For Quick Alerts
ALLOW NOTIFICATIONS  
For Daily Alerts

ಹೊಸ ಟ್ರಿಕ್ಸ್: ಮನೆಯ ಶೌಚಾಲಯ ಸ್ವಚ್ಛತೆಗೆ ಸಿಂಪಲ್ ಟಿಪ್ಸ್!

By Jaya subramanya
|

ಮನೆಯ ಸ್ವಚ್ಛತೆಯ ವಿಷಯದಲ್ಲಿ ಪ್ರತಿಯೊಂದು ಭಾಗವೂ ಒಳಗೊಂಡಿರುತ್ತದೆ. ಇದರಲ್ಲಿ ಬಾತ್‌ರೂಮ್ ಮತ್ತು ಟಾಯ್ಲೆಟ್ ((ಶೌಚಾಲಯ)ಕೂಡ ಒಂದು. ಈ ಭಾಗ ಸ್ವಚ್ಛವಾಗಿಲ್ಲ ಎಂದಾದಲ್ಲಿ ಮನೆಯೊಳಗೆ ರೋಗಗಳು ದಿಢೀರ್ ಆಗಿ ದಾಳಿ ಮಾಡಬಹುದು. ಆದ್ದರಿಂದ ಎರಡು ದಿನಕ್ಕೊಮ್ಮೆಯಾದರೂ ಈ ಸ್ಥಳಗಳ ಸ್ವಚ್ಛತೆಯನ್ನು ನೀವು ಕೈಗೊಳ್ಳಬೇಕಾಗುತ್ತದೆ.

ಇದಕ್ಕಾಗಿ ರಾಸಾಯನಿಕಗಳನ್ನು ನೀವು ಬಳಕೆ ಮಾಡುತ್ತೀರಿ ಅಲ್ಲವೇ? ಆದರೆ ಅವುಗಳು ಥಟ್ಟನೆ ಈ ಸ್ಥಳಗಳನ್ನು ಸ್ವಚ್ಛಮಾಡಿದರೂ ನಂತರ ನಿಮ್ಮ ಟಾಯ್ಲೆಟ್ ಅಥವಾ ಬಾತ್‌ರೂಮ್‌ಗಳ ಟೈಲ್ಸ್ ಹೊಳಪನ್ನು ಕಳೆಗುಂದಿಸಬಹುದು. ಟಾಯ್ಲೆಟ್ ಬೌಲ್ ಅನ್ನು ಕ್ರಿಮಿನಾಶಕಗಳನ್ನು ಬಳಸಿ ನೀವು ಸ್ವಚ್ಛಮಾಡುತ್ತೀರಾದರೂ ಇದು ನಂತರ ಕಲೆಯನ್ನು ಮೂಡಿಸಬಹುದು. ಹಾಗಿದ್ದರೆ ಹೊಳಪನ್ನು ಕಳೆದುಕೊಳ್ಳದಂತೆ ನೈಸರ್ಗಿಕ ವಿಧಾನಗಳಲ್ಲಿ ಪಾಟ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಹಾಗಿದ್ದರೆ ಇವುಗಳ ಸ್ವಚ್ಛತೆಗಾಗಿ ನೀವು ಪರಿಣಾಮಕಾರಿ ನೈಸರ್ಗಿಕ ವಿಧಾನಗಳನ್ನು ಸುಲಭವಾಗಿ ಅನುಸರಿಸಬಹುದಾಗಿದೆ. ಕೋಕಾ ಕೋಲಾವನ್ನು ಬಳಸಿ ಕೂಡ ಟಾಯ್ಲೆಟ್ ತೊಳೆಯಬಹುದು ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ಇಂತಹುದೇ ಕೆಲವೊಂದು ಉತ್ಪನ್ನಗಳನ್ನು ನಾವು ತಿಳಿಸುತ್ತಿದ್ದು ಬನ್ನಿ ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ...

ವಿನೇಗರ್

ವಿನೇಗರ್

ನಿಮ್ಮ ಟಾಯ್ಲೆಟ್ ಅನ್ನು ಸ್ವಚ್ಛವಾಗಿ ಫ್ಲಶ್ ಮಾಡಿಕೊಳ್ಳಿ. 10 ನಿಮಿಷಗಳ ನಂತರ, ಬ್ರಶ್ ಬಳಸಿ ಇದನ್ನು ತೊಳೆಯಿರಿ ಮತ್ತು ಒಂದು ಗ್ಲಾಸ್‌ನಷ್ಟು ವಿನೇಗರ್ ಅನ್ನು ಹಾಕಿ. ಬೌಲ್‌ನಲ್ಲಿ 15 ನಿಮಿಷ ವಿನೇಗರ್ ಹಾಗೆಯೇ ಇರಲಿ. ಪುನಃ ಬ್ರಶ್ ಬಳಸಿ ಇದನ್ನು ತೊಳೆದುಕೊಳ್ಳಿ. ಸಂಪೂರ್ಣವಾಗಿ ಆದ ನಂತರ ಫ್ಲಶ್ ಮಾಡಿ.

