For Quick Alerts
ALLOW NOTIFICATIONS  
For Daily Alerts

ನಿಮ್ಮ ಅಡುಗೆ ಕೋಣೆಯ ಸ್ವಚ್ಛತೆ ಹೀಗಿರಲಿ!

|

ನಿಮ್ಮ ಮನೆಯ ಬಹುಮುಖ್ಯ ಅಂಗವೇ ಅಡುಗೆಕೋಣೆ. ನಿಮ್ಮ ಮನೆಯ ಸದಸ್ಯರಿಗೆ ರುಚಿ ಮತ್ತು ಶುಚಿಯಾಗಿ ಆಹಾರ ತಯಾರಿಸುವ ಸ್ಥಳ. ಉತ್ತಮವಾದ ಆಹಾರ ಪದಾರ್ಥಗಳನ್ನು ಕೊಂಡು ಅದನ್ನು ಶುಚಿಯಾಗಿ ರುಚಿಯಾಗಿ ತಯಾರಿಸಿ ನಿಮ್ಮ ಮನೆಯ ಸದಸ್ಯರ ಆರೋಗ್ಯವನ್ನು ನೀವು ಕಾಪಾಡುತ್ತೀರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಿಚನ್ ಶೆಲ್ಫ್ ಜೋಡಿಸುವ ವಿಧಾನಗಳು

ಮನೆಯನ್ನು ಸ್ವಚ್ಛಗೊಳಿಸಿದಂತೆ ನಿಮ್ಮ ಅಡುಗೆಕೋಣೆಯ ಸ್ವಚ್ಛತೆ ಕೂಡ ನಿಮ್ಮ ಕೈಯಲ್ಲಿದೆ. ಅಡುಗೆ ಕೋಣೆಯ ಸ್ವಚ್ಛತೆ ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಈ ಲೇಖನವು ಕೆಲವು ಸರಳ ಪರಿಹಾರಗಳನ್ನು ಹೊತ್ತು ತಂದಿದೆ.

ಉದಾಹರಣೆಗೆ ಹಲವಾರು ಜನರು ಚಾಕುವನ್ನು ಬಳಸಿ ನಂತರ ತೊಳೆಯಲೆಂದು ಅದನ್ನು ಸಿಂಕ್‌ಗೆ ಹಾಕುತ್ತಾರೆ. ನಿಮ್ಮ ಅಡುಗೆ ಕೋಣೆಯ ಚಾಕುವನ್ನು ಬಳಸಿದ ನಂತರ ತೊಳೆಯುವುದು ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದನ್ನು ತಪ್ಪಿಸುತ್ತದೆ ಮತ್ತು ರೋಗಗಳಿಂದ ಮನೆಯ ಸದಸ್ಯರನ್ನು ಕಾಪಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ತಗ್ಗಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು

ನಿಮ್ಮ ಮನೆಯ ಸದಸ್ಯರ ಉತ್ತಮ ಆರೋಗ್ಯವನ್ನು ಕಾಪಾಡಲು ಹಲವಾರು ಸ್ವಚ್ಛತಾ ಉಪಾಯಗಳಿದ್ದು ಅದರ ಬಳಕೆ ನೀವು ಮಾತ್ರ ಮಾಡಬೇಕು. ಹಸಿ ಮತ್ತು ಬೇಯಿಸಿದ ಆಹಾರಕ್ಕಾಗಿ ನೀವು ಪ್ರತ್ಯೇಕವಾದ ಕಟ್ಟಿಂಗ್ ಬೋರ್ಡ್ ಅನ್ನು ತೆಗೆದಿಡಬೇಕು. ಇದು ಬೇಯಿಸಿದ ಆಹಾರಕ್ಕೆ ಬ್ಯಾಕ್ಟೀರಿಯಾ ವರ್ಗವಾಗುವುದನ್ನು ತಡೆಯುತ್ತದೆ.

