For Quick Alerts
ALLOW NOTIFICATIONS  
For Daily Alerts

ಮನೆಗೆ ಬಂದ ಅತಿಥಿಗಳ ಸತ್ಕಾರ ಹೇಗಿರಬೇಕು?

By Arpitha
|

ಅತಿಥಿ ದೇವೋ ಭವ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮುಖ್ಯವಾದುದು.ಮನೆಗೆ ಅತಿಥಿಗಳು ಬಂದಾಗ ಅಲ್ಲೊಂದು ಹಬ್ಬದ ವಾತಾವರಣ ಮೂಡುವುದು ಸಹಜ. ಹಾಗೆಯೇ ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದರೆ ಮನೆ ಕೂಡ ಅಷ್ಟೇ ಅಂದವಾಗಿ ಇರಬೇಕಾಗುತ್ತದೆ.

ಮನೆಗೆ ನೆಂಟರು ಬಂದಾಗ ನೀವು ಅಂಗಡಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಅತಿಥಿಗಳು ಬರುತ್ತಿದ್ದಾರೆ ಎಂದಾದರೆ ಅವರಿಗೆ ಉಳಿಯಲು ಅವಶ್ಯಕ ವಸ್ತುಗಳನ್ನು ಮೊದಲೇ ತಂದಿಡುವುದು ಸೂಕ್ತ. ಮನೆ ಸ್ವಚ್ಛವಾಗಿಟ್ಟು ಅತಿಥಿಗಳನ್ನು ಸ್ವಾಗತಿಸುವುದರ ಜೊತೆಗೆ ಅತಿಥಿಗಳಿದ್ದಾಗ ಮನೆಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಕೂಡ ಅಷ್ಟೇ ಮುಖ್ಯ.

ಅತಿಥಿ ಸತ್ಕಾರ ಎಂಬುದು ಒಂದು ಕಲೆ. ಮನೆಗೆ ನೆಂಟರು ಬಂದಾಗ ಮನೆ ನಿರ್ವಹಿಸುವುದು ಒಂದು ರಾತ್ರಿಯಲ್ಲಿ ಕಲಿಯುವ ಕೆಲಸವಲ್ಲ. ಕೆಲವೊಮ್ಮೆ ಅನಿರೀಕ್ಷಿತವಾಗಿ ಅತಿಥಿಗಳು ಆಗಮಿಸಿಬಿಡುತ್ತಾರೆ. ಆದ್ದರಿಂದ ಅತಿಥಿಗಳಿಗೆ ಬೇಕಾಗಬಹುದಾದ ಅಗತ್ಯವಸ್ತುಗಳನ್ನು ಕೈಗೆ ಸಿಗುವಂತೆ ಸದಾ ಸಿದ್ಧವಾಗಿರಿಸಿಕೊಳ್ಳುವುದು ಉತ್ತಮ.

ಕೆಲವೊಮ್ಮೆ ಸಾಕಷ್ಟು ಜನರು ಸೇರಿ ಒಟ್ಟಿಗೆ ಬಂದುಬಿಡಬಹುದು ಆಗೆಲ್ಲ ಅಗತ್ಯ ವಸ್ತುಗಳು ಸಿಗುವಂತಿದ್ದರೆ ಅನುಕೂಲವಾಗುತ್ತದೆ. ಈ ಕೆಳಗೆ ನೀಡಿರುವ ಟಿಪ್ಸ್ ಅನಿರೀಕ್ಷಿತವಾಗಿ ನೆಂಟರು ಬಂದಾಗ ಉಪಯೋಗಕ್ಕೆ ಬರುತ್ತದೆ. ಓದಿ ತಿಳಿದುಕೊಳ್ಳಿ. ಕಸದಿಂದ ರಸ - ಮನೆಯ ವಾಲ್ ಹ್ಯಾಂಗಿಂಗ್ ಹೀಗಿರಲಿ

Ways To Manage Home When Guests Come

ಸ್ಚಚ್ಛತೆ
ಮನೆಗೆ ಅತಿಥಿಗಳು ಬಂದಾಗ ಸ್ವಚ್ಛತೆ ಎಂಬುದು ಬಹಳ ಮುಖ್ಯ. ಮನೆಯಲ್ಲಿರುವ ಟಿವಿ,ಟಿಪಾಯಿ ಮತ್ತು ಟಾಯ್ಲೆಟ್‌ಗಳನ್ನು ದಿನನಿತ್ಯ ಸ್ವಚ್ಛಗೊಳಿಸಿದರೆ ಅತಿಥಿಗಳು ಬಂದಾಗ ಮುಜುಗರ ಪಡುವ ಅಗತ್ಯವಿರುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ ಕುಳಿತುಕೊಳ್ಳುವುದು ಟಿವಿಯ ಮುಂದೆ ಆಗಿರುವುದರಿಂದ ಆ ಜಾಗಗಳು ಸ್ವಚ್ಛವಾಗಿರುವುದು ಸೂಕ್ತ.

