ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಅನುಸರಿಸಿ

Posted By: Deepu
Subscribe to Boldsky

ಹಣ ಯಾರಿಗೆ ಬೇಡ? ಅದರಲ್ಲೂ ಹೆಚ್ಚಿನ ಹಣ ಎಲ್ಲರಿಗೂ ಬೇಕು. ಜೀವನಕ್ಕೆ ಸೌಲಭ್ಯಗಳು ಅಗತ್ಯ. ಈ ಸೌಲಭ್ಯಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಲೇಬೇಕು. ಹಣ ಹೆಚ್ಚಿದ್ದಷ್ಟೂ ಸೌಲಭ್ಯಗಳು ಹೆಚ್ಚುತ್ತವೆ ಹಾಗೂ ಉತ್ತಮ ಆಹಾರ ಮತ್ತು ಸವಲತ್ತುಗಳು ಐಷಾರಾಮಗಳೂ ಲಭ್ಯವಾಗುತ್ತವೆ. ಇಂದಿನ ದಿನಗಳಲ್ಲಿ ಹಣವಿದ್ದವರಿಗೇ ಹೆಚ್ಚಿನ ಮಾನ್ಯತೆ ದೊರಕುತ್ತಿರುವುದು ನಗ್ನಸತ್ಯ. ಆದರೆ ಹಣವನ್ನು ಕೇವಲ ಕತ್ತೆಯಂತೆ ದುಡಿಯುವುದರಿಂದ ಸಂಪಾದಿಸಲು ಸಾಧ್ಯವಿಲ್ಲ. ಒಂದು ವೇಳೆ ಸಾಕಷ್ಟು ಹಣವನ್ನು ಸಂಪಾದಿಸಿದರೂ ಇದರ ಸದ್ಬಳಕೆ ಅಗತ್ಯ. ಆದರೆ ಹೆಚ್ಚಿನವರಿಗೆ ಅವರ ಖರ್ಚುಗಳು ಕೈಗೆ ಎಟುಕದೇ ಸಂಪಾದಿಸಿದ್ದಷ್ಟೂ ಖರ್ಚಾಗಿ ತಿಂಗಳ ಕಡೆಗೆ ಖಾಲಿ ಕೈ ಇರುವ ಸಂಭವ ಎದುರಾಗುತ್ತದೆ. 

ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮನೆಯ ವಾಸ್ತು ಸರಿಯಾಗಿರದೇ ಇದ್ದರೆ ಅನಾವಶ್ಯಕ ಖರ್ಚುಗಳು ಸದಾ ಒಂದರ ಮೇಲೊಂದು ಎದುರಾಗುತ್ತಾ ಗಳಿಕೆಯನ್ನೆಲ್ಲಾ ಕಬಳಿಸಿಬಿಡುತ್ತವೆ. ಆದರೆ ಮನೆಯ ವಸ್ತುಗಳನ್ನು ಇರಿಸುವ ಸ್ಥಳಗಳನ್ನು ಕೊಂಚ ಬದಲಿಸುವ ಮೂಲಕ ಮನೆಯ ವಾಸ್ತುವನ್ನು ಬದಲಿಸಿ ನಿಮ್ಮ ಗಳಿಕೆಯ ಬಹಳಷ್ಟು ಮನೆಯಲ್ಲಿಯೇ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನೆಯಲ್ಲಿಯೂ ಹಣ ಮತ್ತು ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ. 

ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ... ಮುಂದೆ ಓದಿ

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ...

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ...

ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ..

ಸ್ವಸ್ತಿಕ್ ಚಿಹ್ನೆ

ಸ್ವಸ್ತಿಕ್ ಚಿಹ್ನೆ

ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ.

ಹನುಮಂತನ ವಿಗ್ರಹ

ಹನುಮಂತನ ವಿಗ್ರಹ

ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ.

ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಹನುಮಾನ್ ಮಂತ್ರ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ ಎಲ್ಲಾ ವಾಸ್ತು ನಿಯಮಗಳ ರಾಜನಿದ್ದಂತೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಬರುವಂತೆ ಇಡೀ ಆಗ ನೋಡಿ ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತವೆ. ಹಾಗಾಗಿ ನೀವು ಪ್ರಾರ್ಥನೆ ಮಾಡುವ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಪ್ರಾರ್ಥನೆ ಮಾಡಿ.

ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ

ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ

ನಿಮ್ಮ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಸಂಗ್ರಹಿಸಬೇಡಿ. ಮೆಟ್ಟಿಲ ಕೆಳಗೆ ಯಾವುದೇ ವಸ್ತುಗಳನ್ನು ಚಲನೆಗೆ ಅಡ್ಡಿಯಾಗುವಂತಿಡುವುದು ವಾಸ್ತುವಿಗೆ ವಿರುದ್ದವಾಗಿದ್ದು ಮನೆಯಲ್ಲಿ ದಾರಿದ್ರ್ಯ ಆವರಿಸಲು ಕಾರಣವಾಗುತ್ತದೆ.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆಯು ಸಮೃದ್ಧಿಯ ಸಂಕೇತವಾಗಿರುತ್ತದೆ. ಹಾಗಾಗಿ ಅಡಿಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು. ಹಾಗೇನಾದರೂ ಆಗದೇ ಅಡಿಗೆ ಮನೆಯು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದಲ್ಲಿ ಅದು ಹಣಕಾಸಿನ ಹಾಗೂ ಅನೇಕ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಲ್ಛಾವಣಿಯಲ್ಲಿ (ಸೀಲಿಂಗ್) ಮೂರು ಕಂಚಿನ ಬಟ್ಟಲುಗಳನ್ನು ತಲೆಕೆಳಕಾಗಿ ನೇತುಹಾಕಿ ಆದರೆ ಅದನ್ನು ಸ್ಟವ್‌ ಮೇಲೆ ನೇರವಾಗಿ ನೇತು ಹಾಕಬೇಡಿ.

