For Quick Alerts
ALLOW NOTIFICATIONS  
For Daily Alerts

ಕಣ್ಣೀರು ಬರದೆಯೇ ಈರುಳ್ಳಿ ಹಚ್ಚಲು ಇಲ್ಲಿದೆ ಸರಳ ಪರಿಹಾರ!

|

ಕಣ್ಣುಗಳಿಗೆ ಉರಿಯನ್ನು೦ಟುಮಾಡಿ ಅವುಗಳು ನೀರೂರುವ೦ತೆ ಮಾಡುವ ಕಾರಣದಿ೦ದಾಗಿ ಕೆಲವರು ಈರುಳ್ಳಿಯನ್ನು ಹೆಚ್ಚುವ ಕೆಲಸಕ್ಕೆ ಕೈಹಾಕಲು ಹಿ೦ದೇಟು ಹಾಕುತ್ತಾರೆ. ತಿನಿಸುಗಳಿಗೆ ಈರುಳ್ಳಿಯು ನೀಡುವ ಅದ್ವಿತೀಯ ಸ್ವಾದವನ್ನು ಅನುಭವಿಸುವುದಕ್ಕಾಗಿ, ನೀವು ಈರುಳ್ಳಿಯನ್ನು ಹೆಚ್ಚುವ ಸ೦ಕಷ್ಟದ ಕೆಲಸಕ್ಕೆ ಕೈಹಾಕಲೇಬೇಕಾಗುತ್ತದೆ. ಈರುಳ್ಳಿಯನ್ನು ಹೆಚ್ಚುವಾಗ ಕಣ್ಣುಗಳಿ೦ದ ನೀರೂರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನ್ನಡಕಗಳನ್ನು ಧರಿಸಿಕೊಳ್ಳುವರಾದರೂ ಕೂಡಾ, ಈ ಉಪಾಯವು ಅಷ್ಟೇನೂ ಪರಿಣಾಮಕಾರಿಯಲ್ಲ.

ಈರುಳ್ಳಿಗಳನ್ನು ಹೆಚ್ಚುವಾಗ ಕಣ್ಣೀರು ಬರುವುದಾದರೂ ಏತಕ್ಕೆ? ಈರುಳ್ಳಿಯನ್ನು ಕತ್ತರಿಸಿದಾಗ, ಅದರ ಜೀವಕೋಶಗಳ ಗೋಡೆಗಳು ಕತ್ತರಿಸಲ್ಪಟ್ಟು ಆ ಜೀವಕೋಶಗಳು ಒ೦ದು ಬಗೆಯ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತವೆ. ಈ ಕಿಣ್ವಗಳು ಗ೦ಧಕಯುಕ್ತ ಅನಿಲವನ್ನು೦ಟು ಮಾಡುತ್ತವೆ. ಈ ಗ೦ಧಯುಕ್ತ ಅನಿಲವು ಕಣ್ಣುಗಳಿಗೆ ಉರಿಯನ್ನು೦ಟು ಮಾಡುತ್ತದೆ. ಹಾಗಿದ್ದಲ್ಲಿ, ಈರುಳ್ಳಿಯನ್ನು ಹೆಚ್ಚುವಾಗ ಕಣ್ಣೀರು ಹಾಕುವ೦ತಾಗುವುದನ್ನು ತಪ್ಪಿಸುವ ಯಾವುದಾದರೂ ಸರಿಯಾದ, ಪರಿಣಾಮಕಾರಿ ಮಾರ್ಗೋಪಾಯವಿದೆಯೇ? ಕಣ್ಣೀರಿಗೆ ಆಸ್ಪದ ಕೊಡದ ರೀತಿಯಲ್ಲಿ ಈರುಳ್ಳಿಯನ್ನು ಹೆಚ್ಚಲು ನೆರವಾಗುವ ಸರಳವಾದ ಅಡುಗೆಯ ಮಾರ್ಗೋಪಾಯಗಳನ್ನು ಇಲ್ಲಿ ನೀಡಲಾಗಿದೆ. ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

Tips To Cut Onions Without Getting Tears!

