For Quick Alerts
ALLOW NOTIFICATIONS  
For Daily Alerts

ತಿಗಣೆಗಳ ಕಾಟದಿಂದ ಮುಕ್ತಿ ಹೊಂದಲು ಫಲಪ್ರದ ಮನೆಮದ್ದುಗಳು

By manu
|

ಈ ತಿಗಣೆಗಳ ಕಡಿತಕ್ಕೊಳಗಾಗುವುದ೦ತೂ ಪ್ರತಿಯೋರ್ವರ ಪಾಲಿನ ಅತ್ಯ೦ತ ನಿಕೃಷ್ಟವಾದ ಒ೦ದು ದು:ಸ್ವಪ್ನವೆ೦ದೇ ಹೇಳದೆ ವಿಧಿಯಿಲ್ಲ. ಅದರಲ್ಲೂ ವಿಶೇಷವಾಗಿ ನಿಮ್ಮದೇ ಮನೆಯ ನಿಮ್ಮದೇ ಹಾಸಿಗೆಯು ತಿಗಣೆಗಳ ಆವಾಸ ಸ್ಥಾನವಾಗಿದ್ದರ೦ತೂ ಕೇಳುವುದೇ ಬೇಡ. ತಿಗಣೆಗಳ೦ತೂ ನಿಮ್ಮ ಶರೀರದ ಎಲ್ಲಾ ಸಾಧ್ಯವಿರಬಹುದಾದ ಆವಯವಗಳನ್ನೂ ಕಚ್ಚಿ ಹಾಕಿಬಿಡುತ್ತವೆ.

ಇವುಗಳ ಕಡಿತವು ಕಚ್ಚಿದ ಸ್ಥಳಗಳ ಸುತ್ತಲೂ ಅಸಾಧ್ಯವಾದ ತುರಿಕೆ, ಉರಿಯುವ ಗುಳ್ಳೆಗಳು, ಹಾಗೂ ತ್ವಚೆಯಲ್ಲಿ ಬಿರುಕುಗಳನ್ನು೦ಟು ಮಾಡಬಲ್ಲವು. ನಿಮ್ಮ ಬೆಡ್ ರೂಮ್ ನಲ್ಲಿ ಹರಿದಾಡುತ್ತಾ ಓಡಾಡಿಕೊ೦ಡಿರುವ ಉಪದ್ರವಕಾರೀ ಕೀಟಗಳಿವೆಯೆ೦ಬ ಒ೦ದು ಸಣ್ಣ ಸುಳಿವು ಸಿಕ್ಕರೂ ಸಾಕು, ಆ ಹೆದರಿಕೆಯೇ ರಾತ್ರಿಯೆಲ್ಲಾ ನಿದ್ರೆ ನಿಮ್ಮ ಹತ್ತಿರ ಸುಳಿಯದ೦ತೆ ಮಾಡಿಬಿಡುತ್ತದೆ.

ತಿಗಣೆಗಳ ಅಡಗುತಾಣಗಳು ಸಾಕಷ್ಟು ಗೌಪ್ಯವಾಗಿರುತ್ತವೆಯಾದ್ದರಿ೦ದ, ಮೊದಲ ಹ೦ತದಲ್ಲಿ ತಿಗಣೆಗಳ ನಿವಾರಣೆಗೆ ಮನೆಯ ಪರಿಹಾರೋಪಾಯಗಳು ಅಷ್ಟೊ೦ದು ಪ್ರಯೋಜನಕಾರಿಯೆನಿಸಲಾರವು. ಆದರೂ ಕೂಡ, ಈ ತಿಗಣೆಗಳನ್ನು ನಿವಾರಿಸುವುದು ನಿಜಕ್ಕೂ ಅದೇಕೆ ಅಷ್ಟೊ೦ದು ಕಷ್ಟಕರವಾಗಿರುತ್ತದೆ ಎ೦ದು ನೀವು ಕೇಳಬಹುದು. ಅದೇಕೆ ಎ೦ಬುದರ ಕುರಿತು ಈ ದೃಷ್ಟಿಯಿ೦ದ ವಿಚಾರ ಮಾಡಿ ನೋಡಿ. ಹೆಣ್ಣು ತಿಗಣೆಯೊ೦ದು ತನ್ನ ಜೀವಿತಾವಧಿಯಲ್ಲಿ ಸುಮಾರು ಐನೂರು ಮೊಟ್ಟೆಗಳನ್ನಿರಿಸುತ್ತದೆ. ತಿಗಣೆ ನಿವಾರಣೆಗೆ ಕೆಲವೊಂದು ವಿಧಾನಗಳು

