ಹಣ ಉಳಿಕೆಯ ಪಾಠ: ನಿಮ್ಮ ಅಡುಗೆ ಮನೆಯಿಂದಲೇ ಆರಂಭವಾಗಲಿ

Posted By: jaya subramanya
Subscribe to Boldsky

ನಿಮ್ಮ ಮನೆಯೊಂದು ಸುಂದರ ದೇವಾಲಯವಿದ್ದಂತೆ. ಇಲ್ಲಿರುವ ಪ್ರತಿಯೊಂದು ಕೋಣೆ ಕೂಡ ಅತ್ಯಂತ ಪವಿತ್ರ ಎಂದೆನಿಸಿದ್ದು, ಮನೆಯನ್ನು ದೇವಾಲಯದಂತೆ ರೂಪುಗೊಳಿಸುವಲ್ಲಿ ಗೃಹಿಣಿಯಾದವರ ಪಾತ್ರ ಅತ್ಯಂತ ಹಿರಿದಾದುದಾಗಿದೆ. ಅಡುಗೆ ಮನೆಯನ್ನು ನೀವು ಮನೆಯ ಸದಸ್ಯರಿಗೆ ಭೋಜನವನ್ನು ಉಣಿಸುವ ಪವಿತ್ರ ಸ್ಥಳವಾಗಿ ಕಾಣುತ್ತೀರಿ. ಆದಷ್ಟು ಸ್ವಚ್ಛವಾಗಿ ಈ ಜಾಗವನ್ನು ನೀವು ಇರಿಸಿಕೊಳ್ಳುತ್ತೀರಿ. ಇದೇ ರೀತಿ ಮನೆಯ ಪ್ರತಿಯೊಂದು ಸ್ಥಳವೂ ಕೂಡ ಗೃಹಿಣಿಯಾದವರಿಗೆ ಪವಿತ್ರವಾಗಿರುತ್ತದೆ ಮತ್ತು ಅದನ್ನು ಸ್ವಚ್ಛವಾಗಿರಿಸುವಲ್ಲಿ ಅವರು ಗಮನವನ್ನು ನೀಡುತ್ತಾರೆ.

ಆದರೆ ಅಡುಗೆ ಮನೆಯನ್ನು ಕೇವಲ ಆಹಾರ ತಯಾರಿಸುವ ಸ್ಥಳವಾಗಿ ಮಾತ್ರ ಪರಿಗಣಿಸದೆಯೇ ನಿಮ್ಮ ಬಜೆಟ್‌ಗೆ ಸಹಾಯಕವಾಗಿ ಕೂಡ ಮಾರ್ಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಅಡುಗೆ ಮನೆಯನ್ನು ನೀರಸವಾಗಿ ಪರಿಗಣಿಸದೆ ಅದನ್ನು ಹಣ ಉಳಿಸುವ ಮಾರ್ಗವನ್ನಾಗಿ ಮಾಡಿಕೊಳ್ಳಬಹುದಾಗಿದೆ.

ನೀವು ಅಡುಗೆ ಮನೆಯಿಂದ ಆರ್ಥಿಕವಾಗಿ ಗಳಿಕೆಯನ್ನು ಮಾಡಬೇಕೆಂದು ಬಯಸಿದ್ದರೆ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಹೌದು ನಿಮ್ಮ ಪಾಕಶಾಲೆಯಿಂದ ಕೂಡ ತಿಂಗಳಲ್ಲಿ ಒಂದಿಷ್ಟು ಹಣವನ್ನು ನಿಮಗೆ ಗಳಿಸಬಹುದಾಗಿದೆ ಮತ್ತು ಬಜೆಟ್ ಅನ್ನು ಸರಿತೂಗಿಸಿಕೊಂಡು ಹೋಗಬಹುದಾಗಿದೆ. ನೀವು ಹಣವನ್ನು ಉಳಿಸಲು ಬಯಸಿದ್ದೀರಿ ಎಂದಾದಲ್ಲಿ ಅಡುಗೆ ಮನೆ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.....