ನಿಮ್ಮ ಅಡುಗೆ ಕೋಣೆಯಲ್ಲಿ ಬಳಸುವ ಬಟ್ಟೆಗಳನ್ನು ತೊಳೆದಿಡುವುದು, ನಿಮ್ಮ ಅಡುಗೆ ಕೋಣೆಯಲ್ಲಿ ನೀವು ಬಳಸುವ ಸಣ್ಣ ಅಥವಾ ದೊಡ್ಡ ಪರಿಕರಗಳನ್ನು ಸ್ವಚ್ಛವಾಗಿರಿಸುವುದು, ಮುಂತಾದ ಕಾಳಜಿ ವಿಧಾನಗಳನ್ನು ನೀವು ಅನುಸರಿಸಬೇಕು. ಕೆಲವರು ತಮ್ಮ ಪಾತ್ರೆ ತೊಳೆಯುವ ಸ್ಕ್ರಬ್ ಹರಿದು ಚಿಂದಿಯಾಗಿದ್ದರೂ ಹೊಸದನ್ನು ಬಳಸುವ ಮನಸ್ಸು ಮಾಡುವುದಿಲ್ಲ. ನೀವು ನಿತ್ಯವೂ ಸ್ಕ್ರಬ್ ಅನ್ನು ತೊಳೆದು ತಿಂಗಳಿಗೊಮ್ಮೆಯಾದರೂ ಅದನ್ನು ಬದಲಾಯಿಸುವುದು ಒಳಿತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಉತ್ಪನ್ನಗಳಿಂದ ಹೊಳೆಯುವ ಬಾತ್‌ರೂಮ್ ನಿಮ್ಮದಾಗಲಿ

ಇಲ್ಲಿ ಕೆಲವೊಂದು ಮುಖ್ಯ ಅಡುಗೆ ಕೋಣೆ ಸ್ವಚ್ಛತೆ ಮಾಹಿತಿಗಳಿದ್ದು ನೀವು ಅದನ್ನು ಅನುಸರಿಸಲೇಬೇಕು:

ಚಾಕುವನ್ನು ತೊಳೆಯುವುದು:

ಚಾಕುವನ್ನು ತೊಳೆಯುವುದು:

ಪ್ರತೀ ಬಳಕೆಯ ನಂತರ ನಿಮ್ಮ ಅಡುಗೆ ಕೋಣೆಯ ಚಾಕುವನ್ನು ನೀವು ತೊಳೆದಿಡಬೇಕು. ದಿನದ ಕೊನೆಯಲ್ಲಿ ಚಾಕುವನ್ನು ಸೋಪು ನೀರಿನ ದ್ರಾವಣದಲ್ಲಿ ಅದ್ದಿ ತೊಳೆಯಬೇಕು. ಕೊಳಕಾದ ಚಾಕುವನ್ನು ತೊಳೆಯದಿರುವುದು ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ ಹಾಗೂ ಅದರ ಮೊನಚನ್ನು ಕಡಿಮೆ ಮಾಡುತ್ತದೆ.

ಪ್ರತ್ಯೇಕ ಕಟ್ಟಿಂಗ್ ಬೋರ್ಡ್:

ಪ್ರತ್ಯೇಕ ಕಟ್ಟಿಂಗ್ ಬೋರ್ಡ್:

ಹಸಿ ಮತ್ತು ಬೇಯಿಸಿದ ಆಹಾರಕ್ಕಾಗಿ ಪ್ರತ್ಯೇಕ ಕಟ್ಟಿಂಗ್ ಬೋರ್ಡ್ ಅನ್ನು ಬಳಸಿ. ಪ್ರತೀ ಬಳಕೆಯ ನಂತರ ಅದನ್ನು ತೊಳೆದಿಡಿ. ಹೈಡ್ರೋಜನ್ ಫೆರಾಕ್ಸೈಡ್ ಅನ್ನು ಬಳಸಿ ನಿಮ್ಮ ಕಟ್ಟಿಂಗ್ ಬೋರ್ಡ್ ಅನ್ನು ತೊಳೆಯಿರಿ.

ಕುದಿಸುವುದು:

ಕುದಿಸುವುದು:

ಬಾಟಲ್, ಪ್ಯಾನ್‌ಗಳು ಮತ್ತು ಕಟ್ಟಿಂಗ್ ಬೋರ್ಡ್‌ಗಳನ್ನು ವಾರಕ್ಕೊಮ್ಮೆ ಬಿಸಿ ನೀರಿನಲ್ಲಿ ಅದ್ದಿಡಿ. ಹಾಗೆಯೇ ಅಡುಗೆ ಕೋಣೆಯ ಬಟ್ಟೆಗಳು, ಅಡುಗೆ ಕೋಣೆಯ ಟವೆಲ್‌ಗಳನ್ನು ಕೂಡ ಅದ್ದಿಡಿ.

