Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಡಿಶ್ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ
ಡಿಶ್ ಸೋಪ್ (ಪಾತ್ರೆತೊಳೆಯುವ ಸಾಬೂನು) ಅನ್ನು ಬಳಸಿಕೊಂಡು ನಾವು ಯಾವ ವಸ್ತುಗಳನ್ನಾದರು ಸ್ವಚ್ಛ ಮಾಡಬಹುದು. ಇದು ಒಂದು ಒಳ್ಳೆಯ ಕ್ಲೀನಿಂಗ್ ಏಜೆಂಟ್ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗೆಂದುಕೊಂಡು ನಾವು ಸಿಕ್ಕಿ ಸಿಕ್ಕಿದ ಕಡೆಗಳಲ್ಲೆಲ್ಲ ಇದನ್ನು ಬಳಸಲು ಹೋಗಬಾರದು.
ಏಕೆಂದರೆ ಕೆಲವು ಕಡೆ ಇದನ್ನು ಬಳಸಿದರೆ ಅಲ್ಲಿನ ಕಲೆಗಳು ಇಲ್ಲವಾಗುವುದು ಸತ್ಯವಾದರೂ ಕೂಡ, ಅದರಿಂದ ಆ ವಸ್ತುಗಳಿಗೆ ಹಾನಿಯಾಗುವುದು ಖಂಡಿತ. ಪಾತ್ರೆಗಳಲ್ಲಿರುವ ಎಣ್ಣೆ ಮತ್ತು ಜಿಡ್ಡು ಹಾಗು ಮಸಾಲೆಯನ್ನು ಇದು ನಿವಾರಿಸುತ್ತದೆ, ಅಲ್ಲದೆ ವಾಹನಗಳಲ್ಲಿರುವ ಹಠಮಾರಿ ಗ್ರೀಸ್ ಮತ್ತು ಆಯಿಲ್ ಸಹ ಇದರಿಂದ ತೊಲಗುತ್ತದೆ. ಹಾಗೆಂದು ಇದನ್ನು ಈ ಕೆಳಗಿನ ಸ್ಥಳಗಳಲ್ಲಿ ಬಳಸಲು ಹೋಗಬೇಡಿ.
ಹಾಗೆಂದು ಡಿಶ್ ಸೋಪನ್ನು ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಬಳಸುಸುವುದನ್ನು ಬಹಿಷ್ಕರಿಸಲಾಗಿದೆ ಎಂದು ಭಾವಿಸಬೇಡಿ. ಅಂತಹ ಸ್ಥಳಗಳಲ್ಲಿ ಇದನ್ನು ಬಳಸುವುದು ಬೇಡ ಎಂಬ ಸಲಹೆ ನೀಡುತ್ತಿದ್ದೇವೆ ಎಂಬುದು ಇದರ ಅರ್ಥ. ಏಕೆಂದರೆ ಕೆಲವೊಂದು ಸ್ಥಳಗಳಲ್ಲಿ ಇದನ್ನು ಬಳಸುವುದರಿಂದ ನಮ್ಮ ಉದ್ದೇಶವು ಈಡೇರದೆ ಇರಬಹುದು ಅಥವಾ ಆ ಪರಿಸ್ಥಿತಿಗೆ ಇದು ಹೊಂದಿಕೊಳ್ಳದೆ ಇರಬಹುದು.
ಈ ಡಿಶ್ ಸೋಪ್‌ಗಳು ತಮ್ಮ ದೂರದ ಸಂಬಂಧಿಗಳಾದ ಡಿಶ್ ವಾಷ್ ಪೌಡರ್‌ಗಳಿಗಿಂತ ಒಳ್ಳೆಯ ಕೆಲಸ ಮಾಡುತ್ತವೆ. ಆದರೆ ಪ್ರತಿಯೊಂದು ಸೋಪ್‌ಗಳು ಕೆಲವೊಂದು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾಡಲ್ಪಟ್ಟಿರುತ್ತವೆ ಮತ್ತು ಅವುಗಳಿಗೆ ಇವು ನ್ಯಾಯ ಸಲ್ಲಿಸುತ್ತವೆ. ಅದಕ್ಕಾಗಿ ಬನ್ನಿ ನಿಮ್ಮ ನೋಟ್ ಪ್ಯಾಡ್ ಹೊರಗೆ ತೆಗೆದು, ಈ ಕೆಳಗಿನ ಸ್ಥಳಗಳಲ್ಲಿ ಡಿಶ್ ಸೋಪ್ ಬಳಸಬಾರದು ಎಂದು ಮೊದಲು ನೋಟ್ ಮಾಡಿಕೊಳ್ಳಿ...

