For Quick Alerts
ALLOW NOTIFICATIONS  
For Daily Alerts

ಬಚ್ಚಲು ಮನೆಯ ಸ್ವಚ್ಛತೆ ಹತ್ತು ಮಂದಿ ಮೆಚ್ಚುವಂತಿರಲಿ!

By Jaya Subramanya
|

ನಿಮ್ಮ ಮನೆ ಸ್ವಚ್ಛ ಮತ್ತು ಸುಂದರವಾಗಿದ್ದರೆ ಮನೆಗೆ ಬರುವ ಅತಿಥಿಗಳು ಮತ್ತು ವಾಸವಿರುವ ನಿಮಗೂ ಕೂಡ ಒಂದು ರೀತಿಯ ಸಂತಸ ಮನದಲ್ಲಿ ಮೂಡುತ್ತದೆ. ಅತಿಥಿಗಳಿಂದ ನೀವು ಹೊಗಳಿಸಿಕೊಳ್ಳುವಾಗ ನಿಮ್ಮಲ್ಲೂ ಸಾರ್ಥಕ ಭಾವ ಉಂಟಾಗುತ್ತದೆ. ಬರಿಯ ಮನೆ ಮಾತ್ರವಲ್ಲದೆ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಬಚ್ಚಲು ಮನೆ ಶೌಚಾಲಯದ ಸ್ವಚ್ಛತೆ‌ಗೂ ನೀವು ಆದ್ಯತೆಯನ್ನು ನೀಡಬೇಕಾಗುತ್ತದೆ.

ನಿಮ್ಮ ಮನೆಗೆ ಬಂದ ಅತಿಥಿ ಕೈಕಾಲು ಮುಖ ತೊಳೆಯುವುದಕ್ಕಾದರೂ ಬಚ್ಚಲು ಮನೆಗೆ ಹೋಗಿಯೇ ಹೋಗುತ್ತಾರೆ. ಅಲ್ಲಿನ ಪರಿಸರ ಕೊಳಕಾಗಿದ್ದರೆ ಮತ್ತು ಅಸಹ್ಯ ವಾಸನೆಯನ್ನು ಬೀರುತ್ತಿದ್ದರೆ ಇದು ನಿಮಗೆ ಮುಜುಗರವನ್ನು ಉಂಟುಮಾಡುವುದು ಖಂಡಿತ. ಬಾತ್‌ರೂಮ್‌‌ ಸಿಂಪಲ್ ಆಗಿದ್ದರೂ ಪರವಾಗಿಲ್ಲ, ಸ್ವಚ್ಛವಾಗಿರಲಿ

Bathroom Smell Fresh

ಹಾಗಿದ್ದರೆ ಇದಕ್ಕೆ ನೈಸರ್ಗಿಕವಾಗಿ ಪರಿಹಾರಗಳನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿಲ್ಲಿ ಚರ್ಚಿಸಲಿದ್ದೇವೆ. ಕೊಳಕು ವಾಸನೆ ಬೀರುತ್ತಿರುವ ಬಚ್ಚಲು ಮನೆ ಸ್ವಚ್ಛತೆಗಾಗಿ ಇಲ್ಲಿದೆ ಟಾಪ್ ಪರಿಹಾರಗಳು

ಕಸವನ್ನು ನಿವಾರಿಸಿಕೊಳ್ಳಿ
ಹೆಚ್ಚಿನವರು ಚಿಕ್ಕದಾದ ಕಸದ ತೊಟ್ಟಿಯನ್ನು ಬಚ್ಚಲು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಉಪಯೋಗಿಸಿದ ಶಾಂಪೂ ಕವರ್, ಸೋಪ್ ಕವರ್ ಮತ್ತು ಟಾಯ್ಲೆಟ್ ಪೇಪರ್ ಇದರಲ್ಲಿರುತ್ತದೆ. ನಮ್ಮ ಅಡುಗೆ ಮನೆಯ ವೇಸ್ಟ್‌ನಂತೆಯೇ ಇದನ್ನು ನಾವು ನಿತ್ಯವೂ ಸ್ವಚ್ಛಮಾಡುವುದಿಲ್ಲ. ಎರಡು ದಿನಕ್ಕೊಮ್ಮೆಯಾದರೂ ಈ ಕಸವನ್ನು ನೀವು ಸ್ವಚ್ಛಮಾಡಬೇಕಾಗುತ್ತದೆ. ಇದರಿಂದ ಕೂಡ ಬಚ್ಚಲು ಮನೆಯಲ್ಲಿ ವಾಸನೆ ಉಂಟಾಗುತ್ತಿರುತ್ತದೆ.

