ಅಡುಗೆಮನೆಯ ಅಂದಕ್ಕಾಗಿ ಕೆಲವೊಂದು ಸೂಪರ್ ಟಿಪ್ಸ್‌ಗಳು

By: Jaya subramanya
Subscribe to Boldsky

ಪಾಕಶಾಲೆ ಎಂಬುದು ಸ್ವಚ್ಛವಾಗಿ ಸುಂದರವಾಗಿದ್ದರೆ ಅಲ್ಲಿ ಆಹಾರ ತಯಾರಿಸುವ ನಮಗೂ ನೆಮ್ಮದಿ ಇರುತ್ತದೆ ಅಂತೆಯೇ ಆಹಾರ ಸೇವಿಸುವವರಿಗೂ ಮನಸ್ಸಿಗೆ ಆಹ್ಲಾದ ಉಂಟಾಗುತ್ತದೆ. ಅದಕ್ಕಾಗಿಯೇ ಮನೆಯ ಅಡುಗೆ ಕೋಣೆಯ ಸ್ವಚ್ಛತೆಗೆ ನಾವು ಹೆಚ್ಚುವರಿ ಆದ್ಯತೆಯನ್ನು ನೀಡಬೇಕಾಗುತ್ತದೆ. ಮನೆಯ ಅಲಂಕಾರದಲ್ಲಿ ನಾವು ಕೊಡುವ ಕಾಳಜಿಯನ್ನೇ ಅಡುಗೆ ಕೋಣೆಗೂ ನೀಡಬೇಕಾಗುತ್ತದೆ. ಅಡುಗೆ ಮಾಡುವ ಸ್ಥಳವಾಗಿರುವಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕಾಗುತ್ತದೆ. ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ 

ಅಡುಗೆ ಕೋಣೆ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಅಡುಗೆ ಮನೆಯನ್ನು ಚಂದಗಾಣಿಸುವಲ್ಲಿ ಕ್ರಿಯಾತ್ಮಕ ಆಲೋಚನೆಗಳನ್ನು ತುಂಬಬೇಕು. ಮಹಿಳೆಯು ತಮ್ಮ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುವುದರಿಂದ ಆ ಜಾಗ ಆಕೆಗೆ ಆನಂದವನ್ನು ನೀಡುವಂತಿರಬೇಕು. ನಿಮ್ಮ ಅಡುಗೆ ಕೋಣೆಯ ಸ್ವಚ್ಛತೆ ಹೀಗಿರಲಿ! 

ದಿನವೆಲ್ಲಾ ಹೊರಗೆ ದುಡಿದು ಮನೆಗೆ ಬಂದೂ ಆಹಾರ ತಯಾರಿಸುವಾಗ ಅಡುಗೆ ಕೋಣೆ ಆಕೆಗೆ ಪುಳಕವನ್ನು ನೀಡುವಂತಿರಬೇಕು. ಆಧುನಿಕ ಸೌಲಭ್ಯಗಳು ಅಡುಗೆ ಮನೆಯಲ್ಲಿ ಇದ್ದಾಗ ಆಕೆ ಆಹಾರ ತಯಾರಿಯ ಕೆಲಸಗಳನ್ನು ಇನ್ನಷ್ಟು ವೇಗದಲ್ಲಿ ಮಾಡಿ ಮುಗಿಸಬಹುದಾಗಿದೆ. ಹಾಗಿದ್ದರೆ ಅಡುಗೆ ಕೋಣೆಯನ್ನು ನಿಮ್ಮ ಕೈಚಳಕದಿಂದ ಪಳಪಳನೆ ಶುಭ್ರವಾಗಿ ಹೊಳೆಯುವಂತೆ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ... 

ಬೌಲ್ ಮತ್ತು ಕಪ್‌ಗಳ ಬಳಕೆ

ಬೌಲ್ ಮತ್ತು ಕಪ್‌ಗಳ ಬಳಕೆ

ಅಡುಗೆ ಮನೆಯಲ್ಲಿ ಬೌಲ್ ಮತ್ತು ಕಪ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆ. ಇಲ್ಲಿ ನಿಮ್ಮ ಕ್ರಿಯಾತ್ಮಕ ವಿಚಾರಗಳನ್ನು ಬಳಸಿಕೊಳ್ಳಬಹುದಾಗಿದೆ. ಆಧುನಿಕ ಮಾದರಿಯ ಪಾತ್ರೆ, ತಟ್ಟೆಗಳನ್ನು ಬಳಸಿ. ಆನ್‌ಲೈನ್ ಶಾಪಿಂಗ್ ಮಾಡಿ ಈ ಬಗೆಯ ವಸ್ತುಗಳನ್ನು ಖರೀದಿಸಿ.

ಸ್ಟೋರೇಜ್ ವಸ್ತುಗಳು

ಸ್ಟೋರೇಜ್ ವಸ್ತುಗಳು

ಆದಷ್ಟು ಸಾಸಿವೆ, ಮೆಂತೆ, ಉದ್ದಿನ ಬೇಳೆ ಮೊದಲಾದ ಧಾನ್ಯಗಳನ್ನು ತುಂಬಿಡಲು ಜಾರ್‌ಗಳನ್ನು ಬಳಸಿ. ಇದು ಒಂದೇ ರೀತಿಯಾಗಿದ್ದು ಸಾಲಾಗಿ ಜೋಡಿಸಿಡಿ. ಇದರಿಂದ ನಿಮ್ಮ ಅಡುಗೆ ಮನೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ.

