For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಜೇಡಗಳ ಸಮಸ್ಯೆಯೇ? ಕೀಟನಾಶಕಗಳನ್ನು ಮಾತ್ರ ಬಳಸಬೇಡಿ!

|

ತಮ್ಮ ಮನೆಯಲ್ಲಿ ಜೇಡಗಳು ಓಡಾಡಿಕೊಂಡಿರುವುದನ್ನು ಯಾರೂ ಸಹ ಇಷ್ಟಪಡುವುದಿಲ್ಲ. ಮನೆಯಲ್ಲಿರುವ ಜೇಡಗಳು ನಮಗೆ ಯಾವುದೇ ತೊಂದರೆಯನ್ನು ಮಾಡದಿದ್ದರು, ಕೆಲವೊಂದು ಬಗೆಯ ಜೇಡಗಳು ವಿಷಕಾರಿಯಾಗಿರುತ್ತವೆಯೆಂಬುದನ್ನು ನಾವು ಮರೆಯಬಾರದು. ಇಂತಹ ಜೇಡಗಳನ್ನು ಅವುಗಳ ಮೇಲೆ ಯಾವುದೇ ವಿಷಕಾರಿ ರಾಸಾಯನಿಕಗಳ ಪ್ರಯೋಗ ಮಾಡದೆ ನಿವಾರಿಸಿಕೊಳ್ಳಬಹುದೇ?

ಜೇಡಗಳು ಮನೆಯಲ್ಲಿ ಸಹ ಕಾಣಿಸಿಕೊಳ್ಳುವ ಕೀಟಗಳಲ್ಲಿ ಒಂದಾಗಿವೆ. ಇವು ಸರ್ವೇಸಾಮಾನ್ಯವಾಗಿ ಮನೆಯ ಮೂಲೆಗಳಲ್ಲಿ ಗೂಡುಗಳನ್ನು ಕಟ್ಟಿಕೊಂಡು ಇರುತ್ತವೆ. ಸಾಮಾನ್ಯವಾಗಿ ಇವುಗಳನ್ನು ನಾವು ನಿವಾರಿಸಲು ರಾಸಾಯನಿಕಗಳಿಂದ ಕೂಡಿದ ಕೀಟನಾಶಕಗಳನ್ನು ಬಳಸುತ್ತೇವೆ. ಇವುಗಳು ನಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ರಾಸಾಯನಿಕಗಳು ತ್ವಚೆಯಲ್ಲಿ ತುರಿಕೆಯನ್ನು ತರಿಸುತ್ತವೆ. ಜೊತೆಗೆ ಇವು ಶ್ವಾಸಕೋಶದ ಸಮಸ್ಯೆಗಳನ್ನು ಸಹ ತರಿಸುತ್ತವೆ. ವಿಷಕಾರಿ ಕೀಟ - ಜೇಡಗಳ ಕುರಿತಾದ ಮೈ ನವಿರೇಳಿಸುವ ಸಂಗತಿಗಳು

ಹಾಗಾಗಿ ಜೇಡಗಳನ್ನು ನಿವಾರಿಸಿಕೊಳ್ಳಲು ನಾವು ಸ್ವಾಭಾವಿಕವಾದ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಬೇಕಾದ ಅಗತ್ಯವಿದೆ. ಮನೆಯ ಶುಚಿತ್ವಕ್ಕೆ ಆಧ್ಯತೆಯನ್ನು ನೀಡಿ ಮತ್ತು ಜೇಡಗಳನ್ನು ಸ್ವಾಭಾವಿಕವಾಗಿ ನಿವಾರಿಸಲು ಕ್ರಮ ಕೈಗೊಳ್ಳಿ. ಅಂತಹ ಕೆಲವೊಂದು ಕ್ರಮಗಳನ್ನು ನಾವು ನಿಮಗೆ ಇಂದು ತಿಳಿಸುತ್ತಿದ್ದೇವೆ....