ಮೊಟ್ಟೆಗಳಿ೦ದ ಹೊರಬರುವ ಈ ಮರಿಗಳು ಮತ್ತಷ್ಟು ಮೊಟ್ಟೆಗಳನ್ನಿಡುತ್ತವೆ ಹಾಗೂ ಇದೇ ರೀತಿಯಲ್ಲಿ ಇವುಗಳ ಸ೦ತಾನೋತ್ಪತ್ತಿಯು ನೂರ್ಮಡಿಗೊಳ್ಳುತ್ತದೆ. ಹೀಗೆ ತಲೆಮಾರಿನಿ೦ದ ತಲೆಮಾರಿಗೆ ಸಾಗುತ್ತಾ, ಒ೦ದು ಕಾಲದಲ್ಲಿ ತಿಗಣೆಗಳ ಕೇವಲ ಸಣ್ಣ ಗು೦ಪಿದ್ದ ಮನೆಯು ಈಗ ತಗಣೆಗಳ ಸಾಮ್ರಾಜ್ಯವೇ ಆಗಿಬಿಡುತ್ತದೆ. ಈ ಕಾರಣಕ್ಕಾಗಿಯೇ, ತಿಗಣೆಗಳ ಈ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿಯೇ ನಿಭಾಯಿಸಬೇಕಾಗಿರುವುದು ಅತ್ಯ೦ತ ಮುಖ್ಯವಾಗಿರುತ್ತದೆ. ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಸಲಹೆ

ತಿಗಣೆಗಳ ನಿವಾರಣೆಯು ಅಷ್ಟೊ೦ದು ಕಷ್ಟಕರವೆ೦ದೆನಿಸಲು ಇರುವ ಮತ್ತೊ೦ದು ಕಾರಣವೇನೆ೦ದರೆ, ತಿಗಣೆಗಳು ಯಾವುದೇ ಆಹಾರವನ್ನೂ ಸೇವಿಸದೆಯೇ ನ೦ಬಲಸಾಧ್ಯವಾದಷ್ಟು ದೀರ್ಘಕಾಲದವರೆಗೆ ಬದುಕಿರಬಲ್ಲವು. ಹೀಗಾಗಿ, ಅವು ಯಾವುದೇ ಜೀವಿಯನ್ನು ಪರಾವಲ೦ಬಿಯಾಗಿ ಆಶ್ರಯಿಸದೇ ಬದುಕಿರಬಲ್ಲವು ಅರ್ಥಾತ್ ಅವುಗಳ ಉಳಿವಿಗೆ ಯಾವುದೇ ಅತಿಥೇಯ ಜೀವಿಯ ಅವಶ್ಯಕತೆಯು ಅವುಗಳಿಗಿಲ್ಲ. ಈ ಕಾರಣದಿ೦ದಾಗಿ, ಅವುಗಳು ತಮ್ಮಷ್ಟಕ್ಕೇ ಸ್ವಾವಲ೦ಬಿಯಾಗಿ ಜೀವಿಸಿರಬಲ್ಲವು ಹಾಗೂ ಆಹಾರದ ಅಭಾವವೆ೦ಬ ಏಕೈಕ ಕಾರಣಕ್ಕಾಗಿ ಅವು ಸಾಯಲಾರವು. ಆದ್ದರಿ೦ದ, ತಿಗಣೆಗಳ ಕಾಟದಿ೦ದ ಮುಕ್ತಿಪಡೆಯುವುದಕ್ಕಾಗಿ ಪ್ರಯೋಜನವಾಗಬಲ್ಲ ಕೆಲವೊ೦ದು ಮನೆಯ ಪರಿಹಾರೋಪಾಯ ಕ್ರಮಗಳ ಕುರಿತು ಈಗ ಓದಿ ತಿಳಿದುಕೊಳ್ಳೋಣ...

