For Quick Alerts
ALLOW NOTIFICATIONS  
For Daily Alerts

ಮನೆಯ ಮರದ ಪರಿಕರಗಳ ಸ್ವಚ್ಛತೆಗೆ ಸರಳ ಸೂತ್ರ

|

ಅಡುಗೆ ಮನೆಯಲ್ಲಿನ ಪರಿಕರಗಳಲ್ಲಿ ಹೆಚ್ಚಿನವುಗಳನ್ನು ಲೋಹ ಮತ್ತು ಪ್ಲಾಸ್ಟಿಕ್ಕಿನ ವಸ್ತುಗಳು ಆವರಿಸಿಕೊಂಡು ದಶಕಗಳೇ ಕಳೆದಿವೆ. ಆದರೆ ಕೆಲವು ಪರಿಕರಗಳು ಮಾತ್ರ ಈಗಲೂ ಮರದ್ದೇ ಆಗಿರುವುದು ಇವುಗಳ ಜನಪ್ರಿಯತೆಯನ್ನು ಸಾರುತ್ತವೆ. ಉದಾಹರಣೆಗೆ ಲಟ್ಟಣಿಗೆ, ಚಪಾತಿ ಲಟ್ಟಿಸುವ ಮಣೆ, ಸೌಟು, ದೋಸೆ ಮಗುಚಿ ಹಾಕಲು ಉಪಯೋಗಿಸುವ ಸಟ್ಟುಗ, ನಾನ್ ಸ್ಟಿಕ್ ಪಾತ್ರೆಗಳಿಗೆ ಬಳಸುವ ಚಮಚ ಇತ್ಯಾದಿಗಳು. ಅಡುಗೆ ಮನೆಯ ಸಿಂಕ್‌ನ ಸ್ವಚ್ಛತೆಗೆ ಇಲ್ಲಿದೆ ಸರಳ ಟಿಪ್ಸ್

ವರ್ಷಗಟ್ಟಲೆ ಉಪಯೋಗಿಸಲು ಸಂಗ್ರಹಿಸಿರುವ ಉಪ್ಪಿನಕಾಯಿ ಜಾಡಿಯಲ್ಲಿಯೂ ಮರದ ಚಮಚವನ್ನೇ ಬಳಸುವಂತೆ ಕೆಲವರು ಸಲಹೆ ನೀಡುತ್ತಾರೆ. ಏಕೆಂದರೆ ಲೋಹದ ಚಮಚವನ್ನು ಬಳಸುವುದರಿಂದ ಆ ಉಪ್ಪಿನಕಾಯಿಯಲ್ಲಿ ಹುಳ ಬೀಳುತ್ತದೆ. ಇದಕ್ಕೆ ವೈಜ್ಞಾನಿಕಾದ ಆಧಾರ ಇಲ್ಲವಾದರೂ ಹಿರಿಯರ ಅನುಭವದ ಪ್ರಕಾರ ಈ ಮಾತು ಸತ್ಯವಾಗಿದೆ.

ಆದರೆ ಸತತ ಬಳಕೆಯಿಂದ ಇವುಗಳು ಬಣ್ಣಗೆಟ್ಟು ಎಷ್ಟು ತೊಳೆದರೂ ಹಳೆಯ ಸಾರಿನ ವಾಸನೆಯನ್ನು ಹೊರಡಿಸುತ್ತಿರುತ್ತವೆ. ನಿಮ್ಮ ನೆಚ್ಚಿನ ಈ ಪರಿಕರಗಳನ್ನು ಎಸೆಯಲೂ ಮನಸುಬಾರದೇ ಕಮಟು ವಾಸನೆಯ ಪರಿಣಾಮವಾಗಿ ಬಳಸಲೂ ಆಗದೆ ಇರುವ ಇಬ್ಬಂದಿಯನ್ನು ಇಂದು ನೀಡಿರುವ ಕೆಲವು ಸಲಹೆಗಳು ದೂರ ಮಾಡುತ್ತವೆ. ಪಾತ್ರೆ ತೊಳೆಯುವುದೇ ಸಮಸ್ಯೆ ಆಗಿ ಬಿಟ್ಟಿದೆ! ಏನು ಮಾಡ್ಲಿ?

