For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮನೆಯಲ್ಲಿನ ಅಮೂಲ್ಯ ವಸ್ತುಗಳ ರಕ್ಷಣೆ ಹೇಗೆ?

By Viswanath S
|

ನಿಮ್ಮ ಬಟ್ಟೆಗಳು ಮತ್ತು ಪಾದರಕ್ಷೆಗಳನ್ನಲ್ಲದೆ ನಿಮ್ಮ ಮನೆಯನ್ನೂ ಸಹ ಮಳೆಗಾಲದಲ್ಲಿ ವಿಶೇಷ ಕಾಳಜಿ ವಹಿಸಿ ರಕ್ಷಿಸಬೇಕು. ನಿಮ್ಮ ಪೀಠೋಪಕರಣ, ಅವುಗಳ ಮೇಲಿನ ಚರ್ಮದ ಅಥವ ಬಟ್ಟೆಯ ಹೊದಿಕೆಗಳು, ಒಡವೆಗಳು ಹಾಗೂ ಎಲೆಕ್ಟ್ರಾನಿಕ್ ಸಲಕರಣೆಗಳು ಇವೆಲ್ಲವೂ ಮಳೆಗಾಲದಲ್ಲಿ ತೇವಾಂಶದ ಹಾನಿಗೊಳಗಾಗುವ ಸಂಭವಗಳಿವೆ. ಆದಾಗ್ಯೂ, ಸ್ವಲ್ಪ ಎಚ್ಚರಿಕೆ ವಹಿಸಿದರೆ ನಿಮ್ಮ ಸಂಬಂಧಪಟ್ಟ ಸಾಮಾನುಗಳನ್ನು ಹಾನಿಯಿಂದ ರಕ್ಷಿಸಬಹುದು. ಅದು ಹೇಗೆ ಮಾಡುವುದೆಂಬುದನ್ನು ಮುಂದೆ ಓದಿ:

ವಾರ್ಡ್‌ರೋಬ್ (ಬಟ್ಟೆ ಬೀರು) ಮತ್ತು ಬಟ್ಟೆಗಳು

ಮಳೆಗಾಲದಲ್ಲಿ ಬಟ್ಟೆಗಳು ಸಂಪೂರ್ಣವಾಗಿ ಒಣಗುವ ಹಾಗೆ ಮಾಡುವ ಕಾರ್ಯ ಮನೆಗಳಲ್ಲಿ ಎದುರಿಸಬೇಕಾದ ಸಾಮಾನ್ಯವಾದ ವಿಷಯ. ಬಟ್ಟೆಗಳು ಸಾಕಷ್ಟು ಒಣಗದೇ ಮಡಿಚಿಟ್ಟಿದ್ದರೆ ನಂತರ ಬಟ್ಟೆಗಳು ಕೆಟ್ಟವಾಸನೆಯಿಂದ ಕೂಡಿ ಇನ್ನೊಮ್ಮೆ ಒಗೆಯುವವವರೆಗೆ ಇರುತ್ತದೆ. ನಿಮ್ಮ ವಾರ್ಡ್ರೋಬನ್ನು ತೇವಾಂಶರಹಿತವನ್ನಾಗಿ ಮಾಡಬೇಕೆಂದಿದ್ದರೆ ಅಲ್ಲಲ್ಲಿ ಕರ್ಪೂರದ ಗೋಲಿಗಳನ್ನು ಇಟ್ಟರೆ ಅದು ತೇವಾಂಶವನ್ನು ಹೀರಿಕೊಳ್ಳಲು ಸಹಾಯಮಾಡುತ್ತವೆ. ನಿಮ್ಮ ವಾರ್ಡ್ರೋಬನ್ನು ತೇವಾಂಶವಿಲ್ಲದೆ ಶುಭ್ರವಾಗಿಟ್ಟುಕೊಳ್ಳದಿದ್ದರೆ ಶಿಲೀಂದ್ರದಿಂದ (Fungus) ಆವರಿಸಿ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಯಾವಾಗಲೂ ಕಲೆಗಳನ್ನು ಉತ್ತಮ ಶುಚಿಗೊಳಿಸುವ ವಸ್ತುಗಳಿಂದ ತೆಗೆಯಿರಿ. ಒದ್ದೆ ಅಥವ ತೇವಾಂಶವಿರುವ ಬಟ್ಟೆಗಳನ್ನು ಒಳಗೆ ಇಡಬೇಡಿ. ಕಾಲಕಾಲಕ್ಕೆ ಬಟ್ಟೆಗಳನ್ನು ಗಾಳಿ ಒಡಾಡುವ ಸ್ಥಳದಲ್ಲಿರಿಸಿ.

