For Quick Alerts
ALLOW NOTIFICATIONS  
For Daily Alerts

ರಫ್ ಅಂಡ್ ಟಫ್‌ನಂತಿರುವ ಜೀನ್ಸ್ ಪ್ಯಾಂಟ್‌ಗಳನ್ನು ಒಗೆಯುವುದು ಹೇಗೆ?

By Super
|

ಕೆಲಸಗಾರರಿಗೆಂದು ಆವಿಶ್ಕರಿಸಲಾಗಿದ್ದ ದಪ್ಪ ಬಟ್ಟೆಯ ಜೀನ್ಸ್ ಈಗ ಎಲ್ಲರ ಅಚ್ಚುಮೆಚ್ಚಿನ ಉಡುಗೆಯಾಗಿದೆ. 1850ರ ಈ ಉಡುಗೆ ಭಾರತಕ್ಕೆ ಬಂದಿದ್ದು ತುಂಬಾ ತಡವಾಗಿ, ಅಂದರೆ ಸುಮಾರು ೮೦ರ ದಶಕದಲ್ಲಿ. ಆದರೆ ಶೀಘ್ರವೇ ಇಡಿಯ ಭಾರತದ ಜನತೆ ಇದನ್ನು ತಮ್ಮ ನಿತ್ಯದ ಉಡುಗೆಯಾಗಿ ಬಳಸತೊಡಗಿದ್ದಾರೆ. ಈ ಬಟ್ಟೆಯ ಆಯ್ಕೆ ಮಾಡಲು ಅಂದು ಜನರು ನೀಡುತ್ತಿದ್ದ ಏಕಮಾತ್ರ ಕಾರಣ - ವಾರಗಟ್ಟಲೇ ಹಾಕಿದರೂ ತೊಳೆಯುವ ಅಗತ್ಯವಿಲ್ಲ!

Tips To Follow When Washing Your Favourite Jeans

ಗಣಿಯ ಕೆಲಸಗಾರರ ಒರಟು ಬಳಕೆಯಿಂದ ಅಲ್ಲಲ್ಲಿ ಹರಿದಿರುತ್ತಿದ್ದ ಜೀನ್ಸ್ ಅನ್ನು ಹೋಲುವಂತೆಯೇ ಬೇಕೆಂದಲೇ ಅಲ್ಲಲ್ಲಿ ಹರಿದು ಮಾಸಿರುವಂತೆ ಕೃತಕವಾಗಿ ಬಣ್ಣಗೆಡಿಸಿರುವ ಜೀನ್ಸ್‌ಗಳು ಯುವಜನತೆಗೆ ಬಹುಪ್ರಿಯವಾಗಿದೆ. ಇದರ ಒಂದೇ ತೊಂದರೆ ಎಂದರೆ ಸುಲಭವಾಗಿ ತೊಳೆಯಲು ಸಾಧ್ಯವಿಲ್ಲದಿರುವುದು. ಇದಕ್ಕಾಗಿ ಬೋಲ್ಡ್ ಸ್ಕೈ ತಂಡ ಕೆಲವು ಮಾಹಿತಿಗಳನ್ನು ನೀಡುತ್ತಿದೆ.

ವಾಷಿಂಗ್ ಮೆಶೀನ್ ನ ಸೆಟ್ಟಿಂಗ್ 'ಸೌಮ್ಯ' ದಲ್ಲಿರಲಿ
ಸಾಮಾನ್ಯವಾಗಿ ಜೀನ್ಸ್ ಎಂದಾಕ್ಷಣ ಹೆಚ್ಚಿನವರು ಬಹಳ ಗಡುಸಾದ ಬಟ್ಟೆ, ಇದಕ್ಕೆ ವಾಷಿಂಗ್ ಮಶೀನ್ ನ ಸಂಯೋಜನೆ 'ಭಾರಿ'ಯಲ್ಲಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಜೀನ್ಸ್ ಸಹಾ ಸಾಮಾನ್ಯವಾದ ಹತ್ತಿಯ ಎಳೆಗಳಿಂದಲೇ ಮಾಡಲ್ಪಟ್ಟಿದೆ. ಆದರೆ ಇದ ನೇಯ್ಗೆಯ ವಿಶೇಷ ವಿನ್ಯಾಸದಿಂದಾಗಿಯೇ ಇದು ಹೆಚ್ಚಿನ ದೃಢತೆ ಪಡೆದಿರುವುದರಿಂದ ಸಾಮಾನ್ಯ ಸಂಯೋಜನೆಯೇ ಸಾಕು. ನಿಮ್ಮ ಮೆಶೇನ್ ನ ಸೆಟ್ಟಿಂಗ್ 'ಸೌಮ್ಯ' ಅಥವಾ cotton ನಲ್ಲಿರುವ ಮೂಲಕ ನಿಮ್ಮ ಬಟ್ಟೆ ಬಹುಕಾಲ ಬಣ್ಣಗೆಡದೇ ಮತ್ತು ಘಾಸಿಗೊಳ್ಳದೇ ಹೆಚ್ಚು ಬಾಳಿಕೆ ಬರುತ್ತದೆ.

