For Quick Alerts
ALLOW NOTIFICATIONS  
For Daily Alerts

ನೀವು ಜೀವನದಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು

|

ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರವು ಹೆಚ್ಚು ಮುಖ್ಯವಾದ ಭಾಗವನ್ನು ಹೊಂದಿದೆ, ನಮ್ಮ ಸುಖ ಸಂತೋಷ ಮತ್ತು ಸಮೃದ್ಧಿಯ ಬದುಕಿಗಾಗಿ ವಾಸ್ತು ಮುಖ್ಯವಾಗಿದ್ದು ನಮ್ಮ ಆರೋಗ್ಯಕರ ಜೀವನದಲ್ಲಿ ವಾಸ್ತುವಿನ ಪಾಲು ಅತ್ಯಂತ ಹಿರಿದಾದುದು. ವಾಸ್ತು ಶಾಸ್ತ್ರಜ್ಞರು ಹೇಳುವಂತೆ ಸರಿಯಾದ ಕ್ರಮದಲ್ಲಿ ವಾಸ್ತುವನ್ನು ಪಾಲಿಸಬೇಕು ಎಂದಾಗಿದೆ.

Vastu Shastra

ಆಗ್ನೇಯ ಭಾಗಕ್ಕಿರುವ ಅಡುಗೆ ಮನೆಯನ್ನು ಹೊಂದುವಂತಿಲ್ಲ ಮತ್ತು ನಾವು ಆಗ್ನೇಯ ದಿಕ್ಕಿನಲ್ಲಿ ನಮ್ಮ ಮಲಗುವ ಕೋಣೆಗಳನ್ನು ಇಟ್ಟುಕೊಳ್ಳಬೇಕು. ಭಾರತೀಯ ನಿವಾಸಿಗಳು ನೈಋತ್ಯ ದಿಕ್ಕಿನಿಂದ ಮಾರುತಗಳಿಗೆ ಒಳಗಾಗುತ್ತಾರೆ, ಆದ್ದರಿಂದ ಅಡುಗೆಯು ನಿರಂತರವಾದ ಪರಸ್ಪರ ಕ್ರಿಯೆ ಮತ್ತು ನೈಋತ್ಯ ಗಾಳಿಯಿಂದ ಉಂಟಾಗುವ ಪರಿಣಾಮಗಳಾಗಿದ್ದು, ಹಾನಿಕಾರಕವೆಂದು ಸಾಬೀತುಪಡಿಸುವ ಅಂಶಗಳು ಈ ಭಾಗದಲ್ಲಿ ಅಡುಗೆ ಮನೆಯನ್ನು ಇರಿಸುವುದರಿಂದ ಉಂಟಾಗುತ್ತದೆ.

ಮಲಗುವ ಕೋಣೆ

ಮಲಗುವ ಕೋಣೆ

ನಮ್ಮ ಮಲಗುವ ಕೋಣೆಯು ನಮಗೆ ವಿಶ್ರಾಂತಿಯನ್ನು ನೀಡುವ ಸ್ಥಳವಾಗಿದೆ, ನಮ್ಮ ನಿದ್ರಿಸುವ ಕೋಣೆಯಲ್ಲಿ ಸರಿಯಾಗಿ ಗಾಳಿ ಬೆಳಕು ಆಡುವಂತಿರಬೇಕು ಇದರಿಂದ ನೆಮ್ಮದಿಯ ನಿದ್ರೆ ನಮ್ಮದಾಗುತ್ತದೆ. ಆದ್ದರಿಂದ ಆಗ್ನೇಯದಲ್ಲಿಯೇ ಮಲಗುವ ಕೋಣೆಯಿರಬೇಕು. ಗಾಳಿ, ಮಳೆ, ಸೂರ್ಯೋದಯ ಮತ್ತು ಸೂರ್ಯೋಸ್ತಕ್ಕೆ ಅನುಗುಣವಾಗಿ ಮನೆಯನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ವಾಸ್ತು ತಿಳಿಸುತ್ತದೆ. ನಿಮ್ಮ ಮನೆ ಉತ್ತರ ದಿಕ್ಕಿನಲ್ಲಿದ್ದರೆ ಹಾನಿಕಾರಕ ಯುವಿ ಕಿರಣಗಳು ನಿಮ್ಮ ಮನೆಯನ್ನು ಆಕ್ರಮಿಸುತ್ತವೆ.

