For Quick Alerts
ALLOW NOTIFICATIONS  
For Daily Alerts

ಉರಿ ಬಿಸಿಲಿನ ಅಬ್ಬರಕ್ಕೂ, ಬಗ್ಗದ ತರಕಾರಿಗಳಿವು!

By Jaya subramanya
|

ಸಾಮಾನ್ಯವಾಗಿ ಮನೆ ಎಂದಾಕ್ಷಣ ಅಲ್ಲಿ ತೋಟ ಅಂತೂ ಇದ್ದೇ ಇರುತ್ತದೆ. ಮನೆಯ ಹಿಂಭಾಗ ಅಥವಾ ಮುಂಭಾಗದಲ್ಲಿ ಸುಂದರ ತೋಟವಿದ್ದರೆ ಮನೆಯೂ ಸುಂದರ ಕಣ್ಣಿಗೂ ತಂಪು. ನಿಮ್ಮ ತೋಟದಲ್ಲಿ ಹೂಗಿಡಗಳ ಸೌಂದರ್ಯದ ಜೊತೆಗೆ ನಿಮ್ಮ ಆರೋಗ್ಯವನ್ನು ವರ್ಧಿಸುವ ತರಕಾರಿಗಳ ಬೆಳೆಯನ್ನೂ ಬೆಳೆಯಬಹುದಾಗಿದೆ. ಹೂಗಿಡಗಳನ್ನು ಎಲ್ಲಾ ಕಾಲದಲ್ಲೂ ಬೆಳೆಯಬಹುದಾಗಿದ್ದರೂ ತರಕಾರಿಗಳ ಬೆಳೆಯುವಿಕೆ ಆಯಾಯ ಕಾಲಮಾನಕ್ಕೆ ಅನುಗುಣವಾಗಿರಬೇಕು. ಒಟ್ಟು 50 ವಿಧದ ತರಕಾರಿಗಳಿದ್ದು ಇವುಗಳನ್ನು ತಂಪಿನ ವಾತಾವರಣ ಮತ್ತು ಬೇಸಿಗೆಯ ವಾತಾವರಣಕ್ಕೆ ಅನುಸಾರವಾಗಿ ಬೆಳೆಯಬಹುದಾಗಿದೆ.

ಬೇಸಿಗೆಯಲ್ಲಿ ನೀವು ತರಕಾರಿಗಳನ್ನು ಬೆಳೆಸುತ್ತೀರಿ ಎಂದಾದಲ್ಲಿ ಹವಾಮಾನವು ಬೆಚ್ಚಗಿರಬೇಕು ಮತ್ತು ಬಿಸಿಗೆ ತರಕಾರಿ ಹೊಂದುವಂತಿರಬೇಕು. ನಿಮ್ಮ ತರಕಾರಿ ತೋಟದಲ್ಲೂ ನೀವು ಯಾವ ವಿಧವಾದ ತರಕಾರಿಗಳನ್ನು ಬೆಳೆಯಬಹುದು ಎಂಬ ಸಾಮಾನ್ಯ ಜ್ಞಾನ ನಿಮ್ಮಲ್ಲಿರಬೇಕು. ಕುಂಬಳಕಾಯಿ, ಕಲ್ಲಂಗಡಿ ಈ ವರ್ಗಕ್ಕೆ ಸೇರಿದ ತರಕಾರಿಗಳಾಗಿವೆ. ಇಂತಹ ತರಕಾರಿಗಳನ್ನು ಬೆಳೆಯಲು ಹವಾಮಾನ ಹೇಗಿರಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಪರಿಣಿತರು ಹೇಳುವಂತೆ ಈ ತರಕಾರಿಗಳಿಗೆ 8-10 ಗಂಟೆಗಳ ಸೂರ್ಯನ ಬೆಳಕು ಬೇಕು ಮತ್ತು ಮಣ್ಣಿನ ಪಿಎಚ್ 6.5 ಇರಬೇಕು.ಸಾಮಾನ್ಯವಾಗಿ ಈ ತರಕಾರಿಗಳ ಬೀಜಗಳನ್ನು ತೋಟದಲ್ಲಿಯೇ ಬಿತ್ತಬಹುದಾಗಿದೆ. ಬೀಜಗಳಿಂದ ಸಸ್ಯಗಳು ಬೆಳೆಯುತ್ತಿದ್ದಂತೆ ಅವನ್ನು ಪಾಟ್‎ನಲ್ಲಿ ವರ್ಗಾಯಿಸಬೇಕು ನಂತರ ಅದನ್ನು ಮನೆಯೊಳಗೆ ಎಂಟು ವಾರಗಳವರೆಗೆ ಇಡಬೇಕು. ನಂತರ ತೋಟದಲ್ಲಿ ಅವನ್ನು ಇಡಲು ಸಿದ್ಧವಾಗಿರುತ್ತದೆ. ಬೆಂಡೆಕಾಯಿ, ಬೀನ್ಸ್, ಕುಂಬಳಕಾಯಿ ಬೇಸಿಗೆಯಲ್ಲಿ ನೀವು ಬೆಳೆಸಬಹುದಾದ ಅತ್ಯತ್ತಮ ತರಕಾರಿಗಳಾಗಿವೆ. ಹಾಗಿದ್ದರೆ ಬೇಸಿಗೆಯಲ್ಲಿ ನಿಮ್ಮ ತೋಟದಲ್ಲಿ ಬೆಳೆಸಬಹುದಾದ ತರಕಾರಿಗಳ ಪಟ್ಟಿ ಇಲ್ಲಿದೆ...

