Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಮನೆಯ ಪಕ್ಕದಲ್ಲಿಯೇ ಇರಲಿ, ಮನ ಸೆಳೆಯೋ ಹಸಿರು ಕೈತೋಟ....
ನಿಮ್ಮ ಸುಂದರವಾದ ಮನೆಯ ಬಳಿಯಲ್ಲಿಯೇ ಸ್ವತಃ ನೀವೇ ಮಾಡಿರುವ ಕೈತೋಟವೊಂದಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಇದಕ್ಕಾಗಿ ನೀವು ಜಮೀನು ಅಗೆಯುವುದೋ ಸ್ಥಳ ಇರುವಲ್ಲಿ ಮನೆಯನ್ನು ಕಟ್ಟಿಸುವುದೋ ಮೊದಲಾದವುಗಳನ್ನು ಮಾಡಬೇಕಾಗಿಲ್ಲ. ಇರುವ ಸ್ಥಳದಲ್ಲೇ ಸುಂದರವಾದ ಅವಶ್ಯಕ ಕೈತೋಟವನ್ನು ನಿಮಗೆ ನಿರ್ಮಿಸಬಹುದಾಗಿದೆ. ನಿಮಗೆ ಬೇಕಾದ ಹಣ್ಣು ತರಕಾರಿಗಳನ್ನು ಈ ತೋಟದಲ್ಲಿ ಬೆಳೆಸಿಕೊಳ್ಳಬಹುದಾಗಿದೆ.
ಸಾವಯವ ವಸ್ತುಗಳನ್ನು ಬಳಸಿಕೊಂಡು ಈ ತೋಟವನ್ನು ನಿರ್ಮಿಸಿಕೊಳ್ಳಬಹುದಾಗಿದ್ದು ಇದಕ್ಕಾಗಿ ಕಡಿಮೆ ಹಣವನ್ನು ವ್ಯಯಿಸಿದರೆ ಸಾಕು. ಆದಷ್ಟು ರಾಸಾಯನಿಕ ವಸ್ತುಗಳನ್ನು ಬಳಸದೆಯೇ ಈ ತರಕಾರಿ ತೋಟವನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದು. ಯಾವುದೇ ಬಗೆಯ ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳು, ಹೂವಿನ ಗಿಡಗಳು ಹೀಗೆ ನಿಮಗೆ ಬೇಕಾಗಿರುವ ಆವಶ್ಯಕ ವಸ್ತುಗಳನ್ನು ನಿಮಗೆ ಬೆಳೆಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಈ ಬಗೆಯ ತರಕಾರಿಗಳನ್ನು ಬೆಳೆಯಿಸಿಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಮಾಹಿತಿಯನ್ನು ನಾವು ನೀಡುತ್ತಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ....

ಬೆಳೆಗಾಗಿ ಮಣ್ಣಿನ ಹೂಕುಂಡ
ನಿಮಗೆ ತರಕಾರಿ ಬೆಳೆಯಲು ಹೂಕುಂಡವು ಮಣ್ಣಿನಿಂದ ಹಿಡಿದು ಸಿರಾಮಿಕ್, ಪ್ಲಾಸ್ಟಿಕ್‌ವರೆಗೆ ದೊರೆಯುತ್ತದೆ. ಎರಡೂ ಬದಿಯಲ್ಲಿ ತೂತು ಇರುವ ಹೂಕುಂಡವನ್ನು ಆಯ್ಕೆಮಾಡಿ. ನೀವು ಬೆಳೆಯುವುದು ದೊಡ್ಡ ಸಸ್ಯವಾಗಿದ್ದಲ್ಲಿ ಚಟ್ಟಿಯಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀವು ಆಯ್ಕೆಮಾಡುವ ಗಿಡಕ್ಕೆ ಅನುಸಾರವಾಗಿ ನೀವು ಆರಿಸಲು ಹೂಕುಂಡವಿರಬೇಕು. ಹೂಕುಂಡವು ಗಿಡಕ್ಕಿಂತ 30 ಇಂಚುಗಳಷ್ಟು ದೊಡ್ಡದಾಗಿರಬೇಕು. ದೊಡ್ಡ ಪಾಟ್ ಯಾವಾಗಲೂ ಉತ್ತಮ.

