For Quick Alerts
ALLOW NOTIFICATIONS  
For Daily Alerts

ಬಾತ್ ರೂಂನಲ್ಲಿ ಅವಶ್ಯಕವಾಗಿ ಇರಬೇಕಾದ ವಸ್ತುಗಳು

By Super
|

ಮನೆಯ ಉಳಿದೆಲ್ಲಾ ಕೋಣೆಗಳು ಮತ್ತು ಹಾಲ್ ಗಳನ್ನು ಕೆಲವರು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದರೂ ಸ್ನಾನಗೃಹವನ್ನು ಮಾತ್ರ ಕಡೆಗಣಿಸುತ್ತಾರೆ. ಆದರೆ ಸ್ನಾನಗೃಹವನ್ನು ಕಡೆಗಣಿಸಬೇಡಿ. ಯಾಕೆಂದರೆ ಮನೆಯ ಇತರ ಭಾಗಗಳಂತೆ ಸ್ನಾನಗೃಹವು ಮನೆಯ ಒಂದು ಪ್ರಮುಖ ಭಾಗವಾಗಿದೆ. ಇದರ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ, ನಾವೆಲ್ಲರೂ ಬೆಳಗ್ಗೆ ನಿದ್ದೆಯಿಂದ ಎದ್ದು ನೇರವಾಗಿ ಹೋಗುವುದು ಸ್ನಾನಗೃಹಕ್ಕೆ(ಹೆಚ್ಚಿನವರು ನಿದ್ದೆಗಣ್ಣಿನಲ್ಲೇ ಅಲ್ಲಿಗೆ ಹೋಗುತ್ತಾರೆ). ಅಲ್ಲಿ ನಾವು ಸ್ನಾನ ಮಾಡಿ ಹೊಸತನ ಪಡೆದು ದಿನದ ಆರಂಭವನ್ನು ಮಾಡುತ್ತೇವೆ. ಕೆಲವೊಮ್ಮೆ ಈ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸಿದಾಗ ಇದು ವ್ಯಕ್ತಿಯೊಬ್ಬನ ಖಾಸಗಿ ಸ್ಥಳ ಕೂಡ. ಇಲ್ಲಿ ಆತ ಯಾವುದೇ ತೊಂದರೆಯಿಲ್ಲದೆ ತನ್ನೊಂದಿಗೆ ಸಮಯ ಕಳೆಯಬಹುದು. ಇದು ಸಾಧ್ಯವೇ? ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳುವುದರಿಂದ ಇದು ಸಾಧ್ಯ. ಹೌದು, ವಸ್ತುಗಳು ಯಾವುದೇ ಸ್ಥಳಕ್ಕೆ ಸರಿಯಾದ ರೂಪವನ್ನು ನೀಡುತ್ತದೆ. ಇದು ನಿಮ್ಮ ಬಯಕೆಯಾಗಿರುತ್ತದೆ.

ಯಾವುದೇ ಸ್ನಾನಗೃಹವು ವಿವಿಧ ರೀತಿಯ ಸ್ನಾನಗೃಹ ಸಾಮಗ್ರಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸಾಮಗ್ರಿಗಳು ಸಿಗುವ ಕಾರಣ ನಿಮ್ಮ ಆಯ್ಕೆಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಶಾಪಿಂಗ್ ಗೆ ತೆರಳುವ ಮೊದಲು ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಖರೀದಿಸುವ ಸಾಮಗ್ರಿಗಳು ಇತರ ಅಲಂಕಾರಕ್ಕೆ ಸರಿಹೊಂದುತ್ತದೆಯಾ ಎಂದು ದೃಢಪಡಿಸಿ, ಬಜೆಟ್ ನೊಳಗಡೆ ಸಾಮಗ್ರಿ ಖರೀದಿಸಿ ಮತ್ತು ತುಂಬಾ ಮುಖ್ಯವೆಂದರೆ ಸುರಕ್ಷತೆಯ ಕಡೆ ಹೆಚ್ಚಿನ ಗಮನಹರಿಸಿ, ಯಾಕೆಂದರೆ ನೀವು ಗಾಯಗೊಳ್ಳುವುದನ್ನು ಯಾವತ್ತೂ ಬಯಸುವುದಿಲ್ಲ.

