ಟೊಮೆಟೊ ಕೆಚಪ್‌ನಿಂದ ದಿನಬಳಕೆಯ ವಸ್ತುಗಳನ್ನು ಫಳ ಫಳ ಹೊಳೆಯಿಸಿ

By: Jaya subramanya
Subscribe to Boldsky

ನೀವು ಸೇವಿಸುವ ಆಹಾರವನ್ನೇ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ನೀವು ಅರಿತಿದ್ದೀರಾ? ಹೌದು ಇಂದಿನ ಲೇಖನದಲ್ಲಿ ಕೆಚಪ್ ಅನ್ನು ಬಳಸಿಕೊಂಡು ನಿಮ್ಮ ಅಡುಗೆ ಮನೆಗೆ ಮತ್ತು ನೀವು ಬಳಸುವ ದೈನಂದಿನ ವಸ್ತುಗಳಿಗೆ ಹೊಸ ಹೊಳಪನ್ನು ಮೆರುಗನ್ನು ನೀಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಅಡುಗೆ ಮನೆಯಲ್ಲಿ ಜಿಡ್ಡಿನ ಅಂಶಗಳನ್ನು ತೊಡೆದು ಹಾಕಲು, ನಲ್ಲಿಯನ್ನು ಸ್ವಚ್ಛಗೊಳಿಸಲು ನಾವು ರಾಸಾಯನಿಕ ಸ್ವಚ್ಛಕಗಳನ್ನು ಬಳಸುತ್ತೇವೆ ಆದರೆ ಅವುಗಳು ಯಾವುದೂ ನೈಸರ್ಗಿಕದಂತಿರುವ ಶುಭ್ರತೆಯನ್ನು ಒದಗಿಸುವುದಿಲ್ಲ, ಬದಲಿಗೆ ಸ್ವಲ್ಪ ದಿನ ಬೆಳ್ಳಗಾಗಿದ್ದು ಪುನಃ ಹಳೆಯ ರೂಪಕ್ಕೆ ತಿರುಗುತ್ತವೆ.

ಮಕ್ಕಳ ಆರೋಗ್ಯಕ್ಕೆ ಕೆಚಪ್‌ ಒಳ್ಳೆಯದಲ್ಲ, ಇಂದೇ ನಿಲ್ಲಿಸಿ!

ನಿಮ್ಮ ಕೆಲಸವನ್ನು ಹಗುರಗೊಳಿಸುವುದಕ್ಕಾಗಿಯೇ ಇಂದಿನ ಲೇಖನದಲ್ಲಿ ಅಡುಗೆ ಮನೆಯಂತಹ ಮೊದಲಾದ ಕಠಿಣ ಕೊಳೆಯನ್ನು ನಿವಾರಿಸುವ ಟೊಮೆಟೊ ಕೆಚಪ್‌ನ ಬಳಕೆಯನ್ನು ತಿಳಿಸಿಕೊಡಲಿದ್ದೇವೆ. ಟೊಮೆಟೊ ನೈಸರ್ಗಿಕ ಆಸಿಡ್ ಅಂಶವನ್ನು ತನ್ನಲ್ಲಿ ಹೊಂದಿದೆ. ಕೆಚಪ್ ರೂಪದಲ್ಲಿ ಇದು ಇನ್ನಷ್ಟು ಆಸಿಡ್‌ಕಾರಿಯಾಗಿ ಪರಿಣಾಮ ಬೀರುತ್ತವೆ. ಇದು ಕ್ಲೀನಿಂಗ್ ಕೆಲಸವನ್ನು ಸರಳವಾಗಿ ಮುಗಿಸಿಬಿಡುತ್ತವೆ. ಹಾಗಿದ್ದರೆ ನಿಮ್ಮ ಮನೆ ಮತ್ತು ಗಾರ್ಡನ್‌ನಲ್ಲಿ ಕೆಚಪ್ ಬಳಸಿಕೊಂಡು ನಡೆಸುವ ಕ್ಲೀನಿಂಗ್ ಕೆಲಸಗಳನ್ನು ಇಂದಿಲ್ಲಿ ಅರಿತುಕೊಳ್ಳೋಣ....

