Just In
- 7 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 9 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Finance
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಎಷ್ಟೆಲ್ಲ ಅನುಕೂಲ
- News
ಉನ್ನಾವ್ ಗೆ ಹೋಗ್ತಾರಾ ಸಿಎಂ ಯೋಗಿ?
- Technology
ಇನ್ಮುಂದೆ ವರ್ಷಕ್ಕೆ ಎರಡು ಸಲ ಐಫೋನ್ ಲಾಂಚ್..!
- Sports
ಭಾರತvs ವೆಸ್ಟ್ಇಂಡೀಸ್ ಎರಡನೇ ಟಿ20 :ತವರಿನಲ್ಲಾದರೂ ಸಂಜು ಗೆ ಸಿಗುತ್ತಾ ಅವಕಾಶ:
- Movies
ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅಡುಗೆ ಮನೆಯ ಸ್ವಚ್ಛತೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಕಮಾಲ್
ನಿಮ್ಮ ಸುಂದರ ಮನೆಯಲ್ಲಿ ಅಡುಗೆ ಕೋಣೆ ಎಂಬುದು ಪವಿತ್ರ ಸ್ಥಳವಾಗಿದ್ದು ಇಲ್ಲಿನ ಸ್ವಚ್ಛತೆಗೆ ನಾವು ಆದ್ಯತೆಯನ್ನು ನೀಡಲೇಬೇಕಾಗುತ್ತದೆ. ಮನೆಮಂದಿಯ ಸ್ವಾಸ್ಥ್ಯವನ್ನು ಕಾಪಾಡುವ ಈ ಕೋಣೆಯು ಪೂಜನೀಯವಾದುದು. ಬೆಳಗ್ಗೆಯಿಂದ ರಾತ್ರಿಯವರೆಗೆ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸುವ ಈ ದೇಗುಲದ ಪಾವಿತ್ರ್ಯತೆಯನ್ನು ಮನೆಯೊಡತಿ ಮಾತ್ರ ಕಾಪಾಡದೇ ಮನೆಯ ಸರ್ವಸದಸ್ಯರೂ ಕಾಪಾಡಬೇಕು.
ಅಡುಗೆ ಮಾಡಿದ ನಂತರ ಕೋಣೆಯ ಸ್ವಚ್ಛತೆಯನ್ನು ಪ್ರತೀದಿನ ನೀವು ಮಾಡಲೇಬೇಕಾಗುತ್ತದೆ. ಕಸವನ್ನು ಸ್ವಚ್ಛಮಾಡುವುದು, ಅಡುಗೆ ಕಟ್ಟೆಯನ್ನು ತೊಳೆಯುವುದು, ಗ್ಯಾಸ್ ಅನ್ನು ಒರೆಸುವುದು, ಧೂಳು ಹಿಡಿದ ಜಾಗವನ್ನು ಚೊಕ್ಕಟ ಮಾಡುವುದು ಹೀಗೆ ಉದಾಸೀನ ಮಾಡದೇ ಅಡುಗೆ ಕೋಣೆಯನ್ನು ನೀಟಾಗಿ ಇಟ್ಟುಕೊಳ್ಳಬೇಕಾಗುತ್ತದೆ.
ಅಡುಗೆ ಮನೆ ಸ್ವಚ್ಛಮಾಡಲು ನೀವು ರಾಸಾಯನಿಕಗಳನ್ನು ಬಳಸುವ ಬದಲಿಗೆ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಳ್ಳಬಹುದಾಗಿದೆ. ಲಿಂಬೆ ರಸ ಮತ್ತು ಬೇಕಿಂಗ್ ಸೋಡಾವನ್ನು ಬಳಸಿ ಅಡುಗೆ ಕೋಣೆಯ ಸ್ವಚ್ಛತೆಯನ್ನು ನೈಸರ್ಗಿಕವಾಗಿ ಹಾನಿಯಿಲ್ಲದೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಈ ವಿಧಾನಗಳಲ್ಲಿ ಅಡುಗೆ ಮನೆಯ ಸ್ವಚ್ಛತೆಯನ್ನು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದು ಅದನ್ನು ನೋಡೋಣ.
