For Quick Alerts
ALLOW NOTIFICATIONS  
For Daily Alerts

ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?

|

ಜನರಿಗೆ ಸಾಮಾನ್ಯವಾಗಿ ಅಡಿಗೆಮನೆಯ ಪಾತ್ರೆಗಳಲ್ಲಿ ಸುಟ್ಟು ಅಂಟಿಕೊಂಡಿರುವುದನ್ನು ತೆಗೆದುಹಾಕುವುದು ಒಂದು ಪ್ರಮುಖ ಸಮಸ್ಯೆ. ಈ ಸಮಸ್ಯೆಯನ್ನು ಸರಿಯಾಗಿ ಪರಿಹರಿಸದಿದ್ದರೆ ಪಾತ್ರೆಗಳಲ್ಲಿ ಕಲೆಗಳು ಹಾಗೆಯೇ ಉಳಿದುಕೊಂಡು ನೀವು ಕೊನೆಗೆ ಆ ಪಾತ್ರೆಗಳನ್ನು ವಿಲೇವಾರಿ ಮಾಡಲು ನಿರ್ಧರಿಸಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಅಂಟಿಕೊಂಡಿರುವ ಕಲೆಗಳನ್ನು ನಿರ್ಮೂಲ ಮಾಡಲು ಕೆಲವು ನಿರ್ದಿಷ್ಟವಾಗಿ ಪರಿಣಾಮಕಾರಿಯಾಗಿ ಸಾಬೀತಾಗಿರುವ ವಿಧಾನಗಳಿವೆ. ಹೀಗೆ ಸಾಬೀತಾಗಿರುವ ವಿಧಾನಗಳು ಪಾತ್ರೆಗಳಲ್ಲಿ ಉಳಿದ ಆಹಾರಗಳಿಂದ ಅಂಟಿಕೊಂಡಿರುವ ಕಲೆಗಳನ್ನು ಪರಿಣಾಮಕಾರಿಯಾಗಿ ನಿರ್ಮೂಲ ಮಾಡಲು ನಿಮಗೆ ಸಹಾಯಮಾಡುತ್ತವೆ. ಇದು ನಿಜವಾಗಿಯೂ ಸರಳ ವಿಧಾನ, ಆದರೆ ಅದನ್ನು ಸೂಕ್ತವಾಗಿ ಮಾಡದಿದ್ದರೆ ಕೊನೆಗೆ ನಿಮಗೆ ಒಂದು ದೊಡ್ಡ ತಲೆನೋವಾಗಿಬಿಡುತ್ತದೆ.

ಈ ಲೇಖನದಲ್ಲಿ ನೈಸರ್ಗಿಕ ರೀತಿಯಲ್ಲಿ ಸ್ವಚ್ಛಗೊಳಿಸುವ ಬಗ್ಗೆ ಮುಂದೆ ಗಮನಹರಿಸೋಣ - ನೈಸರ್ಗಿಕ ರೀತಿಯಲ್ಲಿ ಪ್ರಬಲವಾದ ಕಲೆಗಳನ್ನು ತೆಗೆಯುವುದು ಅಥವ ಸುಟ್ಟುಹೋಗಿರುವ ಕಲೆಗಳನ್ನು ತೆಗೆಯುವುದು. ಕಲೆಗಳನ್ನು ತೆಗೆಯುವ ಈ ಅಮೋಘ ರೀತಿಗಳನ್ನು ಮುಂದೆ ಪರಿಶೀಲಿಸೋಣ. ಇಲ್ಲಿ ಪಾತ್ರೆಗಳ ಕಲೆಗಳನ್ನು ನಿರ್ಮೂಲ ಮಾಡಲು 7 ರೀತಿಯ ವಿಧಾನಗಳು ಇಲ್ಲಿವೆ ನೋಡಿ. ನಿಮ್ಮ ಮನೆಯ ಅಂದಕ್ಕೆ ಈರುಳ್ಳಿಯ ಅದ್ಭುತ ಕೊಡುಗೆಗಳು

