For Quick Alerts
ALLOW NOTIFICATIONS  
For Daily Alerts

  ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಲು 10 ಸರಳ ಸಲಹೆಗಳು

  |

  ಸುಂದರ ಹಾಗೂ ಸ್ವಚ್ಛ ಮನೆ ಎಲ್ಲರಿಗೂ ಇಷ್ಟ. ಮನೆ ಸ್ವಚ್ಛವಾಗಿದ್ದರೆ, ಮನಸ್ಸೂ ಸ್ವಚ್ಛವಾಗಿರುತ್ತದೆ. ಇದಲ್ಲದೇ ನಿಮ್ಮ ಸುತ್ತಮುತ್ತಲಿನ ಸಕಾರತ್ಮಕ ಶಕ್ತಿ ಕೂಡಾ ಹೆಚ್ಚುತ್ತದೆ. ಮನೆಗೆಲಸದ ಚಟುವಟಿಕೆಯನ್ನು ದಿನವೂ ಚಾಚೂ ತಪ್ಪದೆ ಮಾಡುವುದು ಸುಲಭವಲ್ಲ ಎಂಬುದು ಕೂಡಾ ನಿಜ, ಕೆಲವೊಮ್ಮೆ ಉದಾಸೀನತೆ ಮಿತಿ ಮೀರಿ " ಅಯ್ಯೋ ಇದು ಯಾವಾಗಲೂ ಇದ್ದಿದ್ದೆ, ನಾಳೆ ಮಾಡಿದರಾಯಿತು" ಎಂದು ಮೈ ಮುರಿದದ್ದು ಇರಬಹುದಲ್ವಾ? ಯಾಕೆ ಹೀಗೆ? ಮನೆ ಕೆಲಸ ತುಂಬಾ ಹೊತ್ತು ಹಿಡಿಯುವ ಕೆಲಸ ಎಂದೇ? ಅಥವಾ, 'ಸ್ವಲ್ಪ ಹೊತ್ತು ಆರಾಮವಾಗಿ ಕೂರೋಣ' ಇಲ್ಲಾಂದ್ರೆ ಇಡೀ ದಿನ ಮನೆ ಕ್ಲೀನ್ ಮಾಡೋದರಲ್ಲೆ ಮುಗಿದು ಹೋಗುತ್ತೆ ಅಂತಾನೋ?. ಕಡಿಮೆ ಸಮಯದಲ್ಲಿ ಕ್ಲೀನಿಂಗ್ ಕೆಲಸಗಳನ್ನು ಮಾಡಿಮುಗಿಸುವುದು ಹೇಗೆ? ತಿಳಿಯಲು ಮುಂದೆ ಓದಿ.

  ಕೇವಲ ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸುವುದು ಮುಖ್ಯವಲ್ಲ, ಆದರೆ ಈ ಕೆಲಸ ನಿಮ್ಮ ಎಲ್ಲಾ ಸಮಯವನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ.

  ಆದ ಕಾರಣ ನೀವು ಉತ್ತಮ ಅಭ್ಯಾಸಗಳನ್ನು ಮತ್ತು ಪದ್ಧತಿಗಳನ್ನು ರಚಿಸಬೇಕು. ನೀವು ಮತ್ತು ಮನೆಯ ಇತರ ಎಲ್ಲಾ ಸದಸ್ಯರೂ ಸಹ ಈ ಅಭ್ಯಾಸಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಮನೆ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೀವು ಅನುಸರಿಸಬೇಕಾದ ಕೆಲವೊಂದು ಸರಳ ಅಭ್ಯಾಸಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. ಬನ್ನಿ, ಅವುಗಳು ಯಾವುದು ಅಂತ ನೋಡೋಣ.

