For Quick Alerts
ALLOW NOTIFICATIONS  
For Daily Alerts

ತರಕಾರಿ ತೊಳೆಯುವುದು ಎಂದರೆ ನೀರು ಕುಡಿದಷ್ಟು ಸುಲಭವಲ್ಲ!

By Arshad
|

ಕೆಲವರಿಗೆ ಅಡುಗೆ ಕೆಲಸ ಬೇಗನೇ ಆಗಬೇಕು, ಹೆಚ್ಚು ಪಾತ್ರೆ ಬೀಳಬಾರದು (ಅಂದರೆ ತೊಳೆಯಲು ಹೆಚ್ಚು ಹೊರೆಯಾಗಬಾರದು) ತರಕಾರಿ ಸುಲಭವಾಗಿ ಹೆಚ್ಚುವಂತಿರಬೇಕು, ಅಕ್ಕಿಯಲ್ಲಿ ಕಲ್ಲು ಆರಿಸಲಿಕ್ಕೆ ಇರಬಾರದು ಎಂಬ ಕೆಲವು ತಮ್ಮ ಮೇಲೇ ಹೇರಿಕೊಂಡ ಕಟ್ಟಳೆಗಳಿರುತ್ತವೆ. ಅದರಲ್ಲೂ ಉದ್ಯೋಗಸ್ಥೆಯಾದ ಮಹಿಳೆಯರಿಗೆ ಸಮಯ ಬಹಳ ಅಮೂಲ್ಯವಾದುದರಿಂದ ಇಂತಹ ಕಟ್ಟಳೆಗಳು ಅನಿವಾರ್ಯವೂ ಆಗಿರುತ್ತವೆ.

ಸಮಯವುಳಿಸುವ ತರಕಾರಿ ಮತ್ತು ಅಡುಗೆಗಳನ್ನೇ ಹೆಚ್ಚಾಗಿ ಬಯಸುವ ಇವರು ತರಕಾರಿಗಳನ್ನು ತೊಳೆಯಲು ಹೆಚ್ಚಿನ ಗಮನ ನೀಡದಿರಲೂ ಸಾಧ್ಯವಿದೆ. ಆದರೆ ತರಕಾರಿಗಳನ್ನು ಅಡುಗೆಗೆ ಬಳಸುವ ಮುನ್ನ ಸ್ವಚ್ಛವಾಗಿ ತೊಳೆದುಕೊಳ್ಳುವುದು ಅರೋಗ್ಯದ ದೃಷ್ಟಿಯಿಂದ ಅತಿ ಮುಖ್ಯವಾಗಿದೆ.

ಏಕೆಂದರೆ ತರಕಾರಿಗಳನ್ನು ಬೆಳೆಯುವಾಗ ಉಪಯೋಗಿಸುವ ಕೀಟನಾಶಕಗಳಿಂದ ಹಿಡಿದು ಆ ತರಕಾರಿ ಅಲ್ಲಿಂದ ಸಾಗಿ ಲಾರಿ, ತರಕಾರಿ ಮಂಡಿ, ತರಕಾರಿ ಅಂಗಡಿ ಮೊದಲಾದ ಮಾಧ್ಯಮಗಳ ಮೂಲಕ ನಿಮ್ಮ ಅಡುಗೆ ಕೋಣೆ ಸೇರುವವರೆಗೆ ಹತ್ತು ಹಲವು ಬ್ಯಾಕ್ಟೀರಿಯಾ, ಕ್ರಿಮಿ ಕೀಟ, ಧೂಳು-ಪರಾಗ ಮೊದಲಾದ ಕಲ್ಮಶಗಳನ್ನು ಹೊತ್ತು ತಂದಿರುತ್ತದೆ. ಅದರಲ್ಲೂ ಅತಿ ಸೂಕ್ಷ್ಮ ಬ್ಯಾಕ್ಟೀರಿಯಾಗಳು ತರಕಾರಿಗಳ ಸಿಪ್ಪೆಯಿಂದ ಒಳಸೇರಿ ಮನೆಮಾಡಲು ಅಡಿಪಾಯವನ್ನೂ ಹಾಕಿಕೊಂಡಿಟ್ಟುಕೊಂಡಿರುತ್ತವೆ. ವಿನೇಗರ್ ಬಳಸಿ ತರಕಾರಿಗಳನ್ನು ತೊಳೆಯುವುದು ಹೇಗೆ?

