For Quick Alerts
ALLOW NOTIFICATIONS  
For Daily Alerts

ಉದ್ವೇಗ ಮತ್ತು ಖಿನ್ನತೆಯಿಂದ ಬಳಲುತ್ತಿದ್ದೀರಾ? ಈ ಗಿಡವನ್ನು ನಿಮ್ಮ ಮನೆಯಲ್ಲಿರಿಸಿ, ಪ್ರಯೋಜನವಿದೆ

|

ರಾತ್ರಿ ಪವಡಿಸಿದ ಬಳಿಕ ನಿದ್ದೆ ಬರುವಷ್ಟರಲ್ಲಿ ಹಲವಾರು ಬಾರಿ ಹೊರಳಾಡುತ್ತಿದ್ದೀರಾ? ಮಾನಸಿಕ ಒತ್ತಡದಿಂದ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತಿಲ್ಲವೇ? ನಿತ್ಯವೂ ಎಂಬಂತೆ ಖಿನ್ನತೆಗೆ ಕಾರಣವಾಗುವ ಚಿಂತೆಗಳು ನೆಮ್ಮದಿಯನ್ನು ಕೆಡಿಸಿವೆಯೇ? ಶಾಂತಿಯಿಂದ ರಾತ್ರಿ ನಿದ್ರಿಸಲು ಸಾಧ್ಯವಾಗುತ್ತಿಲ್ಲವೇ? ಈ ಪ್ರಶ್ನೆಗಳಲ್ಲಿ ಒಂದಕ್ಕಾದರೂ ನಿಮ್ಮ ಉತ್ತರ ಹೌದು ಎಂದಿದ್ದರೆ ಈ ತೊಂದರೆ ಇರುವ ಲಕ್ಷಾಂತರ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಇಂದಿನ ವ್ಯಸ್ತ ಜೀವನದಲ್ಲಿ ಧಾವಂತದ ದಿನಚರಿ ಹಾಗೂ ಸಮಯಕ್ಕೆ ಮುಂಚಿತವಾಗಿ ಕೆಲಸ ಪೂರೈಸಬೇಕಾದ ಒತ್ತಡಗಳು ಮಾನಸಿಕ ಒತ್ತಡಕ್ಕೆ ನೇರವಾಗಿ ಕಾರನವಾಗಿವೆ ಹಾಗೂ ಇವೇ ನಮ್ಮ ನಿದ್ದೆಯ ಕ್ರಮವನ್ನು ಬದಲಿಸಿವಿಟ್ಟಿವೆ. ಒಂದು ವೇಳೆ ನಿಮಗೆ ಈ ತೊಂದರೆಗಳಿಂದ ನಿದ್ದೆ ಬರುತ್ತಿಲ್ಲವಾದರೆ ಈ ತೊಂದರೆಗಳಿಗೆ ನಮ್ಮಲ್ಲಿ ಒಂದು ಸುಲಭವಾದ ಪರಿಹಾರವಿದೆ.

battle anxiety-depression

ಎಲ್ಲಾ ಕಾಲಕ್ಕೂ ಸಲ್ಲುವ ಮಲ್ಲಿಗೆ ಗಿಡ

ಮಲ್ಲಿಗೆ ಗಿಡ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೊದಲು ಮೂಡುವುದೆಂದರೆ ಮಲ್ಲಿಗೆ ಹೂವು ಹಾಗೂ ಇದರ ಸುಗಂಧ. ವಾಸ್ತವದಲ್ಲಿ, ದೇವಲೋಕದಿಂದಲೇ ಬಂದಿದೆಯೋ ಎನ್ನುವಷ್ಟು ಆಹ್ಲಾದಕರ ಪರಿಮಳ ಹಾಗೂ ಜೇನಿನಂತಹ ರುಚಿಯಿಂದಾಗಿಯೇ ಮಲ್ಲಿಗೆ ಜಗತ್ತಿನ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಸುಗಂಧವಾಗಿದೆ. ಮನೆಯ ಒಳಾಂಗಣದಲ್ಲಿ ಕೆಲವು ಗಿಡಗಳನ್ನು ಬೆಳೆಸುವ ಮೂಲಕ ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದು ಎಂದು ಹೆಚ್ಚಿನವರಿಗೆ ಗೊತ್ತಿದೆ. ಆದರೆ ಇದರೊಂದಿಗೇ ಕೆಲವು ಗಿಡಗಳು ಮಾನಸಿಕ ಒತ್ತಡ ಮತ್ತು ಉದ್ವೇಗದ ವಿರುದ್ದವೂ ಹೋರಾಡುತ್ತವೆ ಎಂದು ಕೆಲವರಿಗೆ ಮಾತ್ರ ಗೊತ್ತು. ಈ ಗುಣ ಹೊಂದಿರುವ ಒಂದು ಗಿಡವೆಂದರೆ ಮಲ್ಲಿಗೆ ಗಿಡ.