ಟೊಮೇಟೊ

ಟೊಮೇಟೊ

ಕೆಂಪು ಕೆಂಪಿನ ತಾಜಾ ಟೊಮೇಟೊಗಳು ಕಣ್ಣಿಗೆ ಎಷ್ಟು ಆಹ್ಲಾದವನ್ನು ನೀಡುತ್ತವೆ ಅಲ್ಲವೇ? ಟೊಮೇಟೊಗಳನ್ನು ಬೆಳೆಯಲು ಬೇಸಿಗೆಯು ಉತ್ತಮ ಕಾಲಮಾನವಾಗಿದೆ. ಈ ಬೆಳೆಗೆ ಬೇಕಾಗಿರುವುದು ಬೆಚ್ಚಗಿನ ಮಣ್ಣಾಗಿದೆ. ಆದರೆ ಈ ಬೆಳೆಗೆ ನೀರು ಹಾಯಿಸುವಾಗ ನೀವು ಜಾಗರೂಕರೆಯಿಂದ ಇರಬೇಕು. ಏಕೆಂದರೆ ಹೆಚ್ಚಿನ ಮಾಯಿಶ್ಚರೈಸರ್ ಟೊಮೇಟೊವನ್ನು ಹಾಳುಮಾಡಬಹುದು.ತೋಟದಲ್ಲಿ ಟೊಮೇಟೊವನ್ನು ಬೆಳೆಸಲು ಸೂಕ್ತ ಸಲಹೆಗಳು

ಬದನೆಕಾಯಿ

ಬದನೆಕಾಯಿ

ನಿಮ್ಮ ಮನೆಯ ತೋಟದಲ್ಲಿ ಬೆಳೆಯಬಹುದಾದ ಉತ್ತಮ ಬೇಸಿಗೆ ಬೆಳೆ ಇದಾಗಿದೆ. ಬೇಕಾದಷ್ಟು ಬಿಸಿಲು ಮತ್ತು ಸಾಕಾಷ್ಟು ನೀರು ಬದನೆ ಬೆಳೆಯನ್ನು ಬೇಸಿಗೆಯಲ್ಲಿ ಉತ್ತಮ ಕೃಷಿಯನ್ನಾಗಿಸಿದೆ.

