For Quick Alerts
ALLOW NOTIFICATIONS  
For Daily Alerts

ಸ್ಟೀಮ್ ಐರನ್ ಬಾಕ್ಸ್‌ನ ತಳ ಭಾಗ ಕ್ಲೀನ್ ಮಾಡಲು ಇಲ್ಲಿವೆ ಸರಳ ಉಪಾಯಗಳು

|

ಮನುಷ್ಯ ಸುಂದರವಾಗಿ ಕಾಣಲು ಈಗಿನ ಕಾಲದಲ್ಲಿ ಏನೇನೋ ಕಸರತ್ತು ಮಾಡುತ್ತಾನೆ . ಏಕೆಂದರೆ ಹೊರಗೆ ಹೋದಾಗ ಒಳ್ಳೆಯ ಮರ್ಯಾದೆ ಮತ್ತು ಗೌರವ ಸಿಗಬೇಕಲ್ಲ . ಆದ್ದರಿಂದ ಅಡಿಯಿಂದ ಮುಡಿಯವರೆಗೂ ಎಲ್ಲಾ ರೀತಿಯಲ್ಲೂ ಶೃಂಗಾರ ಮಾಡಿಕೊಂಡು ಹೊರ ನಡೆಯುತ್ತಾರೆ . ಅವರ ಬಟ್ಟೆ ಬರೆಯಲ್ಲೂ ಕೂಡ . ಈಗಿನ ಹೊರಗಿನ ಪ್ರಪಂಚ ಇರುವುದೇ ಹಾಗೇ . ಮುಖ ನೋಡಿ ಮಣೆ ಹಾಕುವಂತೆ ಬಟ್ಟೆ ನೋಡಿ ಮರ್ಯಾದೆ ಮತ್ತು ಮನ್ನಣೆ ಕೊಡುತ್ತಾರೆ . ಹಾಗಾದರೆ ನಮ್ಮ ಬಟ್ಟೆ ಚೆನ್ನಾಗಿ ಕಾಣಬೇಕಾದರೆ , ಅದು ಮೊದಲು ಚೆನ್ನಾಗಿ ಶುದ್ಧವಾಗಿ ಒಗೆದಿರಬೇಕು.

ನಂತರ ಅದನ್ನು ಚೆನ್ನಾಗಿ ಇಸ್ತ್ರಿ ಮಾಡಿರಬೇಕು . ಬಟ್ಟೆ ಕೂಡ ನಮಗೆ ಒಪ್ಪುವಂತೆ ನಮ್ಮ ಅಂದವನ್ನು ಹೆಚ್ಚಿಸಬೇಕು . ಸುಕ್ಕು ಗಟ್ಟಿದ ಬಟ್ಟೆಗಿಂತ ಇಸ್ತ್ರಿ ಮಾಡಿದ ಬಟ್ಟೆ ನೋಡಲು ಚೆನ್ನಾಗಿ ಕಾಣುತ್ತದೆ ಎಂದು ನಮಗೆ ಗೊತ್ತು . ಯಾವುದೋ ಒಂದು ಅವಸರದ ಸಂಧರ್ಭದಲ್ಲಿ ಬಟ್ಟೆ ಇಸ್ತ್ರಿ ಮಾಡಲು ಹೋಗಿ ಬೇರೇನೋ ಮಾಡಿ ಇಸ್ತ್ರಿ ಪೆಟ್ಟಿಗೆಯ ತಳ ಹಾಳಾಗಿ ಗಾರಾಗಿದ್ದರೆ , ಏನು ಮಾಡುವುದು ? ಇದನ್ನು ಹೇಗೆ ಸರಿ ಪಡಿಸುವುದು ? ಎಂಬ ಆಲೋಚನೆ ನಿಮ್ಮ ತಲೆಯಲ್ಲಿ ಬಂದು ಹೊಕ್ಕಿರುತ್ತದೆ ಅಲ್ಲವೇ . ಆ ತರಹ ತಳ ಹಾಳಾದ ಇಸ್ತ್ರಿ ಪೆಟ್ಟಿಗೆಯಿಂದ ಯಾವ ಬಟ್ಟೆಯನ್ನು ಕೂಡ ಇಸ್ತ್ರಿ ಮಾಡುವುದಿರಲಿ ಸುಕ್ಕು ಗಟ್ಟಿದ ಬಟ್ಟೆಗೆ ಸೋಕಿಸುವುದೂ ಕೂಡ ನಾವು ಬಟ್ಟೆಗೆ ಮಾಡುವ ಅತಿ ದೊಡ್ಡ ದ್ರೋಹವೇ ಸರಿ.

