For Quick Alerts
ALLOW NOTIFICATIONS  
For Daily Alerts

ಸುಟ್ಟ ಗ್ಯಾಸ್ ಸ್ಟೌವ್ ಫಳ-ಫಳ ಹೊಳೆಯಲು ಸ್ವಚ್ಛತಾ ಮಾರ್ಗಗಳು

By Super
|

ನೀವು ಅಡುಗೆ ಮಾಡುವಾಗ ಅಕ್ಕ ಪಕ್ಕ ಗಲೀಜು ಆಗುವುದು ಸಹಜ. ನೀವು ಮಾಡುವ ಅಡುಗೆಯನ್ನು ಮೊದಲು ಬಡಿಸುವುದು ಸ್ಟೌವ್ ಮೇಲೆಯೇ. ಅಡುಗೆಯನ್ನು ಮಾಡಿ ಮುಗಿಸಿದ ಮೇಲೆ ಸ್ಟೌವನ್ನು ಹೇಗೆ ಸ್ವಚ್ಛಗೊಳಿಸುವುದು ಎಂಬುದುರ ಕುರಿತು ಮೊದಲು ನೀವು ಆಲೋಚಿಸುವಿರಿ. ಏಕೆಂದರೆ ಅಡುಗೆ ಮಾಡುವುದು ಒಂದು ಕೆಲಸವಾದರೆ, ಅದರಿಂದ ಸ್ಟೌವ್ ಮೇಲೆ ಆಗಿರುವ ಕಲೆಗಳನ್ನು ಮತ್ತು ಕೊಳೆಗಳನ್ನು ನಿವಾರಿಸುವುದು ಮತ್ತೊಂದು ಕೆಲಸ.

ಸ್ಟೌವ್ ಗಲೀಜಾಗಿದ್ದರೆ, ಮತ್ತೆ ಅಡುಗೆ ಮಾಡುವ ಮನಸ್ಸು ಸಹ ನಮಗೆ ಬರುವುದಿಲ್ಲ. ಅದರಿಂದಲೇ ನಮ್ಮ ಮನಸ್ಸಿಗೆ ಕಿರಿಕಿರಿಯುಂಟಾಗುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ನಾವು ಇಷ್ಟಪಡುತ್ತೇವೆ. ಹಾಗಾದರೆ ಸ್ಟೌವ್ ಮೇಲೆ ಇರುವ ಕೊಳೆಯನ್ನು ಮತ್ತು ಅಡುಗೆ ಮಾಡುವಾಗ ಆದ ಗಲೀಜನ್ನು ಬೇಗ ಹೇಗೆ ನಿವಾರಿಸಿಕೊಳ್ಳುವುದು? ಅದೇನು ದೊಡ್ಡ ವಿಷಯ ಬಿಡಿ, ಎಂತಹ ಕಠಿಣ ಕೊಳೆಯೇ ಆಗಿರಲಿ, ಅದನ್ನು ನಿವಾರಿಸಲು ಸಹ ನಿವಾರಣೋಪಾಯಗಳು ಇರುತ್ತವೆ.

ಅದಕ್ಕಾಗಿ ನೀವು ಯಾವುದೇ ಬಂಡವಾಳವನ್ನು ಹೂಡಬೇಕಾದ ಅವಶ್ಯಕತೆಯೇ ಇಲ್ಲ. ಅದಕ್ಕೆ ಬೇಕಾದ ಪದಾರ್ಥಗಳು ಮನೆಯಲ್ಲಿಯೇ ಸಿಗುತ್ತವೆ. ಆದರೆ ಅವುಗಳನ್ನೆಲ್ಲ ಒಟ್ಟು ಮಾಡಿಕೊಂಡು ಅದರಿಂದ ನಿಮ್ಮ ಕೆಲಸಗಳನ್ನು ನೀವು ಮಾಡಿಕೊಳ್ಳಬೇಕು ಅಷ್ಟೇ.

Simple Ways To Clean A Burnt Stove

ಒಂದು ವೇಳೆ ನಿಮ್ಮ ಬಳಿ ಗ್ಲಾಸ್ ಸ್ಟೌವ್ ಟಾಪ್ ಇದ್ದಲ್ಲಿ, ಅಡುಗೆಯಾದ ನಂತರ ಅದು ತಣ್ಣಗಾಗಲು ಸ್ವಲ್ಪ ಕಾಲಾವಕಾಶವನ್ನು ನೀಡಿ. ಇಲ್ಲವಾದಲ್ಲಿ ಆ ಗ್ಲಾಸ್ ಟಾಪ್‍ಗೆ ಹಾನಿಯಾಗಬಹುದು. ಅದೇ ಸಮಯದಲ್ಲಿ ಇದನ್ನು ಸ್ವಚ್ಛಗೊಳಿಸಲು ಅಗತ್ಯವಾಗಿರುವ ವಸ್ತುಗಳನ್ನು ನೀವು ಅಣಿಗೊಳಿಸಿಕೊಳ್ಳಬಹುದು. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಬಿಸಿ ನೀರು, ದ್ರಾವಣ, ಪಾತ್ರೆ ತೊಳೆಯುವ ಪೌಡರ್/ಸೋಪ್, ಬೇಕಿಂಗ್ ಸೋಡಾ, ವಿನೇಗರ್, ನಿಂಬೆರಸ, ನೀರು ಹೀರಿಕೊಳ್ಳುವಂತಹ ಬಟ್ಟೆ ಮತ್ತು ಟೂಥ್‍ಬ್ರಷ್. ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಫಲಪ್ರದ ಸಲಹೆ

