ವ ದಲ್ಲಿ ಬಾಗಿಲು ಎಂಬಂತಹ ಇತ್ಯಾದಿ ವಿಷಯಗಳನ್ನು ತಿಳಿಸಿ ಸ್ವತಃ ನಕ್ಷೆ ತಯಾರಿಸಿ ಕೊಟ್ಟು ಹೋಗಿರುತ್ತಾರೆ . ಎಂತಹ ದೊಡ್ಡ ಸಿರಿವಂತರೂ ಸರಿ ಇದನ್ನು ನಂಬುತ್ತಾರೆ . ಅದರಂತೆಯೇ ಚಾಚೂ ತಪ್ಪದೆ ನಡೆದುಕೊಳ್ಳುತ್ತಾರೆ ಕೂಡ . ಅದೇ ವಾಸ್ತುವಿನ ಶಕ್ತಿ .

ಹಿಂದೆ ಕೇವಲ ದಿಕ್ಕುಗಳ ನಿರ್ದೇಶನಗಳಿಗೆ ಸೀಮಿತವಾಗಿದ್ದ ಈ ವಾಸ್ತು ಶಾಸ್ತ್ರ , ಈಗ ಮನೆಯ ಪ್ರತಿ ಮೂಲೆಯ ಬಣ್ಣ ಗಾತ್ರ ಎಲ್ಲದಕ್ಕೂ ತನ್ನ ಕೈ ಚಾಚಿದೆ . ಮನೆಯ ಯಜಮಾನನ ಹುಟ್ಟಿದ ತಾರೀಕಿಗೆ ಅನುಗುಣವಾಗಿ ಆ ಮನೆಗೆ ಯಾವ ಕೋಣೆಗೆ ಯಾವ ಬಣ್ಣ ಆಗಿ ಬರುತ್ತದೆ , ಯಾವ ಬಣ್ಣ ಹಚ್ಚಿದರೆ ಆ ಮನೆಯ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಮನೆಯ ಮಂದಿ ತೀರ್ಮಾನ ತೆಗೆದುಕೊಳ್ಳುತ್ತಾರೆ . ಏಕೆಂದರೆ ಬಣ್ಣಕ್ಕಿರುವ ವೈಬ್ರೆಷನ್ ಇಲ್ಲಿ ಗಣನೆಗೆ ತೆಗೆದುಕೊಳ್ಳುತ್ತಾರೆ. ನಕಾರಾತ್ಮಕ ಶಕ್ತಿ ಎಲ್ಲಾ ಹೊರ ಹೋಗಿ ಸಕಾರಾತ್ಮಕ ಶಕ್ತಿ ಒಳ ಬರಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಾರೆ . ಉದಾಹರಣೆಗೆ ಹಚ್ಚ ಹಸಿರು ಬಣ್ಣ ಜೀವನದಲ್ಲಿ ಸಮತೋಲನವನ್ನು ಕಾಪಾಡಲು ಬಳಸಿದರೆ , ಆಕಾಶದ ನೀಲಿ ಬಣ್ಣ ಜೀವನದಲ್ಲಿ ಸ್ವತಂತ್ರ ಸ್ವಾಭಿಮಾನದ ಗುಣಗಳನ್ನು ಬೆಳೆಸಲು ಸಹಾಯಕವಾಗುತ್ತದೆ . ಅದರಂತೆಯೇ ಈ ಕೆಳಗಿನ ಲೇಖನದಲ್ಲಿ ನಿಮ್ಮ ಕೋಣೆಗಳಿಗೆ ಯಾವ ಸೂಕ್ತವಾದ ಬಣ್ಣಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದೇವೆ.