ಕೆಲವೊಂದು ಅವಶ್ಯಕ ಸ್ನಾನಗೃಹ ಸಾಮಗ್ರಿಗಳು ಇಲ್ಲಿವೆ:

ಕನ್ನಡಿ

ಕನ್ನಡಿ

ಕನ್ನಡಿಯಿಲ್ಲದೆ ಸ್ನಾನಗೃಹ ಯಾವುದಕ್ಕೆ? ಅದು ಅಪೂರ್ಣ! ನಿಜವಾಗಿಯೂ. ಸ್ನಾನಗೃಹದಲ್ಲಿ ಕನ್ನಡಿ ತುಂಬಾ ಪ್ರಾಮುಖ್ಯ ಪಾತ್ರ ನಿರ್ವಹಿಸುತ್ತದೆ ಮತ್ತು ಸ್ನಾನಗೃಹಕ್ಕೆ ಒಂದು ವಿಶೇಷ ಭಾವನೆ ನೀಡುತ್ತದೆ. ವಿಭಿನ್ನ ಶೈಲಿಯ ಕನ್ನಡಿ ಸ್ನಾನಗೃಹಕ್ಕೆ ಲಕ್ಸೂರಿ ರೂಪ ಮತ್ತು ಭಾವನೆ ನೀಡಬಲ್ಲದು. ಪ್ರತಿಯೊಬ್ಬರ ವೈಯಕ್ತಿಕ ಅಭಿರುಚಿಗೆ ಅನುಗುಣವಾಗಿ ಕನ್ನಡಿಯ ಗಾತ್ರವನ್ನು ಆಯ್ಕೆಮಾಡಬಹುದು. ಆದರೆ ಇಂದು ಎಲ್ಲವೂ ದೊಡ್ಡ ಗಾತ್ರದ ಕನ್ನಡಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅದಾಗ್ಯೂ ಕನ್ನಡಿಯನ್ನು ಸ್ಚಚ್ಛವಾಗಿ ಇಟ್ಟುಕೊಳ್ಳುವುದರಿಂದ ಸ್ಪಷ್ಟವಾಗಿ ನೋಡಬಹುದು.

ನಲ್ಲಿ ಅಥವಾ ಟ್ಯಾಪ್ ಗಳು

ನಲ್ಲಿ ಅಥವಾ ಟ್ಯಾಪ್ ಗಳು

ಸ್ನಾನಗೃಹದ ನಲ್ಲಿಯ ಮುಖ್ಯ ಕಾರ್ಯವೆಂದರೆ ಸಿಂಕ್ ಗೆ ನೀರನ್ನು ತರುವುದು. ಇದರಿಂದ ನೀವು ಕೈತೊಳೆದು, ಹಲ್ಲುಗಳಿಗೆ ಬ್ರಶ್ ಮಾಡಿ ಬಾಯಿ ತೊಳೆಯುವ ಹೀಗೆ ಹಲವಾರು ಕೆಲಸ ಮಾಡಬಹುದು. ನಲ್ಲಿಯಿದ್ದರೆ ಮತ್ತೆ ಮತ್ತೆ ಮಗ್ಗಿನಲ್ಲಿ ನೀರು ತರಬೇಕೆಂದಿಲ್ಲ. ಇಂದಿನ ದಿನಗಳಲ್ಲಿ ವಿವಿಧ ವಿನ್ಯಾಸದ, ಹಲವಾರು ಗಾತ್ರದ ನಲ್ಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಯೋಜನೆಯ ಸ್ನಾನಗೃಹದ ರೂಪಕ್ಕೆ ಹೊಂದಿಕೊಂಡು ಆಯ್ಕೆ ಮಾಡಬಹುದು. ಶಾಪಿಂಗ್ ಮಾಡುವಾಗ ಸಿಂಕ್ ನ ಉದ್ದ ಮತ್ತು ಎತ್ತರದ ಬಗ್ಗೆ ಗಮನವಿರಲಿ. ಮತ್ತೊಂದು ಮುಖ್ಯ ವಿಷಯವೆಂದರೆ ಮನೆಯಲ್ಲಿ ಮಕ್ಕಳಿದ್ದರೆ ತುಂಬಾ ಜಟಿಲವಾದ ನಲ್ಲಿಯನ್ನು ಖರೀದಿಸಬೇಡಿ. ಸರಳ ನಲ್ಲಿ ಒಳ್ಳೆಯದು.

