For Quick Alerts
ALLOW NOTIFICATIONS  
For Daily Alerts

ಮಣ್ಣನ್ನು ಫಲವತ್ತವಾಗಿಸುದು ಹೇಗೆ?

|

ಮನೆಯ ಸುತ್ತ ಒಂದು ಹೂದೋಟ ಇದ್ದರೆ ಎಷ್ಟು ಚೆನ್ನ, ಆದರ ಜೊತೆಗೆ ಒಂದಷ್ಟು ತರಕಾರಿಯನ್ನೂ ಬೆಳೆಸ ಬೇಕೆನ್ನುವುದು ಅನೇಕ ಮಹಿಳೆಯರ ಹೊಂಗನಸುಗಳಲ್ಲೊಂದು.ಮನೆಯ ಕೈ ತೋಟದಲ್ಲೇ ತರಕಾರಿ, ಹೂ ಬೆಳೆಸಿ ಅಕ್ಕಪಕ್ಕದವರಿಗೆ " ರೀ....ನಮ್ಮನೆಲಿ ಬೆಳೆದಿದ್ದು ತರಕಾರಿ ತಗೊಳ್ಳಿ..." ಅಂತಾನೋ " ಪೂಜೆಗೆ ಹೂ ಸಿಗದಿದ್ದರೆ ಬಾರೆಮ್ಮಾ ನಮ್ಮನೆಲೇ ಕಿತ್ಕೋ.." ಎನ್ನುವ ಉದಾರತೆ ತೋರುವಾಗ ಆಕೆಯಲ್ಲಿ ಅದೇನು ವಯ್ಯಾರ.

ತರಕಾರಿ, ಹೂ ಬೆಳೆಯಲು ಉತ್ತಮವಾದ ಬೀಜ ಹಾಗೂ ಸಾಕಷ್ಟು ನೀರಿದ್ದರೆ ಸಾಲದು ಮುಖ್ಯವಾಗಿ ಅದರ ಜೊತೆಗೆ ನಿಮ್ಮ ಮನೆಯ ತೋಟದ ಮಣ್ಣೂ ಫಲವತ್ತಾಗಿರಬೇಕಲ್ವೇ!ಆ ಫಲವತ್ತಾದ ಮಣ್ಣೇ ನಿಮ್ಮ ಇಂಥ ಉದಾದ ಭಾವನೆಗಳಿಗೆ ಸ್ಪಂಧಿಸಲು ಹಾಗೂ ಹೊಂಗನಸು ನನಸಾಗಿಸಲು ಸಹಕಾರಿಯಾಗಿದೆ ಎನ್ನುವುದನ್ನು ಮರೆಯಬೇಡಿ.ಮಣ್ಣು ಜೀವಾಧಾರಕ ಎಂದು ನೀವು ಭಾವಿಸುವಾದರೆ ಅದಕ್ಕೆ ಉತ್ತಮ ಗುಣಮಟ್ಟದ ಪೋಷಣೆ ಅಗತ್ಯ ಎನ್ನುವುದನ್ನೂ ಮರೆಯಬಾರದು.ಒಳ್ಳೇ ಪೌಷ್ಠಿಕಾಂಶ ಹೊಂದಿರುವ ಮಣ್ಣು ಉತ್ತಮ ಫಲ ನೀಡುತ್ತದೆ ಎನ್ನುವುದು ಸತ್ಯ.

How to Make Rich Soil

ಕೆಲವು ಸಲಹೆಗಳು:-

1. ನಿಮ್ಮ ತೋಟದ ಮಣ್ಣಿಗೆ ಆಗಾಗ ಗೊಬ್ಬರ ಬೆರೆಸಬೇಕು.ಹೆಚ್ಚು ಪೌಷ್ಠಿಕಾಂಶವಿರುವ ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಿದರೆ ಒಳ್ಳೆದು.ಕೇವಲ ಮೇಲ್ಭಾಗದ ಮಣ್ಣಿಗೆ ಗೊಬ್ಬರ ಎರಚುವುದರಿಂದ ಏನೂ ಪ್ರಯೋಜನವಿಲ್ಲ. ಮೇಲ್ಭಾಗದ ಮಣ್ಣನ್ನು ಕೆತ್ತಿ ಹದಮಾಡಿ ಗೊಬ್ಬರವನ್ನು ಮಣ್ಣಿಗೆ ಮಿಶ್ರಗೊಳಿಸುವುದರಿಂದ ಒಳ್ಳೆ ಫಲ ನಿರೀಕ್ಷಿಸ ಬಹುದು.ಅದರಲ್ಲೂ ಯಾವುದೇ ರಾಸಾಯನ ಮಿಶ್ರಣವಿಲ್ಲದೆ ಮನೆಯಲ್ಲೇ ಮಾಡಿದ ಗೊಬ್ಬರ ಬಳಕೆ ಮಾಡುವುದಾದರೆ ಇನ್ನೂ ಒಳ್ಳೇಯದೇ.

2.ಪ್ರಾಣಿಗಳ ತ್ಯಾಜ್ಯ, ಸಗಣಿ ಮುಂತಾದವನ್ನು ಬಳಸಿದ ಗೊಬ್ಬರವಾದರೆ ಮಣ್ಣು ಇನ್ನೂ ಹೆಚ್ಚು ಫಲವತ್ತಾಗಿರುತ್ತದೆ. ಗೊಬ್ಬರದಲ್ಲಿ ಪೌಷ್ಠಿಕಾಂಶ ಹೆಚ್ಚಾಗಿ ಇದ್ದರೆ ಗಿಡಗಳು ಹೆಚ್ಚು ಹಸಿರಾಗಿರುತ್ತವೆ.

3. ಇದರ ಜೊತೆಗೆ ಬೇರೆ ಗಿಡ-ಮರಗಳ ಎಲೆಗಳನ್ನು ಕತ್ತರಿಗೆ ಮಣ್ಣಿಗೆ ಮಿಶ್ರ ಮಾಡಿ.ಎಲೆಗಳಿಗೆ ಯಾವುದೇ ರೋಗ ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಿ.ಒಣಗಿದ ಎಲೆಗಳು, ಹುಳುಉಪ್ಪಟೆ ತಿಂದು ಬಿಟ್ಟ ಹಾಗೂ ಪಾಚಿಕಟ್ಟಿದ ಎಲೆಗಳು ನೀವು ಮಾಡುವ ಮಿಶ್ರಣದಲ್ಲಿ ಸೇರದ ಹಾಗೆ ಎಚ್ಚರವಹಿಸಿ.ಇದರಿಂದಾಗಿ ಮಣ್ಣಿನ ತಳಭಾಗದಲ್ಲಿ ರೋಗಾಣುಗಳು ಉತ್ಪತ್ತಿಯಾಗಿ ಗಿಡ-ಮರಗಳಿಗೂ ರೋಗ ತಗುಲುವ ಸಾಧ್ಯತೆಗಳಿರುತ್ತದೆ.

English summary

How to Make Rich Soil

Rich soil is one of the major keys to success of the garden and plantation. For rick soil it needs regular nourishment to encourage optimal productivity. Organic materials can provide that needed nutrition
X
Desktop Bottom Promotion