  ಹಾಸಿಗೆಯನ್ನು ಶುಚಿಗೊಳಿಸಿ

  ಹಾಸಿಗೆಯನ್ನು ಶುಚಿಗೊಳಿಸಿ

  ಮನೆಯನ್ನು ಶುಚಿಯಾಗಿಡಲು ಮಾಡಬಹುದಾದ ಮೊದಲನೆಯ ಕೆಲಸ ನಿಮ್ಮ ಹಾಸಿಗೆಯನ್ನು ಅಚ್ಚುಕಟ್ಟಾಗಿಡುವುದು. ಹೊದಿಕೆಗಳನ್ನು ಮಡಚುವುದು ಮತ್ತು ತಲೆ ದಿಂಬುಗಳನ್ನು ಅವುಗಳ ಸ್ಥಾನದಲ್ಲಿ ಇಡುವುದು. ಹಾಸಿಗೆಯನ್ನು ಸರಿ ಮಾಡುವುದು ಸಮಯದ ವ್ಯರ್ಥವಲ್ಲ. ನೀವು ನಿಮ್ಮ ಮನೆಯನ್ನು ಹೇಗೆ ಗುಡಿಸಿ ಒರಸಿ ಶುಚಿಗೊಳಿಸುತ್ತೀರೋ,ಇದೂ ಕೂಡಾ ಅಷ್ಟೇ ಮುಖ್ಯವಾಗಿದೆ. ಮಲಗುವ ಕೋಣೆಗಳು ವಿಶ್ರಾಂತಿ ಪಡೆಯಲು ಮತ್ತು ದಿನದ ಅಂತ್ಯದಲ್ಲಿ ನಿಮ್ಮ ಸಮಯ ಕಳೆಯಲು ಬಳಸುವುದಾದ್ದರಿಂದ, ಮಲಗುವ ಸಮಯದಲ್ಲಿ ಅಲ್ಲಿ ಕೊಳಕು ಕಂಡರೆ ಅದು ಒಳ್ಳೆಯ ಅನುಭವ ನೀಡುವುದಿಲ್ಲ. ಆದ್ದರಿಂದ ಎದ್ದ ಕೂಡಲೇ ಈ ಕೆಲಸಗಳನ್ನು ಮುಗಿಸಿ, ಮಲಗುವ ಕೋಣೆಯಿಂದ ಹೊರಡಿ.

  ಬ್ಯಾಚ್ ಮೂಲಕ ಬಟ್ಟೆಗಳನ್ನು ತೊಳೆಯಿರಿ ಮತ್ತು ಮಡಚಿಡಿ

  ಬ್ಯಾಚ್ ಮೂಲಕ ಬಟ್ಟೆಗಳನ್ನು ತೊಳೆಯಿರಿ ಮತ್ತು ಮಡಚಿಡಿ

  ವಾರಾಂತ್ಯದಲ್ಲಿ ಬಟ್ಟೆ ಒಗೆಯುತ್ತಾ ಕೂರಲು ಯಾರು ತಾನೇ ಇಷ್ಟ ಪಡುತ್ತಾರೆ?. ಆದ್ದರಿಂದ ಬಟ್ಟೆಗಳನ್ನು ಪ್ರತ್ಯೇಕವಾಗಿಡಿ ಮತ್ತು ಬ್ಯಾಚ್ ಗಳ ಮೂಲಕ ತೊಳೆಯಿರಿ. ಒಟ್ಟಿಗೆ ಎಲ್ಲಾ ಬಟ್ಟೆಗಳನ್ನು ತೊಳೆಯಲು ಹೊರಟರೆ ದಣಿವಿನ ಅನುಭವವಾಗಬಹುದು ಮತ್ತು ಬಹಳಷ್ಟು ಸಮಯವೂ ವ್ಯರ್ಥವಾಗಬಹುದು. ಬ್ಯಾಚ್ ಪ್ರಕಾರ ಬಟ್ಟೆ ಒಗೆಯುವುದರಿಂದ ಕೆಲಸ ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ಒಣಗಿದ ಬಟ್ಟೆಗಳನ್ನು ಅವುಗಳ ಪ್ರಕಾರದಂತೆ( ಶರ್ಟ್, ಪ್ಯಾಂಟ್, ಟಾಪ್, ಒಳ ಉಡುಪುಗಳು ಇತ್ಯಾದಿ) ಪ್ರತ್ಯೇಕವಾಗಿ ಮಡಚಿಡಿ. ಇದರಿಂದ ಮುಂದಿನ ಸಲ ಅದನ್ನು ಉಪಯೋಗಿಸುವ ಸಮಯ ಬಂದಾಗ ಹುಡುಕಬೇಕಾಗುವುದಿಲ್ಲ.