ಪ್ರಸಾಧನ ಸಾಮಗ್ರಿ ಹೊಂದಿರುವುದು

ಪ್ರಸಾಧನ ಸಾಮಗ್ರಿ ಹೊಂದಿರುವುದು

ಸೋಪ್ ಟ್ರೇ ಮತ್ತು ಟೂಥ್ ಬ್ರಶ್ ಹೋಲ್ಡರ್ ಸ್ನಾನಗೃಹದಲ್ಲಿ ಅತೀ ಪ್ರಾಮುಖ್ಯ ಮತ್ತು ಉಪಯುಕ್ತ ಘಟಕಗಳು. ಇದು ತುಂಬಾ ಸಣ್ಣ ಮತ್ತು ಮುಖ್ಯವಲ್ಲವೆಂದು ಅನಿಸಿದರೂ ಇದರ ಹೊರತಾಗಿ ನಿಮ್ಮ ಸ್ನಾನಗೃಹ ಅಪೂರ್ಣವಾಗುತ್ತದೆ. ಇಂದು ವಿಭಿನ್ನ ಬಣ್ಣ ಮತ್ತು ಆಕಾರದಲ್ಲಿ ಇವುಗಳು ಲಭ್ಯವಾಗುವ ಕಾರಣ ಇದು ನಿಮ್ಮ ಸ್ನಾನಗೃಹಕ್ಕೆ ವಿಶೇಷ ಮೆರಗು ನೀಡಬಲ್ಲದು. ಇದು ಸ್ನಾನಗೃಹದಲ್ಲಿರುವ ಇತರ ಸಾಮಗ್ರಿ ಮತ್ತು ಬಣ್ಣಕ್ಕೆ ಹೊಂದಿಕೊಳ್ಳುತ್ತದೆಯಾ ಎನ್ನುವುದನ್ನು ನೋಡಿಕೊಳ್ಳಿ.

ಕ್ಯಾಬಿನೆಟ್

ಕ್ಯಾಬಿನೆಟ್

ಒಂದೋ ಗೋಡೆಗೆ ವಿರಮಿಸಲ್ಪಟ್ಟ ಅಥವಾ ಹಿಡಿಕೆ ಹಾಕಲ್ಪಟ್ಟಿರುವ ಸಿಂಕ್ ನ ಮೇಲಿರುವಂತಹ ಕ್ಯಾಬಿನೆಟ್ ಗಳನ್ನು ಕಾಣಬಹುದಾಗಿದೆ. ಔಷಧಿ, ಪ್ರಸಾಧನ ಸಾಮಗ್ರಿ ಮತ್ತಿತ್ತರ ಸಾಮಗ್ರಿಗಳನ್ನಿಡಲು ಇದು ಸೂಕ್ತ ಸ್ಥಳ. ಸ್ನಾನಗೃಹದಲ್ಲಿರುವ ಜಾಗಕ್ಕೆ ಅನುಗುಣವಾಗಿ ಎದುರಿನಲ್ಲಿ ಕನ್ನಡಿಯಿರುವ ಕ್ಯಾಬಿನೆಟ್ ನ್ನು ಆಯ್ಕೆಮಾಡಬಹುದು. ಇದರಿಂದ ಬೇರೆ ಕನ್ನಡಿ ಉಪಯೋಗಿಸುವ ಅಗತ್ಯವಿಲ್ಲ. ಇಂದಿನ ದಿನಗಳಲ್ಲಿ ಫ್ಯಾನ್ಸಿ ಶೆಲ್ವೆಸ್(ಇದು ಕ್ಯಾಬಿನೆಟ್ ನಂತೆ) ಅಲಂಕಾರಕ್ಕೆ ಒಳ್ಳೆಯ ಆಯ್ಕೆಯಾಗಿದೆ.