ಉದಾಹರಣೆಗೆ ಲಿಂಬೆಹಣ್ಣಿನಿಂದ ಉಜ್ಜಿದ ಮರದ ಸೌಟು ಕೆಲವೇ ಕ್ಷಣಗಳಲ್ಲಿ ತನ್ನ ಹಳೆಯ ವಾಸನೆಯನ್ನು ಕಳೆದುಕೊಂಡು ಹೊಚ್ಚ ಹೊಸತರಂತಾಗುತ್ತದೆ. ಅಂತೆಯೇ ಶಿರ್ಕಾ ಸಹಾ ಮರದ ವಾಸನೆಯನ್ನು ತೆಗೆಯುವ ಇನ್ನೊಂದು ಉತ್ತಮ ಉಪಾಯವಾಗಿದೆ. ಇದರ ಬಳಕೆಯ ಬಗ್ಗೆ ಕೆಳಗಿನ ಸ್ಲೈಡ್ ಶೋ ನಿಮಗೆ ನೆರವು ನೀಡಲಿದೆ.

ಲಿಂಬೆ

ಲಿಂಬೆ

ಮರದ ಪರಿಕರಗಳ ಹೊರತಾಗಿ ಸ್ಟ್ರೀಲ್, ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನೂ ಲಿಂಬೆಯ ರಸ ಸ್ವಚ್ಛಗೊಳಿಸಬಲ್ಲುದು. ಇದಕ್ಕಾಗಿ ಲಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿ ಒಂದು ದೊಡ್ಡ ಪಾತ್ರೆಯಲ್ಲಿರುವ ಕುದಿಯುವ ನೀರಿಗೆ ಸೇರಿಸಿ. ಈ ನೀರಿಗೆ ನಿಮ್ಮ ಮರದ ಪರಿಕರಗಳನ್ನು ಮುಳುಗಿಸಿ. ಮರದ ಪರಿಕರಗಳು ನೀರಿನಲ್ಲಿ ತೇಲುವ ಕಾರಣ ಭಾರದ ಬೇರಾವುದೋ ವಸ್ತುವೊಂದನ್ನು ಇಟ್ಟು ಪೂರ್ತಿಯಾಗಿ ಮುಳುಗುವಂತೆ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ

ಲಿಂಬೆ

ಹದಿನೈದು ನಿಮಿಷ ಈ ಪಾತ್ರೆಗಳು ಹೀಗೇ ಮುಳುಗಿರಲಿ. ನಂತರ ತಣ್ಣೀರಿಗೆ ಒಡ್ಡದೇ ಕೇವಲ ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ಒರೆಸಿ ಬಿಸಿಲಿನಲ್ಲಿಡಿ. ಅರ್ಧ ಗಂಟೆಯ ಬಳಿಕ ಪಾತ್ರೆಯನ್ನು ಉಲ್ಟಾ ಮಾಡಿ ಇನ್ನೊಂದು ಬದಿಯೂ ಒಣಗುವಂತೆ ಮಾಡಿ. ಈಗ ನಿಮ್ಮ ಮರದ ಪಾತ್ರೆಗಳು ಹೊಚ್ಚ ಹೊಸತರಂತೆ ಮೆರುಗು ಪಡೆದಿರುತ್ತವೆ.

ವಿನೇಗರ್ ಅಥವಾ ಶಿರ್ಕಾ

ವಿನೇಗರ್ ಅಥವಾ ಶಿರ್ಕಾ

ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ಶಿರ್ಕಾ ಸೇರಿಸಿ. ಇದಕ್ಕೆ ಒಂದು ದೊಡ್ಡ ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ. ಈಗ ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಹಿಂಡಿ. ಈ ಹತ್ತಿಯುಂಡೆಯಿಂದ ನಿಮ್ಮ ಮರದ ಪಾತ್ರೆಗಳನ್ನು ಉಜ್ಜುತ್ತಾ ಸ್ವಚ್ಛಗೊಳಿಸಿ.