ಸ್ಲೇಬ್ ಸ್ವಚ್ಛಗೊಳಿಸಿ:

ಸ್ಲೇಬ್ ಸ್ವಚ್ಛಗೊಳಿಸಿ:

ಅಡುಗೆ ಕೋಣೆಯ ಸ್ವಚ್ಛತೆಗಳಲ್ಲಿ ಅತ್ಯಂತ ಪ್ರಮುಖವಾದ ಮತ್ತು ಅನುಸರಿಸಲೇಬೇಕಾದ ವಿಧಾನ ಇದಾಗಿದೆ. ಆಹಾರ ತಯಾರಿಸಿದ ನಂತರ ಪ್ರತೀ ಬಾರಿ ನಿಮ್ಮ ಸ್ಲಾಬ್ ಅನ್ನು ಒರೆಸಿ. ಹಾಗೆಯೇ ಸ್ಲೇಬ್‌ನಲ್ಲಿ ಚೆಲ್ಲಿದ ಆಹಾರ ವಸ್ತುಗಳು ಇರುವೆ ಮತ್ತು ಜಿರಳೆಗಳಿಗೆ ಮುಕ್ತ ಆಹ್ವಾನವನ್ನು ನೀಡಿದಂತೆ.

ಪಾತ್ರೆಗಳನ್ನು ಮುಚ್ಚಿಡಿ:

ಪಾತ್ರೆಗಳನ್ನು ಮುಚ್ಚಿಡಿ:

ಎಂದಿಗೂ ಪಾತ್ರೆಗಳನ್ನು ತೆರೆದಿಡಬೇಡಿ. ಕೀಟಗಳು, ಜಂತುಗಳು ಮತ್ತು ಇತರ ರೋಗಾಣುಗಳಿಂದ ಸಂರಕ್ಷಿಸಲು ಪಾತ್ರೆಗೆ ಸರಿಯಾದ ಮುಚ್ಚಳ ಮುಚ್ಚಿ.

ಬೇಯಿಸಿದ ಆಹಾರದ ಸಂಗ್ರಹಣೆ ಬೇಡ:

ಬೇಯಿಸಿದ ಆಹಾರದ ಸಂಗ್ರಹಣೆ ಬೇಡ:

ಬೇಯಿಸಿದ ಆಹಾರವನ್ನು ಸಂಗ್ರಹಿಸಿಡುವುದು ಕೆಲವೊಮ್ಮೆ ಅನಾರೋಗ್ಯಕರ ಲಕ್ಷಣವಾಗುತ್ತದೆ. ಬೇಯಿಸಿದ ಆಹಾರವನ್ನು ಕೂಡಲೇ ಬಡಿಸಿ. ಇದನ್ನು ನೀವು ಬಾರಿ ಬಾರಿ ಬಿಸಿ ಮಾಡಿದಂತೆ ಅದು ಹಾಳಾಗುವುದು ಹೆಚ್ಚುತ್ತದೆ.

ಬಿನ್‌ನ ಸುತ್ತ ಬೇಕಿಂಗ್ ಸೋಡಾ ಸಿಂಪಡಿಸಿ:

ಬಿನ್‌ನ ಸುತ್ತ ಬೇಕಿಂಗ್ ಸೋಡಾ ಸಿಂಪಡಿಸಿ:

ಹಾಳಾದ ಆಹಾರದಿಂದಾಗಿ ನಿಮ್ಮ ಅಡುಗೆ ಕೋಣೆಯ ಡಸ್ಟ್ ಬಿನ್ ವಾಸನೆ ಬರುತ್ತಿರುತ್ತದೆ ಇದನ್ನು ನಿವಾರಿಸಲು ಬೇಕಿಂಗ್ ಸೋಡಾವನ್ನು ಬಿನ್‌ನ ಸುತ್ತ ಚೆಲ್ಲಿ. ಇದು ರೋಗಾಣುಗಳನ್ನು ಕೊಂದು ವಾಸನೆಯನ್ನು ನಿಯಂತ್ರಿಸುತ್ತದೆ.

English summary

Rules To Maintain Kitchen Hygiene

Kitchen is one of the most important places in your home as it ensures the good health and well-being of the family members. From buying fresh produces to cooking healthy meals.
Story first published: Wednesday, March 12, 2014, 16:33 [IST]
X
Desktop Bottom Promotion