ಸೂರ್ಯನ ಸುಂದರವಾದ ಕಿರಣಗಳು

ಸೂರ್ಯನ ಸುಂದರವಾದ ಕಿರಣಗಳು

ಅದೇ ರೀತಿಯಾಗಿ, ಒಂದು ಪೂರ್ವ ದಿಕ್ಕಿನ ಮುಖಾಮುಖಿ ಮನೆಗೆ ಬೆಚ್ಚಗಿನ ಏರುತ್ತಿರುವ ಸೂರ್ಯನ ಸುಂದರವಾದ ಕಿರಣಗಳು ಸಂಪೂರ್ಣವಾಗಿ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್ಗಳ ಜೊತೆಗೆ ಜೀವನ ಮತ್ತು ಸಕಾರಾತ್ಮಕತೆಗಳನ್ನು ತರುತ್ತದೆ.

ವಾಸ್ತು ಎಂಬುದು ಮೂಢನಂಬಿಕೆಯಲ್ಲ

ವಾಸ್ತು ಎಂಬುದು ಮೂಢನಂಬಿಕೆಯಲ್ಲ

ವಾಸ್ತು ಎಂಬುದು ಮೂಢನಂಬಿಕೆಯಲ್ಲ ಬದಲಾಗಿ ವೈಜ್ಞಾನಿಕ ಅಂಶಗಳನ್ನು ಒಟ್ಟುಗೂಡಿಸಿ ರೂಪಿಸಿರುವ ಸಿದ್ಧಾಂತವಾಗಿದೆ. ಹಿಂದಿನ ಹಿರಿಯರು ವೈಜ್ಞಾನಿಕ ಅಂಶಗಳನ್ನು ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ವಾಸ್ತು ಸಿದ್ಧಾಂತವನ್ನು ರೂಪಿಸಿದ್ದಾರೆ.

Most Read: ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ವಾಸ್ತು ಶಾಸ್ತ್ರದ ಪ್ರಯೋಜನಗಳು

ವಾಸ್ತು ಶಾಸ್ತ್ರದ ಪ್ರಯೋಜನಗಳು

ವಾಸ್ತು ಶಾಸ್ತ್ರವನ್ನು ಸರಿಯಾಗಿ ಅನುಸರಿಸುವ ಮೂಲಕ ನೀವು ಅರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ಅನುಭವಿಸಬಹುದಾಗಿದೆ:

ಹಣ

ಹಣ

ನಮ್ಮ ಸಾಂಪತ್ತಿಕ ಸ್ಥಿತಿಗತಿ ಉತ್ತಮವಾಗಿದ್ದರೆ ನಾವು ಸಂತೋಷವಾಗಿರುತ್ತೇವೆ. ನಮ್ಮ ಖುಷಿಗಾಗಿ ಸಾಕಷ್ಟು ಹಣ ನಮ್ಮಲ್ಲಿರಬೇಕು ಅಂತೆಯೆ ಅಗತ್ಯದ ವಸ್ತುಗಳನ್ನು ನಮಗೆ ಹಣ ಬಳಸಿ ಖರೀದಿಸುವಂತಿರಬೇಕು.

ವಾಸ್ತು ಈ ದಿಸೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನದಲ್ಲಿ ಹಣವು ಬೇರೆ ಬೇರೆ ರೀತಿಯಲ್ಲಿ ಬರುವಂತೆ ಮಾಡುತ್ತದೆ. ನಿಮ್ಮ ಸಂಬಳದಲ್ಲಿ ಏರಿಕೆ ಅಥವಾ ಹಣ ಬರುವಂತಹ ವಿವಿಧ ಮೂಲಗಳನ್ನು ನಿಮಗೆ ತೋರಿಸುವುದು ಈ ದಿಸೆಯಲ್ಲಿ ವಾಸ್ತು ನಿಮ್ಮ ಜೀವನದಲ್ಲಿ ಅಧಿಕ ಹಣ ಗಳಿಸುವಂತೆ ಮಾಡುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಸಂತೋಷ ನೆಮ್ಮದಿ ಇರುವಂತೆ ವಾಸ್ತು ಮಾಡುತ್ತದೆ.