Ways to rainproof your home

ಮರದ ಪೀಠೋಪಕರಣ

ಮಳೆಗಾಲದಲ್ಲಿ ಕೀಟಗಳು ಮತ್ತು ಗೆದ್ದಲುಗಳು ನಿಜವಾದ ತೊಂದರೆಯುಂಟು ಮಾಡಬಹುದು. ಕರ್ಪೂರದ ಗೋಲಿಗಳು, ಲವಂಗ ಅಥವ ಬೇವಿನ ಎಲೆ ಇವುಗಳನ್ನಿಟ್ಟು ಈ ತೊಂದರೆಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕಬಹುದು. ನೀವು ಮಳೆಗಾಲದ ಸಮಯದಲ್ಲಿ ಹೊಸ ಪೀಠೋಪಕರಣಗಳನ್ನು ಖರೀದಿಮಾಡಲಿಚ್ಚಿಸಿದರೆ ಶಿಲೀಂದ್ರ-ನಿರೋಧಕ ಮತ್ತು ಗೆದ್ದಲು-ನಿರೋಧಕ ಪೀಠೋಪಕರಣಗಳನ್ನೇ ಖರೀದಿಸಿ. ಪೀಠೋಪಕರಣದ ತಿರುವು ಮೊಳೆಗಳನ್ನು ಬೇಕಾದ್ದಲ್ಲಿ ಮರು ಬಿಗಿಮಾಡಿ. ಮಳೆಗಾಲದಲ್ಲಿ ನೀವು ಕೆಲವು ವಾರಗಳ ಕಾಲ ಹೊರಗೆಹೋಗಬೇಕಿದ್ದರೆ, ಪೀಠೋಪಕರಣಗಳು ಶುಷ್ಕವಾಗಿರಲು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಿ ರಕ್ಷಿಸಿ.

ಶಯನಗೃಹ ಶೃ೦ಗಾರಗೊಳಿಸಲು 10 ಮಾರ್ಗೋಪಾಯಗಳು

ನಿಮ್ಮ ಪೀಠೋಪಕರಣಗಳನ್ನು ಕಾಲಕಾಲಕ್ಕೆ ಶುಚಿಗೊಳಿಸುವುದು ಬಹಳ ಮುಖ್ಯ

ಆದ್ರತೆ ಮತ್ತು ಉಷ್ಣತೆ ಏರಿಳಿತಗಳಿಂದ ರಕ್ಷಿಸಲು ಗ್ಲಿಸರೀನ್ ಅಥವ ಸೀಮೆಯೆಣ್ಣೆ ಲೇಪಿಸಬಹುದು. ನಿಮ್ಮ ಕುರ್ಚಿ ಅಥವ ಮೇಜು ಬಹಳ ಕಲೆಗಳಿಂದ ಹಾಳಾಗಿದ್ದಲ್ಲಿ ವೇಗವಾಗಿ ಒಣಗಿಹೋಗುವ ಅಸಿಟೋನ್ ಉಪಯೋಗಿಸಿ ಕಲೆಗಳನ್ನು ತೆಗೆಯಿರಿ. ಬಿಸಿ, ಒದ್ದೆ ಮತ್ತು ಬಣ್ಣಬಿಡುವ ಪದಾರ್ಥಗಳಿಂದ ಮೇಜು ಹಾಳಾಗದಂತೆ ಟೇಬಲ್ ಮ್ಯಾಟ್ ಮತ್ತು ಪಾಟ್ ಹೋಲ್ಡರ್ಸ್ ಉಪಯೋಗಿಸಿ. ಕಪ್ಬೋಥರ್ಡ್ ಒಳಗೆ ತೇವಾಂಶವನ್ನು ಎದುರಿಸಲು ಸಿಲಿಕ ಜೆಲ್ ಹರಳುಗಳನ್ನು ಇರಿಸಿ. ವಾರ್ಡ್ರೋಬಿನ ಮೇಲೆ ಒರೆಸಬೇಕಾಗಿದ್ದಲ್ಲಿ ಒಣ ಬಟ್ಟೆಯನ್ನು ಉಪಯೋಗಿಸುವುದನ್ನು ಖಚಿತಪಡಿಸಿಕೊಳ್ಳಿ.