ಡಿಸೈನರ್ ಡಿನ್ನರ್ ಸೆಟ್

ಡಿಸೈನರ್ ಡಿನ್ನರ್ ಸೆಟ್

ನಿಮ್ಮ ಅಡುಗೆ ಮನೆಯಲ್ಲಿ ಡಿಸೈನರ್ ಸೆಟ್ ಬಹುಮುಖ್ಯ ಪಾತ್ರವನ್ನು ವಹಿಸಲಿದೆ. ಆದಷ್ಟು ಬ್ರ್ಯಾಂಡ್ ಕಂಪೆನಿಯ ಉತ್ಪನ್ನಗಳನ್ನು ಬಳಸಿ. ನಿಮ್ಮ ಅಡುಗೆ ಮನೆಯಲ್ಲಿ ಸೂಕ್ತ ಬಣ್ಣವನ್ನು ಆರಿಸಿ ಡಿಸೈನರ್ ಸೆಟ್‌ಗಳನ್ನು ಖರೀದಿಸಿ. ಅದನ್ನು ಆದಷ್ಟು ಸುಂದರವಾಗಿ ಜೋಡಿಸಿ.

ಥೀಮ್ ಇರಲಿ

ಥೀಮ್ ಇರಲಿ

ನಿಮ್ಮ ಮನಕ್ಕೆ ಒಪ್ಪುವ ಮತ್ತು ಥೀಮ್ ಆಧಾರಿತ ಅಡುಗೆ ಮನೆಯ ಅಲಂಕಾರವನ್ನು ಆಯ್ಕೆಮಾಡಿಕೊಳ್ಳಿ. ಇದರಿಂದ ನಿಮ್ಮ ಅಡುಗೆ ಮನೆಯ ಅಂದ ಇಮ್ಮಡಿಯಾಗುವುದು ಖಂಡಿತ.

ಶೋಪೀಸ್ ಬಳಸಿಕೊಳ್ಳಿ

ಶೋಪೀಸ್ ಬಳಸಿಕೊಳ್ಳಿ

ನಿಮ್ಮ ಅಡುಗೆಮನೆಯನ್ನು ಕಲಾ ಮಂದಿರವನ್ನಾಗಿಸುವ ಬದಲಿಗೆ ಸರಳವಾಗಿ ಅಲಂಕರಿಸಿಕೊಳ್ಳಿ. ಆದಷ್ಟು ವೆಚ್ಚದಾಯಕ ವಸ್ತುಗಳನ್ನು ಬಳಸದೇ ಇದ್ದುದರಲ್ಲಿಯೇ ಅಡುಗೆ ಮನೆಯ ಅಲಂಕಾರವನ್ನು ಮಾಡಿ.

ಗೋಡೆಯ ಬಣ್ಣಗಳು

ಗೋಡೆಯ ಬಣ್ಣಗಳು

ಅಡುಗೆ ಕೋಣೆಯ ಗೋಡೆಗಳಿಗೆ ತಿಳಿ ಬಣ್ಣದ ಪೇಂಟ್ ಅನ್ನು ಬಳಸಿ. ಇದು ವಿಶೇಷವಾಗಿ ಕಾಣುವಂತೆ ಮಾಡುತ್ತದೆ. ಅಡುಗೆ ಕೋಣೆಯ ಗೋಡೆ ಕೊಳಕಾಗಿದೆ ಎಂದಾದಲ್ಲಿ, ತೊಳೆಯಬಹುದಾದ ಪೇಂಟ್ ಅನ್ನು ಬಳಸಿ. ನೀವು ಯಾವುದಾದರೂ ಬಣ್ಣವನ್ನು ಆಯ್ದುಕೊಂಡಿದ್ದರೆ ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿಕೊಳ್ಳಿ.

ಪೀಠೋಲಕರಣಗಳು ಮತ್ತು ಕ್ಯಾಬಿನೆಟ್ಸ್

ಪೀಠೋಲಕರಣಗಳು ಮತ್ತು ಕ್ಯಾಬಿನೆಟ್ಸ್

ಅಡುಗೆ ಮನೆಗೆ ಬೇಕಾದ ಪೀಠೋಪಕರಣಗಳು ಮತ್ತು ಕ್ಯಾಬಿನೆಟ್‌ಗಳನ್ನು ಬಳಸುವಾಗ ಆದಷ್ಟು ಉತ್ತಮ ಉತ್ಪನ್ನಗಳ ಕಡೆಗೆ ಗಮನ ಹರಿಸಿ. ಕ್ಯಾಬಿನೆಟ್‌ನಲ್ಲಿ ಆದಷ್ಟು ಹೆಚ್ಚು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಿ. ನಿಮ್ಮ ಅಡುಗೆ ಮನೆಯನ್ನು ಸುಂದರವಾಗಿಸುವಲ್ಲಿ ಇದು ಕೂಡ ಒಂದು ಉತ್ತಮ ಆಲೋಚನೆಯಾಗಿದೆ.

 
English summary

7 Creative Ideas To Brighten Up Your Kitchen

Here, we will discuss about some creative ideas on how to brighten up your kitchen. These guarantee a complete revamp session for your kitchen, making it an even cooler place. Make Use Of Unique Bowls And Cups One thing that grabs the attention of any visitor is the kitchen wares such as cup, saucers, plates and bowls. Instead of going for common plain designs, go for unique designs that will make others to have a look at it once again.
Please Wait while comments are loading...
Subscribe Newsletter