For Quick Alerts
ALLOW NOTIFICATIONS  
For Daily Alerts

ಈ ಪುಟ್ಟ ಲಿಂಬೆ ಇಷ್ಟೆಲ್ಲಾ ಕಾರುಬಾರು ಮಾಡುತ್ತದೆಯೇ?

By Manu
|

ಬೀಜವಿಲ್ಲದಿದ್ದರೆ ಲಿಂಬೆಯಂತಹ ಔಷಧಿ ಇನ್ನೊಂದಿರುತ್ತಿರಲಿಲ್ಲ, ತೊಟ್ಟಿಲ್ಲದಿದ್ದರೆ ಬದನೆಯಂತಹ ವಿಷ ಇನ್ನೊಂದಿರುತ್ತಿರಲಿಲ್ಲ ಎಂದು ಗಾದೆ ಈಗಲೂ ಕೂಡ ಕರಾವಳಿ ಬದಿಯ ಹಳ್ಳಿ ಕಡೆಗಳಲ್ಲಿ ಜನಜನಿತವಾಗಿದೆ. ಇದಕ್ಕೆಲ್ಲಾ ಕಾರಣ ಲಿಂಬೆಯಲ್ಲಿರುವ ಅಪರಿಮಿತ ಪ್ರಯೋಜನಗಳು. ಹೌದು ಲಿಂಬೆಯಲ್ಲಿ ಅಡಗಿರುವ ಗುಣಗಳನ್ನು ನೂರಾರು ರೂಪದಲ್ಲಿ ಬಳಸಬಹುದು, ಅದರಲ್ಲೂ ಆರೋಗ್ಯದ ವಿಷಯದಲ್ಲಂತೂ ಲಿಂಬೆಯ ಬಳಕೆ ಬಹಳಷ್ಟಿದೆ. ಚರ್ಮದ ಆರೈಕೆ, ಜೀರ್ಣಕ್ರಿಯೆ, ತೂಕ ಇಳಿಸಲು ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇದರ ಉಪಯೋಗಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆದುಬಿಡಬಹುದು.

ಮನೆಯ ಸ್ವಚ್ಛತೆಯ ವಿಷಯ ಬಂದಾಗಲೂ ಲಿಂಬೆಯ ಆಮ್ಲೀಯ ಗುಣ ಕೆಲಸಕ್ಕೆ ಬರುತ್ತದೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಎಷ್ಟು ಪ್ರಬಲವೆಂದರೆ ಮನೆಯ ನೆಲದಲ್ಲಿ ಅಂಟಿಕೊಂಡಿರುವ ಹಠಮಾರಿ ಕಲೆಯನ್ನೂ ಸುಲಭವಾಗಿ ತೊಲಗಿಸುವಂತೆ ಮಾಡುತ್ತದೆ. ಬನ್ನಿ ಲಿ೦ಬೆಹಣ್ಣಿನಲ್ಲಿ ಅಡಗಿರುವ ಅತ್ಯುತ್ತಮವಾದ ಪ್ರಯೋಜನಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ, ಮುಂದೆ ಓದಿ... ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

Household Things You Can Clean With Lemon in boldsky kannada

ತುರಿಮಣೆಯನ್ನು ಸ್ವಚ್ಛಗೊಳಿಸಲು
(Food Grater) ತುರಿಮಣೆಯ ರ೦ಧ್ರಗಳಲ್ಲಿ ಸಿಲುಕಿಕೊಳ್ಳುವ ಆಹಾರವಸ್ತುವಿನ ಸಣ್ಣ ಸಣ್ಣ ತುಣುಕುಗಳನ್ನು ಪೂರ್ಣವಾಗಿ ಸ್ವಚ್ಚಗೊಳಿಸುವುದು ಅಸಾಧ್ಯವೇ ಎ೦ದೆನಿಸಬಹುದು. ಮು೦ದಿನ ಬಾರಿ ನಿಮ್ಮ ತುರಿಮಣೆಯನ್ನು ತೊಳೆಯುವ ಕಿರಿಕಿರಿಯಾದ ಕೆಲಸವನ್ನು ಕೈಗೊಳ್ಳುವಾಗ, ತುರಿಮಣೆಯ ಎರಡೂ ಬದಿಗಳಿಗೆ ಅರ್ಧ ಲಿ೦ಬೆಯ ಹೋಳಿನಿ೦ದ ಚೆನ್ನಾಗಿ ಉಜ್ಜಿರಿ. ಹೀಗೆ ಮಾಡಿದಾಗ, ಆ ಚಿಕ್ಕ ಚಿಕ್ಕ ತುಣುಕುಗಳು ಸುಲಭವಾಗಿ ಹೊರಬರುತ್ತವೆ ಹಾಗೂ ಬಲುಬೇಗನೆ ನಿಮ್ಮ ತುರಿಮಣೆಯು ಮತ್ತೊ೦ದು ಬಾರಿ ಉಪಯೋಗಕ್ಕೆ ಸಿದ್ಧವಾಗಿರುತ್ತದೆ.