ನಿಮ್ಮ ಮಾಸ್ಟರ್ ಬೆಡ್ ರೂಮ್

ನಿಮ್ಮ ಮಾಸ್ಟರ್ ಬೆಡ್ ರೂಮ್

ಹಲವಾರು ಮಂದಿ ತಮ್ಮ ಬೆಡ್ ರೂಮ್ ಚೆನ್ನಾಗಿ ಕಾಣಲಿ , ಹೊಸ ಉತ್ಸಾಹ ತುಂಬಲಿ ಮತ್ತು ತಮ್ಮ ಸಂಗಾತಿಯ ಜೊತೆ ಲೈಂಗಿಕ ಜೀವನ ಚೆನ್ನಾಗಿರಲಿ ಎಂಬ ಕಾರಣಕ್ಕೆ ತಮ್ಮ ಮಾಸ್ಟರ್ ಬೆಡ್ ರೂಮ್ ಗೆ ಕೆಂಪು ಬಣ್ಣ ಆಯ್ಕೆ ಮಾಡುತ್ತಾರೆ . ಆದರೆ ಇಲ್ಲಿ ಅವರು ಎಡವಿದಂತೆ . ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಂಪು ಅಗ್ನಿಯ ಸಂಕೇತ , ಕೋಪದ ಪ್ರತೀಕ . ಆದ್ದರಿಂದ ಬೆಡ್ ರೂಮ್ ನಲ್ಲಿ ಅಪ್ಪಿ ತಪ್ಪಿ ಕೂಡ ಕೆಂಪು ಬಣ್ಣ ಗೋಡೆಗಳ ಮೇಲೆ ಬಳಸಿದ್ದರೆ ಸಂಗಾತಿಗಳನ್ನು ಒಂದು ಮಾಡುವುದಿರಲಿ ಸದಾ ಜಗಳ ಬರುವಂತೆ ಮಾಡಿ ಆದಷ್ಟು ಬೇಗನೆ ದೂರಾಗುವಂತೆ ಮಾಡುತ್ತದೆ . ಅಷ್ಟೇ ಅಲ್ಲದೆ ಮನುಷ್ಯನ ದೇಹದಲ್ಲಿ ಈಗಾಗಲೇ ಸಾಕಷ್ಟು ಪಿತ್ತದ ಅಂಶ ಹೊಂದಿದ್ದು , ಕೆಲವು ಅಜೀರ್ಣ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತವೆ . ಊಟ ಮಾಡಿ ಬಂದು ಮಲಗುವ ಕೋಣೆ ಒಂದು ವೇಳೆ ಕೆಂಪು ಬಣ್ಣದಿಂದ ಕೂಡಿದ್ದರೆ , ಮನುಷ್ಯನಿಗೆ ಕೋಪ ಹೆಚ್ಚಾಗಿ ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ . ಹಾಗಾದರೆ ಬೆಡ್ ರೂಮ್ ಗೆ ಯಾವ ಬಣ್ಣ ಸೂಕ್ತ ಎಂದು ಯೋಚಿಸುತ್ತಿದ್ದೀರಾ ? ಕಂದು ಬಣ್ಣ , ನೀಲಿ ಮತ್ತು ಗುಲಾಬಿ ಬಣ್ಣದ ಶೇಡ್ ಗಳಲ್ಲಿ ಬೆಡ್ ರೂಮ್ ಕಂಡರೆ ಎಲ್ಲದಕ್ಕೂ ಸೂಕ್ತ ಎಂಬುದು ನಮ್ಮ ಭಾವನೆ .

Most Read: ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲು ಒಂದಿಷ್ಟು ಸರಳ ವಾಸ್ತು ಶಾಸ್ತ್ರ

ಮಕ್ಕಳ ಕೋಣೆ

ಮಕ್ಕಳ ಕೋಣೆ

ಮಕ್ಕಳು ಎಂದರೆ ಬೆಳವಣಿಗೆಯ ಪ್ರತಿರೂಪ.ದೇಹದಲ್ಲಿ ಮತ್ತು ಬುದ್ಧಿ ಶಕ್ತಿಯಲ್ಲಿ ಆಗ ತಾನೇ ಮೊಳಕೆಯೊಡೆಯುವ ಚಿಣ್ಣರು . ಅವರಲ್ಲಿ ಸೃಜನಶೀಲತೆ ಮತ್ತು ನಾವಿನ್ಯತೆ ಜೊತೆಗೆ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಹಾಗಾಗಿ ಮಕ್ಕಳು ಓದುವ ಮತ್ತು ಮಲಗುವ ಕೋಣೆಗೆ ನಿಂಬೆ ಹಸಿರು ಮತ್ತು ತಿಳಿ ಹಳದಿ ಬಣ್ಣದಲ್ಲಿ ಗೋಡೆಗಳು ಮೂಡಿ ಬಂದರೆ ಮಕ್ಕಳಿಗೆ ಬಹಳ ಅನುಕೂಲ . ಅವರ ಕೋಣೆಯಲ್ಲಿ ಸಾಮರಸ್ಯದ ಪರಿಸರ ಉಂಟಾಗಿ ಅವರಿಗೆ ಬುದ್ಧಿ ಶಕ್ತಿ , ಜ್ಞಾಪಕ ಶಕ್ತಿ ಮತ್ತು ಯೋಚನೆ ಮಾಡುವ ಶಕ್ತಿ ಹೆಚ್ಚಾಗುತ್ತದೆ . ಮಕ್ಕಳು ಆರೋಗ್ಯವಾಗಿ ಬೆಳೆಯುತ್ತಾರೆ.

