For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!

By Hemanth P
|

ಮೊಟ್ಟೆಯ ಚಿಪ್ಪನ್ನು ಒಡೆದ ಬಳಿಕ ಅದನ್ನು ಏನು ಮಾಡುತ್ತೀರಿ? ಅದನ್ನು ಕಸದ ಡಬ್ಬಿಗೆ ಬಿಸಾಡುತ್ತೀರಿ ಅಲ್ಲವೇ? ಆದರೆ ಬೋಲ್ಡ್ ಸ್ಕೈ ಮೊಟ್ಟೆಯ ಚಿಪ್ಪನ್ನು ವಿವಿಧ ರೀತಿಯಲ್ಲಿ ಹೇಗೆ ಉಪಯೋಗಿಸಬಹುದು ಎನ್ನುವುದನ್ನು ನಿಮಗೆ ಹೇಳಿಕೊಡಲಿದೆ. ಮೊಟ್ಟೆಯ ಚಿಪ್ಪಿನಿಂದ ನಾವು ಹಲವಾರು ಉಪಯೋಗ ಮಾಡಿಕೊಳ್ಳಬಹುದು. ಮೊದಲನೇಯದಾಗಿ ಇದನ್ನು ನೀವು ಗಿಡಗಳನ್ನು ಶೃಂಗರಿಸಲು ಬಳಸಬಹುದು.

ಎರಡನೇಯದಾಗಿ ತೋಟದಲ್ಲಿ ಕೀಟಗಳನ್ನು ದೂರ ಓಡಿಸಲು ಇದು ತುಂಬಾ ಉಪಯೋಗಿ. ಮೊಟ್ಟೆಯ ಚಿಪ್ಪಿಗೆ ಬಣ್ಣಕೊಟ್ಟು ಅದನ್ನು ಮನೆ ಶೃಂಗಾರಕ್ಕೆ ಬಳಸಿಕೊಳ್ಳಬಹುದು. ಮೊಟ್ಟೆಯ ಚಿಪ್ಪಿನಲ್ಲಿ ಉಳಿದಿರುವ ಸ್ವಲ್ಪ ಲೋಳೆಯನ್ನು ಗಾಯವನ್ನು ಗುಣಮುಖಗೊಳಿಸಲು ಬಳಸಬಹುದು.

ಮೊಟ್ಟೆಯಲ್ಲಿರುವ ಕ್ಯಾಲ್ಸಿಯಂ ಕೇವಲ ನಿಮ್ಮ ಮೂಳೆ ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು. ಇಷ್ಟು ಮಾತ್ರವಲ್ಲದೆ ಇದು ಮನೆಯಲ್ಲಿ ಮತ್ತಿತರ ಉಪಯೋಗಕ್ಕೂ ಬಳಸಬಹುದು. ಮೊಟ್ಟೆಯ ಚಿಪ್ಪಿನಿಂದ ನೀವು ಮಾಡಬಹುದಾದ ಕೆಲವೊಂದು ಅತ್ಯುತ್ತಮ ಉಪಯೋಗಗಳನ್ನು ಇಲ್ಲಿ ನೀಡಲಾಗಿದೆ. ಈ ವಿಧಾನಗಳನ್ನು ಬಳಸಿ. ಬೋಲ್ಡ್ ಸ್ಕೈ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಬೇಯಿಸಿದ ಮೊಟ್ಟೆಯಿಂದ ಆರೋಗ್ಯಕರ ಪ್ರಯೋಜನ

ನಿಮ್ಮ ಕಾಫಿಗೆ

ನಿಮ್ಮ ಕಾಫಿಗೆ

ನಿಮ್ಮ ಕಾಫಿಯ ರುಚಿಯು ಹೆಚ್ಚು ಕಹಿಯಾಗಿದ್ದರೆ ಆಗ ಮೊಟ್ಟೆ ಚಿಪ್ಪು ನೆರವಿಗೆ ಬರುತ್ತದೆ. ನಿಮ್ಮ ಬ್ಲ್ಯಾಕ್ ಕಾಫಿ ಕುಡಿಯಲು ತುಂಬಾ ಕಹಿಯಾಗಿದ್ದರೆ ಈ ಸಲಹೆಗಳನ್ನು ಬಳಸಿ.

ಗಾಯಕ್ಕೆ

ಗಾಯಕ್ಕೆ

ಮೊಟ್ಟೆ ಚಿಪ್ಪಿನಲ್ಲಿರುವ ಒಳಚರ್ಮವು ಗಾಯಕ್ಕೆ ಅತ್ಯುತ್ತಮವಾದ ಬ್ಯಾಂಡೇಜ್. ಮೊಟ್ಟೆಯನ್ನು ಒಡೆದು ಅದರ ಪೊರೆಯನ್ನು ತೆಗೆದು ನಿಮ್ಮ ಗಾಯಕ್ಕೆ ಸುತ್ತಿ. ಇದು ಕೆಲವೇ ಸಮಯದಲ್ಲಿ ನಿಮ್ಮ ಗಾಯವನ್ನು ಒಣಗಿಸುತ್ತದೆ.