ಮೈಕ್ರೋವೇವ್ ಅನ್ನು ಸ್ವಚ್ಛಗೊಳಿಸಲು
ಮೈಕ್ರೋವೇವ್ ಅನ್ನು ಸ್ವಚ್ಛಗೊಳಿಸಲು ಲಿ೦ಬೆಯ ರಸವನ್ನು ಬಳಸಿಕೊಳ್ಳುವುದರ ಮೂಲಕ ಅದರ ಹಲವಾರು ಪ್ರಯೋಜನಗಳ ಪೈಕಿ ಒ೦ದನ್ನು ಕ೦ಡುಕೊ೦ಡ೦ತಾಗುತ್ತದೆ. ಹೌದು ಒ೦ದು ವೇಳೆ ನಿಮ್ಮ ಮೈಕ್ರೋವೇವ್ ಕೆಟ್ಟ ವಾಸನೆಯನ್ನು೦ಟುಮಾಡುತ್ತಿದ್ದಲ್ಲಿ, ಒ೦ದು ಗಾಜಿನ ಬಟ್ಟಲನ್ನು ತೆಗೆದುಕೊ೦ಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿರಿ ಹಾಗೂ ತದನ೦ತರ ಆ ನೀರಿಗೆ ಎರಡು ಚಮಚಗಳಷ್ಟು ಲಿ೦ಬೆ ಹಾಗೂ ವಿನೆಗರ್ ಅನ್ನು ಸೇರಿಸಿರಿ. ಈಗ ಈ ಬಟ್ಟಲನ್ನು ನಿಮ್ಮ ಮೈಕ್ರೋವೇವ್‌ನ ಒಳಗೆ ಇರಿಸಿರಿ ಹಾಗೂ ಬಳಿಕ ಅದನ್ನು ಬಿಸಿ ಮಾಡಿರಿ. ಹೀಗೆ ಮಾಡುವುದರಿ೦ದ ನಿಮ್ಮ ಮೈಕ್ರೋವೇವ್ ನ ದುರ್ವಾಸನೆಯ ನಿವಾರಣೆಯಾಗುತ್ತದೆ.

ಪಾತ್ರೆಗಳ ಸ್ವಚ್ಛತೆಗೆ
ಸ್ಟೀಲ್, ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನೂ ಲಿಂಬೆಯ ರಸ ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಲಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿ ಒಂದು ದೊಡ್ಡ ಪಾತ್ರೆಯಲ್ಲಿರುವ ಕುದಿಯುವ ನೀರಿಗೆ ಸೇರಿಸಿ. ಈ ನೀರಿಗೆ ನಿಮ್ಮ ಮರದ ಪರಿಕರಗಳನ್ನು ಮುಳುಗಿಸಿ. ಮರದ ಪರಿಕರಗಳು ನೀರಿನಲ್ಲಿ ತೇಲುವ ಕಾರಣ ಭಾರದ ಬೇರಾವುದೋ ವಸ್ತುವೊಂದನ್ನು ಇಟ್ಟು ಪೂರ್ತಿಯಾಗಿ ಮುಳುಗುವಂತೆ ಮಾಡಿ. ಹದಿನೈದು ನಿಮಿಷ ಈ ಪಾತ್ರೆಗಳು ಹೀಗೇ ಮುಳುಗಿರಲಿ. ನಂತರ ತಣ್ಣೀರಿಗೆ ಒಡ್ಡದೇ ಕೇವಲ ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ಒರೆಸಿ ಬಿಸಿಲಿನಲ್ಲಿಡಿ. ಅರ್ಧ ಗಂಟೆಯ ಬಳಿಕ ಪಾತ್ರೆಯನ್ನು ಉಲ್ಟಾ ಮಾಡಿ ಇನ್ನೊಂದು ಬದಿಯೂ ಒಣಗುವಂತೆ ಮಾಡಿ. ಈಗ ನಿಮ್ಮ ಮರದ ಪಾತ್ರೆಗಳು ಹೊಚ್ಚ ಹೊಸತರಂತೆ ಮೆರುಗು ಪಡೆದಿರುತ್ತವೆ.

ಬಾತ್‌ರೂಮಿನ ದುರ್ವಾಸನೆಯನ್ನು ತಡೆಯಲು
ಬಾತ್‌ರೂಮಿನಲ್ಲಿರುವ ದುರ್ವಾಸನೆಯನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಒಂದು ಪದಾರ್ಥ ಇದಾಗಿದೆ. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ, ಲಿಂಬೆ ರಸವನ್ನು ನೆಲದ ಮೇಲೆ ಮತ್ತು ಶೌಚಾಲಯದ ಕಮೋಡ್‌ನ ಮೇಲೆ ಚಿಮುಕಿಸಿ. ಕಮೋಡ್‌ನ ಮುಚ್ಚಳವನ್ನು ಮತ್ತು ಬಾತ್‌ರೂಮಿನ ಬಾಗಿಲನ್ನು ಮುಚ್ಚಿ. ಸ್ವಲ್ಪ ಸಮಯದ ನಂತರ ಬಾತ್‌ರೂಮ್ ಅನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.

English summary

Household Things You Can Clean With Lemon in boldsky kannada

Lemon has a high acid content, which enables this fruit to works as a powerful antibacterial sanitizer that has the ability to combat common household bacteria. Lemon is very effective in removing the grease and even adds a deodorizing effect. Lemon is cheap and readily available item in every kitchen.
X
Desktop Bottom Promotion