For Quick Alerts
ALLOW NOTIFICATIONS  
For Daily Alerts

ಪ್ರೆಷರ್ ಕುಕ್ಕರ್‌ನಲ್ಲಿ ಅಡುಗೆ ವೇಳೆ ಕಡೆಗಣಿಸಬೇಕಾದ ತಪ್ಪುಗಳು

|

ಅಡುಗೆ ಸಾಮಗ್ರಿಗಳು ಹಾಗೂ ಅಡುಗೆ ಮನೆಯ ಬಗ್ಗೆ ಸರಿಯಾದ ಮಾಹಿತಿ ನಿಮ್ಮಲ್ಲಿ ಇದ್ದರೆ ಆಗ ಅಡುಗೆ ಮಾಡುವುದು ತುಂಬಾ ಸುಲಭವಾಗುವುದು. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ಇರುವಂತಹ ಪ್ರೆಷರ್ ಕುಕ್ಕರ್ ನ್ನು ತುಂಬಾ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಇದು ಅಪಾಯವನ್ನು ಉಂಟು ಮಾಡುವುದು. ಇದನ್ನು ಬಳಸಲು ಗೊತ್ತಿಲ್ಲದೆ ಇದ್ದರೆ ಆಗ ನೀವು ತಯಾರಿಸಲು ಹೊರಟಿರುವಂತಹ ಆಹಾರವು ಬೇರೆಯೇ ಸ್ವರೂಪ ಪಡೆಯಬಹುದು. ನಿಮಗೆ ಕೆಲವೊಂದು ಸಲ ಪ್ರೆಷರ್ ಕುಕ್ಕರ್ ನಲ್ಲಿ ಆಹಾರವು ತಳ ಹಿಡಿದಿದ್ದರೆ ಆಗ ನೀವು ಪ್ರೆಷರ್ ಕುಕ್ಕರ್ ನ್ನು ದೂಷಿಸಬಾರದು. ಯಾಕೆಂದರೆ ಇದು ನೀವು ಮಾಡುವಂತಹ ತಪ್ಪಾಗಿದೆ. ಪ್ರೆಷರ್ ಕುಕ್ಕರ್ ನಲ್ಲಿ ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

Most Read: ಅಡುಗೆ ಮನೆ ವಾಸ್ತು ಹೀಗಿದ್ರೆ ಮನೆಯಲ್ಲಿ ಶಾಂತಿ-ನೆಮ್ಮದಿ ಸದಾ ಇರುತ್ತೆ

ಸರಿಯಾಗಿ ನೀರು ಹಾಕಿ.

ಪ್ರೆಷರ್ ಕುಕ್ಕರ್ ನಲ್ಲಿ ನೀವು ಏನೇ ಬೇಯಿಸುವುದಿದ್ದರೂ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿಕೊಳ್ಳಿ. ಅದಾಗ್ಯೂ, ಜನರು ತುಂಬಾ ನೀರು ಹಾಕುತ್ತಾರೆ. ಇದರಿಂದ ಆಹಾರವು ರುಚಿ ಕಳೆದುಕೊಳ್ಳಬಹುದು. ಪ್ರೆಷರ್ ಕುಕ್ಕರ್ ಒಂದು ಚಮಚಕ್ಕಿಂತಲೂ ಕಡಿಮೆ ನೀರನ್ನು ಬೇಯಿಸುವ ವೇಳೆ ಹೀರಿಕೊಳ್ಳುವುದು. ಬೇಕಾದಷ್ಟು ನೀರು ಮಾತ್ರ ಹಾಕಿ.

pressure cooker

ಬೇಯಿಸುವ ಸಮಯ

ಪ್ರೆಷರ್ ಕುಕ್ಕರ್ ನಲ್ಲಿ ಆಹಾರ ಬೇಯಿಸುವುದು ಕೆಲವೊಂದು ರೀತಿಯ ಖಾದ್ಯಗಳಿಗೆ ಮಾತ್ರ ಒಳ್ಳೆಯದು. ಸ್ಟೀವ್ ಮತ್ತು ಸ್ಟಾಕ್ಸ್ ಗಳಿಗೆ ಇದು ಒಳ್ಳೆಯದು. ಪ್ರತಿಯೊಂದನ್ನು ಇದರಲ್ಲಿ ಬೇಯಿಸಲು ಹೋಗಬೇಡಿ. ನೀವು ತವಾ ಬಳಸಿಕೊಂಡು ಅಡುಗೆ ಮಾಡಬಹುದು.

