For Quick Alerts
ALLOW NOTIFICATIONS  
For Daily Alerts

ನಿಂಬೆರಸವನ್ನು ದೀರ್ಘಕಾಲ ಸಂಗ್ರಹಿಸಿಡುವುದು ಹೇಗೆ?

|

ಅಡುಗೆ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಕಡಿಮೆ ವೆಚ್ಚದಲ್ಲಿ, ಶುಚಿಯಾಗಿ, ಕಡಿಮೆ ಅವಧಿಯಲ್ಲಿ ರುಚಿಕರ ಅಡುಗೆ ಸಿದ್ಧವಾಗುವುದರಲ್ಲಿ ಸಂಶಯವಿಲ್ಲ. ಈ ರಿತಿ ಅಡುಗೆ ಮನೆಯನ್ನು ನಿರ್ವಹಿಸಲು ಸಾಕಷ್ಟು ತಂತ್ರಗಳಿವೆ, ಇವುಗಳನ್ನು ಸರಿಯಾಗಿ ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನಾವು ಅಡುಗೆ ಕೆಲಸಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ನಿಂಬೆ ಹೆಚ್ಚಿನ ಅಡುಗೆಮನೆಗಳಲ್ಲಿ ಕಂಡುಬರುವ ಉಪಯುಕ್ತ ವಸ್ತುವಾಗಿದೆ. ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅನೇಖ ಖಾದ್ಯಗಳಿಗೆ ನಿಂಬೆ ಸೇರಿಸುವುದರಿಂದ ಆಹಾರದ ರುಚಿ ಹೆಚ್ಚಾಗುತ್ತದೆ.

ನಾವಿಂದು ನಿಂಬೆರಸವನ್ನು ದೀರ್ಘಕಾಲ ಶೇಖರಿಸಿಡುವುದು ಹೇಗೆ ಎಂದು ತಿಳಿಸಲಿದ್ದೇವೆ. ನಿಂಬೆರಸವನ್ನು ಮೊದಲೇ ಶೇಖರಿಸಬಹುದಾ?, ಹೇಗೆ? ಹಾಳಾಗುವುದಿಲ್ಲವೇ? ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ.

ಅದರಲ್ಲು ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಬೆಲೆಯ ನಿಂಬೆಹಣ್ಣು ಮತ್ತು ಹೆಚ್ಚಾಗಿ ಲಭ್ಯವಿರುವುದಿಲ್ಲ. ಆದರೆ ನೀವು ಈ ಕೆಳಗೆ ಹೇಳಿದಂತೆ ನಿಂಬೆರಸವನ್ನು ಸಂಗ್ರಹಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಹಾಳಾಗದಂತೆ, ಯಾವುದೇ ರಾಸಾಯನಿಕ ಪರಿಣಾಮ ಬೀರದಂತೆ ತಡೆಯಬಹುದು. ಹೇಗೆ ಮುಂದೆ ತಿಳಿಸಿದ್ದೇವೆ ನೋಡಿ.

ನಿಂಬೆ ರಸವನ್ನು ದೀರ್ಘಕಾಲ ಸಂಗ್ರಹಿಸಲು, ಸಂರಕ್ಷಿಸಲು ಮತ್ತು ತಾಜಾವಾಗಿಡಲು ಉತ್ತಮ ಮಾರ್ಗಗಳಿವು:

ಐಸ್ ಕ್ಯೂಬ್

ಐಸ್ ಕ್ಯೂಬ್

ನಿಂಬೆ ರಸವನ್ನು ಸಂಗ್ರಹಿಸಲು ಇದು ಸರಳ ಮತ್ತು ಸುಲಭವಾದ ಮಾರ್ಗವಾಗಿದೆ. ನಿಂಬೆಹಣ್ಣುಗಳನ್ನು ಹಿಸುಕಿ ರಸವನ್ನು ಫಿಲ್ಟರ್ ಮಾಡಿ ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ. ಅದನ್ನು ಫ್ರೀಜರ್‌ನಲ್ಲಿ ಇರಿಸಿ. ಹೆಪ್ಪುಗಟ್ಟಿದ ನಂತರ ಐಸ್ ಕ್ಯೂಬ್ಗಳನ್ನು ತೆಗೆದುಕೊಂಡು ಜಿಪ್ಲಾಕ್ನೊಂದಿಗೆ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ. ಈಗ ಈ ಪ್ಯಾಕೆಟ್ ಅನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿ. ನಿಂಬೆ ಪಾನಕವನ್ನು ತಯಾರಿಸಲು ನಿಮಗೆ ಅನಿಸಿದಾಗಲೆಲ್ಲಾ ನೀವು ಗಾಜಿನಲ್ಲಿ ಒಂದೆರಡು ಐಸ್ ಕ್ಯೂಬ್ಗಳನ್ನು ಹಾಕಬಹುದು. ನಿಮ್ಮ ದಿಢೀರ್‌ ನಿಂಬೆ ಪಾನಕ ಸಿದ್ಧವಾಗುತ್ತದೆ.

ಗಾಜಿನ ಜಾರ್

ಗಾಜಿನ ಜಾರ್

ನೀವು ಬಯಸಿದರೆ ನಿಂಬೆ ರಸವನ್ನು ಗಾಜಿನ ಜಾರ್‌ನಲ್ಲಿ ಇಡಬಹುದು. ಇದಕ್ಕಾಗಿ, ಮೊದಲು ನಿಂಬೆ ರಸವನ್ನು ಹಿಂಡಿ ಮತ್ತು ಫಿಲ್ಟರ್ ಮಾಡಿ. ನಂತರ ಅದನ್ನು ಗಾಜಿನ ಜಾರ್‌ನಲ್ಲಿ ತುಂಬಿಸಿ. ನೀವು ಜಾರ್ ಅನ್ನು ಸಂಪೂರ್ಣವಾಗಿ ತುಂಬಬೇಕಾಗಿಲ್ಲ. ಅದನ್ನು ಫ್ರಿಜ್ ನಲ್ಲಿಡಿ. ಈ ರೀತಿಯಾಗಿ ನಿಂಬೆ ರಸವನ್ನು ಸಂಗ್ರಹಿಸಿದಾಗ ಎರಡು ವಾರಗಳವರೆಗೆ ಇರುತ್ತದೆ.

ಫ್ರಿಜ್ ನಲ್ಲಿ ಸಂಗ್ರಹಿಸಿ

ಫ್ರಿಜ್ ನಲ್ಲಿ ಸಂಗ್ರಹಿಸಿ

ನೀವು ನಿಂಬೆ ರಸವನ್ನು 2-3 ತಿಂಗಳು ಸಂಗ್ರಹಿಸಲು ಬಯಸಿದರೆ 2 ಕಪ್ ನಿಂಬೆ ರಸದಲ್ಲಿ 1/4 ಚಮಚ ಉಪ್ಪನ್ನು ಬೆರೆಸಿ. ನಿಂಬೆ ರಸದ ಪ್ರಮಾಣಕ್ಕೆ ಅನುಗುಣವಾಗಿ ನೀವು ಉಪ್ಪನ್ನು ಸೇರಿಸಬಹುದು. ಇದು ನಿಂಬೆ ರಸವನ್ನು ಕಹಿಯಾಗಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನೀವು ಅದನ್ನು ಫ್ರಿಜ್‌ನಲ್ಲಿ ಗಾಜಿನ ಬಟ್ಟಲಿನಲ್ಲಿ ಸಂಗ್ರಹಿಸಬಹುದು. ನಿಮಗೆ ಬೇಕಾದಾಗ ಚಮಚವನ್ನು ಬಳಸಿ ನಿಂಬೆ ರಸವನ್ನು ತೆಗೆದುಕೊಳ್ಳಬಹುದು.

English summary

Ways to Store, Preserve and Keep Lemon Juice Fresh for Long Time in Kannada

Here we are discussing about Ways to Store, Preserve and Keep Lemon Juice Fresh for Long Time in Kannada. You can store lemon juice in the refrigerator for a long time to make the most of it. Learn this simple hack. Read more.
Story first published: Monday, July 12, 2021, 16:33 [IST]
X
Desktop Bottom Promotion