ಬೇಕಿಂಗ್ ಸೋಡಾ ಮತ್ತು ವಿನೇಗರ್

ಬೇಕಿಂಗ್ ಸೋಡಾ ಮತ್ತು ವಿನೇಗರ್

ರಾತ್ರಿ ಮಲಗುವುದಕ್ಕಿಂತ ಮುನ್ನ, ಟಾಯ್ಲೆಟ್ ಬೌಲ್‌ನಲ್ಲಿ ಎರಡು ಚಮಚಗಳಷ್ಟು ಬೇಕಿಂಗ್ ಸೋಡಾವನ್ನು ಸಿಂಪಡಿಸಿ. ರಾತ್ರಿ ಪೂರ್ತಿ ಇದು ಹೀಗೆಯೇ ಇರಲಿ. ಮರುದಿನ ಬೆಳಗ್ಗೆ, ಟಾಯ್ಲೆಟ್ ಅನ್ನು ಮೂರು ಬಾರಿ ಫ್ಲಶ್ ಮಾಡಿ. ವಿನೇಗರ್ ಅನ್ನು ಬೌಲ್‌ಗೆ ಹಾಕಿ ಮತ್ತು ಸ್ವಚ್ಛವಾಗಿ ಬ್ರಶ್ ಮಾಡಿ. ಬೌಲ್‌ನಲ್ಲಿರುವ ಯಾವುದೇ ಕಲೆಗಳನ್ನು ಇದು ಸರಳವಾಗಿ ನಿವಾರಿಸುತ್ತದೆ.

ಲಿಂಬೆ ರಸ ಮತ್ತು ಬೋರಾಕ್ಸ್

ಲಿಂಬೆ ರಸ ಮತ್ತು ಬೋರಾಕ್ಸ್

ನಿಮ್ಮ ಮನೆಯ ಎಂತಹ ಹಠಮಾರಿ ಕಲೆಯನ್ನು ಹೋಗಲಾಡಿಸಲು ಲಿಂಬೆಯನ್ನು ನಿಮಗೆ ಬಳಸಬಹುದಾಗಿದೆ. ಟಾಯ್ಲೆಟ್ ಬೌಲ್ ಅನ್ನು ಹೊಳೆಯುವಂತೆ ಮಾಡಲು, ಬೌಲ್‌ಗೆ ಒಂದು ಕಪ್‌ನಷ್ಟು ಬೋರಾಕ್ಸ್ ಅನ್ನು ಹಾಕಿ. ಬೋರಾಕ್ಸ್‌ಗೆ 2 ಲಿಂಬೆ ರಸಗಳನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಒಳಭಾಗವನ್ನು ಚೆನ್ನಾಗಿ ಫ್ಲಶ್ ಮಾಡಿ. ಸ್ಪಾಂಜ್ ಬಳಸಿ ಈ ಪೇಸ್ಟ್ ಅನ್ನು ಒಳಭಾಗಕ್ಕೆ ಸವರಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ರಶ್ ಮಾಡುವ ಮುನ್ನ ಫ್ಲಶ್ ಮಾಡಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಟಾಯ್ಲೆಟ್ ಬೌಲ್‌ಗೆ 3 ಚಮಚದಷ್ಟು ಬೇಕಿಂಗ್ ಸೋಡಾವನ್ನು ರಾತ್ರಿಯೇ ಹಾಕಿ. ರಾತ್ರಿ ಪೂರ್ತಿ ಈ ಮಿಶ್ರಣ ಹೀಗೆಯೇ ಇರಲಿ. ಮರುದಿನ ಬೆಳಗ್ಗೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿ ಬೌಲ್‌ನ ಬದಿಗಳನ್ನು ಸ್ಕ್ರಬ್ ಮಾಡಿ ಮತ್ತು ಬೌಲ್ ಪೂರ್ತಿ ಬೆಳ್ಳಗೆ ಹೊಳೆಯುವವರೆಗೆ ಫ್ಲಶ್ ಮಾಡಿ.

ವಿನೇಗರ್ ಮತ್ತು ಬೋರಾಕ್ಸ್

ವಿನೇಗರ್ ಮತ್ತು ಬೋರಾಕ್ಸ್

ಟಾಯ್ಲೆಟ್ ಅನ್ನು ಚೆನ್ನಾಗಿ ಫ್ಲಶ್ ಮಾಡಿಕೊಳ್ಳಿ. ಬೌಲ್‌ನ ಎರಡೂ ಭಾಗಕ್ಕೂ ಬೊರಾಕ್ಸ್ ಅನ್ನು ಹಚ್ಚಿ. ಬೋರಾಕ್ಸ್ ಮೇಲೆ ವಿನೇಗರ್ ಸ್ಪ್ರೇ ಮಾಡಿ ಈ ಮಿಶ್ರಣ ಬೌಲ್‌ನಲ್ಲಿ 30 ಕ್ಕಿಂತ ಹೆಚ್ಚು ನಿಮಿಷ ಹಾಗೆಯೇ ಇರಲಿ, ಬ್ರಶ್ ಮಾಡುವ ಮುನ್ನ ಚೆನ್ನಾಗಿ ಫ್ಲಶ್ ಮಾಡಿ.

English summary

Best way to clean toilet bowl stains

Cleaning that toilet bowl can be tiresome, especially if you want it to sparkle bright. To clean a toilet bowl, there are a lot of chemically based products that you can use that are available in the market. Take a look at how you can use these 5 awesome ingredients to make that toilet bowl look clean and appear bright..
Story first published: Thursday, May 5, 2016, 20:10 [IST]
X
Desktop Bottom Promotion