 ಕಿಚನ್ ಗಾರ್ಡನ್ ಆರಂಭಿಸಿ

ಕಿಚನ್ ಗಾರ್ಡನ್ ಆರಂಭಿಸಿ

ನಿಮ್ಮ ಅಡುಗೆ ಮನೆಯ ಬಾಲ್ಕಿನಿಯಲ್ಲಿ ಸುಂದರವಾಗಿರುವ ಗಾರ್ಡನ್ ಒಂದನ್ನು ನಿರ್ಮಿಸಿ. ಟೊಮೇಟೊ, ಬೆಳ್ಳುಳ್ಳಿ, ಶುಂಠಿ, ಹಸಿರು ಸೊಪ್ಪುಗಳು, ಹೀಗೆ ಮನೆಯ ಅಡುಗೆಗೆ ಬೇಕಾಗಿರುವ ಗಿಡಗಳನ್ನೇ ಬೆಳೆಸಲು ನೋಡಿ. ಇದರಿಂದ ಹೊರಗೆ ಇಂತಹ ತರಕಾರಿಗಳಿಗಾಗಿ ನೀವು ಖರ್ಚು ಮಾಡುವ ಹಣವನ್ನು ಉಳಿಸಿಕೊಳ್ಳಬಹುದಾಗಿದೆ. ನೈಸರ್ಗಿಕವಾಗಿಯೇ ಇಂತಹ ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೂ ಉತ್ತಮ.

ನಿಮ್ಮದೇ ಡಿಟರ್ಜೆಂಟ್ ಸಿದ್ಧಪಡಿಸಿ

ನಿಮ್ಮದೇ ಡಿಟರ್ಜೆಂಟ್ ಸಿದ್ಧಪಡಿಸಿ

ಮನೆಯನ್ನು ಶುದ್ಧೀಕರಿಸಲು ಬಳಸುವ ಹೆಚ್ಚಿನ ಡಿಟರ್ಜೆಂಟ್‌ಗಳಲ್ಲಿ ರಾಸಾಯನಿಕಗಳು ಇರುತ್ತವೆ. ಇದರಿಂದ ನೀವು ಒಗೆಯುವ ಬಟ್ಟೆಗಳು, ತೊಳೆಯುವ ಪಾತ್ರೆಗಳಿಗೆ ಕೇಡು ಇದ್ದೇ ಇದೆ. ಮನೆಯಲ್ಲಿ ನೀವೇ ಸಿದ್ಧಪಡಿಸಿಕೊಳ್ಳಬಹುದಾದ ಡಿಟರ್ಜೆಂಟ್‌ಗಳ ಮಾಹಿತಿಯನ್ನು ಆನ್‌ಲೈನ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಟಿಶ್ಯೂ ಬದಲಿಗೆ ಬಟ್ಟೆಯನ್ನು ಬಳಸಿ

ಟಿಶ್ಯೂ ಬದಲಿಗೆ ಬಟ್ಟೆಯನ್ನು ಬಳಸಿ

ಆದಷ್ಟು ಟಿಶ್ಯೂವನ್ನು ಬಳಸುವ ಬದಲಿಗೆ ಬಟ್ಟೆಯನ್ನು ವಿನೇಗರ್‌ನಲ್ಲಿ ಅದ್ದಿಕೊಂಡು ಅಡುಗೆ ಮನೆಯನ್ನು ಸ್ವಚ್ಛ ಮಾಡಿ. ಇವುಗಳನ್ನು ಸ್ವಚ್ಛಗೊಳಿಸುವುದೂ ಸುಲಭವಾಗಿದೆ. ವಿನೇಗರ್ ಮತ್ತು ಲಿಂಬೆಯ ದ್ರಾವಣವನ್ನು ಬಳಸಿಕೊಂಡು ಅಡುಗೆ ಮನೆಯ ಸ್ವಚ್ಛತೆಯನ್ನು ಮಾಡಬಹುದಾಗಿದೆ. ಇದರಿಂದ ಟಿಶ್ಯೂಗಾಗಿ ಖರ್ಚು ಮಾಡುವ ದುಡ್ಡನ್ನು ಉಳಿಸಬಹುದಾಗಿದೆ.

