Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಅಡುಗೆ ಕೋಣೆಯಲ್ಲಿ ಪಾತ್ರೆಗಳ ಜೋಡಣೆ ಹೀಗೆ ಮಾಡಿ
ಮಹಿಳೆಯರಿಗೆ ಅಡುಗೆ ಮನೆಯ ಬಗ್ಗೆ ಇನ್ನಿಲ್ಲದ ನಂಟು. ಅಡುಗೆ ಮನೆಯೆಂದರೆ ಅವರಿಗೆ ಅಚ್ಚುಮೆಚ್ಚು. ಅದರಲ್ಲೂ ಕೆಲವರ ಅಡುಗೆ ಮನೆ ತುಂಬಾ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿರುತ್ತದೆ. ಇನ್ನು ಕೆಲವರ ಅಡುಗೆ ಮನೆಯಲ್ಲಿ ಪಾತ್ರೆಗಳು ಎಲ್ಲೆಂದರಲ್ಲಿ ಬಿದ್ದಿರುತ್ತದೆ ಮತ್ತು ಸಾಮಾನುಗಳು ಬೇಕಾದ ಸ್ಥಳದಲ್ಲಿರುವುದಿಲ್ಲ. ಆದರೆ ಅಡುಗೆ ಕೋಣೆಯನ್ನು ಅಚ್ಚುಕಟ್ಟಾಗಿ ಇಟ್ಟು ತುಂಬಾ ಸ್ಥಳವಿರುವಂತೆ ನೋಡಿಕೊಳ್ಳಬಹುದು.

ಇದಕ್ಕಾಗಿ ಇಂಟಿರೀಯರ್ ಡೆಕೋರೇಟರ್ ನೆರವು ಪಡೆದರೆ ಒಳ್ಳೆಯದು. ನಮ್ಮ ಸ್ವಂತ ಮನೆಯಾದರೆ ಅಡುಗೆ ಮನೆಯಲ್ಲಿ ಏನಾದರೂ ಮಾಡಿ ಬೇಕಾದಂತೆ ಸ್ಥಳ ಮಾಡಿಕೊಳ್ಳಬಹುದು. ಆದರೆ ಬಾಡಿಗೆ ಮನೆ ಅಥವಾ ಪಿಜಿಯಲ್ಲಿದ್ದರೆ ಆಗ ಏನು ಮಾಡಬೇಕು ಎನ್ನುವುದು ತಿಳಿಯಲ್ಲ.
ಇಂತಹ ಸಮಯದಲ್ಲಿ ನಿಮಗೆ ದಿನನಿತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ಮಾತ್ರ ಅಡುಗೆ ಮನೆಯಲ್ಲಿ ಇಡಬೇಕು. ಆದಷ್ಟು ಕಡಿಮೆ ಪಾತ್ರೆಗಳನ್ನು ಬಳಸಿದರೆ ಅದನ್ನು ಜೋಡಿಸಿಡುವುದು ತುಂಬಾ ಸುಲಭ. ಸಣ್ಣ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಜೋಡಿಸಿಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಗೋಡೆಗಳಲ್ಲಿ ನೇತಾಡಿಸಿ
ಪಾತ್ರೆಗಳನ್ನು ಯಾವುದೇ ಮೂಲೆಯಲ್ಲಿ ಅಥವಾ ನೆಲದ ಮೇಲೆ ಇಟ್ಟರೆ ಆಗ ಅದರಿಂದ ಜಾಗ ವ್ಯರ್ಥವಾಗುತ್ತದೆ. ಗೋಡೆಗೆ ಕಬ್ಬಿಣದ ಸರಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಪಾತ್ರೆಗಳನ್ನು ಅದರಲ್ಲಿ ನೇತಾಡಿಸಬಹುದು. ಇದರಿಂದ ಹೆಚ್ಚಿನ ಜಾಗ ನಿಮಗೆ ಸಿಗುತ್ತದೆ. ಮನೆಯ ಮರದ ಪರಿಕರಗಳ ಸ್ವಚ್ಛತೆಗೆ ಸರಳ ಸೂತ್ರ
ಚಾಕು ಮತ್ತು ಚಮಚ
ಅಡುಗೆ ಕೋಣೆಯಲ್ಲಿ ಡ್ರಾವರ್ ಇದ್ದರೆ ಆಗ ಒಂದು ವಿಭಾಗವನ್ನು ಚಾಕು ಮತ್ತು ಚಮಚ ಇಡಲು ಬಳಸಿಕೊಳ್ಳಿ. ಇದನ್ನು ಅಗತ್ಯವಿದ್ದಾಗ ಮಾತ್ರ ತೆಗೆಯಿರಿ. ಬೇರೆ ಸಮಯದಲ್ಲಿ ಡ್ರಾವರ್ ಮುಚ್ಚಿರಲಿ ಮತ್ತು ಇದರಿಂದ ಜಾಗ ವೆಚ್ಚವಾಗಲ್ಲ. ಸಣ್ಣ ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ಜೋಡಿಸಲು ಇದು ಅತ್ಯುತ್ತಮ ವಿಧಾನ. ಪಾತ್ರೆ ತೊಳೆಯೋಕೆ ಇವುಗಳನ್ನು ಬಳಸಬಹುದು
ಮರದ ತುಂಡನ್ನು ಬಳಸಿ
ಸಣ್ಣ ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ಹೇಗೆ ಜೋಡಿಸಬೇಕೆಂದು ನೀವು ತಿಳಿದುಕೊಳ್ಳುವುದಾದರೆ ಇದು ಖಂಡಿತವಾಗಿಯೂ ನಿಮಗೆ ನೆರವಾಗುವುದು. ಅಡುಗೆ ಕೋಣೆಯ ಡ್ರಾವರ್ ಒಟ್ಟಾರೆಯಾಗಿದ್ದರೆ ಎಲ್ಲಾ ಸಾಮಾನುಗಳನ್ನು ಅದರಲ್ಲಿ ಇಡಲು ಸಾಧ್ಯವಿಲ್ಲ. ಮರದ ತುಂಡನ್ನು ಇಟ್ಟು ಡ್ರಾವರ್‍ನಲ್ಲಿ ಎರಡು ವಿಭಾಗಗಳನ್ನು ಮಾಡಿ. ಈಗ ಪಾತ್ರೆಗಳನ್ನು ಜೋಡಿಸುವುದು ತುಂಬಾ ಸುಲಭವಾಗಲಿದೆ. ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?
ಪಾತ್ರೆಗಳ ಶೇಖರಣೆ ಸೆಟ್
ನಿಯಮಿತವಾಗಿ ಬಳಸುವ ಪಾತ್ರೆಗಳು ತಕ್ಷಣ ನಿಮ್ಮ ಕೈಗೆ ಸಿಗಬೇಕು ಎಂದಿದ್ದರೆ ಆಗ ನೀವು ಪಾತ್ರೆಗಳ ಶೇಖರಣಾ ಸೆಟ್ ನ್ನು ಬಳಸಿ. ಒಂದು ಮೂಲೆಯಲ್ಲಿ ಈ ಸೆಟ್ ನ್ನು ಇಟ್ಟುಬಿಟ್ಟರೆ ಹೆಚ್ಚಿನ ಜಾಗ ವ್ಯರ್ಥವಾಗುವುದಿಲ್ಲ.



Click it and Unblock the Notifications