Importance Of Washing Vegetables

ಸಾಲ್ಮೋನೆಲ್ಲಾ, ಈಕೊಲೈ ಮತ್ತು ಲಿಸ್ಟೀರಿಯಾ ದಂತಹ ಮಾರಕ ಬ್ಯಾಕ್ಟೀರಿಯಾಗಳೂ ತರಕಾರಿಗಳ ಸಿಪ್ಪೆಯಡಿಯಲ್ಲಿ ರಕ್ಷಣೆ ಪಡೆದುಕೊಂಡು ನಿಮ್ಮ ಮನೆ ಸೇರುವ ಸಾಧ್ಯತೆಗಳೂ ದಟ್ಟವಾಗಿವೆ. ಈ ತರಕಾರಿಗಳನ್ನು ನಾಮಕಾವಸ್ತೆ ಸುರಿಯುವ ನೀರಿನ ಕೆಳಗೆ ಇಟ್ಟು ತೊಳೆದಂತೆ ಮಾಡಿದರೆ ಸಾಕಾಗುವುದಿಲ್ಲ.

ಸಿಪ್ಪೆಯ ಮೇಲೆ ಸಡಿಲವಾಗಿ ಕುಳಿತ ಧೂಳು ಪರಾಗಗಳನ್ನು ನೀರಿನಿಂದ ತೊಳೆದರೆ ನಿವಾರಿಸಬಹುದಾದರೂ ಬ್ಯಾಕ್ಟೀರಿಯಾಗಳನ್ನಲ್ಲ. ಸಿಪ್ಪೆ ಸುಲಿದು ಉಪಯೋಗಿಸುವುದರಿಂದ ಕೆಲವಾರು ಬ್ಯಾಕ್ಟೀರಿಯಾಗಳನ್ನು ನಿವಾರಿಸಬಹುದಾದರೂ ಇದು ಅತ್ಯಂತ ಸುರಕ್ಷಿತ ವಿಧಾನ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ.

ಅಲ್ಲದೇ ಕೆಲವು ಕೀಟನಾಶಕಗಳು ಎಣ್ಣೆಮೂಲದ, ನೀರಿನಲ್ಲಿ ಕರಗದ ಕ್ಲಿಷ್ಟ ಅಣುಗಳಾಗಿದ್ದು ಸಿಪ್ಪೆಯಮೇಲೆ ಅಂಟಿಕೊಂಡಿರುತ್ತದೆ. ಇದು ನೀರಿನಿಂದ ಉಜ್ಜಿದರೂ ಸುಲಭವಾಗಿ ತೊಲಗುವುದಿಲ್ಲ. ಹಾಗಾದರೆ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಸುರಕ್ಷಿತವಾಗಿ ತೊಳೆಯುವ ಬಗೆ ಹೇಗೆ? ಈ ಬಗ್ಗೆ ಕಲವು ಅಮೂಲ್ಯ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