ಕಾಳುಮೆಣಸು

ಕಾಳುಮೆಣಸು

ಬೇರೆ ಬೇರೆ ಕಾಲಮಾನದಲ್ಲೂ ಕಾಳುಮೆಣಸನ್ನು ಬೆಳೆಸಬಹುದಾಗಿದೆ. ಟೊಮೇಟೊಗಳೊಂದಿಗೆ ಈ ಕೃಷಿಯನ್ನು ನಿಮಗೆ ಬೆಳೆಯಬಹುದಾಗಿದೆ. ಸೂರ್ಯನ ಕಿರಣದ ಪ್ರಖರತೆಗೆ ಅನುಗುಣವಾಗಿ ಕಾಳುಮೆಣಸು ಕೃಷಿಯನ್ನು ಬೆಳೆಯಲಾಗುತ್ತದೆ. ವಿವಿಧ ಕಾಳುಮೆಣಸನ್ನು ಬೇಸಿಗೆಯ ಬಿಸಿಗೆ ಅನುಗುಣವಾಗಿ ಬೆಳೆಯಬಹುದಾಗಿದ್ದು ವಿವಿಧ ಪರಿಮಳದ ಕಾಳುಮೆಣಸನ್ನು ಸೂರ್ಯನ ಪ್ರಖರತೆಯನ್ನು ಅನುಸರಿಸಿ ಕೃಷಿ ಮಾಡಬಹುದು.

ಸೌತೆಕಾಯಿ

ಸೌತೆಕಾಯಿ

ಬೇಸಿಗೆಯಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿಗಳಿಗಾಗಿ ಎದುರು ನೋಡುತ್ತಿದ್ದೀರಾ? ಹಾಗಿದ್ದರೆ ಸೌತೆಕಾಯಿ ಅತ್ಯುತ್ತಮವಾಗಿದೆ. ಬಿಸಿಲಿನ ಸಮಯದಲ್ಲಿ ನಿಮ್ಮನ್ನು ತಂಪಾಗಿರಿಸುವ ಸೌತೆಕಾಯಿಗೆ ಬಿಸಿಲು ಬೇಕು. ಅಂತೆಯೇ ಸಾಕಷ್ಟು ನೀರುಣಿಸಲು ಮರೆಯದಿರಿ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿ ಬೀಜವನ್ನು ನೇರವಾಗಿ ಮಣ್ಣಿಗೆ ಬಿತ್ತಬಹುದಾಗಿದೆ. ಇದಕ್ಕೆ ಉತ್ತಮ ಉಷ್ಣಾಂಶ ಆವಶ್ಯಕ. ಅಂತೆಯೇ ಕುಂಬಳಕಾಯಿ ಬೆಳೆಗೆ ಹೆಚ್ಚಿನ ಸ್ಥಳಾವಕಾಶ ಕೂಡ ಬೇಕು. ಕುಂಬಳಕಾಯಿ ಬಳ್ಳಿಗಳು ಉದ್ದವಾಗಿ ಹಣ್ಣುಗಳು ದೊಡ್ಡದಾಗಿರುತ್ತವೆ. ನಿಮಗೆ ಉತ್ತಮ ಬೆಳೆ ಬೇಕು ಎಂದಾದಲ್ಲಿ ಹೆಚ್ಚಿನ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕು.

ಬೀನ್ಸ್

ಬೀನ್ಸ್

ಬೇಸಿಗೆಯಲ್ಲಿ ಬೆಳೆಯಬಹುದಾದ ಉತ್ತಮ ಬೆಳೆಗಳಲ್ಲಿ ಬೀನ್ಸ್ ಕೂಡ ಒಂದು. ನಿಮ್ಮ ತೋಟದಲ್ಲಿ ಬೇರೆ ಬೇರೆ ರೀತಿಯ ಬೀನ್ಸ್ ಬೆಳೆಗಳನ್ನು ಬೆಳೆಯಬಹುದಾಗಿದೆ. ಹಳದಿ ಮತ್ತು ಹಸಿರು ಬೀನ್ಸ್‎ಗಳನ್ನು ಪೊದೆಗಳಲ್ಲಿ ಬೆಳೆಸಲಾಗುತ್ತದೆ, ಪೋಲ್ ಬೀನ್ಸ್‎ಗಳ ಬಳ್ಳಿ ಹರಡಲು ಬೇಲಿಗಳ ಅಗತ್ಯವಿದೆ.

English summary

Best Veggies To Grow In Summer

There are mainly 50 kinds of edible vegetables, which can be divided into two groups namely the cool weather vegetables and the warm weather vegetables. To grow the warm season veggies, the soil and temperature should be warm and the plants must be able to withstand the hot weather. Do you have a kitchen garden? Then, you should know about the best veggies to grow in summer. What are the best veggies to grow this summer? There are watermelons, pumpkins, etc, that fall into this category. What are the conditions for growing such vegetables?
Story first published: Tuesday, April 12, 2016, 20:34 [IST]
X
Desktop Bottom Promotion