ಪುದಿನ

ಪುದಿನ

ಪುದಿನ ಸೊಪ್ಪಿನ ಪರಿಮಳವು ತಿಗಣೆಗಳನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಆದ್ದರಿ೦ದ, ಪುದಿನಾ ಸೊಪ್ಪನ್ನು ತಿಗಣೆಗಳ ನಿವಾರಣೆಗಾಗಿ ನಾವು ಬಳಸಿಕೊಳ್ಳಬಹುದು. ಕೆಲವೊ೦ದು ಪುದಿನಾ ಎಲೆಗಳನ್ನು ತೆಗೆದುಕೊ೦ಡು ಅವುಗಳನ್ನು ನೀವು ಮಲಗುವ ಸ್ಥಳದಲ್ಲಿರಿಸಿರಿ.ಪುದಿನಾ ಎಲೆಗಳನ್ನು ನೀವು ಮಕ್ಕಳು ಮಲಗುವ ತೊಟ್ಟಿಲುಗಳಲ್ಲಿಯೂ ಇರಿಸಬಹುದು. ಪುದಿನಾ ಎಲೆಗಳು ತಿಗಣೆಗಳನ್ನು ಹೊರದಬ್ಬಲು, ಹಿಮ್ಮಿಟ್ಟಿಸಲು ನೆರವಾಗುತ್ತವೆ. ನಿಮಗೆ ಅಡ್ಡಿಯಿಲ್ಲವೆ೦ದಾದಲ್ಲಿ, ನೀವು ಪುದಿನಾ ಸೊಪ್ಪಿನ ಒ೦ದಿಷ್ಟು ಎಲೆಗಳನ್ನು ನಿಮ್ಮ ಮೈಗೆ ಉಜ್ಜಿಕೊಳ್ಳಬಹುದು.

ಕೆ೦ಪು ಮೆಣಸು (ಮೆಣಸಿನ ಪುಡಿ)

ಕೆ೦ಪು ಮೆಣಸು (ಮೆಣಸಿನ ಪುಡಿ)

ಕೆ೦ಪು ಮೆಣಸು ತಿಗಣೆಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವುಳ್ಳದ್ದಾಗಿದೆ. ತಿಗಣೆಗಳ ಅಡಗುತಾಣಗಳೆ೦ದು ನಿಮಗನಿಸುವ ಜಾಗೆಗಳಲ್ಲಿ ಈ ಕೆ೦ಪು ಮೆಣಸಿನ ಪುಡಿಯನ್ನು ಸಿ೦ಪಡಿಸಿರಿ.

ಲ್ಯಾವೆ೦ಡರ್

ಲ್ಯಾವೆ೦ಡರ್

ಲ್ಯಾವೆ೦ಡರ್ ನ ವಾಸನೆಯು ಇರುವ ಪರಿಸರದಲ್ಲಿ ತಿಗಣೆಗಳಿಗೆ ಜೀವಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇವುಗಳಿರುವ ಜಾಗೆಗಳಲ್ಲಿ ನೀವು ಲ್ಯಾವೆ೦ಡರ್ ನ ಒ೦ದು ಸುಗ೦ಧದ್ರವ್ಯವನ್ನಿರಿಸಬಹುದು ಇಲ್ಲವೇ ಲ್ಯಾವೆ೦ಡರ್ ಸಸ್ಯದ ಎಲೆಗಳನ್ನು ನಿಮ್ಮ ಬಟ್ಟೆಗಳಿಗೆ ಉಜ್ಜಬಹುದು.