ಪ್ರೆಶ್ಶರ್ ಕುಕ್ಕರ್ ಬಳಸಿ

ಪ್ರೆಶ್ಶರ್ ಕುಕ್ಕರ್ ಬಳಸಿ

ಮೈಕ್ರೋವೇವ್, ಪ್ಯಾನ್ ಬಳಸುವ ಬದಲಿಗೆ ಆದಷ್ಟು ಕುಕ್ಕರ್‌ನಲ್ಲಿ ತರಕಾರಿಗಳನ್ನು ಬೇಯಿಸಿಕೊಳ್ಳಿ. ಇದರಿಂದ ಅಧಿಕ ಪ್ರಮಾಣದಲ್ಲಿ ಖರ್ಚಾಗುವ ಗ್ಯಾಸ್ ಅನ್ನು ಉಳಿಸಬಹುದಾಗಿದೆ.

ತರಕಾರಿಗಳನ್ನು ರೈತ ಮಾರುಕಟ್ಟೆಗಳಿಂದ ಖರೀದಿಸಿ

ತರಕಾರಿಗಳನ್ನು ರೈತ ಮಾರುಕಟ್ಟೆಗಳಿಂದ ಖರೀದಿಸಿ

ಸೂಪರ್ ಮಾರ್ಕೆಟ್‌ಗಳಿಗಿಂತ ರೈತ ಮಾರುಕಟ್ಟೆಗಳಲ್ಲಿ ನಿಮಗೆ ಮಿತ ಬೆಲೆಯಲ್ಲಿ ತರಕಾರಿಗಳನ್ನು ಖರೀದಿಸಬಹುದಾಗಿದೆ. ಅಂತೆಯೇ ಇಲ್ಲಿ ದೊರೆಯುವ ತರಕಾರಿಗಳು ತಾಜಾ ಕೂಡ ಆಗಿರುತ್ತವೆ.

ದೊಡ್ಡ ಫ್ರೀಜರ್ ಬಳಸಿ

ದೊಡ್ಡ ಫ್ರೀಜರ್ ಬಳಸಿ

ದೊಡ್ಡ ಫ್ರೀಜರ್ ಇರುವ ಫ್ರಿಡ್ಜ್ ಅನ್ನು ಬಳಸಿ. ಇದರಿಂದ ನೀವು ಆಹಾರಗಳನ್ನು ಶೇಖರಿಸಿಡಬಹುದು. ಆಹಾರವನ್ನು ಬಳಸುವುದರಿಂದ ಅದನ್ನು ಹೊರಕ್ಕೆಸೆಯುವ ಪ್ರಮೇಯ ಇರುವುದಿಲ್ಲ.

ಆದಷ್ಟು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಿ

ಆದಷ್ಟು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಿ

ಆದಷ್ಟು ಸಾಮಾಗ್ರಿಗಳನ್ನು ವಿನಾಯಿತಿ ಬೆಲೆಗಳಲ್ಲಿ ಖರೀದಿಸಿ. 500 ಎಮ್‌ಎಲ್ ಶ್ಯಾಂಪೂವನ್ನು ನೀವು 175 ಕ್ಕೆ ಖರೀದಿಸಬಹುದಾಗಿದೆ. ಇದರಿಂದ 250 ಎಮ್‌ಎಲ್ ಅನ್ನು ರೂ 90 ಕ್ಕೆ ಖರೀದಿಸುವುದನ್ನು ತಪ್ಪಿಸಬಹುದಾಗಿದೆ. ನೀವು ನಿತ್ಯವೂ ಬಳಸುವ ಸಾಮಾಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ. ಇದರಿಂದ ನೀವು ಹಣವನ್ನು ಉಳಿಸಬಹುದಾಗಿದೆ.

