For Quick Alerts
ALLOW NOTIFICATIONS  
For Daily Alerts

ಎಲ್ಲಾ ಬಟ್ಟೆಯಂತಲ್ಲ ಈ ಹತ್ತಿ ಬಟ್ಟೆ!

|
Iron
ಹತ್ತಿ ಬಟ್ಟೆಯನ್ನು ಒಗೆಯಲು ಸುಲಭ. ಆದರೆ ಅದನ್ನು ಇಸ್ತ್ರಿ ಮಾಡುವಾಗ ಬಟ್ಟೆಯ ಸುಕ್ಕು ಹೋಗದಿದ್ದರೆ ಕಿರಿಕಿರಿಯಾಗುವುದು. ಇಲ್ಲಿದೆ ನೋಡಿ ಕಾಟನ್ ಬಟ್ಟೆಯನ್ನು ಇಸ್ತ್ರಿ ಮಾಡುವಾಗ ಅನುಸರಿಸಬೇಕಾದ ವಿಧಾನ:

1. ಕಾಟನ್ ಬಟ್ಟೆಯನ್ನು ಇಸ್ತ್ರಿ ಹಾಕುವ ಮೊದಲು ಶರ್ಟ್ ಕಾಲರ್ ಲೇಬಲ್ ಅನ್ನು ಪರೀಕ್ಷಿಸಿ. ಕಾಟನ್ ಫ್ಯಾಬ್ರಿಕ್ ಇಸ್ತ್ರಿ ಮಾಡಬಹುದಾದದರೂ ಒಮ್ಮೆ ಪರೀಕ್ಷಿಸುವುದು ಒಳ್ಳೆಯದು.

2. ಇಸ್ತ್ರಿ ಹಾಕುವಾಗ ಬಟ್ಟೆಯ ಒಳ ಬದಿಗೆ ಹಾಕುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಫ್ಯಾಬ್ರಿಕ್ ಬಟ್ಟೆ ಹಾಳಾಗುವುದಿಲ್ಲ.

3. ಕಾಟನ್ ಬಟ್ಟೆಗೆ ಇಸ್ತ್ರಿ ಹಾಕುವಾಗ ಸ್ವಲ್ಪ ನೀರು ಚಿಮುಕಿಸಿ ಹಾಕಿದರೆ ಅದರ ಸುಕ್ಕನ್ನು ಹೋಗಲಾಡಿಸಬಹುದಾಗಿದೆ.

4. ನೀರನ್ನು ಬಟ್ಟೆ ಮೇಲೆ ಬೇಕಾದರೆ ಚಿಮುಕಿಸಬಹುದು ಅಥವಾ ನೀರನ್ನು ಇಸ್ತ್ರಿ ಪೆಟ್ಟಿಗೆ ಮೇಲೆ ಚಿಮುಕಿಸಿ ಇಸ್ತ್ರಿ ಹಾಕಬಹುದಾಗಿದೆ.

5. ಕಾಟನ್ ಬಟ್ಟೆಯನ್ನು ಒಗೆದಾಗ ಹಿಂಡಬೇಡಿ. ಹಾಗೆ ಕೊಡವಿ ಒಣಗಲು ಹಾಕಿ.

6. ಕಾಟನ್ ಬಟ್ಟೆಯನ್ನು ಒಗೆದಾಗ ನೀರಿಗೆ ಸ್ವಲ್ಪ ಸ್ಟ್ರಾಚ್ ಹಾಕಿ ಒಣಗಲು ಹಾಕಿ ಹೀಗೆ ಮಾಡುವುದರಿಂದ ಬಟ್ಟೆಯ ಗುಣಮಟ್ಟ ಹಾಗೆ ಉಳಿಯುತ್ತದೆ.

English summary

Tips To Iron Cloth | Remove Cottn Cloth Shrinks | ಹತ್ತಿ ಬಟ್ಟೆ ಇಸ್ತ್ರಿ ಮಾಡಲು ಸಲಹೆಗಳು | ಹತ್ತಿ ಬಟ್ಟೆಯ ಸುಕ್ಕುನ್ನು ತೆಗೆಯುವ ವಿಧಾನ

The biggest problem with cotton clothes is ironing. After washing cotton clothes, the shrinks doesn't go so the ironing needs to be done with proper techniques which can remove shrinks from them. Take a look
Story first published: Friday, October 7, 2011, 11:17 [IST]
X
Desktop Bottom Promotion