  ಅಡುಗೆ ಕೋಣೆ ಮತ್ತು ಅದರ ಶುಚಿತ್ವ

  ಅಡುಗೆ ಕೋಣೆ ಮತ್ತು ಅದರ ಶುಚಿತ್ವ

  ಅಡುಗೆ ಕೆಲಸ ಮುಗಿದಂತೆ ಬಳಸಿದ ಪಾತ್ರೆಗಳನ್ನು ತೊಳೆಯಿರಿ. ತೊಳೆದ ಪಾತ್ರೆಗಳನ್ನು ಒಣಗಿದ ಕೂಡಲೇ ಅವುಗಳ ಸ್ವಸ್ಥಾನದಲ್ಲಿರಿಸಿ. ಸ್ಟವ್ ಸುತ್ತಮುತ್ತಲಿನ ಜಾಗವನ್ನು ಶುಚಿಯಾಗಿಡಿ. ಅವುಗಳನ್ನು ಅಡುಗೆಯಾದಂತೆ ಒರಸಿ. ಇದರಿಂದ ಅಡುಗೆ ಕೋಣೆ ಶುಚಿಯಾಗಿರುವುದಲ್ಲದೇ, ಕೆಲಸ ಮಾಡಲು ಉತ್ತೇಜಿಸುತ್ತದೆ.

  ಮೇಲ್ವಿಚಾರಣೆ ಮತ್ತು ಸಮಯ

  ಮೇಲ್ವಿಚಾರಣೆ ಮತ್ತು ಸಮಯ

  ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಹೋಗುವಾಗ ಸರಿಯಾಗಿ ಮೇಲ್ವಿಚಾರಿಸಿ, ಕೋಣೆಯನ್ನು ಬಿಡುವಾಗ ಖಾಲಿ ಕೈಯಲ್ಲಿ ಹೋಗ ಬೇಡಿ. ಉಪಯೋಗಿಸದೇ ಇರುವ ಅಥವಾ ಆ ಕೋಣೆಯಲ್ಲಿ ಅಗತ್ಯವಿಲ್ಲದ ಯಾವುದೇ ವಸ್ತುವಿದ್ದರೂ ಆ ಕೋಣೆಯಿಂದ ಕೊಂಡೊಯ್ಯಿರಿ. ಒಂದು ಕೋಣೆಯನ್ನು ಶುಚಿಪಡಿಸಿದ ಮೇಲೆಯೇ ಇನ್ನೊಂದು ಕೋಣೆಗೆ ಹೊರಡಿ. ಹಾಂ! ಎಲ್ಲದಕ್ಕಿಂತ ಮುಖ್ಯವಾದುದು, ಒಂದು ಕೋಣೆಯನ್ನು ಶುಚಿಗೊಳಿಸಲು ನಿರ್ದಿಷ್ಟ ಸಮಯ ನಿಗದಿ ಪಡಿಸಿ. ಉದಾಹರಣೆಗೆ, ಒಂದು ಕೋಣೆಗೆ 10 ನಿಮಿಷ. ಇಲ್ಲವಾದಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗಬಹುದು.

  ಮಕ್ಕಳಿರುವ ಮನೆ

  ಮಕ್ಕಳಿರುವ ಮನೆ

  ಮಕ್ಕಳಿರುವ ಮನೆಯಲ್ಲಿ ಅಲ್ಲಲ್ಲಿ ಆಟಿಕೆಗಳು, ವಸ್ತುಗಳು ನೆಲದ ಮೇಲೆ ಹರಡಿಕೊಂಡಿರುವುದು ಸಾಮಾನ್ಯ ಅಲ್ವಾ? ಚಿಂತೆ ಬೇಡ. ಅದಕ್ಕೂ ಉಪಾಯವಿದೆ. ಮೊದಲನೆಯದಾಗಿ ಆಟವಾಡಿದ ನಂತರ ಎಲ್ಲಾ ಆಟಿಕೆಗಳನ್ನು ಒಂದು ಪೆಟ್ಟಿಗೆಯಲ್ಲಿ ಇಡಲು ನಿಮ್ಮ ಮಗುವಿಗೆ/ಮಕ್ಕಳಿಗೆ ಅಭ್ಯಾಸ ಮಾಡಿಸಿ. ತುಂಬಾ ಚಿಕ್ಕ ಮಕ್ಕಳಾಗಿದ್ದರೆ,ನೀವು ಕೂಡಾ ಈ ಕೆಲಸವನ್ನು ಮಾಡಬಹುದು. ಪೆಟ್ಟಿಗೆಯೇ ಆಗಬೇಕೆಂದಿಲ್ಲ, ಬಟ್ಟೆಯ ಚೀಲಗಳನ್ನು ಕೂಡಾ ಉಪಯೋಗಿಸಬಹುದು. ಮಕ್ಕಳು ಆಟವಾಡಿದ, ಊಟಮಾಡಿದ ಜಾಗವನ್ನು ಆಗಿಂದಾಗಲೇ ಶುಚಿಗೊಳಿಸಿ. ಮಕ್ಕಳಿಗೆ ಕೈಗೆ ಸಿಕ್ಕ ವಸ್ತುವನ್ನು ಬಾಯಿಗಿಡುವ ಅಭ್ಯಾಸವಿದೆ ಎಂದು ನಾವೆಲ್ಲರೂ ತಿಳಿದಿದ್ದೇವೆ!