ಸಂರಕ್ಷಿಸಿ

ಸಂರಕ್ಷಿಸಿ

ಆಹಾರವನ್ನು ಸಿದ್ಧಪಡಿಸಿದ ನಂತರ ಅದನ್ನು ಹಾಳಾಗದಂತೆ ಸಂರಕ್ಷಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ. ಎಣ್ಣೆ, ಸಕ್ಕರೆ, ವಿನೇಗರ್, ಉಪ್ಪಿನಕಾಯಿ ಹೀಗೆ ಕೆಲವೊಂದು ಸಾಮಾಗ್ರಿಗಳನ್ನು ಸಂಗ್ರಹಿಸಿಡಿ. ಇನ್ನು ಒಣ ಹಣ್ಣುಗಳು ಮತ್ತು ಧಾನ್ಯಗಳನ್ನು ಒದ್ದೆ ಇರದ ಡಬ್ಬದಲ್ಲಿ ಹಾಕಿಡಿ.

ಜಾರ್‌ಗಳ ಬಳಕೆ

ಜಾರ್‌ಗಳ ಬಳಕೆ

ಗ್ಲಾಸ್ ಮತ್ತು ಮೆಟಲ್ ಜಾರ್‌ಗಳು ನೋಡಲು ಸುಂದರವಾಗಿರುತ್ತವೆ ಮತ್ತು ಇವುಗಳನ್ನು ತೊಳೆದು ಬಳಸಲು ಸರಳವಾಗಿರುತ್ತವೆ. ಆದ್ದರಿಂದ ಇಂತಹ ಜಾರ್‌ಗಳನ್ನು ಬಳಸಿ

 ಸಿಪ್ಪೆಯನ್ನು ಮರುಬಳಸಿ

ಸಿಪ್ಪೆಯನ್ನು ಮರುಬಳಸಿ

ಅಡುಗೆ ಮನೆಯ ಸಿಪ್ಪೆಯನ್ನು ಮರುಬಳಸಿಕೊಳ್ಳಬಹುದಾಗಿದೆ. ಸಿಪ್ಪೆಯನ್ನು ಬೇರೆ ಯಾವುದಾದರೂ ವಿಧಾನದ ಮೂಲಕ ಮರುಬಳಸಲು ನೋಡಿ. ಆದಷ್ಟು ಆಹಾರವನ್ನು ಹಾಳುಮಾಡುವುದನ್ನು ತಪ್ಪಿಸಿ. ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರವೇ ತಯಾರಿಸಿ. ನೀವು ಒಬ್ಬರೇ ಇದ್ದೀರಿ ಎಂದಾದಲ್ಲಿ ನಿಮಗೆ ಬೇಕಾದಷ್ಟೇ ಆಹಾರ ತಯಾರಿಸಿ.

ಹೊರಗಿನ ಊಟ ತಿಂಡಿ ಕಡಿಮೆ ಮಾಡಿ

ಹೊರಗಿನ ಊಟ ತಿಂಡಿ ಕಡಿಮೆ ಮಾಡಿ

ಆದಷ್ಟು ಮನೆಯಲ್ಲೇ ಅಡುಗೆ ಮಾಡಿ ಆಹಾರ ಸೇವಿಸಿ, ಹೋಟೆಲ್‌ಗಳಲ್ಲಿ ಆಹಾರಕ್ಕಾಗಿ ದುಂದು ವೆಚ್ಚ ಮಾಡಬೇಡಿ. ಆರೋಗ್ಯದ ದೃಷ್ಟಿಯಿಂದ ಕೂಡ ಇಂತಹ ನಿಯಮಗಳನ್ನು ಪಾಲಿಸುವುದು ಉತ್ತಮವಾಗಿದೆ.

