For Quick Alerts
ALLOW NOTIFICATIONS  
For Daily Alerts

ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಉಪಾಯ

By
|

ನಿಮ್ಮ ಮನೆಯನ್ನು ಆಗಿಂದಾಗ್ಗೆ ಕ್ರಮವಾಗಿ ಸ್ವಚ್ಛಗೊಳಿಸಿದಲ್ಲಿ ಆರೋಗ್ಯಪೂರ್ಣವಾದ ವಾತಾವರಣ ಹೊಂದಬಹುದು. ಆದರೆ ದೀರ್ಘವಾಧಿಯಲ್ಲಿ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛತೆ ಮಾಡಿಕೊಳ್ಳದೆ ಇದ್ದರೆ ಕೀಟಗಳು, ತಿಗಣೆಗಳು ಮತ್ತು ಜಿರಳೆಗಳನ್ನು ಮನೆಯೊಳಕ್ಕೆ ಆಹ್ವಾನಿಸಿದಂತೆ. ಹೌದು! ತಿಗಣೆಗಳು ಮನೆಯ ಸಂದಿಗೊಂದಿ ಮತ್ತು ಮೂಲೆಗಳನ್ನು ತಮ್ಮ ವಾಸಸ್ಥಾನಗಳನ್ನಾಗಿ ಮಾಡಿಕೊಂಡಿರುತ್ತವೆ.

ತಿಗಣೆಗಳನ್ನು ನಾಶಮಾಡುವುದು ಎಷ್ಟು ಮುಖ್ಯವೋ ಅದರ ಉತ್ಪತ್ತಿಯನ್ನು ತಡೆಯುವುದೂ ಸಹ ಅಷ್ಟೇ ಮುಖ್ಯವಾದ ವಿಷಯ. ನಿಮ್ಮ ಸುಸಜ್ಜಿತ ಮನೆಯಲ್ಲಿ ನಿಮ್ಮೊಂದಿಗೆ ಈ ತಿಗಣೆಗಳೂ ವಾಸವಾಗಿ ದಿನೇದಿನೇ ಅದರ ಸಂತತಿಯು ಗಣನೀಯವಾಗಿ ಏರಿಕೆಯಾಗಿ ನಿಮಗೆ ಕಿರಿಕಿರಿಯುಂಟು ಮಾಡುತ್ತವೆ. ಇಂತಹ ಅತಿಥಿಗಳನ್ನು ಮನೆಯಿಂದ ಆದಷ್ಟು ಬೇಗ ಓಡಿಸಿ!

ಕೆಲವೊಂದು ಬಾರಿ ಈ ಕೀಟಗಳು, ತಿಗಣೆಗಳು ನಿಮ್ಮನ್ನು ಕಚ್ಚುವ ಸಂದರ್ಭಗಳೂ ಎದುರಾಗುತ್ತವೆ. ಈ ಲೇಖನದಲ್ಲಿ ಜಿರಳೆಗಳನ್ನು ನಾಶಮಾಡಲು ಕೆಲ ಪ್ರಾಕೃತಿಕ ವಿಧಾನಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಲಾಗಿದೆ. ರಾಸಾಯನಿಕ ಕೀಟನಾಶಕ ವಿಧಾನಗಳು ನಿಮ್ಮ ಮತ್ತು ಮಕ್ಕಳ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಪಾಯವಿರುತ್ತದೆ. ಜಿರಳೆಗಳಿಂದ ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೆಳಕಂಡ ಉಪಯುಕ್ತ ವಿಧಾನಗಳನ್ನು ಒಮ್ಮೆ ಪ್ರಯತ್ನಿಸಿ. ಇದರಿಂದ ಜಿರಳೆಗಳಿಂದ ನಿಮ್ಮ ಮನೆಯು ಮುಕ್ತವಾಗುತ್ತದೆ...

ಬಿಸಿ ಸಾಸ್ ಸಿಂಪಡಿಸಿ

ಬಿಸಿ ಸಾಸ್ ಸಿಂಪಡಿಸಿ

ಜಿರಳೆಗಳಿಂದ ನಿಮ್ಮ ಮನೆಯನ್ನು ಮುಕ್ತಗೊಳಿಸಲು ಇದೊಂದು ಸರಳ ಉಪಾಯ. 2 ಚಮಚ ಬಿಸಿ ಸಾಸ್ ಮತ್ತು ನೀರನ್ನು ಮಿಶ್ರಣ ಮಾಡಿಕೊಳ್ಳಿ. ಈಗ ಒಂದು ಸಿಂಪಡಿಸುವ ಬಾಟಲ್ ಗೆ ಈ ಮಿಶ್ರಣವನ್ನು ಹಾಕಿಕೊಳ್ಳಿ. ಜಿರಳೆಗಳು ಓಡಾಡುವ ಜಾಗಗಳಲ್ಲಿ ಈ ಮಿಶ್ರಣವನ್ನು ಸಿಂಪಡಿಸಿ. ಮೆಣಸಿನ ಸಾಸ್ ಅನ್ನು ಸಿಂಪಡಿಸುವಾಗ ನಿಮ್ಮ ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಧರಿಸದಿರಲು ಮರೆಯದಿರಿ.