ತಾಮ್ರ

ತಾಮ್ರ

ಇದರಿಂದ ಮಾಡಲ್ಪಟ್ಟ ವಸ್ತುಗಳು ಬಹಳ ಅಲಂಕಾರಿಕವಾಗಿ ಕಾಣುತ್ತದೆ ಮತ್ತು ವಿಂಟೇಜ್ ನೋಟವನ್ನು ಸೇರಿಸುತ್ತದೆ. ತಾಮ್ರದ ಪಾತ್ರೆಗಳಲ್ಲಿ ಮಾಡಿದ ಆಡುಗೆಯು ಆರೋಗ್ಯಕರವಾಗಿರುತ್ತದೆ ಆದರೆ ನಿರ್ವಹಣೆ ತುಸು ತ್ರಾಸದಾಯಕವೇ. ತಾಮ್ರದ ಪಾತ್ರೆಗೆ ಕೆಚಪ್ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ ನಂತರ ಹತ್ತಿಯಿಂದ ಕೆಚಪ್ ಅನ್ನು ಒರೆಸಿ ನಂತರ ಬಿಸಿನೀರಿನಿಂದ ಪಾತ್ರೆಯನ್ನು ತೊಳೆಯಿರಿ. ಕಲೆ ಹಠಿಮಾರಿಯಾಗಿದೆ ಎಂದಾದಲ್ಲಿ ಕೆಚಪ್ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ. ತಾಮ್ರದ ಆಭರಣಗಳಿಗೂ ನೀವು ಇದೇ ವಿಧಾನವನ್ನು ಅನುಸರಿಸಬಹುದು.

 ಹಿತ್ತಾಳೆ

ಹಿತ್ತಾಳೆ

ಹಿತ್ತಾಳೆ ಪೀಠೋಪಕರಣಗಳು, ಉದಾಹರಣೆಗೆ ಬಾಗಿಲು ಹಿಡಿಕೆಗಳು, ಪ್ರದರ್ಶನ ಸಾಮಗ್ರಿಗಳು ಮತ್ತು ಪಾತ್ರೆಗಳಿಗೆ ಬಳಸಲಾಗುತ್ತದೆ. ಭಾರತೀಯ ಮನೆಗಳಲ್ಲಿ, ಹಿತ್ತಾಳೆಯಿಂದ ಮಾಡಿದ ದೀಪಗಳು ಮತ್ತು ವಿಗ್ರಹಗಳನ್ನು ಕಾಣಬಹುದು. ಇದು ಕೊಳಕು ಕಲೆಗಳನ್ನು ಪಡೆಯುತ್ತದೆ ಮತ್ತು ಗಾಢವಾಗಿರುತ್ತವೆ. ಇದನ್ನು ಶುದ್ಧೀಕರಿಸಲು ಕೆಚಪ್ ಬಳಸಿ ಇದರ ಆಮ್ಲೀಯ ಸ್ವಭಾವವು ಈ ಕಲೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ನಂತರ ಮೃದು ಬಟ್ಟೆಯಿಂದ ಒರೆಸಿ ತೊಳೆಯಿರಿ.