ಏಕೆಂದರೆ ಅಂತಹ ಇಸ್ತ್ರಿ ಪೆಟ್ಟಿಗೆಯಿಂದ ಇಸ್ತ್ರಿ ಮಾಡಲ್ಪಟ್ಟ ಬಟ್ಟೆ ಮತ್ತೆಂದೂ ನಮ್ಮ ಮೈ ಮೇಲೆ ಬರಬಾರದು ಎಂದು ಮುನಿಸಿಕೊಂಡಿರುತ್ತದೆ ಅಂದರೆ ಮತ್ತೆ ಸರಿ ಮಾಡುವುದಕ್ಕೆ ಆಗದೆ ಇರುವಷ್ಟು ಹಾಳಾಗಿ ಹೋಗಿರುತ್ತದೆ . ಹಾಗಿದ್ದರೆ ಅಂತಹ ಸ್ಟೀಮ್ ಐರನ್ ಬಾಕ್ಸ್ ಅಥವಾ ಇಸ್ತ್ರಿ ಪೆಟ್ಟಿಗೆಯನ್ನು ಥಟ್ಟಂತ ಸರಿ ಪಡಿಸುವುದು ಹೇಗೆ ? ಬನ್ನಿ ಈ ಕೆಳಗಿರುವ ಉಪಾಯಗಳನ್ನು ಒಮ್ಮೆ ನೋಡೋಣ . ಇವೆಲ್ಲಾ ಮನೆಯಲ್ಲೇ ಸಿಗುವ ಗೃಹೋಪಯೋಗಿ ವಸ್ತುಗಳು . ಆದ್ದರಿಂದ ಇವು ನಿಮ್ಮ ಸ್ಟೀಮ್ ಐರನ್ ಬಾಕ್ಸ್ ಗೆ ಯಾವುದೇ ಹಾನಿಯನ್ನು ಉಂಟು ಮಾಡಲಾರವು . ಹಾಗಾದರೆ ಆ ವಸ್ತುಗಳು ಯಾವುವು ಮತ್ತು ಅದನ್ನು ಇಸ್ತ್ರಿ ಪೆಟ್ಟಿಗೆ ಸ್ವಚ್ಛ ಮಾಡಲು ಉಪಯೋಗಿಸುವುದು ಹೇಗೆ ಎಂದು ಈಗ ನೋಡೋಣ .

Bottom Of A Steam Iron

ವೈಟ್ ವಿನೆಗರ್

ಸಾಮಾನ್ಯವಾಗಿ ಸ್ಟೀಮ್ ಐರನ್ ಬಾಕ್ಸ್ ನಲ್ಲಿ ಸ್ಕೇಲ್ ನಂತಹ ಕರೆಗಳು ಉಂಟಾಗುತ್ತವೆ . ಇದರಿಂದ ಆ ಐರನ್ ಬಾಕ್ಸ್ ನ ಕಾರ್ಯ ದಕ್ಷತೆ ಕುಗ್ಗುತ್ತಾ ಹೋಗುತ್ತದೆ . ಈ ಸಮಸ್ಯೆಯ ನಿವಾರಣೆಗೆ ವೈಟ್ ವಿನೆಗರ್ ಬಹಳ ಅದ್ಭುತವಾದ ಏಜೆಂಟ್ ಆಗಿ ಕೆಲಸ ಮಾಡುತ್ತದೆ . ವೈಟ್ ವಿನೆಗರ್ ಅನ್ನು ಅಥವಾ ವೈಟ್ ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಸ್ಟೀಮ್ ಐರನ್ ಬಾಕ್ಸ್ ನ ರಿಸರ್ವೋಯರ್ ಗೆ ಕಾಲು ಭಾಗಕ್ಕಿಂತ ಸ್ವಲ್ಪ ಜಾಸ್ತಿ ಬರುವವರೆಗೂ ಸುರಿಯಿರಿ . ನಿಮ್ಮ ಸ್ಟೀಮ್ ಐರನ್ ಬಾಕ್ಸ್ ಅನ್ನು ಮೀಡಿಯಂ ಹೈ ಹೀಟ್ ಗೆ ಹೊಂದುವಂತೆ ಸೆಟ್ ಮಾಡಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಹೀಟ್ ಆಗುವಂತೆ ನೋಡಿಕೊಳ್ಳಿ . ಆಗ ನೀವು ಹಾಕಿದ್ದ ವಿನೆಗರ್ ಅಂಶ ಎಲ್ಲಾ ಹಾವಿಯಾಗಿ ಕೇವಲ ನೀರು ಮಾತ್ರ ಉಳಿದುಕೊಳ್ಳುತ್ತದೆ . ಅದಕ್ಕೆ ಇನ್ನೂ ಸ್ವಲ್ಪ ನೀರು ಸೇರಿಸಿ ಮತ್ತೆ 5 ನಿಮಿಷಗಳ ಕಾಲ ಸ್ಟೀಮ್ ಐರನ್ ಬಾಕ್ಸ್ ಅನ್ನು ಹೀಟ್ ಮಾಡಿ . ಇದರಿಂದ ಅಳಿದುಳಿದ ವಿನೆಗರ್ ಅಂಶವೂ ಹಾವಿಯಾಗಿ ಐರನ್ ಬಾಕ್ಸ್ ಕ್ಲೀನ್ ಆಗುತ್ತದೆ . ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಸ್ವಚ್ಛವಾಗಿ ಐರನ್ ಬಾಕ್ಸ್ ನ ತಳ ಒರೆಸಿ . ಈಗ ನಿಮ್ಮ ಐರನ್ ಬಾಕ್ಸ್ ಮೊದಲಿನಂತೆ ಆಗಿದೆ .