ನಿಮ್ಮ ಲಿವಿಂಗ್ ರೂಮ್

ನಿಮ್ಮ ಲಿವಿಂಗ್ ರೂಮ್

ಲಿವಿಂಗ್ ರೂಮ್ ಎಂದರೆ ಮೊದಲೇ ತಿಳಿದಿರುವ ಹಾಗೆ ನೆಂಟರು ,ಸ್ನೇಹಿತರು ಮತ್ತು ಕುಟುಂಬದವರು ಕುಳಿತು ಸಂತೋಷ ಸಂಭ್ರಮಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಸ್ಥಳ .ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಮತ್ತು ಕಾಪಾಡಿ ಕೊಳ್ಳುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಕೋಣೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಸಂಚರಿಸದೆ ಸಂಬಂಧಗಳ ಮಧ್ಯೆ ಯಾವುದೇ ಬಿರುಕು ಮೂಡಿಸದೆ ಇರಬೇಕಾದರೆ , ಇಲ್ಲಿರುವ ಗೋಡೆಗಳ ಬಣ್ಣಗಳ ಮೇಲೆ ನಾವು ಹೆಚ್ಚು ಗಮನ ಹರಿಸ ಬೇಕಾಗುತ್ತದೆ . ನಿಮ್ಮ ಲಿವಿಂಗ್ ರೂಮ್ ಸದಾ ಒಂದಿಲ್ಲೊಂದು ಚಟುವಟಿಕೆಯಿಂದ ಕೂಡಿರಬೇಕಾದರೆ ಬಿಳಿ ಬಣ್ಣದ ಗೋಡೆಯ ಮೇಲೆ ಅಲ್ಲಲ್ಲಿ ನೀಲಿ , ಹಸಿರು , ಹಳದಿ ಮತ್ತು ಸ್ವಲ್ಪ ಕೆಂಪು ಬಣ್ಣ (ಕೇವಲ ವೈಬ್ರೆಷನ್ ಹೆಚ್ಚಿಸಲು) ವನ್ನು ಮಿಶ್ರಣ ಮಾಡಿದರೆ ಒಳ್ಳೆಯದು.

ದೇವರ ಕೋಣೆ / ಪೂಜೆ ಮಾಡುವ ಕೋಣೆ / ಧ್ಯಾನ ಮಾಡುವ ಸ್ಥಳ

ದೇವರ ಕೋಣೆ / ಪೂಜೆ ಮಾಡುವ ಕೋಣೆ / ಧ್ಯಾನ ಮಾಡುವ ಸ್ಥಳ

ಸಾಮಾನ್ಯವಾಗಿ ಈಶಾನ್ಯ ಮೂಲೆಯಲ್ಲಿರುವ ಈ ಸ್ಥಳ ನೆಮ್ಮದಿಯ ಸಂಕೇತ . ಮನಸ್ಸಿಗೆ ಬೇಸರವಾದಾಗ ಬೇರೆಯವರ ಜೊತೆ ಜಗಳ ಮಾಡಿದಾಗ ಮನಸ್ಸಿಗೆ ಶಾಂತಿ ಸಿಗಲೆಂದು ಇಲ್ಲಿ ಬಂದು ದೇವರನ್ನು ಪ್ರಾರ್ಥನೆ ಮಾಡುತ್ತಾ ಕುಳಿತುಕೊಳ್ಳುತ್ತೇವೆ . ಹಲವರಿಗೆ ಬೆಳಗಿನ ಹೊತ್ತು ಮತ್ತು ಸಂಜೆಯ ಹೊತ್ತು ಮನಸ್ಸಿಗೆ ಏಕಾಗ್ರತೆ ಲಭಿಸಲಿ ಎಂದು ಧ್ಯಾನ ಮಾಡಲು ಈ ಕೋಣೆಯನ್ನು ಬಳಸುತ್ತಾರೆ. ಹಾಗಾದರೆ ಇದಕ್ಕೆ ಸಹಾಯಕವಾದ ಬಣ್ಣ ಯಾವುದೆಂದರೆ ಹಳದಿ ಅಥವಾ ಹಸಿರು ಅಥವಾ ನೀಲಿ ಅಥವಾ ಬಿಳಿ ಅಥವಾ ನೇರಳೆ ಬಣ್ಣದ ತಿಳಿ ಶೇಡ್ ಗಳಲ್ಲಿ ಈ ಸ್ಥಳದ ಗೋಡೆಗಳಿದ್ದರೆ ಚೆನ್ನ .

