For Quick Alerts
ALLOW NOTIFICATIONS  
For Daily Alerts

ಮನೆಯಿಂದಲೇ ಕಚೇರಿ ಕೆಲಸಗಳನ್ನು ಚೆನ್ನಾಗಿ ಮಾಡಲು ಈ ವಾಸ್ತು ಟಿಪ್ಸ್‌ ಪಾಲಿಸಿ

|

ಕೊರೊನಾ ಅಲೆ ವಿಶ್ವದೆಲ್ಲೆಡೆ ವ್ಯಾಪಿಸಿದೆ, ಇದು ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೆಚ್ಚಿನ ಅನಾಹುತಗಳು ಸಂಭವಿಸದೇ ಇರಲಿ ಎಂದು ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದಾರೆ, ಬಹುತೇಕ ಉದ್ಯಮಿಗಳು ಕಚೇರಿಗಳನ್ನು ಮುಚ್ಚಿ ಮನೆಯಹಲ್ಲೇ ತಮ್ಮ ಕಚೇರಿಯನ್ನು ಸ್ಥಾಪಿಸಿ ಕೆಲಸ ಆರಂಭಿಸಿದ್ದಾರೆ.

ಮನೆಯಿಂದಲೇ ಕೆಲಸ ಆರಂಭವಾಗಿ ವರ್ಷಕ್ಕೂ ಹೆಚ್ಚು ದಿನ ಕಳೆದಿದೆ. ಹಲವರಿಗೆ ಮನೆಯಿಂದ ಕಚೇರಿ ಕೆಲಸ ಸುಲಭ ಎನಿಸಿದರು, ಬಹುತೇಕರಿಗೆ ಕಚೇರಿ ಕೆಲಸಗಳಿಗೆ ಸರಿಯಾಗಿ ಗಮನಕೊಡಲು ಸಾಧ್ಯವಾಗದೇ, ಮನೆ-ಕಚೇರಿ ಎರಡನ್ನೂ ನಿಭಾಯಿಸಲು ಕಷ್ಟವಾಗುತ್ತಿರಬಹುದು ಹಾಗೂ ಮನೆಯಲ್ಲಿ ಏಕಾಗ್ರತೆಯಿಂದ ಕಚೇರಿ ಕೆಲಸ ಮಾಡಲು ಸಾಧ್ಯವಾಗದೆಯೂ ಇರಬಹುದು. ಇದಕ್ಕೆ ಇನ್ನು ಸಾಕಷ್ಟು ಕಾರಣಗಳು ಇದ್ದರೂ, ವಾಸ್ತು ಸಹ ಮುಖ್ಯ ಕಾರಣ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.

home vasthu

ಮನೆಯ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನೋಡುವ ನಾವು, ಮಾಡುವ ಕೆಲಸಕ್ಕೆ ವಾಸ್ತು ನೋಡಿಲ್ಲ ಎಂದರೆ ಹೇಗೆ ಅಲ್ಲವೆ?. ನೀವು ಮನೆಯಿಂದಲೇ ನಿತ್ಯ ಕಚೇರಿ ಕೆಲಸ ಮಾಡುವವರಾದರೆ ಮನೆಯಲ್ಲಿ ಕೆಲಸಕ್ಕೆ ಅನುಕೂಲವಾಗುವಂತೆ, ಸಮತೋಲಿತ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು, ಉತ್ತಮ ವೈಬ್ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸಲು ವಾಸ್ತು ಹೇಗಿರಬೇಕು ಮುಂದೆ ಕೆಲವು ಸಲಹೆ ನೀಡಿದ್ದೇವೆ ನೋಡಿ:

1. ಗೃಹ ಕಚೇರಿಗೆ ವಾಸ್ತು

1. ಗೃಹ ಕಚೇರಿಗೆ ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ಅಥವಾ ನೈಋತ್ಯ ಭಾಗದಲ್ಲಿ ಕಚೇರಿ ಕೆಲಸವ ಮಾಡಬೇಕು ಅಥವಾ ಗೃಹ ಕಚೇರಿಯನ್ನು ಸೆಟ್‌ ಮಾಡಿಕೊಳ್ಳಬೇಕು. ಏಕೆಂದರೆ ಇದು ವ್ಯಾಪಾರ ಮತ್ತು ಸ್ಥಿರ ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಅತ್ಯುತ್ತಮ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

