For Quick Alerts
ALLOW NOTIFICATIONS  
For Daily Alerts

ಗಾರ್ಡನಿಂಗ್‌ ಟಿಪ್ಸ್: ಗಿಡಕ್ಕೆ ಮಿಡತೆ, ಕಂಬಳಿ ಹುಳದ ಕಾಟ ತಪ್ಪಿಸಲು ಏನು ಮಾಡಬೇಕು?

|

ಚಳಿಗಾಲದಲ್ಲಿ ಕಂಬಳಿ ಹುಳಗಳ ಕಾಟ ಅಧಿಕವಿರುತ್ತದೆ. ಮನೆಯ ಮೇಲೆ, ಮನೆ ಮುಂದೆ ಗಿಡಗಳಿದ್ದರೆ ಅವುಗಳಲ್ಲಿ, ಹಂಚಿನ ಮನೆಯಾದರೆ ಅದರೊಳಗಡೆಯೆಲ್ಲಾ ತುಂಬುವುದು.

Tips For Gardening : How to Get Rid of Stem Borer in Kannada

ಇನ್ನು ಗಾರ್ಡನ್‌ ಪ್ರಿಯರಿಗೆ ಕಂಬಳಿ ಹುಳದಿಂದಾಗಿ ಈ ಸೀಸನ್‌ನಲ್ಲಿ ತಮ್ಮ ಗಿಡಗಳನ್ನು ರಕ್ಷಿಸುವುದೇ ದೊಡ್ಡ ಪ್ರಯಾಸವಾಗಿರುತ್ತದೆ. ಕೆಲವೊಂದು ಕಂಬಳಿ ಹುಳಗಳಿವೆ, ಅವುಗಳು ಕಾಂಡವನ್ನು ಸೀಳಿಕೊಂಡು ತಿನ್ನುತ್ತವೆ, ಹೀಗಾದರೆ ಗಿಡ ಸಾಯುತ್ತದೆ.

ಅಷ್ಟು ಕಷ್ಟಪಟ್ಟು ಜೋಪಾನ ಮಾಡುತ್ತಿರುವ ಗಿಡ ಹಾಳಾದರೆ ಯಾರಿಗೆ ತಾನೆ ಬೇಸರವಾಗಲ್ಲ? ನಿಮ್ಮ ಮನೆಯ ಗಾರ್ಡನ್‌ ಗಿಡಕ್ಕೂ ಕಂಬಳ ಹುಳದಿಂದಾಗ ತೊಂದರೆಯಾಗುತ್ತಿದೆಯೇ? ಹಾಗಾದರೆ ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಗಿಡಕ್ಕೆ ಕಂಬಳ ಹುಳದ ಕಾಟವಿದೆಯೆಂದು ತಿಳಿಯುವುದು ಹೇಗೆ?

ಬಿಳಿ ಬಿಳಿ ಮೊಟ್ಟೆ: ಗಿಡ ಹೂ, ಎಲೆ ಅಥವಾ ಕಾಂಡದಲ್ಲಿ ಬಿಳಿ-ಬಿಳಿ ಮೊಟ್ಟೆಗಳು ಕಂಡು ಬರುವುದು.

* ಬಿಳಿ ಗೆರೆ: ಎಲೆಗಳು ಮುದುಡಿಕೊಂಡಿರುವುದು, ಹೂ ಮತ್ತು ಎಲೆಗಳಲ್ಲಿ ಬಿಳಿ ಬಿಳಿ ಗೆರೆಯಿದ್ದರೆ ಕಂಬಳಿ ಹುಳ ದಾಳಿ ಮಾಡಿದೆ ಎಂದರ್ಥ
ಮಿಡತೆಗಳು: ಗಿಡದ ಕಾಂಡದಲ್ಲಿ ಹಸಿರು ಬಣ್ಣದ ಕಂಬಳಹುಳ ಕಾಣ ಸಿಗುತ್ತದೆ, ಅಷ್ಟು ಮಾತ್ರವಲ್ಲ ಕೆಲವೊಂದು ಮಿಡತೆಗಳೂ ಕಂಡು ಬರುವುದು.

ಕಂಬಳಿ ಹುಳ ದಾಳಿ ಮಾಡಿದಾಗ ಏನಾಗುತ್ತದೆ?

* ಎಲೆಗಳು ಮುದುಡಿ ಹೋಗುತ್ತದೆ
* ಹೂಗಳು ಸರಿಯಾಗಿ ಅರಳುವುದಿಲ್ಲ
* ಕಾಂಡ ಮುರಿದು ಗಿಡ ನಾಶವಾಗಿ ಹೋಗುವುದು.

ಗಿಡದ ರಕ್ಷಣೆಗೆ ಏನು ಮಾಡಬೇಕು?

* ಪ್ರಾರಂಭದಲ್ಲಿಯೇ ಗುರುತಿಸಿ, ಗಿಡ ಮೇಲ್ಭಾಗದಲ್ಲಿ ಆಗಿದ್ದರೆ ಆ ಭಾಗ ಕತ್ತರಿಸಬೇಕು.
* ಇಲ್ಲದಿದ್ದರೆ ಹರಿತವಾದ ನೈಫ್ ಬಳಸಿ ಅದರ ಕಾಂಡ ಓಪನ್ ಮಾಡಿ, ಅದನ್ನು ತೆಗೆದು, ಕೀಟ ನಾಶಕ ಹಾಕಿ, ನಂತರ ಕಾಂಡದ ಮೇಲ್ಭಾಗ ಮಣ್ಣು ಮೆತ್ತಿ ಒಂದು ದಾರದಿಂದ ಕಟ್ಟಿ(ಕಸಿ ಮಾಡುವ ರೀತಿ)
* ಕರಿ ಮೆಣಸಿನ ಪುಡಿ ಮಾಡಿ ಉದುರಿಸಿದರೂ ಕಂಬಳ ಹುಳ ಕಾಟ ಇರಲ್ಲ
* ಕೀಟ ನಾಶಕ ಬಳಸಿ
* ಬೂದಿ ಬಳಸಿದರೂ ಕೀಟ ಅಥವಾ ಕಂಬಳಿ ಹುಳ ತಡೆಗಟ್ಟಬಹುದು.
* ಇನ್ನು ಗಾರ್ಡನ್‌ನಲ್ಲಿ ಪಡವಲಕಾಯಿ ಗಿಡ ಹಾಕಿ, ಇದು ಕಂಬಳಿ ಹುಳ ತಡೆಗಟ್ಟುತ್ತದೆ.
* ಹುಳ ಬಂದು ಆರೈಕೆ ಮಾಡುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ನಿಮ್ಮ ಗಿಡ ಹಾಳಾಗದಂತೆ ಜೋಪಾನ ಮಾಡಬಹುದು.

English summary

Tips For Gardening : How to Get Rid of Stem Borer in Kannada

Tips For Gardening : How to Get Rid of Stem Borer in Kannada,
Story first published: Wednesday, November 23, 2022, 18:30 [IST]
X
Desktop Bottom Promotion