For Quick Alerts
ALLOW NOTIFICATIONS  
For Daily Alerts

ವಿಪರೀತ ಮಳೆ: ನಿಮ್ಮ ಕೈತೋಟದ ಆರೈಕೆ ಹೀಗಿರಲಿ

|

ಇದು ಚಳಿಗಾಲ, ನೋಡಿದರೆ ಮಳೆಗಾಲದಲ್ಲಿ ಸುರಿಯುವುದಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಬಂದರೆ ಹೊಲದಲ್ಲಿ ಬೆಳೆದ ಬೆಳೆ ನಾಶವಾಗುವುದು, ಆದರೆ ಜೋರು ಮಳೆಯಿಂದ ಟೆರೇಸ್‌ನಲ್ಲಿ ಬೆಳೆದ ಗಿಡಗಳನ್ನು ರಕ್ಷಣೆ ಮಾಡಬಹುದು.

gardening tips

ನಿಮ್ಮ ಗಾರ್ಡನ್ ಅನ್ನು ರಕ್ಷಣೆ ಮಾಡಲು ನೀವು ಮಾಡಬೇಕಾಗಿರುವುದು ಏನು ಎಂದು ನೋಡೋಣ ಬನ್ನಿ:
1. ಹಾಳಾದ ಗಿಡವನ್ನು ತೆಗೆಯಿರಿ

1. ಹಾಳಾದ ಗಿಡವನ್ನು ತೆಗೆಯಿರಿ

ಜೋರಾದ ಮಳೆಗೆ ಗಿಡ ಸ್ವಲ್ಪ ಹಾಳಾಗಿದ್ದರೆ ಸಂಪೂರ್ಣ ಕೊಳೆಯುವುದು, ಜೊತೆಗೆ ಈ ಗಿಡದಿಂದಾಗಿ ಮತ್ತೊಂದು ಗಿಡ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಹಾಳಾದ ಗಿಡ, ಮುರಿದ ಕೊಂಬೆಗಳು, ಜೋರಾಗಿ ಗಾಳಿ ಬೀಸಿದಾಗ ಮುರಿದು ಬೀಳುವಂತಿರುವ ಕೊಂಬೆಗಳು ಇವುಗಳನ್ನು ತೆಗೆಯಿರಿ.

2. ಎತ್ತರದ ಗಿಡಗಳಿಗೆ ಸಪೋರ್ಟ್‌ ನೀಡಿ

2. ಎತ್ತರದ ಗಿಡಗಳಿಗೆ ಸಪೋರ್ಟ್‌ ನೀಡಿ

ಎತ್ತರದ ಗಿಡಗಳಿದ್ದರೆ ಜೋರಾದ ಮಳೆ-ಗಾಳಿಗೆ ಮುರಿದು ಬೀಳುವುದು, ಅದನ್ನು ತಡೆಯಲು ಸಪೋರ್ಟ್‌ಗೆ ದೊಡ್ಡ ಕೋಲು ಅಥವಾ ಮರದ ಹಲಗೆ ನೀಡಿ, ಅಥವಾ ಬೀಳದಂತೆ ಹಗ್ಗದಿಂದ ಕಟ್ಟಿ.

3. ನೀರು ನಿಲ್ಲದಂತ ವ್ಯವಸ್ಥೆ ಮಾಡಿ

ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದರೆ ನೀರು ನಿಲ್ಲದಂತೆ ಎಚ್ಚರವಹಿಸಿ, ಅದೇ ಟೆರೇಸ್‌ ಗಾರ್ಡನ್ ಆದರೆ ನೀರು ನಿಲ್ಲದಂತೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಂತರೆ ನೀರು ಹೋಗಲು ವ್ಯವಸ್ಥೆ ಮಾಡಿ.

4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್‌ನಿಂದ ಕವರ್ ಮಾಡಿ

4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್‌ನಿಂದ ಕವರ್ ಮಾಡಿ

ಈಗಷ್ಟ ಮೊಳಕ ಬರುತ್ತಿರುವ ಅಥವಾ ಚಿಕ್ಕ ಗಿಡಗಳಿಗೆ ತುಂಬಾ ನೀರು ಬಿದ್ದರೆ ಹಾಳಾಗುತ್ತದೆ, ಅದನ್ನು ತಡೆಗಟ್ಟಲು ತೆಳುವಾದ ಪ್ಲಾಸ್ಟಿಕ್ ಬಳಸಿ.

5. ಗೊಬ್ಬರ ಹಾಕಬೇಡಿ

ತುಂಬಾ ಮಳೆ ಸುರಿಯುತ್ತಿರುವ ಸಮಯದಲ್ಲಿ ಗೊಬ್ಬರ ಹಾಕಬೇಡಿ, ಅದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಅದರ ಬದಲಿಗೆ ಮಳೆ ನಿಂತ ಬಳಿಕ ಅಥವಾ ಸ್ವಲ್ಪ ಮಳೆ ಬರುವಾಗ ಗೊಬ್ಬರ ಹಾಕಿದರೆ ಚೆನ್ನಾಗಿ ಹೀರಿಕೊಳ್ಳುವುದು.

 6. ಮಳೆ ನಿಂತ ಮೇಲೆ

6. ಮಳೆ ನಿಂತ ಮೇಲೆ

ಪ್ಲಾಸ್ಟಿಕ್ ಹಾಕಿರದಿದ್ದರೆ ಮಳೆ ನಿಂತ ಮೇಲೆ ಗಿಡದ ಬುಡಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ. ಅಲ್ಲದೆ ಮಳೆ ನಂತರ ಹುಳ-ಹುಪ್ಪಟೆಗಳು ಬಂದಿದ್ದರೆ ಅವುಗಳನ್ನು ತೆಗೆಯಿರಿ.

English summary

Things You Must Do to Your Garden Before, During and After Heavy Rain in Kannada

Things You Must Do to Your Garden Before, During and After Heavy Rain in Kannada, read on...
Story first published: Monday, November 22, 2021, 21:11 [IST]
X
Desktop Bottom Promotion