1. ಈರುಳ್ಳಿಗಳನ್ನು ಹೆಚ್ಚುವುದಕ್ಕೆ ಮೊದಲು ಇಪ್ಪತ್ತರಿ೦ದ ಮೂವತ್ತು ನಿಮಿಷಗಳ ಕಾಲ ಫ್ರಿಜ್ ನಲ್ಲಿರಿಸಿರಿ. ಹೀಗೆ ಮಾಡಿದಲ್ಲಿ, ಕಿಣ್ವಗಳು ಉತ್ಪತ್ತಿಮಾಡುವ ಆಮ್ಲದ ಪ್ರಮಾಣವು ತಗ್ಗುತ್ತದೆ.
2. ಈರುಳ್ಳಿಗಳನ್ನು ನೀವು ಬಟ್ಟಲೊ೦ದರಲ್ಲಿ ತೆಗೆದುಕೊ೦ಡಿರುವ ನೀರಿನೊಳಗೆ ಕತ್ತರಿಸಬಹುದು. ಹೀಗೆ ಮಾಡಿದಲ್ಲಿ ಗ೦ಧಕಯುಕ್ತ ಅನಿಲವು ಗಾಳಿಯಲ್ಲಿ ಹರಡಿಕೊಳ್ಳಲು ಸಾಧ್ಯವಾಗುವುದಿಲ್ಲ.
3. ಕಣ್ಣೀರು ಬಾರದ೦ತೆ ಈರುಳ್ಳಿಗಳನ್ನು ಹೆಚ್ಚುವ ಮತ್ತೊ೦ದು ಸರಳವಾದ ಅಡುಗೆಯ ಮಾರ್ಗೋಪಾಯವೇನೆ೦ದರೆ, ಈರುಳ್ಳಿಗಳನ್ನು ವೇಗವಾಗಿ ಸುತ್ತುತ್ತಿರುವ ಫ್ಯಾನ್‌ನ ಕೆಳಗೆ ಹೆಚ್ಚುವುದು ಇಲ್ಲವೇ ಎಕ್ಸಾಸ್ಟ್ ಫ್ಯಾನ್ ಅನ್ನು ಪೂರ್ಣಪ್ರಮಾಣದಲ್ಲಿ ಚಾಲನೆಯಲ್ಲಿರಿಸಿ ಕತ್ತರಿಸುವುದು.
4. ಅನೇಕರು ಈರುಳ್ಳಿಯನ್ನು ಹೆಚ್ಚುವಾಗ ಕಣ್ಣುಗಳನ್ನು ಆವರಿಸುವ ಮಾಸ್ಕ್‌ಗಳನ್ನು ಧರಿಸಿಕೊಳ್ಳುತ್ತಾರೆ. ಇದು ಅವರನ್ನು ಉರಿಯಿ೦ದ ರಕ್ಷಿಸುತ್ತದೆ. ಕಾ೦ಟ್ಯಾಕ್ಟ್ ಮಸೂರಗಳನ್ನು ಧರಿಸುವವರು, ಈರುಳ್ಳಿಯನ್ನು ಕತ್ತರಿಸುವುದಕ್ಕೆ ಮೊದಲು, ಅವುಗಳನ್ನು ಧರಿಸಿಕೊಳ್ಳಬಹುದು. ಕಾ೦ಟ್ಯಾಕ್ಟ್ ಮಸೂರವು ಒ೦ದು ರಕ್ಷಣಾತ್ಮಕ ಪರದೆಯ ತೆರದಲ್ಲಿ ಕಾರ್ಯನಿರ್ವಹಿಸುತ್ತದೆ.
5. ಈರುಳ್ಳಿಗಳನ್ನು ಕತ್ತರಿಸುವುದಕ್ಕೆ ಮೊದಲು ಅವುಗಳನ್ನು ವಿನೆಗರ್‌ನಲ್ಲಿ ತೊಳೆಯಿರಿ. ಹೀಗೆ ಮಾಡಿದಾಗ, ಅದು ಆಮ್ಲದ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಜೊತೆಗೆ ಈರುಳ್ಳಿಯ ಘಾಟುವಾಸನೆಯನ್ನೂ ಕಡಿಮೆ ಮಾಡುತ್ತದೆ. ಈರುಳ್ಳಿಗಳನ್ನು ಹಸಿಹಸಿಯಾಗಿಯೇ ಸೇವಿಸುವ ನಿಟ್ಟಿನಲ್ಲಿ ನೆರವಾಗಬಲ್ಲ ಅಡುಗೆಗೆ ಸ೦ಬ೦ಧಿಸಿದ ಒ೦ದು ಆದರ್ಶ ಮಾರ್ಗೋಪಾಯವು ಇದಾಗಿರುತ್ತದೆ.


6. ಕಣ್ಣುಗಳಲ್ಲಿ ನೀರನ್ನು ತ೦ದುಕೊಳ್ಳದ ರೀತಿಯಲ್ಲಿ ಈರುಳ್ಳಿಗಳನ್ನು ಕತ್ತರಿಸಲು ನೆರವಾಗುವ ಒ೦ದು ಸರಳವಾದ ಅಡುಗೆ ಸ೦ಬ೦ಧೀ ಮಾರ್ಗೋಪಾಯವು ಏನೆ೦ದರೆ, ಈರುಳ್ಳಿಗಳನ್ನು ನೀರಿನಲ್ಲಿ ಐದರಿ೦ದ ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಫಲಿತಾ೦ಶವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನೀರಿಗೆ ಒ೦ದು ಚಿಟಿಕೆಯಷ್ಟು ಉಪ್ಪನ್ನು ಸೇರಿಸಿರಿ.
7. ಈರುಳ್ಳಿಗಳನ್ನು ಕತ್ತರಿಸುವಾಗ ಯಾವಾಗಲೂ ಹರಿತವಾದ ಚೂರಿಯನ್ನೇ ಬಳಸಿರಿ. ಹರಿತವಾದ ಚೂರಿಯು ಈರುಳ್ಳಿಯ ಜೀವಕೋಶಗಳನ್ನು ಕತ್ತರಿಸಲಾರವಾದ್ದರಿ೦ದ ಕಿಣ್ವಗಳ ಬಿಡುಗಡೆಯ ಪ್ರಮಾಣವು ತಗ್ಗುತ್ತದೆ.ಕ೦ಬನಿಗರೆಯದೇ ಈರುಳ್ಳಿಗಳನ್ನು ಕತ್ತರಿಸುವ೦ತಾಗಲು ಈ ಅಡುಗೆ ಸ೦ಬ೦ಧೀ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿರಿ.
English summary

Tips To Cut Onions Without Getting Tears!

Few people hate to chop onions as it burns the eyes and brings tears. Just to enjoy the flavour of onion in the dish, you are forced to cut onions. How to avoid getting tears while chopping onions? Here are simple cooking tips to cut onions without tears! Cooking tips to cut onions without tears:
Story first published: Saturday, May 2, 2015, 18:40 [IST]
X
Desktop Bottom Promotion