Latest Updates
-
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ
ಅಡುಗೆಮನೆಯ ಪರಿಕರಗಳ ಸ್ವಚ್ಛತೆ ಲೀಲಾಜಾಲವಾಗಿ ಮಾಡಿ!
ಅಡುಗೆ ಮಾಡುವುದು ಲೀಲಾಜಾಲವಾಗಿ ಮಾಡಿ ಮುಗಿಸಬಹುದಾದ ಕೆಲಸವಾದರೂ ನಂತರ ಅಡುಗೆ ಕೋಣೆಯ ಸ್ವಚ್ಛತೆಯನ್ನು ಮಾಡುವುದು ಹರಸಾಹಸವಾಗಿರುತ್ತದೆ. ಅಡುಗೆಯ ಕಟ್ಟೆ, ಫ್ರಿಡ್ಜ್, ಮೈಕ್ರೋವೇವ್, ಪಾತ್ರೆ ಪರಿಕರಗಳು, ನೆಲ, ಸಿಂಕ್ ಭಾಗ ಹೀಗೆ ಪ್ರತಿಯೊಂದು ಭಾಗವನ್ನೂ ನೀವು ಸ್ವಚ್ಛಮಾಡಬೇಕಾಗುತ್ತದೆ. ಅಡುಗೆ ಮನೆಯ ಸ್ವಚ್ಛತೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಕಮಾಲ್
ಇದನ್ನೆಲ್ಲಾ ಹಾಗೆಯೇ ಬಿಟ್ಟಲ್ಲಿ ಜಿರಳೆ, ಇಲಿಗಳು ರಾಜ್ಯಭಾರ ನಡೆಸಿ ವಸ್ತುಗಳನ್ನು ಹಾಳುಮಾಡುವುದಲ್ಲದೆ ರೋಗಕ್ಕೂ ಕಾರಣವಾಗುತ್ತವೆ. ಮನೆಯಲ್ಲಿರುವ ಗೃಹಿಣಿಯರಿಗೆ ಈ ಕೆಲಸ ಅಷ್ಟೊಂದು ಹೊರೆ ಎಂದೆನಿಸದಿದ್ದರೂ, ಕೆಲಸಕ್ಕೆ ಹೋಗುವ ವೃತ್ತಿಪರ ಮಹಿಳೆಯರಿಗೆ ಅಡುಗೆ ಕೆಲಸವೇ ಹರಸಾಹಸವಾಗಿರುತ್ತದೆ. ತದನಂತರ ಅಡುಗೆ ಮನೆಯ ಸ್ವಚ್ಛತೆಯನ್ನು ಮಾಡುವುದು ಎಂದರೆ ತಾಳ್ಮೆ ತಪ್ಪಿ ಹೋಗುತ್ತದೆ. ಏನೂ ಬೇಡ ರಜಾ ದಿನದಲ್ಲಿ ಮಾಡಿದರಾಯಿತು ಎಂಬುದು ಮನದಲ್ಲಿ ಮೂಡಿದರೂ ಹಾಗೆಯೇ ಬಿಡಲು ಆಗುವುದಿಲ್ಲ. ಅಡುಗೆ ಕೋಣೆಯಲ್ಲಿ ಪಾತ್ರೆಗಳ ಜೋಡಣೆ ಹೀಗೆ ಮಾಡಿ
ಹಾಗಿದ್ದರೆ ಇದನ್ನು ಹೆಚ್ಚು ಶ್ರಮವಿಲ್ಲದೆ ಸರಳವಾಗಿ ಮಾಡಲಾಗುವುದಿಲ್ಲವೇ ಎಂಬ ಪ್ರಶ್ನೆ ಮನದಲ್ಲಿ ಮೂಡಬಹುದು. ಅದಕ್ಕೆಂದೇ ಇಂದಿನ ಲೇಖನದಲ್ಲಿ ಶ್ರಮವಿಲ್ಲದೆ ಅಡುಗೆ ಮನೆಯ ಸ್ವಚ್ಛತೆಯನ್ನು ಮಾಡುವುದು ಹೇಗೆ ಎಂಬುದಕ್ಕೆ ಸರಳ ಪರಿಹಾರಗಳನ್ನು ನೀಡುತ್ತಿದ್ದು ಕೆಳಗಿನ ಸ್ಲೈಡರ್ಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ, ಮುಂದೆ ಓದಿ....