ಬಿಳಿ ವಿನಿಗರ್

Homemade Natural Ways To Kill Spiders

ಬಿಳಿ ವಿನಿಗರನ್ನು ನೀರಿನೊಂದಿಗೆ ಸೇರಿಸಿ ಜೇಡಗಳನ್ನು ಓಡಿಸಲು ಬಳಸಬಹುದು. ಇದನ್ನು ಜೇಡಗಳು ಗೂಡು ಕಟ್ಟುವ ಭಾಗದಲ್ಲಿ ಸ್ಪ್ರೇ ಮೂಲಕ ಸಿಂಪಡಿಸಿ. ಇದನ್ನು ಪ್ರತಿದಿನವು ಸಿಂಪಡಿಸುವುದರಿಂದ ಸಹ ಯಾವುದೇ ಸಮಸ್ಯೆಯಾಗುವುದಿಲ್ಲ. ಗ್ಯಾಸ್ ಸಿಲಿಂಡರ್ ಸುರಕ್ಷತೆ: ತಪ್ಪದೇ ಇಂತಹ ಸೂಚನೆಗಳನ್ನು ಪಾಲಿಸಿ!

ಚೆಸ್ಟ್‌ನಟ್‍ಗಳು


ಒಂದೆರಡು ಚೆಸ್ಟ್‌ನಟ್‌ಗಳನ್ನು ಕಿಟಕಿಯ ಬಳಿ ಮತ್ತು ಮನೆಯ ಮೂಲೆಗಳಲ್ಲಿ ಇಡಿ. ಇವುಗಳು ಕೆಡುವುದಿಲ್ಲವಾದ್ದರಿಂದ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇವುಗಳು ಜೇಡಗಳನ್ನು ಸ್ವಾಭಾವಿಕವಾಗಿ ಕೊಲ್ಲುತ್ತವೆ ಮತ್ತು ಜೇಡಗಳನ್ನು ಮನೆಯಿಂದ ದೂರ ಓಡಿಸುತ್ತವೆ. ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಸಿಟ್ರಸ್ ಹಣ್ಣುಗಳ ಸಿಪ್ಪೆಗಳು


ಸಿಟ್ರಸ್ ಹಣ್ಣುಗಳನ್ನು ಜೇಡಗಳು ಇಷ್ಟಪಡುವುದಿಲ್ಲ. ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಜೇಡಗಳು ಗೂಡು ಕಟ್ಟುವ ಭಾಗದಲ್ಲಿ ಉಜ್ಜಿ ಅಥವಾ ಅದನ್ನು ಹಾಗೆಯೇ ಇಡಿ. ಇದರಿಂದ ಜೇಡಗಳು ದೂರ ಓಡುತ್ತವೆ.

ತಂಬಾಕು


ತಂಬಾಕಿನ ವಾಸನೆಯನ್ನು ಜೇಡಗಳು ಇಷ್ಟಪಡುವುದಿಲ್ಲ. ತಂಬಾಕನ್ನು ಮನೆಯ ಮೂಲೆಗಳಲ್ಲಿ ಸ್ವಲ್ಪ ಸಿಂಪಡಿಸಿ, ಇದರಿಂದ ಜೇಡಗಳು ಅಲ್ಲಿಂದ ಕಾಲು ಕೀಳುತ್ತವೆ. ತಿಗಣೆಗಳ ಕಾಟದಿಂದ ಮುಕ್ತಿ ಹೊಂದಲು 11 ಮನೆಮದ್ದುಗಳು

ಪೆಪ್ಪರ್‌ಮಿಂಟ್ ಎಣ್ಣೆ
ಪೆಪ್ಪರ್‌ಮಿಂಟ್ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಬೆರೆಸಿ ಜೇಡಗಳು ಇರುವ ಭಾಗದಲ್ಲಿ ಸಿಂಪಡಿಸಿ. ಇವುಗಳು ಸಹ ಜೇಡವನ್ನು ಓಡಿಸುತ್ತವೆ.

English summary

Homemade Natural Ways To Kill Spiders

Nobody really wants to see spiders roaming around in the house. Even though they are harmless creatures, there are some breeds of spiders which are poisonous. Are there any natural ways to kill spiders without exposing ourselves to potentially harmful chemical repellents?
X
Desktop Bottom Promotion