ಚಪ್ಪಲಿ ಮತ್ತು ಶೂ ಇಡುವ ಬೀರು

ಶೂ ಮತ್ತು ಚಪ್ಪಲಿಗಳು ಸಾಮಾನ್ಯವಾಗಿ ತೇವವನ್ನು ಸಾಕಷ್ಟು ಹೀರಿಕೊಳ್ಳುವ ಸ್ವಭಾವವಿರುತ್ತದೆ ಮತ್ತು ಹಾಗೆ ತೇವಾಂಶವಿರುವ ಶೂ ಮತ್ತು ಚಪ್ಪಲಿಗಳನ್ನು ಧರಿಸಿದರೆ ಶಿಲೀಂದ್ರ ಸೋಂಕಿಗೆ ಕಾರಣವಾಗಬಲ್ಲದು.

ಮ್ಯಾಟ್ ನ ಬೂಸ್ಟ್ ತೆಗೆಯುವ ವಿಧಾನಗಳು

ರತ್ನಗಂಬಳಿಗಳು ಮತ್ತು ಪರದೆಗಳು

ಮಳೆಗಾಲದಲ್ಲಿ ರತ್ನಗಂಬಳಿಗಳನ್ನು ಬಳಸದಿರುವುದು ಒಳ್ಳೆಯದು. ಅವುಗಳನ್ನು ಸುತ್ತಿ ದೂರವಿಡಿ. ಆದಾಗ್ಯೂ ನಿಮಗೆ ಅವುಗಳ ಅವಶ್ಯಕತೆ ನಿಜವಾಗಿಯೂ ಇದ್ದರೆ, ಅವು ಒಣಗಿದ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕಾಲುಗಳನ್ನು ಚೆನ್ನಾಗಿ ಒರಸಿಕೊಂಡು ಕಾರ್ಪೆಟ್ ಮೇಲೆ ಹೆಜ್ಜೆ ಇಡಿ. ಕಾರ್ಪೆಟ್ ಕೊಳಕಾಗತೊಡಗಿದರೆ, ಅವುಗಳ ಮೇಲಿರುವ ಮಣ್ಣು ಮತ್ತು ಧೂಳನ್ನು ಮರೆಯದೇ ಬ್ರಶ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅದನ್ನು ತೊಳೆಯುವ ಸಮಯದಲ್ಲಿ ಅದರಲ್ಲಿರುವ ಮಣ್ಣು ಮತ್ತು ಧೂಳು ಇತರ ಭಾಗಗಳಿಗೆ ಹರಡುವ ಸಾಧ್ಯತೆಗಳಿವೆ.