ಗ್ಯಾಸ್ ಒಲೆ

ಗ್ಯಾಸ್ ಒಲೆ

ಗ್ಯಾಸ್ ಒಲೆಯನ್ನು ಮನೆಯ ಉತ್ತರ ಭಾಗದಲ್ಲಿ ಇಡಕೂಡದು. ಇದರಿಂದ ಮನೆಗೆ ಆಗಮಿಸುವ ಧನ ಮತ್ತು ಧನಾತ್ಮಕ ಶಕ್ತಿಯನ್ನು ಬೆಂಕಿ ದಹಿಸಿ ಬಿಡುತ್ತದೆ.

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು. ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ.

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು ಕಷ್ಟವನ್ನು ತರುವ ಶಕ್ತಿಯನ್ನು ಹೊಂದಿರುವ ಸ್ಥಳವಾಗಿದ್ದು, ಇವು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು. ಇವುಗಳು ಯಾವುದೇ ಕಾರಣಕ್ಕೂ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಎಂದಿಗೂ ಇರಬಾರದು. ಹಾಗೆ ಇದ್ದಲ್ಲಿ ಅದು ಹಣಕಾಸು, ಆರೋಗ್ಯ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ತರುತ್ತವೆ.

ಒಣಗಿದ ಹೂವುಗಳು

ಒಣಗಿದ ಹೂವುಗಳು

ಮನೆಮಯಲ್ಲಿರುವುದು ತರವಲ್ಲ ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಬೇಡದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ...

ಬೇಡದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ...

ನಿಮ್ಮ ಮನೆಯ ಛಾವಣಿಯ ಮೇಲೆ ಬೇಡವಾದ, ಹಳೆಯ, ಅಥವಾ ಹಾಳಾದ ಪೀಠೋಪಕರಣಗಳನ್ನು ಎ೦ದಿಗೂ ಇರಿಸಬೇಡಿರಿ. ಬೇಡವಾದ ವಸ್ತುಗಳ ಸ೦ಗ್ರಹವು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಮನೆಯ ಆಗ್ನೇಯ ದಿಕ್ಕು ಯಾವಾಗಲೂ ಸ್ವಚ್ಚವಾಗಿರಬೇಕು. ನಿಮ್ಮಲ್ಲೇನಾದರೂ ಭಾರವಾದ ವಸ್ತುಗಳಿದ್ದಲ್ಲಿ, ಅವುಗಳನ್ನು ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿರಿಸುವುದು ಸೂಕ್ತವಾಗಿರುತ್ತದೆ.

ಲಕ್ಷ್ಮಿ ದೇವಿಯ ಪಟ

ಲಕ್ಷ್ಮಿ ದೇವಿಯ ಪಟ

ಅಂತಿಮವಾಗಿ ಮನೆಯಲ್ಲಿ ಧನ ಮತ್ತು ಸಂಪತ್ತು ನೆಲೆಸಿರಲು ಲಕ್ಷ್ಮೀದೇವಿಯ ಪಟವೊಂದನ್ನು ನಿಮ್ಮ ಮನೆಯ ಪೂಜಾಗೃಹದಲ್ಲಿ ಸದಾ ಇರುವಂತೆ ನೋಡಿಕೊಳ್ಳಿ ಹಾಗೂ ನಿತ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೂ ಪೂಜೆ ಸಲ್ಲಿಸಿ. ಇದರಿಂದ ಮನೆಯಲ್ಲಿ ಸಮೃದ್ಧತೆ ತುಂಬಿ ಸದಸ್ಯರಲ್ಲಿ ಸಾಮರಸ್ಯ ಹಾಗೂ ಪ್ರೀತಿ ತುಂಬಿ ತುಂಬಿರುತ್ತದೆ.

ಲಕ್ಷ್ಮಿದೇವಿಗೆ ದಿನ ಪೂಜೆ ಸಲ್ಲಿಸಿ

ಲಕ್ಷ್ಮಿದೇವಿಗೆ ದಿನ ಪೂಜೆ ಸಲ್ಲಿಸಿ

ಲಕ್ಷ್ಮಿದೇವಿಯ ವಿಗ್ರಹ ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.

English summary

Vastu shastra Tips To Bring Positive Energy Into Your Home

Whether you have a modern house or a traditional one, living rooms are the most common part of it for the simple reason that man is a social animal by nature, therefore he needs a place which he can call as a place of gathering - where he can socialize with people and spend quality time with his family.