2. ಗೋಡೆಯ ಬಣ್ಣ

2. ಗೋಡೆಯ ಬಣ್ಣ

ನಿಮ್ಮ ಹೋಮ್ ಆಫೀಸಿನ ಗೋಡೆಗಳ ಬಣ್ಣಗಳಲ್ಲಿ ಕೆನೆ, ತಿಳಿ ಹಳದಿ, ತಿಳಿ ಹಸಿರು ಅಥವಾ ತಿಳಿ ಬಂಗಾರ ಉತ್ತಮ ಆಯ್ಕೆಯಾಗಿದೆ. ಮನೆಯಲ್ಲಿ ಸಮತೋಲಿತ ಕೆಲಸದ ವಾತಾವರಣವನ್ನು ಉಂಟುಮಾಡಲು, ಕೆನೆಯಂತಹ ತಟಸ್ಥ ಬಣ್ಣವು ನಿಮ್ಮ ಕೆಲಸದ ಕಡೆಗೆ ಗಮನಹರಿಸಲು ಮತ್ತು ಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಿಳಿ ಹಳದಿ ಬಣ್ಣದ ಪ್ಯಾಲೆಟ್ ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ. ತಿಳಿ ಹಸಿರು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುತ್ತದೆ ಏಕೆಂದರೆ ಇದು ಧನಾತ್ಮಕ ವೈಬ್‌ಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ತಿಳಿ ಚಿನ್ನವು ಉತ್ಪಾದಕತೆ ಮತ್ತು ಲಾಭವನ್ನು ಖಾತ್ರಿಗೊಳಿಸುತ್ತದೆ.

3. ಕುರ್ಚಿ ಮತ್ತು ಮೇಜು

3. ಕುರ್ಚಿ ಮತ್ತು ಮೇಜು

ವಾಸ್ತು ಪ್ರಕಾರ, ಕೆಲಸ ಮಾಡಲು ನಾವು ಕುಳಿತುಕೊಳ್ಳುವ ಕುರ್ಚಿ ಆರಾಮದಾಯಕವಾಗಿರಬೇಕು, ಬಲಿಷ್ಠವಾಗಿ ಮತ್ತು ವಿಶಾಲವಾಗಿರಬೇಕು. ಅದರ ಮೇಲೆ ಕುಳಿತಿರುವ ವ್ಯಕ್ತಿಯ ತಲೆಯನ್ನು ಮುಚ್ಚುವಂತಿರಬೇಕು, ಏಕೆಂದರೆ ಅದು ಜೀವನವನ್ನು ಬೆಂಬಲಿಸುತ್ತದೆ.

ನಾವು ಕೆಲಸ ಮಾಡಲುಬಳಸುವ ಮೇಜು ನೈಋತ್ಯ ದಿಕ್ಕಿನಲ್ಲಿರಬೇಕು, ಕೆಲಸದ ಸಮಯದಲ್ಲಿ ನಿಮ್ಮ ಸ್ಥಾನವು ಈಶಾನ್ಯ ದಿಕ್ಕಿನಲ್ಲಿರಬೇಕು, ಕೆಲಸದ ಸ್ಥಳದ ಹಿಂದೆ ಬಾಗಿಲು, ಕಿಟಕಿ ಅಥವಾ ಬಾಲ್ಕನಿಯ ಅಡಚಣೆಯಿಲ್ಲದೆ ಇರಬೇಕು. ಇದು ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ.

4. ದಾಖಲೆಗಳ ಕಬೋರ್ಡ್‌

4. ದಾಖಲೆಗಳ ಕಬೋರ್ಡ್‌

ಪ್ರಮುಖ ದಾಖಲೆಗಳನ್ನು ಹೊಂದಿರುವ ಡ್ರಾಯರ್‌ಗಳು ಮತ್ತು ವಾರ್ಡ್ರೋಬ್‌ಗಳನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ಭಾಗದಲ್ಲಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ತೆರೆಯುವಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ ಸಿಟ್ರಿನ್ ಕ್ಲಸ್ಟರ್ ಅಥವಾ ಚಿನ್ನದ ಪೈರೈಟ್ ಸ್ಫಟಿಕವನ್ನು ನಿಮ್ಮ ಡ್ರಾಯರ್ ಒಳಗೆ ಇರಿಸುವುದು ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಗುಣಿಸುತ್ತದೆ.