ವಿನೇಗರ್ ಅಥವಾ ಶಿರ್ಕಾ

ವಿನೇಗರ್ ಅಥವಾ ಶಿರ್ಕಾ

ಪಾತ್ರೆಗಳ ಒಳಭಾಗಕ್ಕೆ ಎರಡು ಮೂರು ಬಾರಿ ಉಪಯೋಗಿಸಿ. ಬಳಿಕ ನೆರಳಿನಲ್ಲಿ ಒಣಗಿಸಿ. ಒಂದೇ ಪ್ರಯತ್ನದಲ್ಲಿ ವಾಸನೆ ಹೋಗದಿದ್ದರೆ ಇನ್ನೊಂದೆರಡು ಬಾರಿ ಪುನರಾವರ್ತಿಸಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ವಾಸನೆ ದೂರವಾಗುತ್ತದೆ.

ಉಪ್ಪು

ಉಪ್ಪು

ಉಪ್ಪು ಸಹಾ ಮರದ ವಾಸನೆಯನ್ನು ಹೋಗಲಾಡಿಸಲು ಮತ್ತು ದೃಢತೆ ನೀಡಲು ಉತ್ತಮವಾದ ಮಾಧ್ಯಮವಾಗಿದೆ. ಇಂದಿಗೂ ಕರಾವಳಿಯ ಜನರು ಸಾಂಪ್ರಾದಾಯಿಕ ದೋಣಿಗಳನ್ನು ತಯಾರಿಸಲು ಉಪಯೋಗಿಸುವ ಮರವನ್ನು ಕಡಲತೀರದ ಉಪ್ಪುನೀರಿನಲ್ಲಿ ಕೆಲ ತಿಂಗಳವರೆಗೆ ಮುಳುಗಿಸಿಡುತ್ತಾರೆ. ಇದು ಮರವನ್ನು ಸೀಳದಂತೆ ದೃಢವಾಗಿಸುವ ಜೊತೆಗೇ ನೀರನ್ನು ಹೀರದಂತೆಯೂ ಮಾಡುತ್ತದೆ. ಮನೆಯ ಮರದ ವಸ್ತುಗಳಿಗಾಗಿ ಒಂದು ದೊಡ್ಡ ಪಾತ್ರೆಯಲ್ಲಿ ಮರದ ಪಾತ್ರೆಗಳನ್ನು ಮುಳುಗುವಷ್ಟು ನೀರು ಹಾಕಿ ಕುದಿಸಿ. ಈ ನೀರಿಗೆ ಹತ್ತು ಲೀಟರಿಗೆ ಕಾಲು ಕೇಜಿಯಷ್ಟು ಉಪ್ಪನ್ನು ಅಗತ್ಯ ಪ್ರಮಾಣದಲ್ಲಿ ಸೇರಿಸಿ.

ಉಪ್ಪು

ಉಪ್ಪು

ನೀರು ಕುದಿಬಂದ ಬಳಿಕ ಉರಿಯನ್ನು ತಗ್ಗಿಸಿ ಐದು ನಿಮಿಷಗಳವರೆಗೆ ಕುದಿಯಲು ಬಿಡಿ. ಮರದ ವಸ್ತುಗಳು ನೀರಿನಿಂದ ಹೊರಗೆ ತೇಲುತ್ತಿದ್ದರೆ ಭಾರವಾದ ಮುಚ್ಚಳ ಅಥವಾ ಬೇರಾವುದಾದರೂ ವಸ್ತುವಿನಿಂದ ಮುಳುಗುವಂತೆ ಮಾಡಿ. ಐದು ನಿಮಿಷದ ಬಳಿಕ ಹೊರತೆಗೆದು ನೀರು ಬಸಿಯುವಂತೆ ಮಾಡಿ. ಉಳಿದ ನೀರನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ತೆಗೆಯಿರಿ. ಬಳಿಕ ಬಿಸಿಲಿನಲ್ಲಿ ಇಡಿಯ ದಿನ ಒಣಗಿಸಿ. ಅರ್ಧ ದಿನದ ಬಳಿಕ ಉಲ್ಟಾ ಮಾಡಿ ಇನ್ನೊಂದು ಬದಿಯನ್ನು ಒಣಗಿಸಿ.