ನಿಮ್ಮ ಕಾರ್ ಸ್ವಚ್ಛ ಮಾಡಬೇಡಿ
ನಿಮ್ಮ ಕಾರಿನ ಪೇಂಟ್ ಡಿಶ್ ಸೋಪಿನ ಬಳಕೆಯಿಂದ ಕಿತ್ತು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾರನ್ನು ಸ್ವಚ್ಛ ಮಾಡಲು ಹೋಗಬೇಡಿ. ಕಾರನ್ನು ಸ್ವಚ್ಛ ಮಾಡಲು ಮೈಲ್ಡ್ ಶಾಂಪೂವನ್ನು ಬಳಸಿ, ಡಿಶ್ ಸೋಪನ್ನು ಬಳಸಲು ಹೋಗಬೇಡಿ. ಕಾರ್ ಡಿಶ್ ಸೋಪ್ ಬಳಸಬಾರದಂತಹ 5 ಸ್ಥಳಗಳಲ್ಲಿ ಒಂದಾಗಿರುತ್ತದೆ.

ಬಟ್ಟೆ ಒಗೆಯಲು ಬಳಸಬೇಡಿ
ಹಠಮಾರಿ ಕಲೆಗಳನ್ನು ನಿವಾರಿಸಲು ಬಟ್ಟೆಗಳಿಗೆ ಕಠಿಣವಾದ ಡಿಟರ್ಜೆಂಟ್ ಬೇಕಾಗುತ್ತದೆ. ಈ ಡಿಶ್ ಸೋಪ್ ತೀರಾ ಮೈಲ್ಡ್ ಆಗಿರುತ್ತದೆ. ಆದ್ದರಿಂದ ಬಟ್ಟೆಗಳಲ್ಲಿರುವ ಕಲೆಗಳನ್ನು ನಿವಾರಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಡಿಶ್ ವಾಶ್ ಸೋಪ್ ಲೋಹ, ಗಾಜು ಅಥವಾ ಪ್ಲಾಸ್ಟಿಕ್‌ನಲ್ಲಿರುವ ಕಲೆಗಳನ್ನು ನಿವಾರಿಸಲು ಮಾತ್ರ ಇದು ತಯಾರು ಮಾಡಲಾಗಿರುತ್ತದೆ. ಬಟ್ಟೆಗಳಿಗೆ ಇದನ್ನು ಬಳಸಿದರೆ, ಅದರಲ್ಲಿರುವ ನಾರು ಮತ್ತು ಎಳೆಗಳು ಕಿತ್ತು ಬರುವ ಸಾಧ್ಯತೆ ಇದಕ್ಕೆ ಇರುತ್ತದೆ. ಆದ್ದರಿಂದ ಡಿಶ್ ಸೋಪನ್ನು ಬಟ್ಟೆಗಳಿಗೆ ಬಳಸಲು ಹೋಗಬೇಡಿ.