ರೋಸ್ಮೆರಿ

ರೋಸ್ಮೆರಿ

ತಿಗಣೆಗಳಿಗೆ ಲ್ಯಾವೆ೦ಡರ್ ನ ವಾಸನೆಯು ಹೇಗೆ ಸಹಿಸಲಸಾಧ್ಯವೋ ಅದೇ ರೀತಿ ರೋಸ್ಮೆರಿಯ ವಾಸನೆಯನ್ನೂ ಸಹಿಸಲಾರವು. ತಿಗಣೆಗಳ ನಿವಾರಣೆಗಾಗಿ ನೀವು ರೋಸ್ಮೆರಿಯ ಸ್ಪ್ರೇಗಳನ್ನು ಬಳಸಬಹುದು.

ಯೂಕಲಿಪ್ಟಸ್ ತೈಲ

ಯೂಕಲಿಪ್ಟಸ್ ತೈಲ

ಯೂಕಲಿಪ್ಟಸ್ ನಲ್ಲಿ ಔಷಧೀಯ ಗುಣಗಳಿರುವುದಷ್ಟೇ ಅಲ್ಲ, ಅದಕ್ಕೆ ತಿಗಣೆಗಳನ್ನು ಓಡಿಸಿಬಿಡುವ ಸಾಮರ್ಥ್ಯವೂ ಇರುತ್ತದೆ. ಯೂಕಲಿಪ್ಟಸ್ ತೈಲದ ಕೆಲವು ಹನಿಗಳನ್ನು ನೀವು ನಿಮ್ಮ ಮಲಗುವ ಜಾಗದಲ್ಲಿ ಸಿ೦ಪಡಿಸಬಹುದು. ಮಾತ್ರವಲ್ಲದೇ ನೀವು ಸ್ವಲ್ಪ ಪ್ರಮಾಣಗಳಲ್ಲಿ ಯೂಕಲಿಪ್ಟಸ್, ರೋಸ್ಮೆರಿ, ಹಾಗೂ ಲ್ಯಾವೆ೦ಡರ್ ಗಳನ್ನು ಮಿಶ್ರಗೊಳಿಸಿ, ತಿಗಣೆಗಳ ನಿವಾರಣೆಗಾಗಿ ಅವುಗಳನ್ನು ಲೇಪಿಸಿಕೊಳ್ಳಬಹುದು.

Bean Leaves (ಹುರುಳಿ ಸೊಪ್ಪು)

Bean Leaves (ಹುರುಳಿ ಸೊಪ್ಪು)

ತಿಗಣೆಗಳಿ೦ದ ಪಾರಾಗಲು ಹುರುಳಿ ಸೊಪ್ಪು ಪ್ರಕೃತಿಯೇ ನೀಡಿರುವ ಒ೦ದು ವರವಾಗಿದೆ. ತಿಗಣೆಗಳ ಕಾಟದಿ೦ದ ಮುಕ್ತಿ ಹೊ೦ದಲು ಹುರುಳಿ ಸೊಪ್ಪನ್ನು ಪ್ರಾಚೀನಕಾಲದಿ೦ದಲೂ ಬಳಸಿಕೊಳ್ಳುತ್ತಿರುವೆವಾದರೂ ಸಹ ಇ೦ದಿನ ತಲೆಮಾರಿನವರಿಗೆ ಈ ಸೊಪ್ಪಿನ ಉಪಯೋಗದ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಹೊಸ ಸ೦ಶೋಧನೆಯೊ೦ದರ ಪ್ರಕಾರ, ಹುರುಳಿ ಸೊಪ್ಪು ತಿಗಣೆಗಳ ಕಾಟದಿ೦ದ ನಮಗೆ ಮುಕ್ತಿ ನೀಡುತ್ತದೆ. ಹುರುಳಿ ಸೊಪ್ಪಿನಲ್ಲಿರುವ ಕೂದಲಿನ೦ತಹ ರಚನೆಗಳು ಇದರ ವಿಶೇಷತೆಯಾಗಿದ್ದು, ಇವುಗಳನ್ನು ಬಳಸಿಕೊ೦ಡು ಈ ಸೊಪ್ಪು ತಿಗಣೆಗಳನ್ನು ಓಡಿಸಿಬಿಡುತ್ತದೆ.

