Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಂಚಿನ ಪ್ರತಿಮೆ ಅಥವಾ ವಿಗ್ರಹಗಳ ಸ್ವಚ್ಛತೆಗೆ ಸರಳ ಟಿಪ್ಸ್
ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಕಂಚಿನ ವಿಗ್ರಹ ಮತ್ತು ಪ್ರತಿಮೆಗಳನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಕಬ್ಬಿಣದಂತೆ ಕಂಚು ಸಹಾ ಸುಲಭವಾಗಿ ತೆರೆದ ಗಾಳಿಯಲ್ಲಿ ತುಕ್ಕು ಹಿಡಿಯುತ್ತದೆ. ಈ ತುಕ್ಕು ಗಾಢಹಸಿರು ಬಣ್ಣದಲ್ಲಿರುತ್ತದೆ. ಇದು ವಾಸ್ತವವಾಗಿ ತಾಮ್ರದ ಆಕ್ಸೈಡ್ ಆಗಿದೆ. ದಿನಗಳೆದಂತೆ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಸ್ವಚ್ಛಗೊಳಿಸಲು ಬಹಳ ಶ್ರಮ ತೆಗೆದುಕೊಳ್ಳುತ್ತದೆ. ಅದರಲ್ಲೂ ನಿಮ್ಮ ಇಷ್ಟದೇವರ ವಿಗ್ರಹಗಳು ಕಂಚಿನದ್ದಾದರೆ ಈ ತುಕ್ಕನ್ನು ನೋಡಿ ಮನ ಮುದುಡುತ್ತದೆ.
ಇವನ್ನು ಸ್ವಚ್ಛಗೊಳಿಸಲು ಕೆಲವು ಸುಲಭ ವಿಧಾನಗಳಿವೆ. ಇದಕ್ಕಾಗಿ ವಿಶೇಷ ಸಲಕರಣೆಗಳೇನೂ ಅಗತ್ಯವಿಲ್ಲ. ಸ್ವಚ್ಛವಾದ ಬಟ್ಟೆ ಅಥವಾ ಸ್ಪಂಜು ಮತ್ತು ಕೆಲವು ಮನೆಯಲ್ಲಿ ಲಭ್ಯವಿರುವ ಸಾಮಾಗ್ರಿಗಳು, ಮತ್ತು ಸ್ವಚ್ಛಗೊಳಿಸುವ ಮನಸ್ಸು ಹಾಗೂ ಕೊಂಚ ಸಮಯ. ಆದರೆ ಎಲ್ಲಾ ವಿಗ್ರಹಗಳು ಒಂದೇ ಪರಿಮಾಣದ ಲೋಹಗಳನ್ನು ಹೊಂದಿರುವುದಿಲ್ಲ. ಕೆಲವು ಮಿಶ್ರಲೋಹಗಳು ಸ್ವಚ್ಛಗೊಳಿಸುವ ರಾಸಾಯನಿಕಗಳಿಗೆ ವಿರುದ್ಧವಾದ ಪ್ರತಿಕ್ರಿಯೆ ನೀಡಬಹುದು.
ಆದ್ದರಿಂದ ಸ್ವಚ್ಛಗೊಳಿಸುವ ಮೊದಲು ಕಣ್ಣಿಗೆ ಕಾಣದ ತಳ ಅಥವಾ ಒಳಭಾಗವನ್ನು ಕೊಂಚ ಸ್ವಚ್ಛಗೊಳಿಸಿ ನೋಡಿ ಸುರಕ್ಷಿತ ಎಂದು ಕಂಡುಬಂದರೆ ಮಾತ್ರ ಹೊರಭಾಗವನ್ನು ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಲು ಉಪಯೋಗಿಸಲಾದ ಬಟ್ಟೆಯಲ್ಲಿ ಯಾವುದೇ ಲೋಹದ ತುಣುಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದರಿಂದ ಅನೈಚ್ಛಿಕವಾಗಿ ಗೀರು ಬಿದ್ದು ನಿಮ್ಮ ನೆಚ್ಚಿನ ವಿಗ್ರಹ ರೂಪಗೆಡಲು ಸಾಧ್ಯವಿದೆ. ಮಣ್ಣಿನ ಮೂರ್ತಿ ಶುಚಿಗೊಳಿಸಲು ಸುಲಭ ಟಿಪ್ಸ್

ಬಟ್ಟೆಯಿಂದ ಸ್ವಚ್ಛಗೊಳಿಸಿರಿ
ವಿಗ್ರಹಗಳ ಅತ್ಯುತ್ತಮ ಆರೈಕೆಯೆಂದರೆ ಆಗಾಗ ಬಟ್ಟೆಯಿಂದ ಸ್ವಚ್ಛಗೊಳಿಸುತ್ತಾ ಇರುವುದು. ಇದರಿಂದ ಧೂಳು ಮತ್ತು ಈಗತಾನೇ ರೂಪುಗೊಳ್ಳುತ್ತಿರುವ ತುಕ್ಕು ನಿವಾರಣೆಯಾಗಿ ವಿಗ್ರಹಗಳು ಲಕಲಕಿಸುತ್ತವೆ.