Bottom Of A Steam Iron

ಬೇಕಿಂಗ್ ಸೋಡಾ

ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ 1 ಟೇಬಲ್ ಚಮಚದಷ್ಟು ನೀರನ್ನು ಮತ್ತು 2 ಟೇಬಲ್ ಚಮಚದಷ್ಟು ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಕಲಸಿ . ಅದರಲ್ಲಿ ಯಾವುದೇ ನೀರಿನ ಅಂಶ ಇಲ್ಲದಂತೆ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ . ಆ ಪೇಸ್ಟ್ ಅನ್ನು ಸ್ಟೀಮ್ ಐರನ್ ಬಾಕ್ಸ್ ನ ತಳಕ್ಕೆ ಎಲ್ಲಾ ಕಡೆ ಹರಡುವಂತೆ ಸ್ಪ್ಯಾಟುಲಾ ಸಹಾಯದಿಂದ ಹಚ್ಚಿ . ಎಲ್ಲಿ ಜಾಸ್ತಿ ಕರೆಗಟ್ಟಿದಂತೆ ಕಾಣುತ್ತದೆ ಅಲ್ಲಿ ಸ್ವಲ್ಪ ಜಾಸ್ತಿ ಹಚ್ಚಿ . ಸ್ಟೀಮ್ ವೆಂಟ್ ಗಳ ಸುತ್ತಲೂ ಚೆನ್ನಾಗಿ ಕೋಟ್ ಮಾಡಿ . ನೀವು ತಯಾರಿಸಿದ ಪೇಸ್ಟ್ ತುಂಬಾ ಗಟ್ಟಿಯಾಗಿರಬಾರದು . ತೆಳುವಾದ ಪೇಸ್ಟ್ ಅನ್ನು ಸ್ಟೀಮ್ ಐರನ್ ಬಾಕ್ಸ್ ನ ಎಲ್ಲಾ ಕಡೆ ಹಚ್ಚಿದ ಮೇಲೆ ಸ್ವಲ್ಪ ಹೊತ್ತು ಆರಲು ಬಿಟ್ಟು , ನಂತರ ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಪೇಸ್ಟ್ ಹಚ್ಚಿದ ಜಾಗವನ್ನೆಲ್ಲಾ ಉಜ್ಜಿ . ಎಲ್ಲಿಯವರೆಗೂ ನಿಮಗೆ ಪೇಸ್ಟ್ ನ ಗುರುತುಗಳು ಕಾಣುವುದಿಲ್ಲವೋ ಅಲ್ಲಿಯವರೆಗೂ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಮತ್ತೆ ಒದ್ದೆ ಬಟ್ಟೆ ಮಾಡಿಕೊಂಡು ಸ್ಟೀಮ್ ಐರನ್ ಬಾಕ್ಸ್ ಅನ್ನು ಉಜ್ಜುತ್ತಾ ಬನ್ನಿ .