1)ತರಕಾರಿ-ಹಣ್ಣುಗಳನ್ನು ತೊಳೆಯಲು ಉಗುರುಬೆಚ್ಚನೆಯ ನೀರು ಬಳಸಿ

ಹೆಲವು ತರಕಾರಿ ಮತ್ತು ಹಣ್ಣುಗಳಿಗೆ ಹೊಳಪು ನೀಡಲು ಒಂದು ತರಹದ ಮೇಣವನ್ನು ಇದರ ಮೇಲೆ ಸಿಂಪಡಿಸಲಾಗುತ್ತದೆ. ಸೇಬಿನ ಹೊಳಪು ಬಂದಿರುವುದು ಈ ಮೇಣದಿಂದಲೇ. ಉಗುರು ಬೆಚ್ಚನೆಯ ನೀರಿನಿಂದ (ಬಿಸಿ ನೀರು ತರಕಾರಿಯನ್ನು ಹಾಳುಗೆಡವುತ್ತದೆ) ತೊಳೆದರೆ ಈ ಮೇಣ ಕರಗಿ ತೊಳೆದುಹೋಗುತ್ತದೆ. ಇದಕ್ಕಾಗಿ ನಯವಾದ ಬ್ರಶ್ ಒಂದನ್ನು ಬಳಸಿ ತರಕಾರಿ ಮತ್ತು ಹಣ್ಣುಗಳ ಮೇಲ್ಮೈಯನ್ನು ನಯವಾಗಿ ಉಜ್ಜುವುದರಿಂದ ಕರಗಿದ ಮೇಣ ಪೂರ್ಣವಾಗಿ ತೊಳೆಯಲು ಸಾಧ್ಯವಾಗುತ್ತದೆ.

2)ಶಿರ್ಕಾ ಸೇರಿಸಿದ ನೀರು ಬಳಸಿ
ಹೂಕೋಸು, ಬ್ರೋಕೋಲಿ, ಸಬ್ಬಸಿಗೆ ಸೊಪ್ಪು ಮೊದಲಾದ ತರಕಾರಿಗಳಲ್ಲಿ ಸೂಕ್ಷ್ಮವಾದ ಎಳೆಗಳು ಲಕ್ಷಾಂತರವಿದ್ದು ಕೀಟಾಣುಗಳು ಅಡಗಲು ಸೂಕ್ತ ತಾಣವಾಗಿದೆ. ಬರೆಯ ನೀರಿನಲ್ಲಿ ಅದ್ದುವುದರಿಂದ ಅತಿಸೂಕ್ಷ್ಮ ಬಿರುಕುಳಲ್ಲಿ ನೀರು ನುಸುಳದೇ ಅಲ್ಲಿದ್ದ ಬ್ಯಾಕ್ಟೀರಿಯಾ ಕಣ್ಣಾಮುಚ್ಚಾಲೆಯಾಡುವ ಸಂಭವವಿದೆ.


ಇದಕ್ಕಾಗಿ ಉಗುರುಬೆಚ್ಚನೆಯ ನೀರಿಗೆ ಕೊಂಚ ಶಿರ್ಕಾ (vinegar) ಹಾಕಿದ ನೀರಿನಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಕನಿಷ್ಟ ಐದು ನಿಮಿಷ ಮುಳುಗಿಸಿಟ್ಟು ನಂತರ ತೊಳೆದುಕೊಳ್ಳುವುದರಿಂದ ಕೀಟನಾಶಕ ಮತ್ತು ಬಹುತೇಕ ಎಲ್ಲಾ ಬ್ಯಾಕ್ಟೀರಿಯಾಗಳನ್ನು ತೊಡೆಯಬಹುದು.
ಬಹುತೇಕ ಕೀಟನಾಶಕಗಳು ನೀರಿನಲ್ಲಿ ಕರಗದಿದ್ದರೂ ಶಿರ್ಕಾದಲ್ಲಿ ಕರಗುವುದೇ ಇದರ ಗುಟ್ಟು. ತರಕಾರಿ ತೆಗೆದ ಬಳಿಕ ಆ ನೀರಿನ ಮೇಲ್ಮೈ ಮಳೆಗಾಲದಲ್ಲಿ ಆಯಿಲ್ ಬಿದ್ದಿರುವ ರಸ್ತೆಯಲ್ಲಿ ರಂಗುರಂಗಿನ ಬಣ್ಣದ ಚಿತ್ತಾರದಂತೆ ಕಂಡುಬರುವುದು ಕೀಟಾನಾಶಕದ ಇರುವಿಕೆಯ ಸಂಕೇತವಾಗಿದೆ. ಹಣ್ಣು ಮತ್ತು ತರಕಾರಿಗಳನ್ನು ಶುಚಿಗೊಳಿಸಲು 9 ವಿಧಾನಗಳು