ಅಂಟುವಾಳ ಕಾಯಿ ಉಪಯೋಗಿಸಿ
ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ವಿಗ್ರಹಗಳನ್ನು ಮುಳುಗಿಸಿಡಿ. ಸುಮಾರು ಅರ್ಧ ಘಂಟೆ ಅಥವಾ ಒಂದು ಘಂಟೆಯ ಬಳಿಕ ವಿಗ್ರಹವನ್ನು ಹೊರತೆಗೆದು ಇದೇ ನೀರಿನಲ್ಲಿ ಅದ್ದಿದ ಹತ್ತಿಯ ಒರಟು ಬಟ್ಟೆಯಿಂದ ಕೊಂಚ ಒತ್ತಡ ನೀಡಿ ಒರೆಸಿ. ತುಕ್ಕು ಸುಲಭವಾಗಿ ನಿವಾರಣೆಯಾಗಿ ವಿಗ್ರಹಗಳು ತಮ್ಮ ಮೂಲಬಣ್ಣದಲ್ಲಿ ಹೊಳೆಯುತ್ತವೆ. ಅಂಟುವಾಳ ಕಾಯಿ ಸಿಗದೇ ಇದ್ದರೆ ಪಾತ್ರೆ ತೊಳೆಯುವ ದ್ರವವನ್ನು ಒಂದಕ್ಕೆ ಹತ್ತರಷ್ಟು ನಿಸ್ಸಾರಗಳಿಸಿ ಉಪಯೋಗಿಸಿ.
ಮಾರುಕಟ್ಟೆಯಲ್ಲಿ ದೊರಕುವ ದ್ರಾವಣ ಉಪಯೋಗಿಸಿ
ಮಾರುಕಟ್ಟೆಯಲ್ಲಿ ಕಂಚಿನ ವಿಗ್ರಹಗಳನ್ನು ಸ್ವಚ್ಛಗೊಳಿಸುವ ದ್ರಾವಣ ಮತ್ತು ಲೇಪನಗಳು ಲಭ್ಯವಿವೆ. ಇವುಗಳಲ್ಲಿ ನಿಮಗೆ ಲಭ್ಯವಿರುವ ಉತ್ತಮ ಗುಣಮಟ್ಟದ ದ್ರಾವಣವನ್ನು ಉಪಯೋಗಿಸಿ ಸ್ವಚ್ಛಬಟ್ಟೆಯಿಂದ ಒರೆಸುವ ಮೂಲಕ ವಿಗ್ರಹಗಳನ್ನು ಅಪ್ಪಟರೂಪಕ್ಕೆ ತರಬಹುದು.
ಲಿಂಬೆಹಣ್ಣಿನ ರಸ ಉಪಯೋಗಿಸಿ
ಲಿಂಬೆರಸವನ್ನು ಉಪಯೋಗಿಸಿಯೂ ಕಂಚಿನ ವಿಗ್ರಹಗಳು ಉತ್ತಮ ಹೊಳಪು ಪಡೆಯುತ್ತವೆ. ಆದರೆ ಲಿಂಬೆನೀರನ್ನು ಹಚ್ಚಿ ಸ್ವಚ್ಛಗೊಳಿಸಿದ ತಕ್ಷಣ ತಣ್ಣೀರಿನಿಂದ ತೊಳೆಯುವುದು ಅಗತ್ಯ. ಏಕೆಂದರೆ ಲಿಂಬೆಯ ಸಿಟ್ರಿಕ್ ಆಮ್ಲದ ಅಂಶ ಉಳಿದರೆ ಮತ್ತೆ ತುಕ್ಕು ಹಿಡಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಮೈದಾ, ಶಿರ್ಕಾ, ಉಪ್ಪಿನ ಲೇಪನ ಉಪಯೋಗಿಸಿ
ಸಮಪ್ರಮಾಣದಲ್ಲಿ ಮೈದಾಹಿಟ್ಟು, ಉಪ್ಪು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಶಿರ್ಕಾ ಸೇರಿಸಿ ಲೇಪನವನ್ನು ತಯಾರಿಸಿ. ಈ ಲೇಪನವನ್ನು ಇಡಿಯ ವಿಗ್ರಹವನ್ನು ಆವರಿಸುವಂತೆ ಮೆತ್ತಿ ಅರ್ಧ ಘಂಟೆ ಬಿಡಿ. ಬಳಿಕ ವಿಗ್ರಹವನ್ನು ನಲ್ಲಿಯ ನೀರು ಜೋರಾಗಿ ಬೀಳುವ ಘರ್ಷಣೆಗೆ ಒಳಪಡಿಸಿ ನಿವಾರಿಸಿ. ಬಳಿಕ ಸ್ವಚ್ಛವಾದ ಮತ್ತು ಒಣಬಟ್ಟೆಯಿಂದ ಒರೆಸಿ. ಇತ್ತೀಚೆಗೆ ದೊರಕುತ್ತಿರುವ ಮೈಕ್ರೋಫೈಬರ್ ಬಟ್ಟೆ ಇದಕ್ಕೆ ಅತ್ಯುತ್ತಮವಾಗಿದೆ.
ಸಲಹೆ: ವಿಗ್ರಹದ ಕೆಲವು ಸೂಕ್ಷ್ಮಸ್ಥಳಗಳಲ್ಲಿ ಬಟ್ಟೆ ತೂರುವುದಿಲ್ಲ. ಈ ಸ್ಥಳಗಳನ್ನು ಸ್ವಚ್ಛಗೊಳಿಸಲು ಹಳೆಯ ಬ್ರಶ್ ಉಪಯೋಗಿಸಿ.



Click it and Unblock the Notifications