ಬಚ್ಚಲು ಮನೆಯಲ್ಲಿ ಸುವಾಸನೆ ಹರಡಲಿ
ನೀವು ಬಚ್ಚಲು ಮನೆಯಲ್ಲಿ ಬಳಸದೇ ಇದ್ದ ಸಂದರ್ಭದಲ್ಲಿ, ನೀವು ಕಿಟಕಿಗಳನ್ನು ತೆರೆದಿಟ್ಟಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬಚ್ಚಲು ಮನೆಯ ಕಿಟಕಿಗಳನ್ನು ಮುಚ್ಚಿರುವುದರಿಂದ ಕೆಟ್ಟ ವಾಸನೆ ಆ ಪ್ರದೇಶದಲ್ಲಿ ಹರಡಬಹುದು. ಕಿಟಕಿ ಮುಚ್ಚಿದ್ದರೆ ಅದನ್ನು ತೆರೆದು ಚೆನ್ನಾಗಿ ಗಾಳಿಯಾಗುವಂತೆ ಮಾಡಿ. ಇದರಿಂದ ಒಳಗಿರುವ ದುರ್ವಾಸನೆ ಹೊರಹೋಗಲಿ

ಫ್ಲಶಿಂಗ್ ಚೆನ್ನಾಗಿ ಮಾಡಿ


ನೀವು ಟಾಯ್ಲೆಟ್ ಅನ್ನು ಬಳಸಿದ ನಂತರ ಅದರ ಮುಚ್ಚಳವನ್ನು ಮುಚ್ಚಿ ನಂತರ ಫ್ಲಶ್ ಮಾಡಿ. ಇದರಿಂದ ಫ್ಲಶ್ ಮಾಡಿರುವುದು ಸುತ್ತಲೂ ಹರಡುವುದಿಲ್ಲ. ಸ್ವಚ್ಛವಾಗಿ ಫ್ಲಶಿಂಗ್ ಅನ್ನು ಮಾಡಬಹುದಾಗಿದೆ. ನಿಮ್ಮ ಬಚ್ಚಲು ಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅನ್ನು ಇರಿಸಿಕೊಳ್ಳಿ. ಈ ಫ್ಯಾನ್ ಇಲ್ಲ ಎಂದಾದಲ್ಲಿ ಕಿಟಕಿಯನ್ನು ತೆರೆಯಿರಿ.

ಒಣಗಿಸಿಟ್ಟುಕೊಳ್ಳಿ

ನಿಮ್ಮ ಬಚ್ಚಲು ಮನೆಯನ್ನು ಒಣಗಿಸಿಟ್ಟುಕೊಳ್ಳುವುದು ಹೆಚ್ಚು ಮುಖ್ಯವಾದುದಾಗಿದೆ. ನೀವು ಇಲ್ಲಿ ಸ್ನಾನ ಮಾಡುತ್ತೀರಿ ಎಂಬುದು ನಮಗೆ ಗೊತ್ತಿದೆ ಅದಾಗ್ಯೂ, ನೆಲದಲ್ಲಿರುವ ನೀರನ್ನು ಒರೆಸಿಕೊಳ್ಳಿ ಮತ್ತು ಕಿಟಕಿಯನ್ನು ತೆರೆದು ಒಣಗುವಂತೆ ಮಾಡಿ. ನೆಲ ಒದ್ದೆಯಾಗಿದ್ದರೂ ಬಚ್ಚಲು ಮನೆಯಲ್ಲಿ ಕೆಟ್ಟ ವಾಸನೆ ಹರಡುವ ಸಾಧ್ಯತೆ ಇರುತ್ತದೆ.
English summary

Ways To Make Bathroom Smell Fresh

Every time a guest excuses himself or herself to use the bathroom, you get nervous that it might stink. No matter how clean we keep our bathroom, the smell it gives out is sometimes unwelcoming. You might have resorted to spraying air fresheners twice a day or lighting scented candles, but these chemicals can only hide the smell. .Here are some fundamental ways of ensuring that your bathroom smells good all day long.
X
Desktop Bottom Promotion