Most Read: ಪ್ರೆಷರ್ ಕುಕ್ಕರ್‌ನಲ್ಲಿ ಅಡುಗೆ ವೇಳೆ ಕಡೆಗಣಿಸಬೇಕಾದ ತಪ್ಪುಗಳು

ಅಡುಗೆಗೆ ಬಳಸುವ ಉಪ್ಪು

ನಾವು ಅಡುಗೆಗೆ ಬಳಸುವ ಉಪ್ಪು ಸಾಮಾನ್ಯವಾಗಿ ಐರನ್ ನ ಮೇಲೆ ನೈಲಾನ್ ಮತ್ತು ಪ್ಲಾಸ್ಟಿಕ್ ನಿಂದ ಉಂಟಾಗುವ ಕೊಳೆ ಮತ್ತು ಕಲೆಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿ ಕೆಲಸಕ್ಕೆ ಬರುತ್ತದೆ ಎಂದು ನಮಗೆ ಗೊತ್ತು . ಇದು ಸ್ಟೀಮ್ ಐರನ್ ಬಾಕ್ಸ್ ನ ವಿಷಯದಲ್ಲೂ ಅಷ್ಟೇ . ಒಂದು ಟೇಬಲ್ ಚಮಚದಷ್ಟು ಉಪ್ಪನ್ನು ತೆಗೆದುಕೊಂಡು ಅದನ್ನು ಒಂದು ಪೇಪರ್ ಟವೆಲ್ ನ ಮೇಲಿಡಿ . ಐರನ್ ಬಾಕ್ಸ್ ಅನ್ನು ಹೀಟ್ ಮಾಡಿ ಅದರ ಮೇಲೆ ಪೇಪರ್ ಟವೆಲ್ ನ ಮೇಲೆ ಹಾಗೆ ನಿಧಾನವಾಗಿ ಉಜ್ಜಿ . ಇದರಿಂದ ಕೊಳೆಯೆಲ್ಲಾ ಉಪ್ಪಿಗೆ ಅಂಟಿಕೊಂಡು ಐರನ್ ಬಾಕ್ಸ್ ಕ್ಲೀನ್ ಆಗುತ್ತದೆ . ಒಂದು ವೇಳೆ ಐರನ್ ಬಾಕ್ಸ್ ಸೋಲ್ ಪ್ಲೇಟ್ ನ ಮೇಲೆ ಪ್ಲಾಸ್ಟಿಕ್ ಅಥವಾ ನೈಲಾನ್ ನ ಹಾವಳಿ ಜಾಸ್ತಿ ಆಗಿದ್ದರೆ , ಒಂದು ಅಲ್ಯೂಮಿನಿಯಂ ಫಾಯಿಲ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಅದನ್ನು ಅಂಟಿರುವ ಪ್ಲಾಸ್ಟಿಕ್ ಅಥವಾ ನೈಲಾನ್ ನ ಮೇಲೆ ಸ್ವಲ್ಪ ಉಜ್ಜಿ . ಪ್ಲಾಸ್ಟಿಕ್ ನ ಕಲೆ ತಟ್ಟಂತೆ ಬಿಟ್ಟು ಹೋಗುತ್ತದೆ .

Bottom Of A Steam Iron

ಟೂತ್ ಪೇಸ್ಟ್

ಕೆಲವು ಜಿಡ್ಡುಗಳನ್ನು ಮತ್ತು ಹಠಮಾರಿ ಕಲೆಗಳನ್ನು ತೆಗೆಯಲು ಟೂತ್ ಪೇಸ್ಟ್ ಬಳಸಲಾಗುತ್ತದೆ . ಐರನ್ ಬಾಕ್ಸ್ ನ ಮೇಲೆ ಉಂಟಾಗಿರುವ ಕಲೆಗಳನ್ನು ತೆಗೆಯಲು ನೀವು ಪ್ರತಿ ದಿನ ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ಅನ್ನು ತೆಗೆದುಕೊಂಡು ಐರನ್ ಬಾಕ್ಸ್ ನ ಸೋಲ್ ಪ್ಲೇಟ್ ನ ಮೇಲೆ ಅಲ್ಲಿರುವ ಕೊಳೆಯ ಶೇಖರಣೆ ಸಡಿಲ ಗೊಳ್ಳುವವರೆಗೂ ಉಜ್ಜುತ್ತಿರಿ . ಕ್ಷಣ ಮಾತ್ರದಲ್ಲಿ ಅಲ್ಲಿರುವ ಕೊಳೆಯೆಲ್ಲಾ ಮಾಯವಾಗಿ ಬಿಡುತ್ತದೆ . ನಿಮ್ಮ ಸ್ಟೀಮ್ ಬಾಕ್ಸ್ ನ ಸೋಲ್ ಪ್ಲೇಟ್ ಪಳ ಪಳನೆ ಹೊಳೆಯುತ್ತದೆ .