ಅಡಿಗೆ ಸೋಡ

ಅಡಿಗೆ ಸೋಡ, ಒಂದು ವ್ಯಾಪಕವಾಗಿ ಬಳಸಲಾಗುತ್ತಿರುವ ಶುಚಿಗೊಳಿಸುವ ಪದಾರ್ಥ ಮತ್ತು ಶುಚಿಗೊಳಿಸುವ ಉದ್ದೇಶವನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಡಿಗೆ ಸೋಡ ಪಾತ್ರೆಗಳಲ್ಲಿನ ಕಲೆಗಳನ್ನು ಶುಚಿಗೊಳಿಸುವ ವಿಧಾನ ಇಲ್ಲಿದೆ. ಒಂದು ಟೀ ಚಮಚ ಅಡಿಗೆ ಸೋಡ, ಸುಮಾರು 2 ಚಮಚ ಗಟ್ಟಿಯಾದ ನಿಂಬೆ ರಸ ಮತ್ತು 2 ಕಪ್ ಬಿಸಿ ನೀರನ್ನು ಕಲೆಯಿರುವ ಪಾತ್ರೆಯೊಳಗೆ ಹಾಕಿ ಒಂದು ಬ್ರಶ್ ಉಪಯೋಗಿಸಿ ಉಜ್ಜಿ. ನಿಮ್ಮ ಪಾತ್ರೆ ಸ್ವಲ್ಪ ಸಮಯದಲ್ಲಿಯೇ ಶುಚಿಯಾಗುವುದನ್ನು ನೋಡುತ್ತೀರಿ.

ನಿಂಬೆ ರಸ

ನಿಂಬೆ ರಸ ಮತ್ತೊಂದು ಪ್ರಬಲ ಶುಚಿಗೊಳಿಸುವ ಪದಾರ್ಥ. ಮೇಲೆ ಹೇಳಿದ ವಿಧಾನದಿಂದ ಭಿನ್ನ ರೀತಿಯಲ್ಲಿ ಅಡಿಗೆ ಸೋಡ ಸೇರಿಸದೇ ಕೇವಲ ನಿಂಬೆ ರಸವನ್ನು ಬಳಸಿ ಹೀಗೆ ಉಪಯೋಗಿಸಬಹುದು. ಈ ವಿಧಾನವು ಪಾತ್ರೆಗಳಲ್ಲಿ ಕಡಿಮೆಯಿರುವ ಕಲೆಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ. ಒಂದು ಕಚ್ಚಾ ನಿಂಬೆ ಹಣ್ಣನ್ನು ತೆಗೆದುಕೊಂಡು ಪಾತ್ರೆಯೊಳಗೆ ಕಲೆಯಿರುವ ಸ್ಥಳಗಳಲ್ಲಿ ಉಜ್ಜಿ ಶುಚಿಗೊಳಿಸಬಹುದು.

ಉಪ್ಪು

ಉಪ್ಪು ಕಲೆಗಳನ್ನು ನಿರ್ಮೂಲಮಾಡಲು ಒಂದು ಅತ್ಯಂತ ಸಾಧಾರಣ ನೈಸರ್ಗಿಕ ಪದಾರ್ಥವಾಗಿದೆ. ಅದರ ವಿಧಾನ ನೋಡಿ ಇಲ್ಲಿದೆ ನೋಡಿ. ಕಲೆಯಿರುವ ಪಾತ್ರೆಯೊಳಗೆ ನೀರನ್ನು ತುಂಬಿ ಕುದಿಯಲು ಆರಂಭಿಸಿ. ನೀರು ಕುದಿಯುತ್ತಿರುವಾಗ ಸ್ವಲ್ಪ ಉಪ್ಪನ್ನು ಹಾಕಿ ಕರಗಲು ಬಿಡಿ. 3-4 ನಿಮಿಷಗಳವರೆಗೆ ಕುದಿಯಲು ಬಿಡಿ. ನಂತರ ಪಾತ್ರೆ ತೊಳೆಯುವ ಬ್ರಶ್ ಬಳಸಿ ಕಲೆಗಳನ್ನು ನಿರ್ಮೂಲ ಮಾಡಿ.

ಟೊಮೇಟೊ ಹಣ್ಣಿನ ರಸ

ಟೊಮೇಟೊ ಹಣ್ಣಿನ ರಸ ಮತ್ತೊಂದು ಕಲೆಯಿರುವ ಪಾತ್ರೆಗಳನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸುವ ಪದಾರ್ಥ. ಟೊಮೇಟೊ ಹಣ್ಣಿನಲ್ಲಿರುವ ಆಮ್ಲೀಯ ಪ್ರಕೃತಿ ಕಲೆಗಳನ್ನು ಪಾತ್ರೆಗಳಿಂದ ನಿರ್ಮೂಲಮಾಡಲು ಸಹಾಯಕಾರಿ. ಸ್ವಲ್ಪ ಟೊಮೇಟೊ ಹಣ್ಣಿನ ರಸವನ್ನು ಪಾತ್ರೆಯೊಳಗೆ ಹಾಕಿ ಬಿಸಿ ಮಾಡಲು ಇಡಿ. ಒಂದು ಪಾತ್ರೆ ತೊಳೆಯುವ ಬ್ರಶ್ ಬಳಸಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸಿ. ಬಿಸಿ ಮಾಡುತ್ತಿರುವ ಸಮಯದಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿದರೆ ಶುಚಿಗೊಳಿಸುವ ಪರಿಣಾಮಗಳನ್ನು ವರ್ಧಿಸಬಹುದು. ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!