ಸ್ಲಾಬ್ ಸ್ವಚ್ಛತೆ
ನಿಮ್ಮ ಅಡುಗೆ ಕೆಲಸಗಳನ್ನೆಲ್ಲಾ ಮುಗಿಸಿಕೊಂಡ ನಂತರ, ಮೃದುವಾದ ಬಟ್ಟೆಯನ್ನು ಬಳಸಿ ಮನೆಯಲ್ಲೇ ತಯಾರಿಸಿದ ಡಿಟರ್ಜೆಂಟ್ ಅಂದರೆ ಲಿಂಬೆ ರಸವನ್ನು ಉಪಯೋಗಿಸಿ ವಾಸನೆ ಮತ್ತು ಸ್ಲಾಬ್ ಕಲೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ಗ್ಯಾಸ್ ಸ್ಟವ್ ಸ್ವಚ್ಛತೆ
ಪ್ರತೀ ದಿನವೂ ಗ್ಯಾಸ್ ಸ್ಟವ್ ಅನ್ನು ನೀವು ಸ್ವಚ್ಛಮಾಡಬೇಕಾಗುತ್ತದೆ. ಅಡುಗೆ ಮಾಡುವಾಗ ಆಹಾರ ಪದಾರ್ಥಗಳು ಇಲ್ಲಿ ಚೆಲ್ಲುವ ಸಾಧ್ಯತೆ ಇದ್ದು, ಕೂಡಲೇ ಆ ಜಾಗವನ್ನು ಸ್ವಚ್ಛಮಾಡಿ. ಇದರಿಂದ ಸ್ಟವ್ ಹಾಳಾಗುವುದನ್ನು ತಪ್ಪಿಸಬಹುದಾಗಿದೆ.
ಮೈಕ್ರೋವೇವ್ ಸ್ವಚ್ಛತೆ
ನೀವು ಬಳಸಿದ ಕೂಡಲೇ ಮೈಕ್ರೋವೇವ್ ಅನ್ನು ಕೂಡ ಸ್ವಚ್ಛಮಾಡಬೇಕು. ಇದರಿಂದ ಮೈಕ್ರೋವೇವ್ ವಾಸನೆ ಬರುವುದನ್ನು ತಪ್ಪಿಸಬಹುದಾಗಿದೆ ಅಂತೆಯೇ ಬೇರೆ ಜೀವಿಗಳು ಇಲ್ಲಿ ವಾಸಿಸುವುದನ್ನು ನಿವಾರಿಸಿಕೊಳ್ಳಬಹುದು. ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ಸವರಿ ಬಳಸಿ ಮೃದುವಾದ ಬಟ್ಟೆಯಿಂದ ಮೈಕ್ರೋವೇವ್ ಅನ್ನು ಸ್ವಚ್ಛಮಾಡಿ.
ಸಿಂಕ್ ಸ್ವಚ್ಛತೆ
ಪಾತ್ರೆಗಳನ್ನು ತೊಳೆದ ನಂತರ, ಸಿಂಕ್ ಮೇಲೆ ಕಲ್ಲುಪ್ಪನ್ನು ಸ್ವಲ್ಪ ಚೆಲ್ಲಿ. ಉಪ್ಪಿನ ಮೇಲೆ ಕಪ್ಪು ವಿನೇಗರ್ ಅನ್ನು ಚಿಮುಕಿಸಿ, ನಂತರ ಬ್ರಶ್ ಬಳಸಿ ಸಿಂಕ್ ಅನ್ನು ಉಜ್ಜಿ. ಸಿಂಕ್‌ನಿಂದ ಬರುತ್ತಿರುವ ವಾಸನೆಯನ್ನು ವಿನೇಗರ್ ತೊಡೆದುಹಾಕುತ್ತದೆ ಮತ್ತು ಕಲೆಗಳ ನಿವಾರಣೆಯನ್ನು ಉಪ್ಪು ಮಾಡುತ್ತದೆ.
ಪಾತ್ರೆಗಳನ್ನು ತೊಳೆಯುವುದು
ರಾತ್ರಿ ಪೂರ್ತಿ ಸಿಂಕ್‌ನಲ್ಲಿ ನೆನೆಯುವಂತೆ ಪಾತ್ರೆಗಳನ್ನು ಇರಿಸಬೇಡಿ ಇದು ನಿಮ್ಮ ಅಡುಗೆ ಪಾತ್ರೆಗಳನ್ನು ಹಾಳುಗೆಡವಬಹುದು. ನೀವು ಅವುಗಳನ್ನು ಬಳಸಿದ ಕೂಡಲೇ ಪಾತ್ರೆಗಳನ್ನು ತೊಳೆದಿಡಿ.