  ಪತ್ರಗಳು ಮತ್ತು ಪತ್ರಿಕೆಗಳು

  ಪತ್ರಗಳು ಮತ್ತು ಪತ್ರಿಕೆಗಳು

  ಮನೆಯಲ್ಲಿ ಹರಡಿಕೊಂಡಿರುವ ಪತ್ರಗಳು ಮತ್ತು ಪತ್ರಿಕೆಗಳು ಮನೆಯ ಅಂದವನ್ನು ಕೆಡಿಸಬಹುದು. ಆದ್ದರಿಂದ ದೈನಂದಿನ ಪತ್ರಿಕೆಗಳನ್ನು ಓದಿದ ನಂತರ ಅವುಗಳನ್ನು ಇರಿಸಲು ಪ್ರತ್ಯೇಕವಾದ ಬಾಕ್ಸ್, ಅಥವಾ ಸ್ಟ್ಯಾಂಡ್ ಬಳಸಿ. ಅಗತ್ಯವಿಲ್ಲದ ಆಮಂತ್ರಣ ಪತ್ರಗಳು ಅಥವಾ ಇತರೇ ಪತ್ರಗಳ ವಿಲೇವಾರಿ ಮಾಡಿ.

  ಸ್ಥಾನವನ್ನು ನಿಗದಿ ಪಡಿಸಿ

  ಸ್ಥಾನವನ್ನು ನಿಗದಿ ಪಡಿಸಿ

  ದಿನನಿತ್ಯ ಅಗತ್ಯವಿರುವ ವಸ್ತುಗಳ ಜಾಗವನ್ನು ನಿಗದಿ ಪಡಿಸಿ ಮತ್ತು ಬಳಕೆಯ ನಂತರ ಪುನಃ ಅದೇ ಜಾಗದಲ್ಲಿಡಿ. ಪ್ರತ್ಯೇಕವಾಗಿ ಚಪ್ಪಲಿಗಳು ಮತ್ತು ಕ್ಲೀನಿಂಗ್ ಉಪಕರಣಗಳನ್ನು ಚಪ್ಪಲ್ ಸ್ಟ್ಯಾಂಡ್ ಅಥವಾ ಶೆಲ್ಫ್ ಬಳಸಿ. ನೋಡಲು ಕೂಡಾ ಅಂದವಾಗಿರುತ್ತದೆ. ಇಲ್ಲವಾದರೆ ವಸ್ತುಗಳನ್ನು ಹುಡುಕುವುದೇ ಒಂದು ಕೆಲಸವಾಗಬಹುದು.

  ಧೂಳು ಹೊಡೆಯುವುದು ಮತ್ತು ವಸ್ತುಗಳ ಮರುಹೊಂದಿಕೆ

  ಧೂಳು ಹೊಡೆಯುವುದು ಮತ್ತು ವಸ್ತುಗಳ ಮರುಹೊಂದಿಕೆ

  ವಸ್ತುಗಳ ಮರುಹೊಂದಿಕೆ ಬಹಳ ಸಮಯ ತೆಗೆದುಕೊಳ್ಳುವ ಕೆಲಸ. ಆದರೆ ಅಷ್ಟೆ ಮುಖ್ಯವಾದುದು. ಮನೆಯೊಂದನ್ನು ಆಯೋಜಿಸಲು ಇದು ಒಂದು ಪ್ರಮುಖ ಅಭ್ಯಾಸವಾಗಿದೆ. ಮೇಜಿನ ಮೇಲೆ, ಟಿ.ವಿ. ಸ್ಟ್ಯಾಂಡ್ ಮೇಲೆ ಇದ್ದ ಧೂಳನ್ನು ತೆಗೆಯಿರಿ ಮತ್ತು ವಸ್ತುಗಳನ್ನು ಮರುಹೊಂದಿಸಿ( ಜಾಗ ಬದಲಾಯಿಸಿ). ಮೇಜುಗಳ ಮೇಲೆ ಅಥವಾ ಯಾವುದೇ ಪೀಠೋಪಕರಣಗಳ ಮೇಲೆ ವಸ್ತುಗಳು ಕಡಿಮೆ ಇದ್ದಷ್ಟು ಕ್ಲೀನಿಂಗ್ ಸುಲಭ.