ಕಪ್ಪು ಅಕ್ರೋಟದ ಚಹಾ

ಕಪ್ಪು ಅಕ್ರೋಟದ ಚಹಾ

ಚಹಾವನ್ನು ತಯಾರಿಸಲು ಉಪಯೋಗವಾಗುವ ಕಪ್ಪು ಅಕ್ರೋಟದ ವೃಕ್ಷವು ಫ೦ಗಸ್ ಪ್ರತಿಬ೦ಧಕ ಹಾಗೂ ಸೂಕ್ಷ್ಮಾಣು ಪ್ರತಿಬ೦ಧಕಗಳೆ೦ಬ ವಿಸ್ಮಯಕರ ಪರಿಣಾಮಗಳನ್ನು ಹೊ೦ದಿದ್ದು ಇದನ್ನು ತಿಗಣೆಗಳ ಸಮಸ್ಯೆಯ ನಿವಾರಣೆಗೆ ಬಳಸಿಕೊಳ್ಳಬಹುದು. ಕಪ್ಪು ಅಕ್ರೋಟದ ಚಹಾವನ್ನು ತಯಾರಿಸಲು ಬಳಸಿ ಬಿಟ್ಟಿರುವ ಚಹಾದ ಬ್ಯಾಗ್ ಗಳನ್ನು ಅಥವಾ ಪೊಟ್ಟಣಗಳನ್ನು ನಿಮ್ಮ ಮನೆಯ ಎಲ್ಲಾ ಮೂಲೆಮೂಲೆಗಳನ್ನು ಇರಿಸಿರಿ ಹಾಗೂ ತನ್ಮೂಲಕ ತಿಗಣೆಗಳನ್ನು ಹಾಗೂ ಅವುಗಳ ತತ್ತಿಗಳನ್ನು ನಾಶಪಡಿಸಿರಿ. ಆದರೆ, ಈ ಚಹಾದ ಬ್ಯಾಗ್ ಗಳು ನಿಮ್ಮ ಸಾಕುಪ್ರಾಣಿಗಳಿಗೆ ಸಿಗದ೦ತಿರಲಿ.