ಸೆಡರ್

ಸೆಡರ್

ಪದೇ ಪದೇ ಉತ್ಪತ್ತಿಯಾಗುತ್ತಿರುವ ಕೀಟಗಳು ಮತ್ತು ಜಿರಳೆಗಳನ್ನು ಹೋಗಲಾಡಿಸುವುದು ಹೇಗೆ? ಸೆಡರ್ ಉಂಡೆಗಳು, ಬ್ಲಾಕ್ಸ್ ಅಥವಾ ಚಿಪ್ಸ್ ಗಳನ್ನು ಜಿರಳೆಗಳು ಕಾಣುವ ಜಾಗದಲ್ಲಿ ಇರಿಸಿ. ಈ ವಿಧಾನದ ಬಳಕೆಯು ಕೇವಲ ಜಿರಳೆಗಳನ್ನು ನಾಶಮಾಡುವುದಲ್ಲದೇ ಇತರೆ ಕೀಟಗಳನ್ನು ಸಹ ನಾಶಮಾಡುತ್ತವೆ.

ಜಿರಳೆ ಉಂಡೆಗಳು

ಜಿರಳೆ ಉಂಡೆಗಳು

ಜಿರಳೆಗಳನ್ನು ಪರಿಣಾಮಕಾರಿಯಾಗಿ ಮನೆಯಿಂದ ಹೊರಹಾಕಲು ಈ ಜಿರಳೆ ಉಂಡೆಗಳ ಬಳಕೆಯೂ ಸಹ ಒಂದು ಪರಿಣಾಮಕಾರಿ ವಿಧಾನ. ಜಿರಳೆಗಳಿಗೆ ಈ ಜಿರಳೆಉಂಡೆಗಳ ವಾಸನೆಯು ಅಪ್ರಿಯವಾಗಿದ್ದು,ಇವುಗಳನ್ನು ಪಾತ್ರೆ ತೊಳೆಯುವ ಸಿಂಕ್, ಪೀಠೋಪಕರಣಗಳು, ಕೊಠಡಿಯೊಳಗೆ ಇತ್ಯಾದಿ ಕಡೆ ಇರಿಸಿ. ಇದು ಮಾನವರಿಗೂ ಸಹ ಒಳ್ಳೆಯದಲ್ಲ. ಆದ್ದರಿಂದ ಇದನ್ನು ಆಹಾರ ಪದಾರ್ಥಗಳಿಂದ ದೂರವಿರಿಸಿ.

ಬೇ ಎಲೆಗಳು

ಬೇ ಎಲೆಗಳು

ಜಿರಳೆಗಳನ್ನು ನಾಶಮಾಡಲು ಸೂಕ್ತ ಸಲಹೆ ಬೇಕೇ? ಈ ವಿಧಾನವನ್ನು ಪರಿಗಣಿಸಿ. ಈ ರೀತಿಯ ಸುವಾಸಿತ ಬೇ ಎಲೆಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಇರಿಸಿಕೊಳ್ಖುವುದು ಸೂಕ್ತ. ಎಲ್ಲಾ ಅಂಗಡಿಗಳಲ್ಲೂ ಈ ಎಲೆಗಳು ಸಿಗುತ್ತವೆ. ಈ ಎಲೆಯ ಪಟ್ಟಣವನ್ನು ಕೊಠಡಿಯ ಒಳಗೆ, ಇತರೆ ಮೂಲೆಗಳಲ್ಲಿ ಇರಿಸಿ. ಈ ಎಲೆಗಳ ವಾಸನೆಗೆ ಜಿರಳೆಗಳು ಮಂಗಮಾಯ.

ಕರಿ ಬೇವು ಸೊಪ್ಪುಗಳನ್ನು ಬಳಸಿ

ಕರಿ ಬೇವು ಸೊಪ್ಪುಗಳನ್ನು ಬಳಸಿ

ಸುವಾಸನೆ ಭರಿತ ಕರಿಬೇವು ಸೊಪ್ಪನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿಡಿ. ಇದರ ವಾಸನೆಗೆ ಅವುಗಳು, ಗೂಡು ಬಿಟ್ಟು ಓಡಿ ಹೋಗುತ್ತವೆ, ಜೊತೆಗೆ ನಿಮ್ಮ ಮನೆಯನ್ನು ಸಹ ತೊರೆದು ಹೋಗುತ್ತವೆ. ಇದು ಜಿರಳೆಗಳನ್ನು ನಿಮ್ಮ ಮನೆಯಿಂದ ಓಡಿಸಲು ಇರುವ ಅತ್ಯುತ್ತಮವಾದ ಉಪಾಯಗಳಲ್ಲಿ ಒಂದಾಗಿದೆ.

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಇದು ಸಹ ಒಂದು ಪರಿಣಾಮಕಾರಿಯಾದ ರಾಸಾಯನಿಕ ಮುಕ್ತ ವಿಧಾನವಾಗಿದೆ. ಮೆಣಸಿನ ಪುಡಿ, ಈರುಳ್ಳಿ ಪೇಸ್ಟ್ ಮತ್ತು ಬೆಳ್ಳುಳ್ಳಿಗಳನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಜಿರಳೆಗಳು ಓಡಾಡುವ ಭಾಗದಲ್ಲಿ ಹಾಕಿ. ಈ ಮಿಶ್ರಣದ ವಾಸನೆಗೆ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

English summary

Tips To Protect Your House From Cockroaches

It is very difficult to find a person who has no problem with bugs. Their nasty deeds are reasons for allergies, rashes, asthma and many more illnesses. So, are there any natural ways of how to protect your house from cockroaches? Yes, definitely there are. Have a look:
X
Desktop Bottom Promotion