ಮಣ್ಣಿನ ಆಯ್ಕೆ
ನಿಮ್ಮ ಗಿಡಕ್ಕೆ ಅನುಗುಣವಾಗಿರುವ ಮಣ್ಣನ್ನು ಆಯ್ಕೆಮಾಡಿ. ನಿಮ್ಮದೇ ಪಾಟಿಂಗ್ ಮಿಕ್ಸ್ ಅನ್ನು ಸಿದ್ಧಪಡಿಸಿ. 30 ಇಂಚಿನ ಪಾಟ್‌ಗೆ 50 ಇಂಚುಗಳ ಎತ್ತರದಲ್ಲಿ ಮಣ್ಣಿನ ಅಳತೆ ಇರಬೇಕು. ಗಿಡದ ಬೇರು ಆಳಕ್ಕೆ ಊರುವಂತೆ ಮಣ್ಣನ್ನು ಪಾಟ್‌ನಲ್ಲಿ ಸಿದ್ಧಪಡಿಸಿ. ಇದಕ್ಕೆ ಒಂದು ಕಪ್ ಮರಳನ್ನು ಸೇರಿಸಿ. ಹೆಚ್ಚು ಮರಳು ಸೇರಿಸಬೇಡಿ. ಸೆಗಣಿಯನ್ನು ಬಳಸಿಕೊಳ್ಳಿ. ನಂತರ ರಸಗೊಬ್ಬರದಿಂದ ಅದನ್ನು ಮುಚ್ಚಿ.

ಬೀಜಗಳು
ನೀವು ಬೀಜಗಳನ್ನು ಖರೀದಿಸುತ್ತಿದ್ದಲ್ಲಿ ಅವುಗಳ ಪ್ಯಾಕೆಟ್ ಮೇಲೆ ಬರೆದಿರುವ ಅವಧಿ ದಿನಾಂಕವನ್ನು ಪರಿಶೀಲಿಸಿಕೊಳ್ಳಿ. ಅವುಗಳನ್ನು ಬೆಳೆಯಿಸುವುದಕ್ಕೆ ಮುನ್ನ ಹೆಚ್ಚು ಸಮಯ ಹಾಗೆಯೇ ಇರಿಸಬೇಡಿ. ನೆಟ್ಟ ಬೀಜಗಳಿಗೆ ಹೆಚ್ಚು ನೀರುಣಿಸಬೇಡಿ. ಸೂರ್ಯನ ಬೆಳಕು ಸಾಕಷ್ಟು ಬೀಳುವಂತೆ ಮಾಡಿ. ಬೀಜದಲ್ಲಿ ಸಸಿ ಚಿಗುರೊಡೆದಂತೆ ಬೇರಿನೊಂದಿಗೆ ಮಣ್ಣನ್ನು ಸೇರಿಸಿಕೊಂಡು ಇನ್ನೊಂದು ಹೂಕುಂಡಕ್ಕೆ ಇದನ್ನು ವರ್ಗಾಯಿಸಿ.

ಗಿಡಗಳ ಕಾಳಜಿ
ಬೀಜ ಮೊಳೆತು ಸಸಿ ಹೊರಹೊಮ್ಮುತ್ತಿದ್ದಂತೆ ಸೂಕ್ತ ಪಾಲನೆಯನ್ನು ನಾವು ಮಾಡಬೇಕಾಗುತ್ತದೆ. ಆಗಾಗ್ಗೆ ಬೇರಿನ ಬದಿಯಲ್ಲಿ ಸ್ವಚ್ಛ ಮಾಡುವುದು, ಮಣ್ಣನ್ನು ಬದಲಾಯಿಸುವುದು, ಹೆಚ್ಚು ಎಲೆಗಳಿದ್ದಲ್ಲಿ ಅದನ್ನು ಕತ್ತರಿಸಿ ಚೆನ್ನಾಗಿ ಪೋಷಿಸುವುದು, ಕೀಟಗಳಿಂದ ಸಂರಕ್ಷಿಸುವುದು ಮೊದಲಾದ ಜವಬ್ದಾರಿಗಳನ್ನು ಗಿಡಗಳ ಪೋಷಣೆಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.

ಹೆಚ್ಚುವರಿ ಆರೈಕೆ
ಇಷ್ಟಲ್ಲದೆ ನೀವು ಗಿಡಗಳ ಪೋಷಣೆಗಾಗಿ ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಸಾಯನಿಕಗಳ ಸಿಂಪಡಣೆ, ರಸಗೊಬ್ಬರ ಬಳಕೆ, ಗಿಡಗಳ ಪೋಷಣೆ, ನಿತ್ಯವೂ ನೀರು ಹಾಯಿಸುವುದು, ಕಳೆಗಳ ನಿವಾರಣೆಯನ್ನು ಖುದ್ದು ನೀವೇ ಮಾಡಬೇಕು.



Click it and Unblock the Notifications