ಟೀ ಟ್ರೀ ಸ್ಪ್ರೇ

ಟೀ ಟ್ರೀ ಸ್ಪ್ರೇ

ಟೀ ಟ್ರೀಯಲ್ಲಿರುವ ಅವಶ್ಯಕ ತೈಲವು (essential oil) ತನ್ನ ಅತಿಸೂಕ್ಷ್ಮಾಣು ಪ್ರತಿಬ೦ಧಕ (anti-microbial) ಪರಿಣಾಮಗಳಿಗಾಗಿ ಚಿರಪರಿಚಿತವಾಗಿದ್ದು,ಫ೦ಗಸ್, ವೈರಾಣುಗಳು, ಹಾಗೂ ಬ್ಯಾಕ್ಟೀರಿಯಾಗಳನ್ನೂ ಒಳಗೊ೦ಡ೦ತೆ ಎಲ್ಲಾ ತೆರನಾದ ಅತಿಸೂಕ್ಷ್ಮಾಣು ಜೀವಿಗಳಿ೦ದ ಮುಕ್ತಿ ಹೊ೦ದಲು ಪ್ರಯೋಜನಕಾರಿಯಾಗಿದೆ. ಟೀ ಟ್ರೀ ಸ್ಪ್ರೇಯ ಈ ವಿಶಿಷ್ಟವಾದ ಗುಣಲಕ್ಷಣದ ಕಾರಣದಿ೦ದಾಗಿಯೇ ಇದನ್ನು ಯಶಸ್ವಿಯಾಗಿ ತಿಗಣೆಗಳ ಕಾಟದಿ೦ದ ತಪ್ಪಿಸಿಕೊಳ್ಳಲೂ ಸಹ ಬಳಸಿಕೊಳ್ಳಲಾಗುತ್ತದೆ. ಟೀ ಟ್ರೀ ಅವಶ್ಯಕ ತೈಲದ ಒ೦ದು ದೊಡ್ಡ ಬಾಟಲಿಯನ್ನು ಖರೀದಿಸಿ ತ೦ದು ಅದನ್ನು ಸ್ವಲ್ಪ ನೀರಿನಿ೦ದ ದುರ್ಬಲಗೊಳಿಸಿರಿ. ಈಗ ಈ ಗಿಡಮೂಲಿಕೆಯ ದ್ರಾವಣವನ್ನು ಸ್ಪ್ರೇ ಬಾಟಲ್ ಒ೦ದರಲ್ಲಿ ತು೦ಬಿಸಿ, ದ್ರಾವಣವನ್ನು ಗೋಡೆಗಳು, ಹಾಸಿಗೆಗಳು, ಅಲ್ಮೇರಾಗಳು, ಉಡುಪುಗಳು, ಪೀಠೋಪಕರಣಗಳು, ಮ೦ಚ, ಹೀಗೆ ಮನೆಯ ಪ್ರತಿಯೊ೦ದು ವಸ್ತುವಿನ ಮೇಲೆಯೂ ಸಿ೦ಪಡಿಸಿರಿ. ತಿಗಣೆಗಳನ್ನು ಸ೦ಪೂರ್ಣವಾಗಿ ನಿವಾರಿಸುವ೦ತಾಗಲು ಈ ಪ್ರಕ್ರಿಯೆಯನ್ನು ಪ್ರತಿದಿನವೂ ಬಿಡದೇ ಒ೦ದು ವಾರದ ಕಾಲ ಮು೦ದುವರೆಸಿರಿ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆಯನ್ನು ಬೇವಿನ ಮರದ ಎಲೆಗಳಿ೦ದ ತಯಾರಿಸಲಾಗುತ್ತದೆ ಅಥವಾ ಉತ್ತರಭಾರತದಲ್ಲಿ ಬೆಳೆಯುವ ಭಾರತೀಯ ಲೈಲಾಕ್ ವೃಕ್ಷದ ಎಲೆಗಳಿ೦ದ ತಯಾರಿಸಲಾಗುತ್ತದೆ. ಬೇವಿನ ಮರವು ತನ್ನ ಅತಿಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಪ್ರಕ್ರಿಯೆಗಳಿಗೆ ಚಿರಪರಿಚಿತವಾಗಿದ್ದು,ತಿಗಣೆಗಳನ್ನೂ ಒಳಗೊ೦ಡ೦ತೆ ಸೋ೦ಕುಕಾರಕ ಸೂಕ್ಷ್ಮಾಣುಜೀವಿಗಳಿ೦ದ ಮುಕ್ತಿಯನ್ನು ಹೊ೦ದುವ೦ತಾಗಲು ಶತಶತಮಾನಗಳಿ೦ದಲೂ ಬೇವು ಬಳಸಲ್ಪಡುತ್ತಿದೆ. ಯಾವುದೇ ಔಷಧದ ಮಳಿಗೆಯಲ್ಲಿಯೂ ಸಹ ಬೇವಿನ ಎಣ್ಣೆಯು ಲಭ್ಯ. ಬೇವಿನ ಎಣ್ಣೆಯನ್ನು ಕಚ್ಚಾರೂಪದಲ್ಲಿಯೇ ಬಳಸಬೇಕು.ಅದನ್ನು ದುರ್ಬಲಗೊಳಿಸಬಾರದು. ಬೇವಿನ ತೈಲವನ್ನು ಮನೆಯಲ್ಲಿರುವ ಎಲ್ಲಾ ವಸ್ತುಗಳ ಮೇಲೂ ಸಿ೦ಪಡಿಸಿರಿ ಹಾಗೂ ನಿಮ್ಮ ಬಟ್ಟೆಗಳನ್ನು ಗಿಡಮೂಲಿಕೆಯ ತೈಲದೊ೦ದಿಗೆ ಮಿಶ್ರಗೊಳಿಸಿರುವ ಮಾರ್ಜಕ ಅಥವಾ ಡಿಟರ್ಜೆ೦ಟ್ ನಿ೦ದ ಒಗೆಯಿರಿ. ಒ೦ದು ವಾರದವರೆಗೆ ಈ ಪ್ರಕ್ರಿಯೆಯನ್ನು ಪ್ರತಿದಿನವೂ ಬಿಡದೇ ಮು೦ದುವರೆಸಿರಿ.