ಈ ವಸ್ತುಗಳು ನಿಮ್ಮ ಸ್ಟೌವ್ ಮೇಲೆ ಇರುವ ಸುಟ್ಟ ಕಲೆಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಇವುಗಳ ಬಳಕೆಯಿಂದ ಕಲೆಗಳನ್ನು ನಿವಾರಿಸಬಹುದು ಮತ್ತು ಮುಂದೆ ಆಗಬಹುದಾದ ಕಲೆಗಳಿಂದಲು ರಕ್ಷಣೆಯನ್ನು ಪಡೆಯಬಹುದು. ಇವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾರ್ಗೋಪಾಯಗಳು, ಒಮ್ಮೆ ನೋಡಿ.

Simple Ways To Clean A Burnt Stove

ಬಿಸಿ ನೀರು ಮತ್ತು ಡಿಶ್ ವಾಶ್

ಇದು ಸ್ಟೌವ ಮೇಲೆ ಉಂಟಾಗಿರುವ ಕಲೆಗಳನ್ನು ನಿವಾರಿಸಲು ಇರುವ ಅತ್ಯಂತ ಸುಲಭವಾದ ಮಾರ್ಗವಾಗಿದೆ. ಬಿಸಿ ನೀರು ಮತ್ತು ಪಾತ್ರೆ ತೊಳೆಯುವ ಡಿಶ್ ವಾಶ್ ಪೌಡರ್/ಸೋಪ್‍ನಿಂದ ನೊರೆಯಾಡುವ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಿ. ಆ ಮಿಶ್ರಣವನ್ನು ಕಲೆಗಳು ಇರುವ ಜಾಗದಲ್ಲಿ ಚಿಮುಕಿಸಿ, ಸ್ವಲ್ಪ ಕಾಲ ನೆನೆಯಲು ಬಿಡಿ. ಆ ನಂತರ ಇದನ್ನು ಒಂದು ಹತ್ತಿಯ ಬಟ್ಟೆಯಿಂದ ಸುಲಭವಾಗಿ ಒರೆಸಿಕೊಳ್ಳಬಹುದು. ಈ ಕೆಲಸವನ್ನು ಮುಗಿಸಲು ಕೊನೆಯದಾಗಿ ಒಣ ಬಟ್ಟೆಯಿಂದ ಮತ್ತೆ ಒರೆಸಿ.

ಬೇಕಿಂಗ್ ಸೋಡಾ ಮತ್ತು ವಿನೇಗರ್

ಬೇಕಿಂಗ್ ಸೋಡಾ ಮತ್ತು ವಿನೇಗರ್ ಸೇರಿಸಿದ ಮಿಶ್ರಣದಿಂದಲೂ ಸಹ ನೀವು ನಿಮ್ಮ ಸ್ಟೌವ್‍ನ ಕಲೆಗಳನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ಮೊದಲು ಸೋಡಾವನ್ನು ಕಲೆಗಳು ಇರುವ ಜಾಗದಲ್ಲಿ ಮೊದಲು ಚಿಮುಕಿಸಿ, ಇದು ಸಂಪೂರ್ಣವಾಗಿ ಆವರಿಸಿದ ನಂತರ, ಅದರ ಮೇಲೆ ವಿನೇಗರ್ ಅನ್ನು ಚಿಮುಕಿಸಿ. ಆಗ ಇವುಗಳ ನಡುವೆ ರಾಸಾಯನಿಕ ಪ್ರಕ್ರಿಯೆಯು ಆರಂಭವಾಗುತ್ತದೆ. ಅದರ ಪರಿಣಾಮವಾಗಿ ನೀರಿನ ಗುಳ್ಳೆಗಳು ಬರಲು ಆರಂಭಿಸುತ್ತವೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೊರೆಯು ಸಹ ಬರಲಾರಂಭಿಸುತ್ತದೆ. ಇದನ್ನು ಹಾಗೆಯೇ 15 ನಿಮಿಷಗಳ ಕಾಲ ಬಿಡಿ. ಹೀಗೆ ಮಾಡಲು ನಿಮಗೆ ಸ್ವಲ್ಪ ತಾಳ್ಮೆಯ ಅಗತ್ಯವಿರುತ್ತದೆ. ಈಗ ಒಂದು ಟೂಥ್‍ಬ್ರಷ್ ಸಹಾಯದಿಂದ ಕಲೆಗಳನ್ನು ಉಜ್ಜಿ. ಆನಂತರ ಒಂದು ಮೃದುವಾದ ನೀರು ಹೀರುವಂತಹ ಬಟ್ಟೆಯಿಂದ ಇದನ್ನು ಒರೆಸಿ. ಕೊನೆಗೆ ಒಂದು ಒಣ ಬಟ್ಟೆಯಿಂದ ಒರೆಸಿ. ಆಗ ನಿಮ್ಮ ಸ್ಟೌವ್ ಫಳ ಫಳ ಎಂದು ಹೊಳೆಯುತ್ತಿರುತ್ತದೆ. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