Most Read: ಜೀವನದಲ್ಲಿ ಹಣ, ಯಶಸ್ಸು , ಅದೃಷ್ಟ ತರುವ 6 ವಾಸ್ತು ಗಿಡಗಳು

ಈ ಬಗ್ಗೆ ನಡೆದ ಸಂಶೋಧನೆ

ವ್ಹೀಲಿಂಗ್ ಜೆಸ್ಯೂಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬ್ರಯಾನ್ ರಾಡೆನ್ಬಶ್ ರವರ ನೇತೃತ್ವದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ರಾತ್ರಿ ಮಲಗುವ ಕೋಣೆಯಲ್ಲಿ ಮಲ್ಲಿಗೆಯ ಸುಗಂಧವನ್ನು ಸಿಂಪಡಿಸಿದ ಬಳಿಕ ಆ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಗಳು ಗಾಢ ನಿದ್ದೆಯಲ್ಲಿ ಮಗ್ಗುಲು ಬದಲಿಸುವ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ. ಅಲ್ಲದೇ, ಈ ವ್ಯಕ್ತಿಗಳ ನಿದ್ದೆ ಇನ್ನಷ್ಟು ಗಾಢ ಹಾಗೂ ಉತ್ತಮವಾಗಿದ್ದುದನ್ನೂ ಸಂಶೋಧಕರು ಗಮನಿಸಿದ್ದಾರೆ. ಅಲ್ಲದೇ ಚಿಕ್ಕ ನಿದ್ದೆಯನ್ನು ತೆಗೆದು ಎದ್ದವರು ಸಹಾ ಉಳಿದ ಸಮಯಕ್ಕಿಂತ ಕಡಿಮೆ ಕುತೂಹಲಿ ಹಾಗೂ ಹೆಚ್ಚು ಶಾಂತವಾಗಿದ್ದುದನ್ನೂ ಗಮನಿಸಲಾಗಿದೆ.

ಮತ್ತೊಂದು ಸಂಶೋಧನೆಯಲ್ಲಿ ಇಲಿಗಳ ಬೋನಿನೊಳಗೆ ಮಲ್ಲಿಗೆಯ ಸುಗಂಧವನ್ನು ಇರಿಸಿದಾಗ ಆ ಇಲಿಗಳು ಇತರ ಇಲಿಗಳಿಗಿಂತ ಶಾಂತವಾಗಿದ್ದುದನ್ನು ಗಮನಿಸಲಾಗಿದೆ. Journal of Biological Chemistry ಎಂಬ ವೈದ್ಯಕೀಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಸುಗಂಧದಲ್ಲಿರುವ ಗಾಬಾ (GABA (gamma-Aminobutyric acid) ಎಂಬ ಆಮ್ಲ ಇಲಿಗಳ ಮನಸ್ಸನ್ನು ನಿರಾಳಗೊಳಿಸುತ್ತದೆ. ಪ್ರಾಯಶಃ ಇದೇ ಕಾರಣಕ್ಕೆ ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಹೋಗಲಾಡಿಸಲು ಮಲ್ಲಿಗೆಯ ಅವಶ್ಯಕ ತೈಲವನ್ನು ಅತಿ ಹೆಚ್ಚಾಗಿ ಬಳಸಲಾಗುತ್ತದೆ.

ಫಲಿತಾಂಶ

ಒಂದು ವೇಳೆ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದ್ದರೆ ನಿಮ್ಮ ಮಲಗುವ ಕೋಣೆಯಲ್ಲಿ ಮಲ್ಲಿಗೆಯ ಗಿಡವಿರುವ ಕುಂಡವೊಂದನ್ನು ಇರಿಸಿ ಇದರ ತಾಜಾ ಹವೆಯನ್ನು ಸೇವಿಸುವ ಮೂಲಕ ತಾಜಾತನ ಮತ್ತು ನಿರಾಳತೆಯನ್ನು ಪಡೆಯಬಹುದು.

Most Read: ಅದೃಷ್ಟ ತರುವ ಗಿಡಗಳಿವು! ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ

ಸಲಹೆ

ಈ ಗಿಡವನ್ನು ಕಿಟಕಿಯ ಬಳಿ ಇಡುವುದು ಉತ್ತಮ, ಏಕೆಂದರೆ ಮಲ್ಲಿಗೆಯ ಗಿಡಕ್ಕೆ ಹೆಚ್ಚಿನ ಸೂರ್ಯರಶ್ಮಿಗಳ ಅಗತ್ಯವಿದೆ ಹಾಗೂ ಸಾಕಷ್ಟು ಗಾಳಿಯೂ ಓಡಾಡುವಂತಿರಬೇಕು. ಅಲ್ಲದೇ ಇದು ಬಳ್ಳಿಯಾಗಿರುವ ಕಾರಣ ಇದಕ್ಕೆ ಏರಲು ಗೋಡೆ ಸೂಕ್ತವಾದ ಆಧಾರ ಒದಗಿಸುತ್ತದೆ. ಆದರೆ ಅಗತ್ಯಕ್ಕೂ ಹೆಚ್ಚಿನ ನೀರು ಒದಗಿಸದಿರಲು ಮತ್ತು ನೇರವಾದ ಬಿಸಿಲಿನ ಕಿರಣಗಳು ಬೀಳದಿರುವಂತೆ ಎಚ್ಚರ ವಹಿಸಿ.

English summary

Keeping this plant in your room can help you battle anxiety-depression

Do you toss and turn in your bed every night for a long time before finally falling asleep? Is the stress in your life not able to let you sleep peacefully at night? Do you battle depressive thoughts on a daily basis and it hinders your ability to catch some quality sleep? If your answer is yes to any of the questions mentioned above, be assured that you are not alone.
Story first published: Thursday, April 25, 2019, 12:56 [IST]
X
Desktop Bottom Promotion