For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್: ನೀವು ಆರೋಗ್ಯವಂತರೇ, ದಯವಿಟ್ಟು ಮಾಸ್ಕ್‌ ಧರಿಸಬೇಡಿ

|

ಕೊರೊನಾ ವೈರಸ್‌(ಕೋವಿಡ್ 19) ಭೀತಿ ಭಾರತೀಯರಿಗೂ ಕಾಡುತ್ತಿದೆ. ವಿದೇಶಕ್ಕೆ ಹೋಗಿ ಭಾರತಕ್ಕೆ ಬಂದ ಕೆಲ ಭಾರತೀಯರಲ್ಲಿ ಈ ವೈರಸ್‌ ಕಂಡು ಬಂದಿರುವುದರಿಂದ ಈ ರೋಗ ಹರಡದಂತೆ ಸರಕಾರ ತುಂಬಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಇನ್ನು ಜನರು ಕೂಡ ಈ ರೋಗ ಹರಡದಂತೆ ಮುನ್ನೆಚ್ಚರಿಕೆವಹಿಸುತ್ತಿರುವುದು ಕಮಡು ಬರುತ್ತಿದೆ.

Does Mask Help To Protect From Coronavirus

ಈಗಾಗಲೇ ಮೆಡಿಕಲ್‌ ಶಾಪ್‌ಗಳಲ್ಲಿ ಸ್ಯಾನಿಟೈಸರ್, ಮಾಸ್ಕ್‌ಗಳ ಕೊರತೆ ಉಂಟಾಗಿದೆ. ಮಾಸ್ಕ್‌ಗಳ ಕೊರತೆ ಉಂಟಾಗಲು ಕಾರಣ ಜನರು ಭಯಬೀತರಾಗಿ ಮುಗಿ ಬಿದ್ದು ಮಾಸ್ಕ್‌ ಕೊಳ್ಳುತ್ತಿದ್ದಾರೆ. ಇಲ್ಲೇ ಜನರು ತಪ್ಪು ಮಾಡುತ್ತಿದ್ದಾರೆ. ಹೌದು, ಯಾರು ಮಾಸ್ಕ್‌ ಧರಿಸಬಾರದು, ಯಾರು ಧರಿಸಬೇಕು, ಮಾಸ್ಕ್‌ ಧರಿಸಿದ ಬಳಿಕ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳು, ಮಾಸ್ಕ್‌ ಅನ್ನು ಹಾಗೇ ಕಸದ ಬುಟ್ಟಿಗೆ ಬಿಸಾಡದೆ ಅದನ್ನು ಹೇಗೆ ಡಿಸ್‌ಪೋಸ್‌ ಮಾಡಬೇಕು ಎಂಬುವುದರ ಬಗ್ಗೆ ಸರಕಾರ ಮಾಹಿತಿ ನೀಡಿದ್ದು, ಆ ಮಾಹಿಯನ್ನು ಇಲ್ಲಿ ನೀಡಲಾಗಿದೆ.
ನೀವು ಆರೋಗ್ಯವಂತರೇ, ಮಾಸ್ಕ್‌ ಧರಿಸಬೇಡಿ

ನೀವು ಆರೋಗ್ಯವಂತರೇ, ಮಾಸ್ಕ್‌ ಧರಿಸಬೇಡಿ

ಈಗ ಎಲ್ಲರೂ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸಿ ಓಡಾಡಿದರೆ ಇದರಿಂದ ನಮಗೆ ವೈರಸ್‌ ಹರಡುವುದಿಲ್ಲ ಎಂದು ಮಾಸ್ಕ್‌ ಧರಿಸುತ್ತಿದ್ದಾರೆ. ಆರೋಗ್ಯವಂತರು ಈ ಮಾಡುತ್ತಿರುವುದು ತಪ್ಪಾದ ಗ್ರಹಿಕೆಯಾಗಿದೆ. ಪ್ರತಿಯೊಬ್ಬರು ಮಾಸ್ಕ್‌ ಧರಿಸಿ ಓಡಾಡಿದರೆ ಇದರಿಂದ ಮಾಸ್ಕ್ ಕೊರತೆ ಉಂಟಾಗಿ, ಅಗ್ಯತವಿರುವವರಿಗೆ ಮಾಸ್ಕ್‌ ದೊರೆಯದೆ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯವಂತರು ಮಾಸ್ಕ್ ಧರಿಸಬೇಡಿ.

ಯಾವ ಸಂದರ್ಭದಲ್ಲಿ ಧರಿಸಬೇಕು?

ಯಾವ ಸಂದರ್ಭದಲ್ಲಿ ಧರಿಸಬೇಕು?

ಮನೆಯಲ್ಲಿ ಯಾರಿಗಾದರೂ ಕೆಮ್ಮು, ಶೀತ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅವರ ಆರೈಕೆ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಇನ್ನು ಕೋವಿಡ್‌ 19 ಕಾಯಿಲೆ ಇರುವವರ ಆರೈಕೆ ಮಾಡುವಾಗ ಮಾಸ್ಕ್ ಧರಿಸಬೇಕು.

ಯಾರು ಮಾಸ್ಕ್‌ ಧರಿಸಬೇಕು?

ಯಾರು ಮಾಸ್ಕ್‌ ಧರಿಸಬೇಕು?

* ನಿಮಗೆ ಕೆಮ್ಮು, ಸೀನು ಉಂಟಾದಾಗ ಮಾಸ್ಕ್‌ ಧರಿಸಿ, ಇದರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಅಲ್ಲದೆ ಈ ರೀತಿಯ ಮುನ್ನೆಚ್ಚರಿಕೆಗಳು ಕೊರೊನಾ ವೈರಸ್ ಎಂಬ ಮಹಾಮಾರಿ ತಡೆಗಟ್ಟುವಲ್ಲಿಯೂ ಸಹಕಾರಿಯಾಗಿದೆ.