ಕೈತೊಳೆಯಲು
ಡಿಶ್ ಸೋಪ್ ಬಳಸದಂತಹ ಐದು ಸ್ಥಳಗಳಲ್ಲಿ ಮುಂದಿನ ಸ್ಥಾನದಲ್ಲಿರುವುದು ಕೈ ತೊಳೆಯುವುದು. ನಿಮ್ಮ ಕೈಗಳನ್ನು ತೊಳೆಯಲು ಡಿಶ್ ಸೋಪ್ ಬಳಸಬೇಡಿ. ಇದು ಅನಾರೋಗ್ಯಕರ ಮತ್ತು ತ್ವಚೆಗೆ ಹಾನಿಕಾರಕ. ಇದನ್ನು ಯಾರು ಕೈತೊಳೆಯಲು ಬಳಸುತ್ತಾರೋ, ಅವರ ಕೈಗೆ ಫಂಗಲ್ ಇನ್‍ಫೆಕ್ಷನ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಈ ಸೋಪಿನಲ್ಲಿ ಪಾತ್ರೆ ತೊಳೆಯುವಾಗ ಅಂಟಿಕೊಂಡಿರುವ ಕೊಳೆ ಇರಬಹುದು ಅಥವಾ ಸೋಪಿನಲ್ಲಿರುವ ಪ್ರಬಲ ರಾಸಾಯನಿಕಗಳು ಇರಬಹುದು, ಇವು ನಿಮ್ಮ ಉಗುರುಗಳ ಕೆಳಗೆ ಸಿಕ್ಕಿಕೊಂಡು, ಅದಕ್ಕೆ ಫಂಗಲ್ ಇನ್‍ಫೆಕ್ಷನ್ ತರುತ್ತವೆ. ಆದ್ದರಿಂದ ಇದನ್ನು ಬಳಸಲು ಹೋಗಬೇಡಿ.

ಚರ್ಮ ಅಥವಾ ಸೋಫಾ ಮತ್ತು ಕುರ್ಚಿಗಳಲ್ಲಿರುವ ಅಫೋಲ್‌ಸ್ಟ್ರಿ
ಚರ್ಮ ಅಥವಾ ಸೋಫಾ ಮತ್ತು ಕುರ್ಚಿಗಳಲ್ಲಿರುವ ಅಫೋಲ್‌ಸ್ಟ್ರಿ ಮೇಲೆ ಡಿಶ್ ಸೋಪ್ ಬಳಸಿದರೆ, ಅವುಗಳ ಬಣ್ಣವು ಹಾಳಾಗುತ್ತದೆ. ಜೊತೆಗೆ ಆ ಉತ್ಪನ್ನಗಳು ಹಾಳಾಗುತ್ತವೆ. ಚರ್ಮದ ಮೇಲೆ ಇರುವ ಹೊಳಪು ಸಹ ಹಾಳಾಗುತ್ತದೆ. ಆದ್ದರಿಂದ ಡಿಶ್ ಸೋಪನ್ನು ಇವುಗಳ ಮೇಲೆ ಬಳಸಲು ಹೋಗಬೇಡಿ.

ವಾಶಿಂಗ್ ಮಷಿನ್ ಮತ್ತು ಡಿಶ್ ವಾಶರ್
ಡಿಶ್ ವಾಶ್ ಸೋಪ್ ವಾಶಿಂಗ್ ಮಷಿನಿನಲ್ಲಿ ಸಿಕ್ಕಾಪಟ್ಟೆ ನೊರೆಯನ್ನುಂಟು ಮಾಡುತ್ತದೆ. ಜೊತೆಗೆ ಇದು ಡಿಶ್ ವಾಶರ್‌ಗು ಸಹ ಹಾನಿಯುಂಟು ಮಾಡುತ್ತದೆ. ಆದ್ದರಿಂದ ವಾಶಿಂಗ್ ಮಷಿನಿನಲ್ಲಿ ಡಿಟರ್ಜೆಂಟ್ ಪೌಡರ್ ಬಳಸಿ ಮತ್ತು ಡಿಶ್ ವಾಶರ್ ಸೋಪನ್ನು ಡಿಶ್ ವಾಶರ್‌ನಲ್ಲಿ ಬಳಸಿ, ಹೆಚ್ಚಿನ ಹಾನಿಯನ್ನು ತಪ್ಪಿಸಿ. ನಾವು ತಿಳಿಸಿರುವ ಸ್ಥಳಗಳಲ್ಲಿ ಡಿಶ್ ವಾಶರ್ ಸೋಪನ್ನು ಬಳಸುವುದನ್ನು ತಪ್ಪಿಸಿ, ನಿಮ್ಮ ವಸ್ತುಗಳಿಗೆ ಆಗುವ ಹಾನಿಯನ್ನು ತಪ್ಪಿಸಿ.



Click it and Unblock the Notifications