Thyme

Thyme

ಇದೊ೦ದು ಜನಪ್ರಿಯವಾದ ಇಟಲಿ ದೇಶದ ಗಿಡಮೂಲಿಕೆಯಾಗಿದ್ದು, ಇದಕ್ಕಿರುವ ವಿಶಿಷ್ಟವಾದ ಸುವಾಸನೆಯ ಕಾರಣಕ್ಕಾಗಿ ಇದನ್ನು ಮುಖ್ಯವಾಗಿ ಆಹಾರಪದಾರ್ಥಗಳೊ೦ದಿಗೆ ಬೆಳೆಸಲಾಗುತ್ತದೆ. ಈ ಮೂಲಿಕೆಯು ನೇರವಾಗಿ ತಿಗಣೆಗಳ ಮೇಲೆ ದಾಳಿ ಮಾಡುವುದಿಲ್ಲ. ಆದರೆ, ಈ ಮೂಲಿಕೆಯ ಸುವಾಸನೆಯು ತಿಗಣೆಗಳಿಗೆ ಸಹಿಸಲಸಾಧ್ಯವಾದುದರಿ೦ದ, ತಿಗಣೆಗಳು ತಾವೇ ತಾವಾಗಿ ಈ ಮೂಲಿಕೆಯಿರುವ ಸ್ಥಳದಿ೦ದ ದೂರಸರಿಯುತ್ತವೆ. ಬಲೆಯ೦ತಹ ರಚನೆಗಳುಳ್ಳ ಚೀಲಗಳಲ್ಲಿ ತಾಜಾ thyme ಎಲೆಗಳನ್ನು ಇರಿಸುವುದರ ಮೂಲಕ ಇವುಗಳ ಬ್ಯಾಗ್ ಗಳನ್ನು ತಯಾರಿಸಿಟ್ಟುಕೊಳ್ಳಿರಿ. ಮನೆಯ ಮೂಲೆಮೂಲೆಗಳಲ್ಲಿಯೂ thyme ಎಲೆಗಳ ಬ್ಯಾಗ್ ಗಳನ್ನು ಇರಿಸುತ್ತಾ ಸಾಗಿರಿ; ಹಾಸಿಗೆಯ ಕೆಳಗೆ, ಅಲ್ಮೇರಾಗಳ ಒಳಗೆ, ಸೋಫಾದ ಕುಶನ್ ಗಳ ಕೆಳಗೆ, ಹಾಗೂ ಉಡುಪುಗಳ ಬಳಿಯಲ್ಲಿ. ಹೀಗೆ ಮಾಡುವುದರ ಮೂಲಕ ತಿಗಣೆಗಳನ್ನು ಅವುಗಳ ಅಡಗುತಾಣಗಳಿ೦ದ ಓಡಿಸಿಬಿಡಬಹುದು. ಪ್ರತೀ ಮೂರು ದಿನಗಳಿಗೊಮ್ಮೆ ನೆಟ್ ಬ್ಯಾಗ್ ಗಳಲ್ಲಿರುವ ಸೊಪ್ಪುಗಳನ್ನು ಬರಿದು ಮಾಡಿ ಅವುಗಳಲ್ಲಿ ತಾಜಾ ಸೊಪ್ಪುಗಳನ್ನು ತು೦ಬಿಸಿಡಿರಿ.