ಆನ್‌ಲೈನ್ ಶಾಪಿಂಗ್

ಆನ್‌ಲೈನ್ ಶಾಪಿಂಗ್

ಆನ್‌ಲೈನ್ ಶಾಪಿಂಗ್ ಮಾಡುವುದು ನಿಮಗೆ ಬೇಕಾಗಿರುವ ನಿರ್ದಿಷ್ಟ ವಸ್ತುವನ್ನು ಮಾತ್ರ ಖರೀದಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇದರಿಂದ ಸಮಯವನ್ನು ಉಳಿಸಬಹುದು ಅಂತೆಯೇ ಹಣವನ್ನು ಉಳಿಸಬಹುದಾಗಿದೆ. ವಸ್ತುಗಳನ್ನು ಕೊಳ್ಳುವಂತೆ ನಿಮ್ಮ ನೆರೆಹೊರೆಯವರಲ್ಲಿ ಇಲ್ಲವೇ ನೆಂಟರಿಷ್ಟರಲ್ಲಿ ಹೇಳಿ, ಇದರಿಂದ ನೀವು ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಕಿಲ್ಲ.

ಮಾರಾಟದ ಪ್ರಯೋಜನವನ್ನು ತೆಗೆದುಕೊಳ್ಳಿ

ಮಾರಾಟದ ಪ್ರಯೋಜನವನ್ನು ತೆಗೆದುಕೊಳ್ಳಿ

ಸ್ಥಳೀಯ ಸೂಪರ್ ಮಾರ್ಕೆಟ್‌ನಲ್ಲಿ ಅಥವಾ ನಿಮ್ಮ ನೆಚ್ಚಿನ ಉದ್ದೇಶಪೂರ್ವಕ ವೆಬ್‌ಸೈಟಲ್ಲಿ ಮಾರಾಟದಿಂದ ನಿಮಗೆ ಅಗತ್ಯವಿರುವ ವಸ್ತುಗಳ ಮೇಲೆ ಅಸಾಧಾರಣ ರಿಯಾಯಿತಿಯನ್ನು ಪಡೆಯಲು ಉತ್ತಮ ಸಮಯವಾಗಿದೆ. ಇದು ನಿಜಕ್ಕೂ ಉತ್ತಮ ಸಮಯದ ಉಳಿತಾಯ ಮಾರ್ಗವಾಗಿದೆ, ಹಾಗಾಗಿ ಮಾರಾಟದ ಸಮಯದಲ್ಲಿ ನಿಮಗೆ ಬೇಕಾಗಿರುವುದಕ್ಕಾಗಿ ಸಮಯವನ್ನು ವಿನಿಯೋಗಿಸಿ ಹಾಗೂ ತ್ವರಿತವಾಗಿ ಶಾಪಿಂಗ್ ಮಾಡಿ

 ಪಟ್ಟಿಯನ್ನು ಸಿದ್ಧಪಡಿಸಿ

ಪಟ್ಟಿಯನ್ನು ಸಿದ್ಧಪಡಿಸಿ

ನಿಮಗೆ ಏನು ವಸ್ತುಗಳು ಬೇಕೋ ಅವುಗಳ ಒಂದು ಪಟ್ಟಿಯನ್ನು ಸಿದ್ಧಪಡಿಸಿ. ಇದರಿಂದ ಕಂಡದ್ದನ್ನೆಲ್ಲಾ ಖರೀದಿಸಬೇಕೆಂಬ ನಿಮ್ಮ ಆಸೆಗೆ ಇದು ಕಡಿವಾಣವನ್ನು ಹಾಕುತ್ತದೆ. ದುಂದುವೆಚ್ಚವನ್ನು ನಿಮಗೆ ಇದರಿಂದ ತಡೆಯಬಹುದು ಹಾಗೂ ಹಣವನ್ನು ಉಳಿಸಿಕೊಳ್ಳಬಹುದಾಗಿದೆ. ಸಮಯದ ವಿನಿಯೋಗವನ್ನು ಇದರಿಂದ ತಡೆಗಟ್ಟಬಹುದು.

For Quick Alerts
ALLOW NOTIFICATIONS
For Daily Alerts

    English summary

    Simple Tricks To Save Money In Your Kitchen

    Making "saving" a lifestyle choice is a rather good habit to have and follow. The kitchen is a good place to start from and here's how to go about it:
    Story first published: Thursday, July 20, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more