ಖಾಲಿ ಜಾಗವಿಟ್ಟಿರಿ
ಮನೆಯಲ್ಲಿ ಒಂದು ಬಾಸ್ಕೆಟ್ ಖಾಲಿ ಇಟ್ಟಿರಿ. ಮಕ್ಕಳಿರುವ ಮನೆಯಲ್ಲಿ ಆಟದ ಸಾಮಾನು, ಇನ್ನಿತರ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಅದಕ್ಕೆ ಸುಲಭ ಉಪಾಯವೆಂದರೆ ಒಂದು ಬಾಸ್ಕೆಟ್ ಖಾಲಿ ಇಟ್ಟುಕೊಂಡರೆ ನೆಂಟರು ಬಂದ ತಕ್ಷಣ ಬೇಡದ ವಸ್ತುಗಳನ್ನು ಅದಕ್ಕೆ ತುಂಬಿಸಿ ಮನೆಯನ್ನು ಅಂದಗೊಳಿಸಬಹುದು.

ಎಮೆರ್ಜೆನ್ಸಿ ಲೈಟ್
ಮನೆಗೆ ಅತಿಥಿಗಳು ಬಂದಾಗ ಮೂಲಭೂತ ಅಗತ್ಯಗಳ ಬಗ್ಗೆ ಗಮನವಿರಲಿ. ಎಮೆರ್ಜೆನ್ಸಿ ಲೈಟಿನ ವ್ಯಯಸ್ಥೆ ಅಗತ್ಯವಾಗಿ ಬೇಕಾಗುತ್ತದೆ. ಅನಿರೀಕ್ಷಿತವಾಗಿ ವಿದ್ಯುತ್ ಕಡಿತವಾದರೆ ಮನೆಗೆ ಬಂದ ಅತಿಥಿಗಳಿಗೆ ಅಡುಗೆ ಮಾಡಲು ಅಥವಾ ಕುಳಿತು ಮಾತನಾಡಲು ಮನೆಯಲ್ಲಿ ಲೈಟಿನ ವ್ಯಯಸ್ಥೆ ಇದ್ದರೆ ಒಳ್ಳೆಯದು.

ಟವೆಲ್ ಮತ್ತು ಇನ್ನಿತರ ಅಗತ್ಯ ವಸ್ತುಗಳು
ಕೆಲವು ಚೆನ್ನಾಗಿರುವ ಪಾತ್ರೆಗಳನ್ನು ಅತಿಥಿಗಳು ಬಂದಾಗ ಉಪಯೋಗಿಸಲು ಪಕ್ಕಕ್ಕೆ ಎತ್ತಿಡಿ. ಜೊತೆಗೆ ಟವೆಲ್ ಇನ್ನಿತರ ಅಗತ್ಯ ವಸ್ತುಗಳನ್ನು ಅತಿಥಿಗಳಿಗೆ ನೀಡಲು ಬೇರೆ ಇಟ್ಟಿರಿ.

ಗೆಸ್ಟ್ ರೂಂ
ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಅತಿಥಿಗಳಿಗೆ ಬೇರೆ ಕೊಠಡಿ ಇರುತ್ತದೆ. ಅತಿಥಿಗಳು ಮನೆಗೆ ಬಂದಾಗ ಅವರಿಗೋಸ್ಕರವೇ ಬೇರೆ ರೂಂ ನೀಡುವುದರಿಂದ ಅವರಿಗೂ ಅನುಕೂಲವಾಗುತ್ತದೆ. ಗೆಸ್ಟ್ ರೂಂ ಅನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಂಡರೆ ಸುಲಭವಾಗುತ್ತದೆ.

ಸ್ನ್ಯಾಕ್ಸ್
ಅಡುಗೆ ಮನೆಯಲ್ಲಿ ಕುರುಕಲು ತಿಂಡಿ ಅಥವಾ ಇನ್ನಿತರ ಸ್ನ್ಯಾಕ್ಸ್ ಇಟ್ಟುಕೊಂಡಿದ್ದರೆ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ಕೊಡಲು ಸುಲಭವಾಗುತ್ತದೆ ಅಥವಾ ಅತಿಥಿಗಳು ಬಂದಾಗ ಏನನ್ನಾದರೂ ಸುಲಭವಾಗಿ ತಯಾರಿಸಲು ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ಇಟ್ಟುಕೊಂಡಿರಿ.

English summary

Ways To Manage Home When Guests Come

India is a country where guests are treated like God! There is no doubt that everyone enjoys having people around. At the same time, you should make sure that your house is welcoming. You will not be able to run to the shop when there are guests at home. you should make sure that you have sufficient things in your house that are needed for a happy staying
X
Desktop Bottom Promotion