ಕಿಟಕಿಗಳ ಪರದೆಗಳನ್ನು ಸುತ್ತಿ ಅದನ್ನು ಗಟ್ಟಿಯಾಗಿ ದಾರ ಅಥವ ಪಿನ್ ಉಪಯೋಗಿಸಿ ಭದ್ರವಾಗಿರಿಸಿ, ಇಲ್ಲದ್ದಿದ್ದರೆ ಅದರಲ್ಲಿ ತೇವಾಂಶ ಸೇರಿ ವಿಚಿತ್ರ ಕೆಟ್ಟ ವಾಸನೆ ಹೊರಡುತ್ತದೆ ಮತ್ತು ಆ ವಾಸನೆ ಮನೆಯೊಳಗಿರುವ ಗಾಳಿಯಲ್ಲಿ ಸೇರಿ ಅನಾರೋಗ್ಯ ಹರಡುವ ಸಾಧ್ಯತೆಗಳಿವೆ. ಕಿಟಕಿಯ ಪರದೆಯಲ್ಲಿ ಗಾಳಿಯಲ್ಲಿರುವ ತೇವಾಂಶದಿಂದ ಬಹಳ ಧೂಳು ಸೇರಿರುವ ಸಾಧ್ಯತೆ ಇರುವುದರಿಂದ ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು. ಹೊರಗಡೆ ಬಿಸಿಲು ಬಂದ ದಿನ ನಿಮ್ಮ ರಗ್‌ಗಳು, ಕಾರ್ಪೆಟ್‌ಗಳು ಮತ್ತು ಪರದೆಗಳನ್ನೆಲ್ಲಾ ಬಿಸಿಲಲ್ಲಿ ಹರಡಿ ಒಣಗಿಸಿ ತೇವಾಂಶದಿಂದ ಮುಕ್ತಿಯಾಗಿದೆಯೆಂದು ಖಚಿತಪಡಿಸಿಕೊಳ್ಳಿ.

ಚರ್ಮದ ಸೋಫಾ ಹೊದಿಕೆಗಳು

ನೀವು ಚರ್ಮದ ಸೋಫಾ ಬಳಸುತ್ತಿದ್ದರೆ, ಉತ್ತಮ ಗುಣಮಟ್ಟದ ಚರ್ಮವನ್ನೇ ಬಳಸಲು ಖಚಿತಪಡಿಸಿಕೊಳ್ಳಿ. ಕನಿಷ್ಟ 15 ದಿನಗಳಕ್ಕೊಮ್ಮೆ ಮೇಲಿನ ಚರ್ಮವನ್ನು ಸ್ವಚ್ಛಮಾಡಿ. ಒಂದು ಮೃದುವಾದ ಮತ್ತು ಒಣಗಿದ ಬಟ್ಟೆಯಿಂದ ಒರಸಿ. ಒರಸಲು ಒಂದು ಹತ್ತಿಬಟ್ಟೆಯನ್ನು ಮಾಯಿಸ್ಚರೈಸರ್ (Moisturiser) ಉಪಯೋಗಿಸಿ ಎಲ್ಲಾ ಭಾಗಗಳನ್ನು ಚೆನ್ನಾಗೆ ಒರಸಿರಿ. ಫಂಗಸ್ ಬರುವುದನ್ನು ತಡೆಯಲು ಡೆಟ್ಟಾಲ್ ಮತ್ತು ನೀರಿನಿಂದ ಆಗಾಗ್ಗೆ ಚರ್ಮದಭಾಗಗಳನ್ನು ಸ್ವಚ್ಛಗೊಳಿಸಿ.

ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳು

ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಹತ್ತಿಬಟ್ಟೆಯಲ್ಲಿ ಸುತ್ತಿ ಶುದ್ಧವಾಗಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿ. ಬೆಳ್ಳಿ ಆಭರಣಗಳು ಸಾಧಾರಣವಾಗಿ ಮಳೆಗಾಲದಲ್ಲಿ ಸುಲಭವಾಗಿ ಕರೆಗಟ್ಟುತ್ತದೆ; ಇದನ್ನು ತಡೆಯಲು ಬಟ್ಟರ್ ಪೇಪರ್‌ನಿಂದ ಸುತ್ತಿಡಿ. ನಂತರ ಕರೆಗಳನ್ನು ತೆಗೆಯಲು ಅಪಘರ್ಷಕ ದ್ರವ (ಅಬ್ರೇಸಿವ್ ದ್ರವ) ಬಳಸಲೂ ಬಹುದು.