Simple Ways To Clean A Burnt Stove

ನಿಂಬೆ ರಸ

ವಿನೇಗರ್ ಎಂಬುದು ಒಂದು ಅದ್ಭುತವಾದ ಸ್ವಚ್ಛಗೊಳಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿರುವ ರಾಸಾಯನಿಕವಾದರೆ, ಆ ಪಟ್ಟಿಯಲ್ಲಿ ನಿಂಬೆರಸವು ಎರಡನೆ ಸ್ಥಾನವನ್ನು ಅಲಂಕರಿಸುತ್ತದೆ. ಒಂದು ವೇಳೆ ನೀವು ಸ್ವಚ್ಛತೆಗಾಗಿ ಸ್ವಾಭಾವಿಕವಾದ ಅಂಶಕ್ಕೆ ಮನ್ನಣೆಯನ್ನು ನೀಡಿದರೆ, ನಿಂಬೆ ಹಣ್ಣು ವಿನೇಗರ್ ಸ್ಥಾನಕ್ಕೆ ಏರುತ್ತದೆ. ನಿಂಬೆರಸದಲ್ಲಿ ಆಸಿಡ್ ಅಂಶಗಳು ಹೆಚ್ಚಾಗಿರುತ್ತವೆ ಮತ್ತು ಇವು ನಿಮ್ಮ ಉದ್ದೇಶವನ್ನು ನಿರಾಯಾಸವಾಗಿ ಈಡೇರಿಸುತ್ತದೆ.

ಒಂದು ವೇಳೆ ನಿಮಗೆ ಮನೆಯಲ್ಲಿಯೇ ತಯಾರಿಸಿದ, ಸ್ವಾಭಾವಿಕವಾದ ಕ್ಲೀನ್ಸರ್‌ಗೆ ಒತ್ತು ನೀಡಿದಲ್ಲಿ, ನಿಂಬೆರಸವು ನಿಮ್ಮ ಕೈಗೆಟುಕುವ ಪರಿಹಾರವಾಗಿರುತ್ತದೆ. ಅದಕ್ಕಾಗಿ ನೀವು ಬಳಸುವ ಎಲ್ಲಾ ನಿಂಬೆಹಣ್ಣುಗಳ ಸಿಪ್ಪೆಗಳನ್ನು ಬಿಸಾಡದೆ ಉಳಿಸಿಕೊಳ್ಳಿ. ಅವುಗಳನ್ನು ಒಂದು ಜಾರ್‌ನಲ್ಲಿ ಹಾಕಿ, ಅವುಗಳ ಮೇಲೆ ವಿನೇಗರ್ ಅನ್ನು ಸುರಿಯಿರಿ. ಇದನ್ನು ಎರಡು ವಾರಗಳ ಹಾಗೆ ಇಡಿ, ನಂತರ ವಿನೇಗರ್ ಅನ್ನು ಹೊರಗೆ ಚೆಲ್ಲಿ. ಈಗ ಈ ಮಿಶ್ರಣದ ಸಮಪ್ರಮಾಣಕ್ಕೆ ನೀರನ್ನು ಹಾಕಿ, ನಂತರ ಇದನ್ನು ಸ್ಪ್ರೇ ಬಾಟಲ್‍ಗೆ ತುಂಬಿಕೊಳ್ಳಿ. ಈಗ ನಿಮ್ಮ ಮುಂದೆ ಒಂದು ಅದ್ಭುತವಾದ ಕ್ಲೀನ್ಸರ್ ಇರುತ್ತದೆ. ಇದು ಸುರಕ್ಷಿತವು ಹೌದು ಮತ್ತು ಪರಿಣಾಮಕಾರಿಯು ಹೌದು. ನಿಮ್ಮ ಸ್ಟೌವ್ ಟಾಪ್ ಮೇಲೆ ಇರುವ ಕಲೆಗಳನ್ನು ತಕ್ಷಣ ನಿವಾರಿಸಲು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

English summary

Simple Ways To Clean A Burnt Stove

When you cook, there is bound to be spillages. The stove is going to receive the first serving of all the dishes you prepare. By the time your cooking is over, you will start looking for best ways to clean burnt stove tops. It is true that many of us face the problem of a grimy stove and it stares in our faces to cause much discomfort.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X