* ಮಾಸ್ಕ್‌ ಬಳಸಿದ ಬಳಿಕ ಆಗಾಗ ಮಾಸ್ಕ್‌ ಮುಟ್ಟುವುದು ಮಾಡಬಾರದು.

* ಆಗಾಗ ಕೈಗಳನ್ನು ಸೋಪ್‌ನಲ್ಲಿ ತೊಳೆದು ಸ್ವಚ್ಛಗೊಳಿಸಿ.

ಇನ್ನು ಮಾಸ್ಕ್‌ ಅನ್ನು ಈ ರೀತಿ ಬಳಸಿ

ಇನ್ನು ಮಾಸ್ಕ್‌ ಅನ್ನು ಈ ರೀತಿ ಬಳಸಿ

  • ಮಾಸ್ಕ್‌ ಅನ್ನು ಮುಖಕ್ಕೆ ಹಾಕುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಿ.
  • ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್‌ ಧರಿಸಿ, ಕೆಲವರು ಮಾಸ್ಕ್‌ ಧರಿಸಿದ ಬಳಿಕ ಮೂಗಿನಿಂದ ಜಾರಿಸಿ ಇಡುತ್ತಾರೆ, ಹಾಗೆ ಮಾಡಿದರೆ ಮಾಸ್ಕ್ ಧರಿಸಿಯೂ ಪ್ರಯೋಜನವಿಲ್ಲ. ನಿಮ್ಮ ಮುಖ ಹಾಗೂ ಮಾಸ್ಕ್‌ ನಡುವೆ ಅಂತವಿರಬಾರದು.
  • ಮಾಸ್ಕ್‌ ಮುಖದ ಮೇಲೆ ಬಿಗಿಯಾಗಿ ಕುಳಿತಿರಬೇಕು.
  • ಮಾಸ್ಕ್ ಧರಿಸಿದ ಮೇಲೆ ಆಗಾಗ ಮುಖ ಮಾಸ್ಕ್ ಮುಟ್ಟಬಾರದು.
  • ಕೈಯನ್ನು ಆಗಾಗ ಸೋಪ್‌ ಅಥವಾ ಹ್ಯಾಂಡ್‌ವಾಶ್‌ನಿಂದ ತಳೆಯಬೇಕು.
  • ನೀವು ಬಳಸಿದ ಮಾಸ್ಕ್‌ ಮತ್ತೊಬ್ಬರು ಬಳಸುವಂತಿಲ್ಲ.
  • ಮಾಸ್ಕ್‌ ತೆಗೆಯುವುದು ಹೇಗೆ?

    ಮಾಸ್ಕ್‌ ತೆಗೆಯುವುದು ಹೇಗೆ?

    ಮಾಸ್ಕ್‌ ಅನ್ನು ಹಿಂದಿನಿಂದ ತೆಗೆಯಿರಿ, ಅದರ ಮುಂಭಾಗ ಮುಟ್ಟಲೇಬಾರದು, ಅದನ್ನು ಬಿಚ್ಚಿದ ತಕ್ಷಣ ಕಸದಬುಟ್ಟಿಗೆ ಹಾಕಿ, ನಂತರ ಆಲ್ಕೋಹಾಲ್‌ ಅಂಶವಿರುವ ಸೋಪ್‌ ಅಥವಾ ಹ್ಯಾಂಡ್‌ವಾಶ್‌ ಬಳಸಿ ಕೈ ತೊಳೆಯಿರಿ.

    N95 ಮಾಸ್ಕ್ ಮರು ಬಳಿಕೆ ಮಾಡಬಹುದೇ?

    N95 ಮಾಸ್ಕ್ ಮರು ಬಳಿಕೆ ಮಾಡಬಹುದೇ?

    ಕೊರೊನಾ ಭೀತಿಗೆ ಜನರು N95 ಮಾಸ್ಕ್‌ ಕೊಂಡು ಬಳಸುತ್ತಿದ್ದಾರೆ. ಆದರೆ ಒಂದೇ ಮಾಸ್ಕ್‌ ಅನ್ನು ಕೆಲವು ದಿನಗಳವರೆಗೆ ಬಳಸುವುದು ಆರೋಗ್ಯಕರವಲ್ಲ. ಸಾಮಾನ್ಯವಾಗಿ ಮಾಸ್ಕ್‌ ಅನ್ನು ಒಂದು ಬಾರಿ ಬಳಸಿದ ಬಳಿಕ ಮತ್ತೆ ಬಳಸಬಾರದು. ಆದರೆ ಈಗ ಒಂದು ಮಾಸ್ಕ್ ಕೊಂಡು ಅದನ್ನು ಪ್ರತಿದಿನ ಬಳಸುವವರನ್ನು ನೋಡುತ್ತಿದ್ದೇವೆ, ಹಾಗೆ ಮಾಡುವುದರಿಂದ ರೋಗಾಣು ಹರಡುವುದು. N95 ಮಾಸ್ಕ್ ಬದಲಿಗೆ ಸರ್ಜಿಕಲ್ ಮಾಸ್ಕ್ ಬಳಸಿ ಅದನ್ನು ಮನೆಗೆ ಬಂದ ಮೇಲೆ ಕಸದ ಬುಟ್ಟಿಗೆ ಹಾಕಿ.

English summary

Coronavirus If You Are Healthy Don't Wear Mask

Coronavirus spreads to India as well,to avoid that virus people are using mask, here are why healthy person should not use mask, have a look.
Story first published: Monday, March 9, 2020, 12:31 [IST]
X
Desktop Bottom Promotion