  ಎಲ್ಲರೊಂದಿಗೆ ಕೂಡಿ ಶುಚಿ ಮಾಡಿ

  ಎಲ್ಲರೊಂದಿಗೆ ಕೂಡಿ ಶುಚಿ ಮಾಡಿ

  ನಿಮ್ಮ ಮನೆಯ ಸದಸ್ಯರಿಗೆ ಅವರೂ ಇದೇ ಮನೆಯವರು ಎಂದು ನೆನಪಿನಲ್ಲಿ ಇರಬೇಕು. ಇದಕ್ಕಾಗಿಯೇ ಅವರಿಗೆ ಶುಚಿಗೊಳಿಸುವ ಕಾರ್ಯವನ್ನು ಅವರಿಗೂ ಕಲಿಸುವುದು ಮುಖ್ಯ. ಎಲ್ಲಾ ಕಾರ್ಯಗಳನ್ನು ನೀವು ಮಾತ್ರ ಮಾಡುವುದು ಕಷ್ಟಕರವಾಗಿರುತ್ತದೆ, ಆದರೆ ನಿಮ್ಮ ಕುಟುಂಬವೂ ಒಟ್ಟು ಸೇರಿದರೆ, ಅದು ತುಂಬಾ ಸಹಾಯಕವಾಗಿರುತ್ತದೆ.

  ಆದ್ಯತೆಗಳನ್ನು ಪಟ್ಟಿಮಾಡಿ

  ಆದ್ಯತೆಗಳನ್ನು ಪಟ್ಟಿಮಾಡಿ

  ಎಲ್ಲ ಶುಚಿಗೊಳಿಸುವಿಕೆಗಳು ಸಮಾನವಾದುದಲ್ಲ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವ ಕ್ಲೀನಿಂಗ್ ಮೊದಲು ಮಾಡಬೇಕು ಹಾಗೂ ಮತ್ತೆ ಮಾಡಬೇಕೆಂದು ಪಟ್ಟಿ ಮಾಡುವುದು ಉತ್ತಮ, ಇದರಂತೆ ನಡೆಯುವುದರಿಂದ ಕೆಲಸಗಳನ್ನು

  ವೇಗವಾಗಿ ಮತ್ತು ಸುಲಭವಾಗಿ ಮಾಡಿಮುಗಿಸಬಹುದು. ಈ ಪಟ್ಟಿಯನ್ನು ಯಾವತ್ತೂ ನೀವು ಹೆಚ್ಚಿನ ಸಮಯ ಕಳೆಯುವಲ್ಲಿ ಅಂಟಿಸಿ. ಪ್ರತೀ ದಿನ ಮಲಗುವ ಮೊದಲು ಎಲ್ಲಾ ಕೆಲಸಗಳು ಮುಗಿದಿವೆಯೆ ಎಂದು ನಿಗದಿ ಪಡಿಸಿ. ಓದಿದಿರಲ್ವಾ? ನಾವು ಇಲ್ಲಿ ಹೇಳಿದ ಸಲಹೆಗಳು ನಿಮಗೆ ಇಷ್ಟವಾದರೆ, ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ, ಅವರಿಗೂ ಮನೆಯ ಕ್ಲೀನಿಂಗ್ ಕೆಲಸ ಸುಲಭ ಆಗಲಿ. ಏನಂತೀರಿ?

  English summary

  10 Simple Habits To Keep Your House Clean And Neat All The Time

  It is true that it is not at all easy to keep up with the daily activities of housekeeping, but it also does not mean that all your time will be occupied. It is not only important to keep your home clean, but you should also see to the fact that it does not take up all of your time.You should create good habits and make sure that the habits are followed by you and all the other members of the house too. You may not be able to clean the house regularly, but you should make sure that your house stays neat, tidy, and mostly, hygienic. Listed below are the habits that you should follow to keep your house clean. Take a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more