For Quick Alerts
ALLOW NOTIFICATIONS  
For Daily Alerts

ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು?

|

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ.

 substitute for onions

ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು. ಈರುಳ್ಳಿಯನ್ನು ಕಂದು ಬಣ್ಣಕ್ಕೆ ಫ್ರೈ ಮಾಡಿದರೆ ಆ ಅಡುಗೆಯ ರುಚಿಯೇ ಬೇರೆ. ಸಿಂಪಲ್ ಆಗಿ ಒಂದು ಚಟ್ನಿ ಮಾಡಲಿಕ್ಕೂ ಈರುಳ್ಳಿ ಬೇಕು. ನಾನ್‌ವೆಜ್‌ ಆದರೆ ಈರುಳ್ಳಿ ಇರಲೇಬೇಕು.

ಆದರೆ ಈರುಳ್ಳಿ ಬೆಲೆ ನೋಡಿ ಮಧ್ಯಮವರ್ಗದವರಿಗೆ ಮನೆ ಖರ್ಚು ನಿಭಾಯಿಸುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದು ಅಡುಗೆ ಮಾಡದೆ ಇರಲಿಕ್ಕೆ ಆಗುತ್ತೇ? ಆದ್ದರಿಂದ ಈರುಳ್ಳಿಗೆ ಪರ್ಯಾಯವಾಗಿ ಯಾವ ವಸ್ತುಗಳನ್ನು ಬಳಸಿ ಅಡುಗೆ ರುಚಿ ಹೆಚ್ಚಿಸಬಹುದೆಂಬ ಟಿಪ್ಸ್ ನೀಡಿದ್ದೇವೆ ನೋಡಿ.

ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ

ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ

ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಈಗೀನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ ಸ್ವಲ್ಪ ಅಧಿಕವೇ ಬೇಕು. ಪನ್ನೀರ್, ನಾನ್‌ವೆಜ್‌ ಗ್ರೇವಿಗೆ ಈರುಳ್ಳಿ ಹೆಚ್ಚು ಹಾಕಿದರೆ ಮಾತ್ರ ರುಚಿ. ಈರುಳ್ಳಿ ಬೆಲೆ ಅಧಿಕವಾಗಿರುವಾಗ ಈರುಳ್ಳಿ ಬದಲಿಗೆ ಗೋಡಂಬಿ ಹಾಕಿದರೆ ರುಚಿ ಚೆನ್ನಾಗಿ ಬರುತ್ತದೆ. ಇನ್ನು 4 ಜನರಿಗೆ ಸಾಕಾಗುವಷ್ಟು ಗ್ರೇವಿ ಮಾಡುವುದಾದರೆ 4-5ರಷ್ಟೇ ಗೋಡಂಬಿ ಬಳಸಿದರೆ ಸಾಕು.

ಈರುಳ್ಳಿ ಬದಲಿಗೆ ಇವುಗಳನ್ನು ಬಳಸಬಹುದು

ಈರುಳ್ಳಿ ಬದಲಿಗೆ ಇವುಗಳನ್ನು ಬಳಸಬಹುದು

* ಕಡಲೆ ಹಿಟ್ಟು ಬಳಸಬಹುದು

ಉತ್ತರ ಕರ್ನಾಟಕದ ಕಡೆ ಕಡಲೆ ಹಿಟ್ಟು ಗ್ರೇವಿ ಹೆಚ್ಚಾಗಿ ಮಾಡಲಾಗುವುದು. ಕಡಲೆ ಹಿಟ್ಟು ಹಾಕಿದಾಗ ಗ್ರೇವಿ ರೀತಿ ಗಟ್ಟಿಯಾಗಿ ಬರುವುದರಿಂದ ಈರುಳ್ಳಿ ಹಾಕದಿದ್ದರೂ ನಡೆಯುತ್ತೆ.

* ಆಲೂಗಡ್ಡೆ

ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್‌ ಮಾಡಿ, ( ಸ್ವಲ್ಪ ಉಪ್ಪು ಹಾಗೂ ಮಸಾಲೆ ಹಾಕಿ ಮ್ಯಾಶ್‌ ಮಾಡಿ) ಸಾರಿಗೆ ಹಾಕಿದರೆ ಸಾರು ರುಚಿಯಾಗುವುದು.