ಫ್ರಿಡ್ಜ್ ಸ್ವಚ್ಛತೆ
ಫ್ರಿಡ್ಜ್ ಸ್ವಚ್ಛಮಾಡುವುದು ಕೊಂಚ ಕಷ್ಟಕರ ಕೆಲಸಾಗಿದೆ. ಇಲ್ಲಿರುವ ಸಾಮಾಗ್ರಿಗಳನ್ನೆಲ್ಲಾ ಹೊರತೆಗೆದು ಅವನ್ನು ಸ್ವಚ್ಛಮಾಡಿ ನಂತರ ಹಾಗೆಯೇ ಇಡಬೇಕು. ಅದಕ್ಕೆಂದೇ ಸರಳ ಟಿಪ್ಸ್ ನೀಡಿದ್ದೇವೆ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಫ್ರಿಡ್ಜ್ ಸ್ವಚ್ಛತೆ
ಅರ್ಧ ಲೋಟ ಶಿರ್ಕಾ (ವಿನೆಗರ್)ಮತ್ತು ಎರಡು ಲೋಟ ನೀರು ಬೆರೆಸಿ ಕೆಲವು ಹನಿ ಲಿಂಬೆಯ ರಸ (ಸುಮಾರು ಕಾಲು ಲಿಂಬೆ) ಸೇರಿಸಿ. ಈ ಮಿಶ್ರಣವನ್ನು ಫ್ರಿಜ್ಜಿನ ಒಳಭಾಗಕ್ಕೆ ಸಿಂಪಡಿಸುವ ಬಾಟಲಿಯ ಮೂಲಕ ಸಿಂಪಡಿಸಿ ತಕ್ಷಣವೇ ಸ್ವಚ್ಛ ಬಟ್ಟೆಯಿಂದ ಒರೆಸಿದರೆ ಸಾಕು. ಇದಕ್ಕೆ ಫ್ರಿಜ್ಜಿನ ಎಲ್ಲಾ ವಸ್ತುಗಳನ್ನು ಹೊರಗಿಡುವ ಅಗತ್ಯವಿಲ್ಲ.

ಕಟ್ಟಿಂಗ್ ಬೋರ್ಡ್
ಅಡುಗೆ ಮನೆಯಕಟ್ಟಿಂಗ್ ಬೋರ್ಡ್ ಸ್ವಚ್ಛಗೊಳಿಸಲು, ಇಲ್ಲಿದೆ ನೋಡಿ ಸರಳ ಟಿಪ್ಸ್ - ಮೊದಲುಬೋರ್ಡ್ ಮೇಲೆ ಕೊಂಚ ನೀರು ಹಾಕಿ ತೇವಗೊಳಿಸಿ ಇಡಿಯ ಬೋರ್ಡ್ ಮೇಲೆ ಉಪ್ಪು ಸಿಂಪಡಿಸಿ. ಬಳಿಕ ಒಂದು ಲಿಂಬೆ ಹಣ್ಣನ್ನು ಅರ್ಧವಾಗಿ ಕತ್ತರಿಸಿ ಒಳಭಾಗ ತಾಗುವಂತೆ ಕೊಂಚ ಒತ್ತಡದಿಂದ ಇಡಿಯ ಹಲಗೆಯನ್ನು ಉಜ್ಜಿ. ಒಂದು ಹಲಗೆಗೆ ಒಂದು ಲಿಂಬೆ ಸಾಕು... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಟ್ಟಿಂಗ್ ಬೋರ್ಡ್
ಕೊಂಚ ಸಮಯ ಬಿಟ್ಟು ಗೋಡೆಯುಜ್ಜುವ ಸ್ಕ್ರಾಪರ್ ಅಥವಾ ಅಂತಹ ಯಾವುದಾದರೂ ಸಲಕರಣೆ ಬಳಸಿ ಉಪ್ಪನ್ನು ಕೆರೆದು ತೆಗೆಯಿರಿ. ಬಳಿಕ ಕೊಂಚ ಬಿಸಿಯಿರುವ ನೀರು ಹಾಕಿ ಪಾತ್ರೆಯುಜ್ಜುವ ಸ್ಪಂಜ್ ಬಳಸಿ ಸ್ವಚ್ಛಗೊಳಿಸಿ.