ಆರ್ಥಿಕ ಭದ್ರತೆ

ಆರ್ಥಿಕ ಭದ್ರತೆ

ಯಾವುದೇ ರೀತಿಯ ವ್ಯವಹಾರಕ್ಕೆ ಆರ್ಥಿಕ ಮೂಲ ಬಂಡವಾಳ ಬೇಕು. ನಿಮ್ಮ ವ್ಯವಹಾರಕ್ಕೆ ಬೇಕಾಗಿರುವ ಸಾಂಪತ್ತಿಕ ಸವಲತ್ತುಗಳನ್ನು ವಾಸ್ತು ನಿಮಗೆ ಒದಗಿಸುತ್ತದೆ. ನಿಮ್ಮ ಸಂಸ್ಥೆ ಅಥವಾ ವ್ಯವಹಾರದಲ್ಲಿ ಸರಿಯಾದ ವಾಸ್ತು ಸಲಹೆಗಳನ್ನು ನೀವು ಪಾಲಿಸಿದರೆ, ನಿಮ್ಮ ಮನಸ್ಸಿನ ಬಯಕೆಗಳು ಈಡೇರುತ್ತವೆ ಮತ್ತು ಕಂಪನಿ ಹಾಗೂ ವ್ಯವಹಾರದಲ್ಲಿ ಲಾಭವನ್ನು ನೀವು ಗಳಿಸಬಹುದು.

Most Read: ಅಡುಗೆ ಮನೆಯ ವಾಸ್ತು ಶಾಸ್ತ್ರ: ತಿಳಿಯಲೇಬೇಕಾದ ಸಂಗತಿಗಳು

ಹೊಸ ಅವಕಾಶಗಳು

ಹೊಸ ಅವಕಾಶಗಳು

ನಿಮ್ಮ ಕನಸನ್ನು ನನಸಾಗಿಸುವ ಅವಕಾಶಗಳನ್ನು ನಿಮಗೆ ಒದಗಿಸುತ್ತದೆ. ನಿಮ್ಮ ಕೆಲಸದಲ್ಲಿ ಉತ್ತಮ ಅವಕಾಶ ದೊರೆಯುವಂತೆ ವಾಸ್ತು ಮಾಡುತ್ತದೆ. ನಿಮ್ಮ ಕನಸಿನ ಉದ್ಯೋಗ ಮತ್ತು ಕೆಲಸದಲ್ಲಿ ಭಡ್ತಿ ಮೊದಲಾದ ಸದಾವಕಾಶಗಳನ್ನು ವಾಸ್ತು ನಿಮಗೆ ಒದಗಿ ಬರುವಂತೆ ಮಾಡುತ್ತದೆ. ನಿಮ್ಮ ಜ್ಞಾನಕ್ಕೆ ಉತ್ತಮ ಮನ್ನಣೆ ದೊರೆಯುವಂತೆ ವಾಸ್ತು ಮಾಯಾಜಾಲವನ್ನು ಮಾಡುತ್ತದೆ. ನಿಮ್ಮ ಜೀವನದಲ್ಲಿ ವಾಸ್ತು ಬೇಕೇ ಬೇಕು. ಇದರಿಂದ ಜೀವನದಲ್ಲಿ ಬರುವ ಉತ್ತಮ ಅವಕಾಶಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

Most Read: ಈ ವಾಸ್ತು ಟಿಪ್ಸ್ ಬಳಸಿ ಶ್ರೀಮಂತಿಕೆ ನಿಮ್ಮದಾಗಿಸಿ

ಸಂಬಂಧಗಳು

ಸಂಬಂಧಗಳು

ಮನೆಯನ್ನು ನಿರ್ಮಿಸುವ ಮೂಲ ಉದ್ದೇಶವೇ ವೈವಾಹಿಕ ಜೀವನವೇ ಅಂತೆಯೇ ಮನೆಯ ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದಾಗಿದೆ. ನಿಮ್ಮ ಮನೆಯವರೊಂದಿಗೆ ನಿಮ್ಮ ಬಾಂಧವ್ಯವನ್ನು ಅತ್ಯುತ್ತಮವಾಗಿ ಕಾಯ್ದಿರಿಸುವಲ್ಲಿ ವಾಸ್ತು ಸಹಕಾರಿಯಾಗಿದೆ.