ಟಾಯ್ಲೆಟ್ ರೋಲ್ ಸ್ಟ್ಯಾಂಡ್

ಟಾಯ್ಲೆಟ್ ರೋಲ್ ಸ್ಟ್ಯಾಂಡ್

ಇದು ನಿಮಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲವೆಂದು ಅನಿಸಬಹುದು. ಆದರೆ ಇದು ತುಂಬಾ ಉಪಯೋಗಿಸಲ್ಪಡುವ ಸಾಧನ. ಯಾರು ಕೂಡ ಒದ್ದೆ ಟಾಯ್ಲೆಟ್ ಸೀಟನ್ನು ಇಷ್ಟಪಡಲ್ಲ ಅಥವಾ ಅಲ್ಲಿ ಕೈ ಒರೆಸಿಕೊಳ್ಳಲು ಟಿಶ್ಯೂ ಇಲ್ಲದಿದ್ದರೆ ಅದು ತುಂಬಾ ಕಿರಿಕಿರಿ. ಟಾಯ್ಲೆಟ್ ರೋಲ್ ಹೋಲ್ಡರ್ ನ್ನು ಖರೀದಿಸುವಾಗ ಅದಕ್ಕೆ ಕವರ್ ಇರುವುದನ್ನು ಆಯ್ಕೆ ಮಾಡಿ. ಇದರಿಂದ ನೀವು ಶವರ್ ಉಪಯೋಗಿಸುವಾಗ ಟಿಶ್ಯೂ ರೋಲ್ ಒದ್ದೆಯಾಗುವುದಿಲ್ಲ.

ಕಸದ ಬುಟ್ಟಿ

ಕಸದ ಬುಟ್ಟಿ

ಯಾವುದೇ ಚರ್ಚೆ ಮಾಡದೆ ಇದು ಸ್ನಾನಗೃಹದಲ್ಲಿರಬೇಕಾದ ಅತ್ಯಂತ ಪ್ರಾಮುಖ್ಯ ವಸ್ತು. ಹೊದಿಕೆಗಳು, ತ್ಯಾಜ್ಯ ಟಿಶ್ಯೂ ಪೇಪರ್, ಸೋಪ್ ಮತ್ತು ಟೂಥ್ ಪೇಸ್ಟ್ ನ ಹೊದಿಕೆ ಮುಂತಾದ ಕಸಗಳನ್ನು ಸ್ನಾನಗೃಹದ ನೆಲದ ಮೇಲೆ ಬಿಸಾಕಲು ನೀವು ಬಯಸುವುದಿಲ್ಲ. ನೊಣ ಮತ್ತು ಕೀಟಗಳಿಂದ ರಕ್ಷಿಸಿಕೊಳ್ಳಲು ಮುಚ್ಚಲ್ಪಡುವ ಕಸದಬುಟ್ಟಿಯನ್ನು ಆಯ್ಕೆ ಮಾಡಿ. ಪೆಡಲ್ ಇರುವ ಕಸದ ಬುಟ್ಟಿ ಲಭ್ಯವಿರುವ ಕಾರಣ ನಿಮಗೆ ಬಗ್ಗಿ ಕಸ ಹಾಕುವ ಮತ್ತು ಬುಟ್ಟಿಯನ್ನು ಮುಚ್ಚುವ ಕೆಲಸವಿರುವುದಿಲ್ಲ

ಲಾಂಡ್ರಿ ಬಾಸ್ಕೆಟ್

ಲಾಂಡ್ರಿ ಬಾಸ್ಕೆಟ್

ಇದು ತುಂಬಾ ಅನಿವಾರ್ಯ. ಸ್ನಾನಗೃಹದಲ್ಲಿ ಇದು ಇದ್ದರೆ ತುಂಬಾ ಒಳ್ಳೆಯದು. ಲಾಂಡ್ರಿ ಬಾಸ್ಕೆಟ್ ಇದ್ದರೆ ಕುಟುಂಬದ ಎಲ್ಲಾ ಸದಸ್ಯರು ತಮ್ಮ ಬಟ್ಟೆಗಳನ್ನು ಒಗೆಯಲು ಒಂದೇ ಸ್ಥಳದಲ್ಲಿ ಹಾಕಬಹುದು. ಇದರಿಂದ ಪ್ರತೀ ಕೋಣೆಗೆ ತೆರಳಿ ಹುಡುಕಾಡುವ ತೊಂದರೆ ತಪ್ಪುತ್ತದೆ.

English summary

Accessorise Your Bathroom In Style

No bathroom is complete without various bathroom accessories installed in it. And with the wide range available in the market today, you are indeed spoil it for choices. But when heading out shopping, it is necessary to pay attention to a few important factors.
Story first published: Tuesday, September 10, 2013, 15:38 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more