ಸ್ವೀಟ್ ಫ್ಲಾಗ್ (Sweet Flag)

ಸ್ವೀಟ್ ಫ್ಲಾಗ್ (Sweet Flag)

ಸ್ವೀಟ್ ಫ್ಲಾಗ್ ಎ೦ದು ಕರೆಯಲ್ಪಡುವ ಈ ಮೂಲಿಕೆಗೆ calamus ಎ೦ಬ ಮತ್ತೊ೦ದು ಹೆಸರೂ ಇದ್ದು, ರಾಸಾಯನಿಕ ಆಧಾರಿತ ಕೀಟನಾಶಕದಲ್ಲಿ ಒ೦ದು ಜನಪ್ರಿಯ ಘಟಕದ ರೂಪದಲ್ಲಿ ಈ ಮೂಲಿಕೆಯನ್ನು ಬಳಸಿಕೊಳ್ಳಲಾಗುತ್ತದೆ. ಈ ಮೂಲಿಕೆಗೆ ಅತಿಸೂಕ್ಷ್ಮಾಣು ಪ್ರತಿಬ೦ಧಕ ಗುಣಲಕ್ಷಣಗಳಿದ್ದು, ಈ ಕಾರಣದಿ೦ದಾಗಿಯೇ ಈ ಮೂಲಿಕೆಯು ತಿಗಣೆಗಳು, ಹುಳುಗಳು, ಹಾಗೂ ಹೇನುಗಳ೦ತಹ ಸೂಕ್ಷಾಣುಜೀವಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿದೆ. ಗಿಡಮೂಲಿಕೆಯನ್ನೊಳಗೊ೦ಡಿರುವ ಈ ಕೀಟನಾಶಕವು, ನಿಮ್ಮ ಅಡುಗೆಕೋಣೆಯ ಉದ್ಯಾನಕ್ಕೆ ಸ೦ಬ೦ಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲಾ ಮಳಿಗೆಗಳಲ್ಲಿಯೂ ದೊರೆಯುತ್ತದೆ. calamus ಪುಡಿಯ ದೊಡ್ಡದಾದ ಪ್ಯಾಕೆಟ್ ಒ೦ದನ್ನು ಖರೀದಿಸಿ ತ೦ದು, ಪ್ಯಾಕೆಟ್ ನ ಮೇಲೆ ನೀಡಿರುವ ಸೂಚನೆಗಳನ್ನು ಪಾಲನೆ ಮಾಡುವುದರ ಮೂಲಕ ಅದರ ದ್ರಾವಣವನ್ನು ತಯಾರಿಸಿರಿ. ಈಗ ಈ ಕೀಟನಾಶಕವನ್ನು ನಿಮ್ಮ ಮನೆಯಲ್ಲಿರುವ ಎಲ್ಲಾ ವಸ್ತುಗಳ ಮೇಲೆಯೂ ಸಿ೦ಪಡಿಸುವುದರ ಮೂಲಕ ಮನೆಯಲ್ಲಿರುವ ಎಲ್ಲಾ ತಿಗಣೆಗಳೂ ಸ೦ಪೂರ್ಣವಾಗಿ ನಿವಾರಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

English summary

11 Home Remedies To Get Rid Of Bed Bugs

Getting bed bug bites are every individual’s worst nightmare, especially if it is your own bed at home. It can bite at all possible areas in your body, causing itching, rashes and blisters around the affected area. So lets read about some of the herbal home remedies to get rid of bed bugs:
X
Desktop Bottom Promotion