ಹುಣಿಸೆ ಹಣ್ಣಿನ ರಸ

ಹುಣಿಸೆ ರಸ ಮತ್ತೊಂದು ಪ್ರತಿಭಾಪೂರ್ಣವಾಗಿ ಶುಚಿಗೊಳಿಸುವ ಪದಾರ್ಥ. ಅದರ ಬಳಕೆ ಟೊಮೇಟೊ ಹಣ್ಣಿನ ರಸದಂತೆಯೇ ಬಳಸಬಹುದು. ಅದರ ಫಲಿತಾಂಶವೂ ಕೂಡ ಅದರಂತೆಯೇ ಇರುತ್ತವೆ.

ಈರುಳ್ಳಿ

ಈರುಳ್ಳಿಯನ್ನು ಈ ವಿಷಯದಲ್ಲಿ ಬಳಸಲು ಎರಡು ಮಾರ್ಗಗಳಿವೆ. ಅದರ ವಿಧಾನವನ್ನು ತಿಳಿಯಲು ಮುಂದೆ ಓದಿ. ಮೊದಲನೇ ವಿಧಾನ: ಕಲೆಯಿರುವ ಪಾತ್ರೆಯೊಳಗೆ ಸ್ವಲ್ಪ ಈರುಳ್ಳಿ ಹಾಕಿ ಒಂದು ನಿಮಿಷ ಕುದಿಯುವುದಕ್ಕೆ ಇಡಿ. ನಂತರ ನೀರನ್ನು ಬೆರಸಿ ಕುದಿಯುವುದನ್ನು ಮುಂದುವರಿಸಿ. ಪಾತ್ರೆಯೊಳಗೆ ಅಂಟಿಕೊಂಡಿದ್ದ ಕೊಳಕು ತಾನಾಗಿಯೇ ತೇಲಲು ಆರಂಭವಾಗುತ್ತದೆ. ಎರಡನೇ ವಿಧಾನ: ಒಂದು ಈರುಳ್ಳಿಯನ್ನು ಕತ್ತರಿಸಿ ಆ ಭಾಗದಿಂದ ಕಲೆಯಿರುವ ಪಾತ್ರೆಯೊಳಗೆ ಉಜ್ಜಿ. ನಂತರ ಪಾತ್ರೆಯನ್ನು ಬಿಸಿಮಾಡಿ ಸ್ವಲ್ಪ ಎಣ್ಣೆಯನ್ನು ಸೇರಿಸಿ. ಹಾಗೆ ಮಾಡಿದ ನಂತರ ಪಾತ್ರೆ ಶುಚಿಗೊಳಿಸುವ ಬ್ರಶ್‌ನಿಂದ ಕೊಳಕನ್ನು ತೆಗೆದುಹಾಕಿ.

ಅಮೋನಿಯ ಮತ್ತು ನೀರು

ಅಮೋನಿಯ ಮತ್ತು ನೀರಿನ ಮಿಶ್ರಣ ಒಂದು ಪರಿಹಾರ ವ್ಯವಸ್ಥೆಯಾಗಿದೆ. ಮಿಶ್ರಣವನ್ನು ಕಲೆಯಿರುವ ಪಾತ್ರೆಯೊಳಗೆ ಹಾಕಿ ಸ್ವಲ್ಪ ಸಮಯ ಬಿಸಿಮಾಡಿ. ಹಾಗೆ ಮಾಡಿದ ನಂತರ ಪಾತ್ರೆ ಶುಚಿಗೊಳಿಸುವ ಬ್ರಶ್‌ನಿಂದ ಕೊಳಕನ್ನು ತೆಗೆದುಹಾಕಿ.

English summary

Superb Tips To Remove Burnt Leftovers From Utensils

A major problem that people are faced with in the kitchen is dealing with burnt leftovers in utensils. If not dealt with properly, your utensils may well get stained till you finally decide to dispose them off. As such, there are specific-tested and proven-methods that will help you effectively deal with burnt leftovers in utensils.
Story first published: Thursday, October 30, 2014, 19:34 [IST]
X
Desktop Bottom Promotion