ಬೆಳ್ಳಿ

ಬೆಳ್ಳಿ

ಬೆಳ್ಳಿಯ ವಸ್ತುಗಳೂ ತಮ್ಮ ಹೊಳಪನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ಹೊಳಪನ್ನು ಮರಳಿ ಪಡೆಯಲು ಟೊಮೆಟೊ ಕೆಚಪ್ ಅನ್ನು ನೀವು ಬಳಸಬಹುದು. ಆದರೆ ಬರಿಯ 5 ರಿಂದ 10 ನಿಮಿಷಗಳ ಕಾಲ ಮಾತ್ರ ಇದನ್ನು ಹಾಗೆಯೇ ಬಿಡಿ ಹೆಚ್ಚು ಸಮಯ ಕೆಚಪ್ ಅನ್ನು ಪಾತ್ರೆಯಲ್ಲಿ ಬಿಡಬೇಡಿ. ಹಳೆಯ ಟೂತ್‌ಬ್ರಶ್‌ನಿಂದ ಇದನ್ನು ಶುದ್ಧಮಾಡಿ ನಂತರ ಬೆಚ್ಚನೆಯ ನೀರಿನಲ್ಲಿ ಆಭರಣಗಳನ್ನು ಹಾಕಿ ಇದು ತನ್ನ ಹೊಳಪನ್ನು ಮರಳಿ ಪಡೆದುಕೊಳ್ಳುತ್ತದೆ

 ಅಡಿ ಹತ್ತಿದ ಪಾತ್ರೆ

ಅಡಿ ಹತ್ತಿದ ಪಾತ್ರೆ

ಹಾಲು ಇಲ್ಲವೇ ಇತರ ಪದಾರ್ಥಗಳನ್ನು ಒಮ್ಮೆಮ್ಮೊ ನಾವು ಪಾತ್ರೆಯಲ್ಲಿ ಹಾಗೆಯೇ ಬಿಟ್ಟು ಹೋಗುತ್ತೇವೆ. ಇವುಗಳು ತಳ ಹತ್ತಿದ ನಂತರ ಶುದ್ಧಮಾಡುವುದು ಪ್ರಯಾಸದ ಕೆಲಸವಾಗುತ್ತದೆ. ಕೆಚಪ್ ಬಳಸಿಕೊಂಡು ನೀವು ಈ ಕಲೆಯನ್ನು ಸುಲಭವಾಗಿ ತೊಡೆಯಬಹುದಾಗಿದೆ. ಪ್ಯಾನ್‌ನಲ್ಲಿ ಕೆಚಪ್ ಅನ್ನು ಹಾಕಿ ರಾತ್ರಿ ಪೂರ್ತಿ ಹಾಗೆಯೆ ಬಿಡಿ. ಮರುದಿನ ಸುಲಭವಾಗಿ ನಿಮಗೆ ತೊಳೆಯಬಹುದು.

 ನಿಮ್ಮ ಕಾರನ್ನು ಹೊಳೆಯಿಸಲು

ನಿಮ್ಮ ಕಾರನ್ನು ಹೊಳೆಯಿಸಲು

ಕೊಳೆಯನ್ನು ತೊಳೆಯಲು ಕೆಚಪ್ ಸಹಕಾರಿಯಾಗಿಲ್ಲದಿದ್ದರೂ ನಿಮ್ಮ ಕಾರಿಗೆ ಹೊಳೆಯುವ ನೋಟವನ್ನು ಇದು ಖಂಡಿತ ನೀಡುತ್ತದೆ. ಮೊದಲಿಗೆ ಸೋಪು ನೀರಿನಿಂದ ಕಾರನ್ನು ತೊಳೆದು ನಂತರ ಕೆಚಪ್‌ನಿಂದ ಕಾರನ್ನು ಒರೆಸಿ. ತಣ್ಣೀರನ್ನು ಬಳಸಿಕೊಂಡು ಕೆಚಪ್ ತೊಡೆಯಿರಿ.