ಸಿಟ್ರಿಕ್ ಆಮ್ಲವಿರುವ ಹಣ್ಣುಗಳು

ಸಿಟ್ರಿಕ್ ಆಮ್ಲವಿರುವ ಹಣ್ಣುಗಳು

ಒಂದು ವೇಳೆ ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಸಿಟ್ರಿಕ್ ಆಮ್ಲವಿರುವ ಬೇರೆ ಹಣ್ಣುಗಳನ್ನೂ ಉಪಯೋಗಿಸಬಹುದು. ದೊಡ್ಡಲಿಂಬೆ, ಚಕ್ಕೋತ, ಮೂಸಂಬಿ ಮೊದಲಾದ ಯಾವುದೇ ಹಣ್ಣನ್ನು ಮೇಲಿನ ಲಿಂಬೆಹಣ್ಣಿನಲ್ಲಿ ವಿವರಿಸಿರುವ ವಿಧಾನ ಬಳಸಿ ಉಪಯೋಗಿಸಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

ಸಮಪ್ರಮಾಣದಲ್ಲಿ ಲಿಂಬೆರಸ ಮತ್ತು ಅಡುಗೆ ಸೋಡಾ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಒಂದು ಬಟ್ಟೆ ಅಥವಾ ಹತ್ತಿಯುಂಡೆಯನ್ನು ಉಪಯೋಗಿಸಿ ಮರದ ಪಾತ್ರೆಗಳ ಎರಡು ಬದಿಗೆ ತೆಳುವಾಗಿ ಹಚ್ಚಿ ಒಳಭಾಗ ಕಾಣುವಂತೆ ಬಿಸಿಲಿನಲ್ಲಿ ಹದಿನೈದು ನಿಮಿಷ ಇಡಿ.

ಅಡುಗೆ ಸೋಡಾ

ಅಡುಗೆ ಸೋಡಾ

ಹತ್ತು ನಿಮಿಷವಾದ ಬಳಿಕ ಉಲ್ಟಾ ಮಾಡಿ ಹೊರಬದಿಗೂ ಸೂರ್ಯನ ರಶ್ಮಿ ಬೀಳುವಂತೆ ಮಾಡಿ. ನಂತರ ಬಿಸಿನೀರಿನಲ್ಲಿ ಕೊಂಚ ಹೊತ್ತು ನೆನೆಯಲಿಟ್ಟು ನಂತರ ಬಟ್ಟೆ ಅಥವಾ ಪಾತ್ರೆಯುಜ್ಜುವ ಬ್ರಶ್ ಉಪಯೋಗಿಸಿ ನಯವಾಗಿ ತೊಳೆದು ಒರೆಸಿ ನೆರಳಿನಲ್ಲಿ ಒಣಗಲು ಬಿಡಿ.

English summary

Tips To Clean Wooden Kitchen Utensils

Most of us use wooden spoons, forks and ladels at home right? Take a walk to your kitchen and smell your wooden spoon or fork. Does it smell of curry, does it smell stale and does it look old and yucky? Well, worry not as we have a few tips on how you can clean your wooden kitchen utensils at home with the help of kitchen ingredients.Take a look at some of the tips to follow in order to clean your kitchen utensils today:
X
Desktop Bottom Promotion