ಡ್ರೈಯೆರ್ ಶೀಟ್ ಗಳು

ಇದನ್ನು ಬಳಕೆ ಮಾಡುವ ಮೊದಲು ನಿಮ್ಮ ಐರನ್ ಬಾಕ್ಸ್ ಅನ್ನು ಕಡಿಮೆ ಬಿಸಿ ಆಗುವಂತೆ ಹೀಟ್ ಮಾಡಿಕೊಳ್ಳಿ . ನಂತರ ಕೆಲವು ಡ್ರೈ ಶೀಟ್ ಗಳನ್ನು ತೆಗೆದುಕೊಂಡು ಹೀಟ್ ಆಗಿರುವ ನಿಮ್ಮ ಸ್ಟೀಮ್ ಐರನ್ ಬಾಕ್ಸ್ ನ ತಳದ ಮೇಲೆ ತಿಕ್ಕಿ . ಅಲ್ಲಿರುವ ಕಲೆಗಳು ಮತ್ತು ಕೊಳೆಯ ಪದಾರ್ಥಗಳು ಹೋಗುವವರೆಗೂ ಹೀಗೆ ಮಾಡುತ್ತಿರಿ .ಕೊನೆಯಲ್ಲಿ ಒಂದು ಶುದ್ಧವಾದ ಬಟ್ಟೆ ತೆಗೆದುಕೊಂಡು ಐರನ್ ಬಾಕ್ಸ್ ಅನ್ನು ಅದರ ಮೇಲೆ ಸ್ವಲ್ಪ ಉಜ್ಜಿ . ಆಗ ತಪ್ಪಿಸಿಕೊಂಡಿರುವ ಕೊಳೆಯೆಲ್ಲಾ ಇದರಲ್ಲಿ ಬಂದು ಬಿಡುತ್ತದೆ.

Most Read:ತಿಗಣೆಕಾಟ :ಸುಲಭವಾಗಿ ನಿವಾರಿಸಲು 10 ಪರಿಣಾಮಕಾರಿ ಮನೆಮದ್ದುಗಳು

ತೇವದ ಬಟ್ಟೆ

ಒಂದು ಅಗಲವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ ತೇವ ಮಾಡಿಕೊಳ್ಳಿ . ಅದರಲ್ಲಿರುವ ಹೆಚ್ಚಿನ ನೀರಿನ ಅಂಶವನ್ನು ತೆಗೆಯಲು ಬಟ್ಟೆಯನ್ನು ಚೆನ್ನಾಗಿ ಇಂಡಿ . ಆ ಮೇಲೆ ನಿಮ್ಮ ಸ್ಟೀಮ್ ಐರನ್ ಬಾಕ್ಸ್ ಅನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ . ಬಿಸಿ ಇರುವಾಗಲೇ ಮೊದಲೇ ತೇವ ಮಾಡಿಕೊಂಡಿರುವ ಬಟ್ಟೆಯಿಂದ ಸ್ಟೀಮ್ ಐರನ್ ಬಾಕ್ಸ್ ನ ಸೋಲ್ ಪ್ಲೇಟ್ ಅನ್ನು ಚೆನ್ನಾಗಿ ತಿಕ್ಕಿ . ಇಲ್ಲಿ ಒಂದು ವೇಳೆ ಹಠಮಾರಿ ಕಲೆ ಬಿಡದಿದ್ದರೆ , ನೀವು ಸ್ವಲ್ಪ ಮೈಲ್ಡ್ ಡಿಟರ್ಜೆಂಟ್ ಮತ್ತು ನೈಲಾನ್ ಮೆಶ್ ಪ್ಯಾಡ್ ಅನ್ನು ಬೇಕಾದರೂ ಉಪಯೋಗಿಸಬಹುದು .