ಲಾಂಡ್ರಿಗೆ

ಲಾಂಡ್ರಿಗೆ

ಕೆಲವೊಂದು ಮೊಟ್ಟೆ ಚಿಪ್ಪುಗಳನ್ನು ಒಡೆದು ಹಾಕಿ ಅದನ್ನು ಲಾಂಡ್ರಿಯಲ್ಲಿಡಿ. ನೀವು ಬಿಳಿ ಬಟ್ಟೆಗಳನ್ನು ಒಗೆಯುವಾಗ ಅದರಲ್ಲಿರುವ ಗಾಢವಾದ ಕೊಳೆಯನ್ನು ಅದು ತೆಗೆಯುತ್ತದೆ.

ಚಹಾ/ಕಾಫಿ ಕಲೆ

ಚಹಾ/ಕಾಫಿ ಕಲೆ

ನಾಲ್ಕು ಮೊಟ್ಟೆ ಚಿಪ್ಪುಗಳನ್ನು ಸರಿಯಾಗಿ ಹುಡಿ ಮಾಡಿ. ಅದರ ಹುಡಿಯನ್ನು ಒಂದು ಲೋಟಕ್ಕೆ ಹಾಕಿ ಮತ್ತು ಅದಕ್ಕೆ ಬಿಸಿ ನೀರು ಹಾಕಿ. ರಾತ್ರಿಯಿಡಿ ಹಾಗೆ ಇರಲಿ. ಇದು ಲೋಟದಲ್ಲಿರುವ ಚಹಾ ಅಥವಾ ಕಾಫಿ ಕಲೆಯನ್ನು ಹೀರಿಕೊಳ್ಳುತ್ತದೆ. ಮರುದಿನ ಕಲೆಗಳು ಮಾಯವಾಗಿರುತ್ತದೆ.

ಹೂದಾನಿಗಳ ಸ್ವಚ್ಛಗೊಳಿಸಲು

ಹೂದಾನಿಗಳ ಸ್ವಚ್ಛಗೊಳಿಸಲು

ಬಿಸಿ ನೀರಿನಿಂದ ಹೂದಾನಿಗಳನ್ನು ಅದ್ದಿಡಿ ಮತ್ತು ಅದಕ್ಕೆ ಕೆಲವೊಂದು ಹುಡಿ ಮಾಡಿದ ಮೊಟ್ಟೆಚಿಪ್ಪುಗಳನ್ನು ಹಾಕಿ ಮತ್ತೆ ಬಿಸಿ ನೀರು ಹಾಕಿ. ಇದರ ಬಳಿಕ ವಾಷಿಂಗ್ ಸೋಪ್ ನ ಹನಿಗಳನ್ನು ಹಾಕಿ. ಮೊಟ್ಟೆ ಚಿಪ್ಪಿನ ಹುಡಿಯನ್ನು ಸರಿಯಾಗಿ ಅಲುಗಾಡಿಸಿ ಮತ್ತು ತೊಳೆಯಿರಿ.

ಕೀಟಗಳ ನಿಯಂತ್ರಣ

ಕೀಟಗಳ ನಿಯಂತ್ರಣ

ಮೊಟ್ಟೆ ಚಿಪ್ಪಿನ ಉತ್ತಮ ಉಪಯೋಗವೆಂದರೆ ಕೀಟಗಳನ್ನು ನಿಯಂತ್ರಿಸುವುದು. ತರಕಾರಿ ಮತ್ತು ಹೂಗಳ ಸುತ್ತಲು ಮೊಟ್ಟೆಚಿಪ್ಪಿನ ಹುಡಿಯನ್ನು ಹರಡುವುದರಿಂದ ಹುಳು, ಕೀಟಗಳನ್ನು ದೂರವಿಡಬಹುದು. ನಿಮ್ಮ ಕೈತೋಟಕ್ಕೆ ಬೆಕ್ಕುಗಳು ನುಗ್ಗದಂತೆ ಕೂಡ ತಡೆಯಬಹುದು.

ಗೊಬ್ಬರ

ಗೊಬ್ಬರ

ಮೊಟ್ಟೆಚಿಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೊಟ್ಟೆಚಿಪ್ಪಿನಲ್ಲಿರುವ ಇತರ ಪೌಷ್ಠಿಕಾಂಶಗಳು ಸಸ್ಯಗಳಿಗೆ ತುಂಬಾ ಒಳ್ಳೆಯದು. ಮೊಟ್ಟೆಚಿಪ್ಪುಗಳನ್ನು ಒಡೆದುಹಾಕಿ ಅದನ್ನು ಸರಿಯಾಗಿ ಹುಡಿ ಮಾಡಿ ಗೊಬ್ಬರಕ್ಕೆ ಸೇರಿಸಿ.

ಪಾತ್ರೆಗಳಿಗೆ

ಪಾತ್ರೆಗಳಿಗೆ

ನಿಮ್ಮ ಪಾತ್ರೆಗಳು ಮತ್ತು ಬಾಣಲೆಗಳಲ್ಲಿ ಅಂಟಿಕೊಂಡಿರುವ ಕಲೆಯನ್ನು ತೊಳೆಯಲು ಮೊಟ್ಟೆಚಿಪ್ಪನ್ನು ಬಳಸಿ. ಇದು ಕಲೆ ನಿವಾರಣೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

English summary

DIY: Top Bright Ideas Using Eggshells

The calcium which is found in the egg is not only good for your bones and teeth, but also for other purposes in your home. Here are some of the strange bright ideas you can absorb from that empty eggshell. Take a look at these smart ideas, Boldsky shares with you.
X
Desktop Bottom Promotion