5. ಇದನ್ನು ತಪ್ಪಿಸಿ

5. ಇದನ್ನು ತಪ್ಪಿಸಿ

ನಿಮ್ಮ ಗೃಹ ಕಚೇರಿಯನ್ನು ಸೆಟ್‌ ಮಾಡುವಾಗ ಕಪ್ಪು ಅಥವಾ ನೀಲಿ ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ಕಪ್ಪು ಋಣಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ನೀಲಿ ಉದ್ಯಮಿಗಳಿಗೆ ಸೂಕ್ತವಲ್ಲ. ಇದು ನೀರನ್ನು ಪ್ರತಿನಿಧಿಸುತ್ತದೆ, ಇದು ನಿಮ್ಮ ಭಾವನೆಗಳನ್ನು ಅಸ್ಥಿರಗೊಳಿಸಬಹುದು. ಇದು ವೈದ್ಯಕೀಯ ಸಮಸ್ಯೆಗಳಿಗೂ ಕಾರಣವಾಗಬಹುದು.

6. ಅನಗತ್ಯ ವಸ್ತುಗಳು ಬೇಡ

6. ಅನಗತ್ಯ ವಸ್ತುಗಳು ಬೇಡ

ದುರದೃಷ್ಟವನ್ನು ತಪ್ಪಿಸಲು ಅನಗತ್ಯ ಪೇಪರ್ ಮತ್ತು ಪೆನ್ನುಗಳು, ಗೃಹ ಕಚೇರಿಯಲ್ಲಿ ಗೊಂದಲವಾಡುವುದನ್ನು ತಪ್ಪಿಸಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸದ ಅವಕಾಶಗಳನ್ನು ಪಡೆಯಲು ಹಾಗೂ ಆಕರ್ಷಿಸಲು ನಿಮ್ಮ ಕೆಲಸದ ಮೇಜಿನ ವಾಯುವ್ಯ ಭಾಗದಲ್ಲಿ ಯಾವಾಗಲೂ ಸಣ್ಣ ಗ್ಲೋಬ್ ಅನ್ನು ಇರಿಸಿಕೊಳ್ಳಿ.

FAQ's
  • ವಾಸ್ತು ಪಾಲಿಸಲು ಸಾಧ್ಯವಾಗದೇ ಇದ್ದರೆ, ಅದಕ್ಕೆ ಅನುಕೂಲಕರ ಸ್ಥಳ ಇಲ್ಲದಿದ್ದರೆ ಏನು ಮಾಡಬೇಕು?

    ವಾಸ್ತುಗೆ ತಕ್ಕಂತೆ ಮನೆಯಲ್ಲೇ ಕಚೇರಿ ಸೆಟ್‌ ಮಾಡಲು ಸಾಧ್ಯವಾಗದೇ ಇದ್ದಾಗ ವಾಸ್ತುದೋಷ ನಿವಾರಣಾ ವಸ್ತುಗಳನ್ನು ಖರೀದಿಸಿ ನೀವು ಕಚೇರಿ ಕೆಲಸ ಮಾಡುವ ಸ್ಥಳದಲ್ಲಿಡಿ.

  • ಹೆಚ್ಚಿನ ಖರ್ಚಿಲ್ಲದೆ ಮನೆಯಲ್ಲೇ ಕಚೇರಿಯನ್ನು ಸೆಟ್‌ ಮಾಡಲು ಟಿಪ್ಸ್‌

    ಗಾಳಿ, ಬೆಳಕು ಚೆನ್ನಾಗಿ ಇರುವ ಕಡೆ ಹಾಗೂ ಹೆಚ್ಚು ಸದ್ದು, ಗಲಾಟೆ ಇಲ್ಲದ ಜಾಗವನ್ನು ಆಯ್ಕೆ ಮಾಡಿಕೊಂಡು, ನಿಮಗೆ ಅನುಕೂಲಕರವಾದ ಪೀಠೋಪಕರಣಗಳ ಬಳಕೆಯಿಂದ ಕೆಲಸ ಆರಂಭಿಸಿ. 

English summary

Vastu Direction Tips for Work Desk at Home in Kannada

Here we are discussing about Vastu direction tips for work desk at home In Kannada. Read more.
X
Desktop Bottom Promotion