ಸಾಂಬಾರ ಪದಾರ್ಥ ಬಳಸಿದಿರುವುದು

ಕೆಲವು ಸಂದರ್ಭದಲ್ಲಿ ಪ್ರೆಷರ್ ಕುಕ್ಕರ್ ನಲ್ಲಿ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಜನರು ಸರಿಯಾಗಿ ಸಾಂಬಾರ ಪದಾರ್ಥಗಳನ್ನು ಹಾಕುವುದಿಲ್ಲ. ಆಹಾರವನ್ನು ತುಂಬಾ ಅದ್ಭುತವಾಗಿ ಮಾಡಲು ನೀವು ಗಿಡಮೂಲಿಕೆ ಮತ್ತು ತಾಜಾ ಪದಾರ್ಥಗಳನ್ನು ಬಳಸಿಕೊಳ್ಳಿ. ಸಾಧ್ಯವಾಗದಷ್ಟು ಜಜ್ಜಿಕೊಂಡು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡರೆ ಆಗ ತುಂಬಾ ಒಳ್ಳೆಯದು.

Most Read:ಕಡಿಮೆ ಖರ್ಚಿನಲ್ಲಿ ಪ್ರಯಾಸವಿಲ್ಲದೆ ಅಡುಗೆ ಮನೆಯನ್ನು ಸ್ವಚ್ಛಮಾಡುವುದು ಹೇಗೆ?

ಹೀಗೆ ಮಾಡಬೇಡಿ

ಹೆಚ್ಚಾಗಿ ಅಡುಗೆ ಮಾಡುವ ಸಂದರ್ಭದಲ್ಲಿ ಜನರು ಈರುಳ್ಳಿ, ಬೆಳ್ಳುಳ್ಳಿ, ಲವಂಗವನ್ನು ಪ್ರೆಷರ್ ಕುಕ್ಕರ್ ಗೆ ಹಾಕುವರು. ಇದು ಖಾದ್ಯದ ರುಚಿ ಹಾಗೂ ಸುವಾಸನೆ ಕೆಡಿಸುವುದು. ಪ್ರೆಷರ್ ಕುಕ್ಕರ್ ರುಚಿ ಹೀರಿಕೊಳ್ಳುವ ಕಾರಣದಿಂದಾಗಿ ಅದು ನಿಮ್ಮ ನಾಲಗೆಗೆ ರುಚಿ ಹಿಡಿಸದೆ ಇರಬಹುದು. ಮೊದಲು ತವಾಗೆ ಹಾಕಿಕೊಂಡು ಈರುಳ್ಳಿ ಮತ್ತು ಬೆಳ್ಳುಳ್ಳಿ ಹುರಿಯಿರಿ ಮತ್ತು ಇದರ ಬಳಿಕ ಕುಕ್ಕರ್ ಗೆ ಹಾಕಿ. ಪ್ರೆಷರ್ ಕುಕ್ಕರ್ ಗೆ ಎಷ್ಟು ಪ್ರಮಾಣದಲ್ಲಿ ನೀರು ಹಾಕುತ್ತೀರಿ ಎನ್ನುವುದು ಅತೀ ಅಗತ್ಯವಾಗಿರುವುದು ಮತ್ತು ಇದನ್ನು ತಿಳಿದುಕೊಂಡು ಅಡುಗೆ ಮಾಡಬೇಕು. ಅಗತ್ಯ ಬಿದ್ದಾಗ ನೀವು ತವಾವನ್ನು ಬಳಸಿಕೊಂಡು ಹೋಗಿ. ಈ ಎಲ್ಲಾ ತಪ್ಪುಗಳನ್ನು ಮಾಡದೆ ಇದ್ದರೆ ಆಗ ನಿಮ್ಮಅಡುಗೆಯು ರುಚಿಕರವಾಗಿರುವುದು.

English summary

Most common pressure cooker mistakes to avoid starting today

Cooking is never easy unless you know exactly what to do. Ironically, things that appear easy take the most time and are capable of even ruining your plans of cooking a nice meal. Pressure-cooking is one such thing. It appears so easy that you often focus on other parts of cooking, and the food ends up nothing close to what you anticipated. If you can relate to this, don't curse the pressure cooker. Instead, blame the mistakes you make while pressure-cooking your food.
X
Desktop Bottom Promotion