* ಪನ್ನೀರ್‌

ಪನ್ನೀರ್‌ ಅನ್ನು ಮ್ಯಾಶ್‌ ಮಾಡಿ ಈರುಳ್ಳಿ ಬದಲಿಗೆ ಬಳಸಬಹುದು.

*ಸೋರೆಕಾಯಿ/ಪಡವಲಕಾಯಿ

ಇದನ್ನು ತುರಿದ ಈರುಳ್ಳಿ ರೀತಿ ಪಲ್ಯ ಮಾಡುವಾಗ ಬಳಸಬಹುದು.

ರಾಯತ

ರಾಯತ

ಪಲಾವ್, ಬಿರಿಯಾನಿ ಇವುಗಳಿಗೆ ರಾಯತ ರುಚಿ ಸೇರಿದರೆ ರುಚಿ ಹೆಚ್ಚುವುದು. ಈರುಳ್ಳಿ ಅಧಿಕ ಬೆಲೆಯೆಂದು ಈರುಳ್ಳಿ ಹಾಕದೆ ಇರಬೇಕಾಗಿಲ್ಲ, ಈರುಳ್ಳಿ ಬದಲಿಗೆ ಮೂಲಂಗಿ ಬಳಸಿ ರಾಯತ ಮಾಡಿದರೆ ಚೆನ್ನಾಗಿರುತ್ತದೆ.

ಕೆಲವರಿಗೆ ಮೂಲಂಗಿ ವಾಸನೆ ಇಷ್ಟವಾಗುವುದಿಲ್ಲ ಅಂಥವರು ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ, ಟೊಮೆಟೊ ಹಾಕಿ ರಾಯತ ಮಾಡಬಹುದು.

ಈರುಳ್ಳಿ ಪುಡಿ

ಈರುಳ್ಳಿ ಪುಡಿ

ಈರುಳ್ಳಿ ಪುಡಿ ಈರುಳ್ಳಿಯಷ್ಟು ದುಬಾರಿಯಲ್ಲ. ಅಡುಗೆಗೆ ಈರುಳ್ಳಿ ರುಚಿ ಬೇಕೇಬೇಕು ಎಂದು ಬಯಸುವುದಾದರೆ ಈರುಳ್ಳಿ ಪುಡಿ ಬಳಸಬಹುದು. ಈರುಳ್ಳಿ ಹಾಕದ ಸಾರಿಗೆ ಸ್ವಲ್ಪ ಇಂಗು ಹಾಕಿದರೆ ರುಚಿ ಚೆನ್ನಾಗಿಯೇ ಬರುತ್ತದೆ. ಇನ್ನು ಸಲಾಡ್‌ಗೆ ಈರುಳ್ಳಿ ಬದಲಿಗೆ ಸೌತೆಕಾಯಿಯಿಂದ ಅಲಂಕರಿಸಿ.

ಇತರ ಟಿಪ್ಸ್

ಇತರ ಟಿಪ್ಸ್

ಈರುಳ್ಳಿ ದುಬಾರಿಯಾದಾಗ ಈರುಳ್ಳಿ ಬಗ್ಗೆ ಚಿಂತೆ ಮಾಡುವ ಬದಲು ಮೊದಲೆಲ್ಲಾ ಮಳೆಗಾಲಕ್ಕಾಗಿ ಈರುಳ್ಳಿ ಸಂಗ್ರಹಿಸಿಡುತ್ತಿದ್ದ ಹಾಗೆ ಮಾಡಿಟ್ಟರೆ ಈ ರೀತಿ ಬೆಲೆ ಹೆಚ್ಚಿದಾಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈರುಳ್ಳಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂಗ್ರಹಿಸಿಟ್ಟರೆ ವರ್ಷದವರೆಗೆ ಬಳಸಬಹುದಾಗಿದೆ.

English summary

What is a good substitute for onions

There no substitute for onions in Indian cooking.But price are high, so here are some ingredient you can you use substitute for onions for a better taste.
Story first published: Wednesday, December 4, 2019, 15:22 [IST]
X
Desktop Bottom Promotion