For Quick Alerts
ALLOW NOTIFICATIONS  
For Daily Alerts

ಕೊಠಡಿಯ ಅಂದ ಹೆಚ್ಚಿಸುವ ಗೋಡೆ ಅಲಂಕಾರ

By Super
|

ತಮ್ಮ ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂಬುದು ಪ್ರತಿಯೊಬ್ಬರ ಅಪೇಕ್ಷೆ. ಮನೆಯ ಒಳಾಂಗಣ ಅಲಂಕಾರಕ್ಕೆ ಪೀಠೋಪಕರಣ, ಕಿಟಕಿ ಪರದೆಗಳು, ಟೀವಿ ಸ್ಟ್ಯಾಂಡ್, ಅಲಂಕಾರಿಕಾ ವಸ್ತುಗಳ ಜೊತೆಗೇ ಗೋಡೆಗಳು ಕೊಂಚ ಕಲಾತ್ಮಕವಾಗಿರುವುದೂ ಮುಖ್ಯ. ಎಲ್ಲವೂ ಇದ್ದು ಗೋಡೆಗಳು ಬರೆಯ ಒಂದೇ ಬಣ್ಣದಲ್ಲಿದ್ದರೆ ಮನೆಯ ಒಳಭಾಗ ಸತ್ವವಿಲ್ಲದಿರುವಂತೆ ಅನ್ನಿಸುತ್ತದೆ. ಹಿಂದಿನ ಕಾಲದ ಮನೆಗಳಲ್ಲಿ ಗೋಡೆಗಳ ಅಗಲಕ್ಕೂ ದೇವರ ಪಟಗಳು ಮತ್ತು ಕ್ಯಾಲೆಂಡರ್ ಗಳು ತೂಗು ಬಿದ್ದಿದ್ದು ದೈವಿಕ ಭಾವನೆ ಮೂಡಿಸುತ್ತಿದ್ದವು. ಆದರೆ ಇದಕ್ಕಾಗಿಯೇ ದೇವರ ಕೋಣೆ ಇರಬೇಕಾದರೆ ಮನೆಯ ಎಲ್ಲಾ ಗೋಡೆಗಳ ಮೇಲೆ ಪಟಗಳನ್ನು ಅಥವಾ ಕ್ಯಾಲೆಂಡರುಗಳನ್ನು ಸ್ಥಾಪಿಸುವ ಅಗತ್ಯವೇ ಇಲ್ಲ.

ಅಲ್ಲದೇ ನೋಡುವವರಿಗೆ ಕಣ್ಣಿಗೆ ರಾಚುವಂತೆ ಯಾವುದೋ ಪ್ರಖ್ಯಾತ ಸ್ಥಳ ಅಥವಾ ವ್ಯಕ್ತಿಯ ದೊಡ್ಡ ಪಟಗಳನ್ನು ಪ್ರದರ್ಶಿಸುವುದೂ ಸೂಕ್ತವಲ್ಲ. ಬಿಳಿಗೋಡೆಗಳು ಕೋಣೆಯ ವೈಶಾಲ್ಯ, ಸ್ವಚ್ಛತೆ ಮತ್ತು ಸೂರ್ಯನ ಬೆಳಕನ್ನು ಅತಿಹೆಚ್ಚಾಗಿ ಪ್ರತಿಫಲಿಸಿ ಮನೆಯಲ್ಲಿ ಬೆಳಕಿರುವಂತೆ ನೋಡಿಕೊಳ್ಳುವುದು ಸತ್ಯ.

ಆದರೆ ಈ ಗೋಡೆಗಳಿಗೆ ಕೊಂಚವೇ ಕ್ರಿಯಾತ್ಮಕವಾಗಿ ಆಲೋಚಿಸಿ ಸರಳವಾದ ವಸ್ತು ಅಥವಾ ಕಲೆಯನ್ನು ಸೇರಿಸಿದರೆ ಆ ಕೋಣೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಹೊರಗಿನಿಂದ ಮನೆಗೆ ಆಗಮಿಸಿದ ಬಳಿಕ ಮನಕ್ಕೆ ಸಿಗುವ ಆನಂದ ಮತ್ತು ತೃಪ್ತಿ ಕಲಾತ್ಮಕವಾದ ಗೋಡೆ ಇರುವ ಕೋಣೆಯಲ್ಲಿ ಇನ್ನಷ್ಟು ಮುದಗೊಳ್ಳುತ್ತದೆ. ಬನ್ನಿ ಇಂತಹ ಕಲಾತ್ಮಕವಾದ ಗೋಡೆಗಾಗಿ ಹಲವು ಮಾಹಿತಿಗಳನ್ನು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ... ಗೋಡೆ ಮೇಲೆ ಚಿತ್ತಾರ ಬಿಡಿಸಿವೆ ಭಾವಚಿತ್ರಗಳು