ವಿನೆಗರ್ ಮತ್ತು ಅಡುಗೆಗೆ ಬಳಸುವ ಉಪ್ಪು

ವಿನೆಗರ್ ಮತ್ತು ಉಪ್ಪನ್ನು 1:1 ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಒಂದು ಸೊಲ್ಯೂಷನ್ ರೀತಿಯಲ್ಲಿ ತಯಾರಿಸಿಕೊಳ್ಳಿ . ಈ ಸೊಲ್ಯೂಷನ್ ಅನ್ನು ಸ್ಟವ್ ಮೇಲೆ ಬಿಸಿ ಮಾಡಲು ಇಟ್ಟು ಉಪ್ಪು ಕರಗುವವರೆಗೂ ಆಗಾಗ ಚೆನ್ನಾಗಿ ತಿರುವುತ್ತಿರಿ . ಇಲ್ಲಿ ಒಂದು ಅಂಶ ನೆನಪಿನಲ್ಲಿಡಿ . ಯಾವುದೇ ಕಾರಣಕ್ಕೂ ನೀವು ತೆಗೆದುಕೊಂಡಿರುವ ವಿನೆಗರ್ ಕುದಿಯಬಾರದು . ಅದು ಕುದಿ ಬರುವ ಮುಂಚೆ ಸ್ಟವ್ ಆರಿಸಿ ಕೆಳಗಿಳಿಸಿ.ಈ ಸೊಲ್ಯೂಷನ್ ಬಿಸಿ ಆಗಿರುವಾಗಲೇ ಒಂದು ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಅದ್ದಿ ನಿಧಾನವಾಗಿ

ನಿಮ್ಮ ಐರನ್ ಬಾಕ್ಸ್ ಮೇಲೆ ಉಜ್ಜುತ್ತಾ ಬನ್ನಿ . ಕೊಳೆ ಮಾಯವಾಗುವವರೆಗೂ ಹೀಗೆ ಮಾಡಿ . ಸ್ಟೀಮ್ ವೆಂಟ್ ಗಳ ಮೇಲೂ ಉಜ್ಜಿ . ಅಲ್ಲಿಯೂ ಕೂಡ ಅಲ್ಪ ಸ್ವಲ್ಪ ಕೊಳೆ ಅಥವಾ ಧೂಳು ಕುಳಿತಿರುವುದರಿಂದ ಅದೂ ಕೂಡ ಕ್ಲೀನ್ ಆಗುತ್ತದೆ . ಇದೆಲ್ಲಾ ಆದ ಮೇಲೆ ಐರನ್ ಬಾಕ್ಸ್ ನ ಮೇಲ್ಮೈ ಅನ್ನು ಕೂಡ ಇದೇ ಸೊಲ್ಯೂಷನ್ ನಿಂದ ಉಜ್ಜಬಹುದು .

ಶುದ್ಧವಾದ ನೀರು

ಸ್ಟೀಮ್ ಐರನ್ ಬಾಕ್ಸ್ ನ ರೀಸರ್ವೈರ್ ಅನ್ನು ನೀರಿನಿಂದ ತುಂಬಿ . ಐರನ್ ಬಾಕ್ಸ್ ಅನ್ನು ಸ್ವಿಚ್ ಆನ್ ಮಾಡಿ . ನೀರು ಪೂರ್ತಿ ಖಾಲಿ ಆಗುವವರೆಗೂ ಐರನ್ ಬಾಕ್ಸ್ ನ ಬಿಸಿ ಜಾಸ್ತಿ ಮಾಡಿ . ಇದರಿಂದ ಸ್ಟೀಮ್ ವೆಂಟ್ ಗಳಲ್ಲಿ ಸೇರಿಕೊಂಡಿರುವ ಕೊಳೆ ತಾನಾಗಿಯೇ ಬಿಟ್ಟು ಹೋಗುತ್ತದೆ . ಆಮೇಲೆ ಒಂದು ಒಣ ಬಟ್ಟೆಯನ್ನು ತೆಗೆದುಕೊಂಡು ನಿಮ್ಮ ಸ್ಟೀಮ್ ಐರನ್ ಬಾಕ್ಸ್ ನ ಸೋಲ್ ಪ್ಲೇಟ್ ಅನ್ನು ಚೆನ್ನಾಗಿ ಉಜ್ಜಿ . ಇದರಿಂದ ನಿಮ್ಮ ಐರನ್ ಬಾಕ್ಸ್ ಮತ್ತೆ ಮೊದಲಿನಂತೆ ಹೊಸದಾಗಿ ಕಾಣುತ್ತದೆ .

English summary

How To Clean The Bottom Of A Steam Iron

The bottom of your iron has to be cleaned at regular intervals to increase its efficiency and lifespan. In order to avoid the iron dragging as you move it and to escape from the residue getting collected on the soleplate, you should clean the soleplate of the iron and the steam vents. One can use white vinegar, baking soda, common salt, toothpaste etc. for this.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X