ಒಗೆಯುವ ಪೌಡರ್ ಸಹಾ ಸೌಮ್ಯವೇ ಆಗಿರಲಿ
ಬೇರೆ ಬಟ್ಟೆಗಳಿಗೆ ಉಪಯೋಗಿಸುವ ಸೌಮ್ಯ ವಾಷಿಂಗ್ ಪೌಡರ್ ಅನ್ನೇ ಜೀನ್ಸ್‌ಗಳಿಗೂ ಉಪಯೋಗಿಸಿ. ಬ್ಲೀಚಿಂಗ್ ಪೌಡರ್ ಗಳನ್ನು ಎಂದೂ ಉಪಯೋಗಿಸಬೇಡಿ. ಹೆಚ್ಚು ಕಲೆಯಾದೆಡೆ ಮಾತ್ರ ಬೇರೆ ಬಟ್ಟೆಗಳಿಗೆ ಅಗತ್ಯವಿರುವಂತೆಯೇ ಜೀನ್ಸ್ ಗಳಿಗೂ ಬಟ್ಟೆಯ ಬ್ರಶ್ ಬಳಸಿ ತಿಕ್ಕುವುದು ಅಗತ್ಯವಾಗಿದೆ. ಬಟ್ಟೆಗಳ ಮೇಲಿನ ಕೆಸರಿನ ಕಲೆಗಳನ್ನು ಹೋಗಲಾಡಿಸುವುದು ಹೇಗೆ?

ಫ್ರಾಬ್ರಿಕ್ ಸಾಫ್ಟ್ ನರ್ ಬಳಸಿ
ಒಗೆತದ ಬಳಿಕ ಬಟ್ಟೆಗಳನ್ನು ಮೃದುವಾಗಿಸಲು Fabric softener ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಬಾರಿ ಒಗೆದ ಬಳಿಕ ಸ್ವಲ್ಪ Fabric softener ಮಿಶ್ರಣ ಮಾಡಿದ ನೀರಿನಲ್ಲಿ ಬಟ್ಟೆಗಳನ್ನು ಅದ್ದಿ ಒಣಗಿಸುವುದರಿಂದ ಜೀನ್ಸ್ ಹೊಸದರಂತೆಯೇ ಇರುತ್ತದೆ ಹಾಗೂ ಗಡುಸಾಗದೇ ನಯವಾದ ಇಸ್ತ್ರಿ ಪಡೆಯಲು ಮತ್ತು ತನ್ನ ಮೂಲ ಬಣ್ಣವನ್ನು ಉಳಿಸಿಕೊಳ್ಳುತ್ತದೆ.