ಪರಿಶ್ರಮವಿಲ್ಲದ ಓವನ್ ಕ್ಲೀನಿಂಗ್
ಕೆಲವೊಮ್ಮೆ ಓವನ್ನೊಳಗೆ ಇಟ್ಟ ಆಹಾರ ಸುತ್ತಲೂ ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕೊಳೆ ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಅದನ್ನು ಸೋಪು ಅಥವಾ ಇತರ ರಾಸಾಯನಿಕ ಬಳಸಿ ಸ್ವಚ್ಛಮಾಡುವುದು ಅಷ್ಟೊಂದು ಸೂಕ್ತವಲ್ಲ, ಅದೂ ಆಹಾರವನ್ನು ಬಿಸಿ ಮಾಡಲು ನೀವು ಬಳಸುತ್ತಿರುವಾಗ ಇದು ಹಾನಿಕರವಾಗಿರುತ್ತದೆ. ಲಿಂಬೆ ಮತ್ತು ನೀರಿನ ಮಿಶ್ರಣದಲ್ಲಿ ಸ್ಪಾಂಜ್ ಅನ್ನು ಮುಳುಗಿಸಿಡಿ. ಇದೇ ಮಿಶ್ರಣವನ್ನು ಓವನ್ ಒಳಗೂ ಸ್ಪ್ರೇ ಮಾಡಿ. 5 ನಿಮಿಷಗಳ ಕಾಲ ಓವನ್ ಅನ್ನು ಆನ್ ಮಾಡಿ. ನಂತರ ಸ್ಪಾಂಜ್ ಅನ್ನು ತಣಿಯಲು ಬಿಡಿ. ನಂತರ ಪರಿಶ್ರಮವಿಲ್ಲದೆ ಓವನ್ ಒಳಭಾಗವನ್ನು ಒರೆಸಬಹುದಾಗಿದೆ.

ಕಬ್ಬಿಣದ ಪ್ಯಾನ್ ಸ್ವಚ್ಛತೆ
ನಿಮ್ಮ ಕಬ್ಬಿಣದ ಬಾಣಲೆಗೆ ಸೋಪು ನೀರು ಅಷ್ಟೊಂದು ಒಳ್ಳೆಯದಲ್ಲ, ಆಲೀವ್ ಆಯಿಲ್ ಮತ್ತು ಉಪ್ಪಿನ ಮಿಶ್ರಣದಲ್ಲಿ ಈ ಬಾಣಲೆಯನ್ನು ಸರಳವಾಗಿ ಸ್ವಚ್ಛಮಾಡಿ. ಪಾತ್ರೆಗೆ ಒಂದು ಸ್ಪೂನ್ನಷ್ಟು ಆಲೀವ್ ಆಯಿಲ್ ಹಾಕಿ, ನಂತರ ಕಲ್ಲುಪ್ಪು ಸೇರಿಸಿ ಬಟ್ಟೆಯಿಂದ ಉಜ್ಜಿ. ನಂತರ ಉಪ್ಪನ್ನು ದಪ್ಪನೆಯ ಬಟ್ಟೆಯಿಂದ ಒರೆಸಿ ನಂತರ ಆಲೀವ್ ಆಯಿಲ್ ಅನ್ನು ಬಾಣಲೆಗೆ ಪಸೆ ಮಾಡಿಕೊಳ್ಳಿ.



Click it and Unblock the Notifications