ಅಡುಗೆ ಮನೆ/ಪಾಕ ಗೃಹ

ಅಡುಗೆ ಮನೆ/ಪಾಕ ಗೃಹ

ಸಾಮಾನ್ಯವಾಗಿ ಈ ಸ್ಥಳ ಅಗ್ನಿ ಮೂಲೆಯಲ್ಲಿ ಪ್ರತಿ ಮನೆಯಲ್ಲಿದ್ದು , ಅಗ್ನಿ ದೇವನ ವಾಸ ಸ್ಥಾನವಾಗಿದೆ . ಹಾಗಾಗಿ ಅಡುಗೆ ಮನೆಗೆ ಕೆಂಪು ಬಣ್ಣ ಸೂಕ್ತ . ಏಕೆಂದರೆ ಕೆಂಪು ಬಣ್ಣ ಹೊಟ್ಟೆ ಹಸಿವನ್ನು ಜಾಸ್ತಿ ಮಾಡುತ್ತದೆ ಕೂಡ . ಆದರೆ ಅತಿಯಾದ ಕೆಂಪು ಬೇಡ. ಬಿಳಿ ಅಥವಾ ಕಿತ್ತಳೆ ಅಥವಾ ಗುಲಾಬಿ ಬಣ್ಣ ಇಲ್ಲವೆಂದರೆ ಬೆಳ್ಳಿ ಇತ್ಯಾದಿ ಬಣ್ಣಗಳ ಶೇಡ್ ಗಳನ್ನು ಜೊತೆಯಲ್ಲಿ ಕೂಡಿಸಿದರೆ ಒಳ್ಳೆಯದು.

Most Read:ಮನೆಯಲ್ಲಿ ಶಾಂತಿ-ನೆಮ್ಮದಿ ಇರಬೇಕೇ? ಗೋಡೆಗಳ ಬಣ್ಣ ಹೀಗಿರಲಿ

ಬಾತ್ ರೂಮ್/ಸ್ನಾನ ಗೃಹ/ಟಾಯ್ಲೆಟ್

ಬಾತ್ ರೂಮ್/ಸ್ನಾನ ಗೃಹ/ಟಾಯ್ಲೆಟ್

ಇದು ಸದಾ ನೀರು ಹರಿಯುವ ಸ್ಥಳ ಜಾರಿ ಬೀಳುವ ಸಂಭವವೂ ಹೆಚ್ಚು ಶಾಂತಿ ಸಂಕೇತದ ಬಣ್ಣಗಳಾದ ಬಿಳಿ , ಹಳದಿ , ನಿಂಬೆ ಹಸಿರು , ನೀಲಿ , ಗುಲಾಬಿ ಬಣ್ಣಗಳು ಸೂಕ್ತ ತಿಳಿ ಬಣ್ಣದ ಟೈಲ್ಸ್ ಹಾಕಿಸಿದರೆ ನೋಡಲು ಕೂಡ ಚಂದ ಕಾಣುತ್ತದೆ .

ಸೀಲಿಂಗ್ ಅಥವಾ ಮೇಲ್ಛಾವಣಿ

ಸೀಲಿಂಗ್ ಅಥವಾ ಮೇಲ್ಛಾವಣಿ

ಮನೆಯ ಮೇಲ್ಭಾಗದ ಯಾವುದೇ ವಸ್ತುಗಳು ಸದಾ ಆಶೀರ್ವಾದ ಮಾಡುತ್ತಿರುವ ಹಾಗಿರಬೇಕು .ಸದಾ ದೈವ ಕಳೆಯಿಂದ ತುಂಬಿರಬೇಕು . ಹಾಗಾಗಿ ಮನೆಯ ಎಲ್ಲಾ ಛಾವಣಿಗಳಿಗೆ ಬಿಳಿ ಬಣ್ಣ ಒಳ್ಳೆಯದು.

English summary

Vastu tips: Best colours for different rooms

In order to choose the right shade for the rooms, it is very important to be in sync with the energy and vibration of each colour. For instance, dark green is for striking a balance in life while sky blue signifies freedom according to Vastu. Here are the perfect colours to optimize the energies of the rooms.
X