ತುಕ್ಕು

ತುಕ್ಕು

ನಿಮ್ಮ ಗಾರ್ಡನ್ ಉಪಕರಣಗಳು ತುಕ್ಕು ಹಿಡಿದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಆ ವಸ್ತುಗಳ ಮೇಲೆ ಕೆಚಪ್ ಅನ್ನು ಬಳಸಬಹುದಾಗಿದೆ. ಬರಿಯ ಗಾರ್ಡನ್ ಉಪಕರಣಗಳು ಮಾತ್ರವಲ್ಲದೆ ಇತರ ಮೆಟಲ್ ವಸ್ತುಗಳಿಗೂ ಇದು ಹೇಳಿ ಮಾಡಿಸಿದ್ದಾಗಿದೆ. ತುಕ್ಕು ಹಿಡಿದಿರುವ ಜಾಗದಲ್ಲಿ ಕೆಚಪ್ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ಇದು ಸಂಪೂರ್ನವಾಗಿ ಒಣಗಲಿ. ನಂತರ ಇದನ್ನು ತಿಕ್ಕಿರಿ.

ಗಾರ್ಡನ್ ಪೀಠೋಪಕರಣಗಳಿಗೆ ಮರುಜೀವ ನೀಡಲು

ಗಾರ್ಡನ್ ಪೀಠೋಪಕರಣಗಳಿಗೆ ಮರುಜೀವ ನೀಡಲು

ಗಾರ್ಡನ್‌ನಲ್ಲಿ ಕಟ್ಟಿಂಗ್ ಮೊದಲಾದ ಕೆಲಸಗಳನ್ನು ಮಾಡುವ ವಸ್ತುಗಳನ್ನು ಸರಿಯಾಗಿ ನಿರ್ವಹಿಸಬೇಕು. ಆದರೆ ಇವುಗಳ ಹೊಳಪು ಮತ್ತು ಹರಿತವನ್ನು ದ್ವಿಗುಣಗೊಳಿಸಲು ಕೆಚಪ್ ಅನ್ನು ಬಳಸಬಹುದಾಗಿದೆ. ಇವುಗಳಿಗೆ ಕೆಚಪ್ ಅನ್ನು ಹಚ್ಚಿ ರಾತ್ರಿಪೂರ್ತಿ ಹಾಗೆಯೇ ಬಿಡಿ ಮರುದಿನ ಬಟ್ಟೆಯಿಂದ ಒರೆಸಿ. ನಿಮಗೆ ಇದು ಹೊಸದರಂತೆ ಕಾಣಿಸುತ್ತದೆ.

 ನಾಯಿಗಳ ಮೈಯ ಕೆಟ್ಟ ವಾಸನೆ ತೊಡೆಯಲು

ನಾಯಿಗಳ ಮೈಯ ಕೆಟ್ಟ ವಾಸನೆ ತೊಡೆಯಲು

ಸಾಕು ಪ್ರಾಣಿಗಳು ಒಮ್ಮೊಮ್ಮೆ ಕೆಟ್ಟ ವಾಸನೆಯನ್ನು ಹೊರಸೂಸುತ್ತವೆ. ಅವುಗಳು ಬೇರೆ ಪ್ರಾಣಿಯನ್ನು ಮೂಸಿದಾಗ ಈ ವಾಸನೆಯು ಇವುಗಳ ಮೈಯನ್ನು ಬಂದು ಸೇರುತ್ತದೆ. ಕೆಚಪ್‌ನಲ್ಲಿ ನಿಮ್ಮ ನಾಯಿಯನ್ನು 20 ನಿಮಿಷ ಮುಳುಗಿಸಿಡಿ. ನಂತರ ಡಾಗ್ ಶಾಂಪೂ ಬಳಸಿ ಅವುಗಳಿಗೆ ಸ್ನಾನ ಮಾಡಿಸಿ.

English summary

Weird and Wonderful Uses for Tomato Ketchup

Tomatoes are naturally acidic in nature. When in the form of a ketchup, it is even more acidic because of the presence of vinegar. This gets the cleaning job done. Moreover, it is way too cheaper than all the abrasive cleaning agents that flood the market. It is also an organic way to deal with cleaning. Things might get messy; but it is worth the hard work. So, get to know more on some of the methods to use tomato ketchup in your home and garden.
Please Wait while comments are loading...
Subscribe Newsletter