Creative Ways To Glam Up A White Wall

ನಿಮ್ಮ ಸುಂದರ ನೆನಪುಗಳನ್ನು ದಾಖಲಿಸಿ
ನಿಮ್ಮ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಚಿತ್ರಪಟಗಳನ್ನು ಪ್ರಖರ ಬಣ್ಣದ ಅಂಚಿನ ಚೌಕಟ್ಟಿನಲ್ಲಿರಿಸಿ ಕಲಾತ್ಮಕವಾಗಿ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದನ್ನಿಡುವ ಕಾಲ ಸರಿದು ಹೋಗಿದೆ. ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಮೆಟ್ಟಿಲ್ಲಿನಾಕಾರದಲ್ಲಿ ಜೋಡಿಸುವುದು ಕ್ರಿಯಾತ್ಮಕತೆಯ ಲಕ್ಷಣವಾಗಿದೆ. ವಿಶೇಷ ಸಂದರ್ಭಗಳಲ್ಲಿ ಜಗಮಗಿಸುವ ದೀಪಗಳನ್ನೂ ಈ ಪಟಗಳ ಸುತ್ತ ಜೋಡಿಸಿ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಬಣ್ಣದ ಬ್ರಶ್‌ಗೆ ಕೊಂಚ ಕೆಲಸ ನೀಡಿ
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಕಲಾತ್ಮಕವಾಗಿ ಬಿಡಿಸಿ. ವಿವಿಧ ಬಣ್ಣಗಳನ್ನೂ ಬಳಸಿ ಕಲೆಯ ರೂಪಕವೊಂದನ್ನು ಗೋಡೆಯ ಮೇಲೆ ಬರಿಸಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ. ಪ್ರತಿ ಆಕೃತಿಗೂ ಪ್ರಖರವಾಗ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯತೆ ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತಿವೆ ಇವುಗಳಲ್ಲಿ ಸೂಕ್ತವಾದುದನ್ನು ಆರಿಸಿ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಬಹುದು.

ಗೋಡೆಯಲ್ಲಿ ಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ ಇರಲಿ
ಬಿಳಿಗೋಡೆಗಳಿಗೆ ಗಾಢ ಬಣ್ಣದ ಕಿಟಕಿ ಮತ್ತು ಬಾಗಿಲ ಪರದೆಗಳೇ ಸೂಕ್ತ. ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದುಬಣ್ಣದ ರತ್ನಗಂಬಳಿ ಸೂಕ್ತವಾದರೆ ಇದೇ ಬಣ್ಣದ ಕಿಟಕಿ ಪರದೆಗೂ ಉತ್ತಮವಾದ ಮೆರುಗು ನೀಡುತ್ತದೆ. ಆದರೆ ಪೀಠೋಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿಬಣ್ಣದಲ್ಲಿರಲಿ. ಇದು ಹಿಂಭಾಗದ ಗಾಢವರ್ಣದ ರತ್ನಗಂಬಳಿ ಮತ್ತು ಪರದೆಗಳ ಹಿಮ್ಮೇಳದಲ್ಲಿ ಎದ್ದು ಕಾಣುತ್ತವೆ.

ಪುಸ್ತಕದ ಕಪಾಟೊಂದನ್ನು ಇರಿಸಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಪುಸ್ತಕಗಳಿದ್ದರೆ ಅದನ್ನು ಜೋಡಿಸಲು ಪುಸ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೊ ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕ ಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳೂ ಸರಿ. ಆದರೆ ಇವು ಗಾಢವರ್ಣದಲ್ಲಿದ್ದು ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಕಾಣುವಂತಿರಬೇಕು. ಎಲ್ಲಾ ಪುಸ್ತಕ ಮತ್ತು ಇತರ ಚಿಕ್ಕಪುಟ್ಟ ವಸ್ತುಗಳನ್ನು ಇದರ ಸೆಳೆಖಾನೆಯಲ್ಲಿರಿಸಿ. ಪೀಠೋಪಕರಣಗಳ ಅಥವಾ ಇತರ ವಸ್ತುಗಳ ಮೇಲೆ ಚಿಲ್ಲಾಪಿಲ್ಲಿಯಾಗಿರದಂತೆ ನೋಡಿಕೊಳ್ಳಿ.

ಗಾಢವರ್ಣದ ಅಲಂಕಾರಿಕಾ ವಸ್ತುಗಳನ್ನು ಸ್ಥಾಪಿಸಿ
ಬಿಳಿಯ ಬಣ್ಣದ ಗೋಡೆಯ ಹಿನ್ನೆಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಅಲಂಕಾರಿಕಾ ವಸ್ತುಗಳನ್ನು ಸ್ಥಾಪಿಸಿ ಮನೆಯ ಅಂದವನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮನೆಯ ಸೋಫಾ ಸೆಟ್ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರುವಂತಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುತ್ತಿರಬೇಕು. ಒಂದು ವೇಳೆ ಇಲ್ಲದಿದ್ದರೆ ಒಂದು ಹೆಚ್ಚುವರಿ ಬಲ್ಬ್ ಅಥವಾ ಟ್ಯೂಬ್ ಲೈಟ್ ಸ್ಥಾಪಿಸಿ ಬೆಳಕು ಸಾಕಷ್ಟಿರುವಂತೆ ನೋಡಿಕೊಳ್ಳಿ.

English summary

Creative Ways To Glam Up A White Wall

White walls in a home are totally uncool! There is absolutely nothing to admire from a white wall, which is why we have introduced some of the creative things you can do to add glamour to this form of purity. White walls, no doubt are the best for Indian homes as it creates a balance in making your home look bigger, provides natural light and on the other hand,
X
Desktop Bottom Promotion