ಯಂತ್ರೋಪಕರಣ ಮತ್ತು ಎಲೆಕ್ಟ್ರಿಕ್ ಎಲೆಕ್ಟ್ರಾನಿಕ್ ಸಾಧನಗಳು

ನಿಮ್ಮಲ್ಲಿರುವ ಎಲೆಕ್ಟ್ರಿಕ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಯಂತ್ರೋಪಕರಣಗಳಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್(ಪಿ.ಸಿ.ಬಿ.) ಇದ್ದು ಅದರಲ್ಲಿ ತಾಮ್ರದ (ಕಾಪರ್) ಗೆರೆಗಳು ಇರುತ್ತವೆ. ಇದನ್ನು ಮಳೆಗಾಲದಲ್ಲಿ ರಕ್ಷಣೆ ಮಾಡಬೇಕು. ಪಿ.ಸಿ.ಬಿ.ಯೊಳಗೆ ನೀರು ಸೇರಿದಲ್ಲಿ ಕರೆಂಟ್ ಹರಿಯದೆ ಕೆಟ್ಟುಹೋಗುವ ಸಂಭವಗಳು ಹೆಚ್ಚು. ಅದರಲ್ಲೂ ನೀರು ಬಿದ್ದಾಗ ಸಾಧನಗಳ ಸ್ವಿಚ್ ಆನ್ ಮಾಡಿದ್ದರೆ ಸ್ವಿಚ್ ಆಫ್ ಅಗಿರುವುದಕ್ಕಿಂತಾ ಹೆಚ್ಚು ಕೆಟ್ಟಪರಿಣಾಮ ಉಂಟಾಗುತ್ತದೆ.

ನಿಮ್ಮ ಮೊಬೈಲ್ ಫೋನ್, ಕ್ಯಾಮೆರ ಮತ್ತು ಐ-ಪಾಡ್ ಇವುಗಳನ್ನು ರಕ್ಷಿಸಲು ಪ್ಲಾಸ್ಟಿಕ್ ಕವರನ್ನು ಬಳಸಿ. ಮ್ಯೂಸಿಕ್ ಸಿಸ್ಟಂ, ಸ್ಪೀಕರ್ಸ್, ಕಂಪ್ಯೂಟರ್‌ಗಳನ್ನು ಉಪಯೋಗಿಸಿದನಂತರ ದೊಡ್ಡ ಪ್ಲಾಸ್ಟಿಕ್ ಹಾಳೆಗಳಿಂದ ರಕ್ಷಿಸಿ. ಎಲೆಕ್ಟ್ರಿಕ್ ಶಾಕ್ ಹೊಡೆಯುವುದನ್ನು ತಪ್ಪಿಸಲು ಒದ್ದೆ ಕೈಗಳಿಂದ ಸ್ವಿಚ್ ಮುಟ್ಟಬೇಡಿ. ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸಿದ ನಂತರ ಸ್ವಿಚ್ ಆಫ಼್ ಮಾಡಿ ಪ್ಲಗ್ ತೆಗೆದಿಡಿ. ವಿದ್ಯುತ್ ಅಘಾತಗಳನ್ನು ತಪ್ಪಿಸಲು ಮನೆಯ ವೈರಿಂಗ್‌ ಅನ್ನು ಆಗಾಗ್ಗೆ ಪರಿಶೀಲಿಸಿ. ನಿಮ್ಮ ಮನೆಯನ್ನು ಸೋಂಕಿನಿಂದ ತಡೆಯಲು ಶುದ್ಧವಾಗಿಟ್ಟುಕೊಳ್ಳಿ. ಮನೆಯೊಳಗೆ ನೀರು ತುಂಬಿದ ಪಾಟ್‌ಗಳು ಮತ್ತು ಪಾತ್ರೆಗಳಿದ್ದರೆ ಆಗಾಗ್ಗೆ ನೀರನ್ನು ಚೆಲ್ಲಿ ಹೊಸನೀರಿನಿಂದ ತುಂಬಿ.

English summary

Ways to rainproof your home

Besides your clothes and footwear, your home, too, needs special care during this rainy season. Everything from your furniture, upholstery, jewellery as well as gadgets and appliances are at risk of getting damaged due to moisture.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more