ಸದಾ ತಣ್ಣೀರಿನಲ್ಲಿಯೇ ತೊಳೆಯಿರಿ
ಬಿಸಿನೀರಿನ ಉಪಯೋಗದಿಂದ ಜೀನ್ಸ್‌ನ ಬಣ್ಣಗೆಡುತ್ತದೆ. ಉಗುರುಬೆಚ್ಚನೆಯ ನೀರು ಸಹಾ ಜೀನ್ಸ್ ಗೆ ಒಳ್ಳೆಯದಲ್ಲ. ಬಿಸಿನೀರಿನಿಂದ ಬಟ್ಟೆ ಸಂಕುಚಿತಗೊಂಡು ಮುಂದಿನ ಬಾರಿ ತೊಡುವಾಗ ದಪ್ಪನಾಗಿರುವ ಭ್ರಮೆ ಉಂಟಾಗಬಹುದು. ಇದಕ್ಕಾಗಿ ಪ್ರತಿಬಾರಿಯೂ ತಣ್ಣೀರಿನಿಂದಲೇ ಜೀನ್ಸ್ ಗಳನ್ನು ತೊಳೆಯಿರಿ. ಒಂದು ವೇಳೆ ಬಿಸಿನೀರನ್ನು ಉಪಯೋಗಿಸಬೇಕಾದ ಇತರ ಬಟ್ಟೆಗಳ ಜೊತೆ ಒಗೆಯುವ ಪ್ರಮೇಯ ಬಂದರೆ ಜೀನ್ಸ್ ಗಳನ್ನು ಪ್ರತ್ಯೇಕವಾಗಿ ತಣ್ಣೀರಿನಲ್ಲಿಯೇ ತೊಳೆಯಿರಿ.

ಪ್ರತಿದಿನ ಒಗೆಯಬೇಡಿ
ಕೆಲವರಿಗೆ ಒಂದೆರಡು ಜೀನ್ಸ್‌ಗಳನ್ನೇ ದಿನಂಪ್ರತಿ ತೊಡುವ ಚಾಳಿಯಿರುತ್ತದೆ. ಒಂದೇ ಜೀನ್ಸ್ ಪ್ರತಿದಿನ ಒಗೆಯುವುದರಿಂದ ಬಣ್ಣ ಶೀಘ್ರವೇ ತೊಡೆಯಲು ತೊಡಗಿ ಅಂದಗೆಡುತ್ತದೆ. ಇದಕ್ಕಾಗಿ ವಾರಕ್ಕೊಮ್ಮೆ ಒಗೆಯುವುದು ಮೇಲು. ಶೂಗಳಿಂದ ಕೆಸರಿನ ಕಲೆಗಳನ್ನು ತೆಗೆಯುವುದು ಹೇಗೆ?

ಜೀನ್ಸ್‌ಗಳನ್ನು ತಣಿಸಿ ಬಳಸಿ
ಕೆಲವೊಮ್ಮೆ ಒಗೆದು ಇಸ್ತಿ ಮಾಡಿ ಇರಿಸಿದ ಜೀನ್ಸ್ ಗಳಿಂದಲೂ ಕಮಟು ವಾಸನೆ ಬರುತ್ತದೆ. ಏಕೆಂದರೆ ಗಾಳಿಯಲ್ಲಿರುವ ಹಲವು ಕ್ರಿಮಿಗಳಿಗೆ ಜೀನ್ಸ್ ಬಟ್ಟೆ ಹೇಳಿ ಮಾಡಿಸಿದ ತಾಣವಾಗಿದೆ. ಇವು ಸುಲಭವಾಗಿ ತೊಲಗುವುದಿಲ್ಲ. ಇದಕ್ಕಾಗಿ ನಿಮ್ಮ ಜೀನ್ಸ್ ಬಟ್ಟೆಗಳನ್ನು ಒಂದು ಪಾಲಿಥಿನ್ ಚೀಲದಲ್ಲಿ ಹಾಕಿ ಫ್ರಿಜ್ ನ ಫ್ರೀಜರ್ ನಲ್ಲಿಡಿ. ಕೆಲ ಘಂಟೆಗಳ ಬಳಿಕ ಜೀನ್ಸ್ ಹೊರತೆಗೆದು ಬಿಡಿಸಿ ಹರಡಿ. ಸಾಮಾನ್ಯ ತಾಪಮಾನಕ್ಕೆ ಬಂದ ಬಳಿಕ ಧರಿಸಿ ಓಡಾಡಿ.

English summary

Tips To Follow When Washing Your Favourite Jeans

Most of us literally live in jeans as it is a popular item of clothing. It is an important part of people's wardrobes. It is comfortable and can be washed after a long time as most people prefer wearing ragged and somewhat dirty jeans. How to wash jeans? Boldsky will help to keep them looking good and lasting for many years with the tips that we offer you. Take a look.
X
Desktop Bottom Promotion