3) ಒರಟಾದ ಬ್ರಶ್ ಬಳಸಿ
ಸಿಪ್ಪೆ ಸುಲಿಯಬಹುದಾದ ತರಕಾರಿಗಳಾದ ಆಲುಗಡ್ಡೆ, ಸೌತೆಕಾಯಿಗಳ ಸಿಪ್ಪೆಯನ್ನು ಕೊಂಚ ದಪ್ಪನಾಗಿ ಸುಲಿಯುವುದು ಉತ್ತಮ. ಏಕೆಂದರೆ ಬ್ಯಾಕ್ಟೀರಿಯಾಗಳು ಸಿಪ್ಪೆಯ ಮೇಲ್ಭಾಗವನ್ನು ದಾಟಿ ಒಳಭಾಗದಲ್ಲಿ ಕೊಂಚ ಆಳಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. ಆದರೆ ದೊಣ್ಣೆಮೆಣಸು, ಹೀರೇಕಾಯಿ, ಹಾಗಲಕಾಯಿ ಮೊದಲಾದ ತರಕಾರಿಗಳನ್ನು ಹೀಗೆ ಸಿಪ್ಪೆ ಸುಲಿಯಲು ಸಾಧ್ಯವಿಲ್ಲ.


ಹೆಚ್ಚಿನವರು ಇದರ ಸಿಪ್ಪೆ ಸುಲಿಯುವ ಗೋಜಿಗೇ ಹೋಗದೇ ಸಿಪ್ಪೆಸಹಿತ ಬಳಸುತ್ತಾರೆ. ಆದರೆ ಇದಕ್ಕೆ ಬದಲಾಗಿ ಒರಟು ಬ್ರಶ್ (ಲೋಹದ ತಂತಿಗಳ) ಒಂದನ್ನು ಬಳಸಿ ಮೇಲ್ಮೈಯನ್ನು ಉಜ್ಜಿ ಸಿಪ್ಪೆಯನ್ನು ತೆಗೆದುಬಿಡುವುದು ಉತ್ತಮ ಎಂದು ಆಹಾರತಜ್ಞರು ಅಭಿಪ್ರಾಯ ಪಡುತ್ತಾರೆ.

4)ತರಕಾರಿಗಳನ್ನು ಸುರಿಯುವ ನೀರಿನ ಕೆಳಗೆ ತೊಳೆಯಿರಿ
ಸಿಪ್ಪೆ ಸುಲಿಯಲು ಹೆಚ್ಚೂ ಕಡಿಮೆ ಅಸಾಧ್ಯವಾದ ತರಕಾರಿಗಳಾದ ಟೊಮೇಟೊ, ಸೊಪ್ಪುಗಳು, ಬೆರ್ರಿಗಳು, ದ್ರಾಕ್ಷಿ ಮೊದಲದವುಗಳನ್ನು ನಲ್ಲಿಯಿಂದ ರಭಸದಿಂದ ಸುರಿಯುತ್ತಿರುವ ನೀರಿನ ಕೆಳಗೆ ಹಿಡಿದು ತೊಳೆಯುವುದು ಉತ್ತಮ. ಏಕೆಂದರೆ ಈ ರಭಸ ಅಂಟಿಕೊಂಡಿದ್ದ ಕೊಳೆ ಮತ್ತು ಕೀಟಾಣುಗಳನ್ನು ತೊಳೆಯಲು ನೆರವಾಗುತ್ತದೆ. ಇದಕ್ಕೂ ಮೊದಲು ತರಕಾರಿಗಳನ್ನು, ಅದರಲ್ಲೂ ದ್ರಾಕ್ಷಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಕನಿಷ್ಟ ಹತ್ತು ನಿಮಿಷ ಮುಳುಗಿಸಿಡುವುದು ಅಗತ್ಯ.

English summary

Importance Of Washing Vegetables

Wondering why you should wash your vegetables before you eat them every time? Then, this article is for you to know more about it. Cleaning and washing your vegetables is an step toprevent food-borne illnesses caused by bacteria like salmonella, listeria & e.coli. So, it is critical to make sure that all your fruits & veggies are safe to eat by using some simple and proper washing techniques.
X
Desktop Bottom Promotion