ಸಂತೋಷ ಮತ್ತು ಸಮಾಧಾನ

ಸಂತೋಷ ಮತ್ತು ಸಮಾಧಾನ

ನಿಮ್ಮಲ್ಲಿಯೇ ನಿಮ್ಮ ಸಂತಸ ಅಡಗಿದೆ, ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಸಂತೋಷವನ್ನು ಅನುಭವಿಸದೇ ಇದ್ದರೆ ಆತ ಪರಿಪೂರ್ಣ ಎಂದೆನಿಸುವುದಿಲ್ಲ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ವಾಸ್ತು ಸಿದ್ಧಾಂತಗಳನ್ನು ನೀವು ಸರಿಯಾಗಿ ಪಾಲಿಸಿದರೆ, ಆ ಸಂತೋಷವನ್ನು ನೀವು ಪುನಃ ಪಡೆದುಕೊಳ್ಳಬಹುದು.

ವಾಸ್ತು ಶಾಸ್ತ್ರದಲ್ಲಿ ಅನುಸರಿಸಬೇಕಾದ ಸಲಹೆಗಳು

ವಾಸ್ತು ಶಾಸ್ತ್ರದಲ್ಲಿ ಅನುಸರಿಸಬೇಕಾದ ಸಲಹೆಗಳು

ನೀವು ಸರಿಯಾದ ಕ್ರಮದಲ್ಲಿ ವಾಸ್ತು ನಿಯಮಗಳನ್ನು ಪಾಲಿಸಿದರೆ ಸಂತೋಷ ಯಶಸ್ಸು ನಿಮ್ಮ ಪಾಲಿಗೆ ಒಲಿಯುವುದು ಖಂಡಿತ.

1. ದೊಡ್ಡವರು ಮಲಗುವಾಗ ತಮ್ಮ ತಲೆಯ ಭಾಗ ದಕ್ಷಿಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.

2. ಮಕ್ಕಳು ಮಲಗುವಾಗ ತಮ್ಮ ತಲೆಯ ಭಾಗವನ್ನು ಪಶ್ಚಿಮ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು.

3.ನೀರು ಸಂಗ್ರಹಿಸಲು ತಾಮ್ರದ ಪಾತ್ರೆಗಳನ್ನು ಬಳಸಬೇಕು.

4. ನಿಮ್ಮ ಮನೆಯ ಉತ್ತರ ವಲಯವು ಯಾವುದೇ ರೀತಿಯಲ್ಲಿ ನಿರ್ಬಂಧಿಸಿದ್ದರೆ, ಅದು ಸಮೃದ್ಧಿಯನ್ನು ನಿರ್ಬಂಧಿಸಬಹುದು.

5. ನಿಮ್ಮ ಮನೆಯಲ್ಲಿ ಪ್ರಾಣಿಗಳು ಹೋರಾಡುವ ದೃಶ್ಯ, ಬೋಳು ಮರದ ಚಿತ್ರ ಅಥವಾ ಸತ್ತ ಪ್ರಾಣಿಗಳ ಚಿತ್ರವಿರುವ ಫೋಟೋಗಳನ್ನು ಹಾಕಬಾರದು.

English summary

Importance of Vastu Shastra to follow in your life

How important is vastu to you? What does it do? Vastu is what calculates scientific things like the degree of wind, rainfall, sunrise and sunset, in order to identify the most ideal way to build or construct a home or house. Having the right vastu will help you increase your wealth, stabilize you financially and help you provide greater opportunities.
X
Desktop Bottom Promotion