For Quick Alerts
ALLOW NOTIFICATIONS  
For Daily Alerts

ಅಡುಗೆಗೆ ಅಷ್ಟೇ ಅಲ್ಲ, ಕೈತೋಟಕ್ಕೂ ಬೇಕು ವಿನೆಗರ್

|

ವಿನೆಗರ್ ಎಂಬುದು ಒಂದು ಅದ್ಭುತವಾದ ದ್ರಾವಣ. ಇದನ್ನು ಸೌಂದರ್ಯ, ಆರೋಗ್ಯ ಮತ್ತು ಅಡುಗೆ ಹೀಗೆ ನಾನಾ ಕಾರ್ಯಗಳಿಗಾಗಿ ಬಳಸಬಹುದು. ನಿಮ್ಮ ಮನೆಯಲ್ಲಿ ಒಂದು ಕೈತೋಟ ಅಥವಾ ಗಾರ್ಡನ್ ಇದ್ದಲ್ಲಿ ಇದನ್ನು ಅಲ್ಲಿ ಸಮರ್ಪಕವಾಗಿ ಬಳಸಬಹುದು. ಆದ್ದರಿಂದ ಇದನ್ನು ಸರ್ವೋಪಯೋಗಿ ದ್ರವ ಎಂದು ಕರೆಯಬಹುದು. ಈ ಲೇಖನದಲ್ಲಿ ವಿನೆಗರ್ ಅನ್ನು ನಾವು ಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಚರ್ಚಿಸಲಾಗಿದೆ. ಇವನ್ನು ತಿಳಿದುಕೊಳ್ಳಲು ಮುಂದೆ ಓದಿ.

ಸ್ಟಿಕ್ಕರ್‌ಗಳನ್ನು ತೆಗೆಯಲು, ಪೆಯಿಂಟ್ ಬ್ರಷ್‌ಗಳನ್ನು ಮೃದುಗೊಳಿಸಲು, ಕಿಟಕಿಗಳಿಗೆ ಹೊಳಪು ನೀಡಲು, ಚಿನ್ನದ ಒಡವೆಗಳಿಂದ ದುರ್ವಾಸನೆಯನ್ನು ನಿವಾರಿಸಿಕೊಳ್ಳಲು, ಈ ದ್ರಾವಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಇವುಗಳೆಲ್ಲದರ ಜೊತೆಗೆ ಇದನ್ನು ಅಡುಗೆ ಮನೆಯಲ್ಲಿ ಸಹ ಪರಿಣಾಮಕಾರಿಯಾಗಿ ಬಳಸಬಹುದು.

Uses Of Vinegar In The Garden

ಆಲೂಗಡ್ಡೆಗಳನ್ನು ಕತ್ತರಿಸಿದ ಮೇಲೂ ಸಹ ಬೆಳ್ಳಗೆ ಕಾಣಲು, ಅದನ್ನು ವಿನೆಗರ್‌ನಲ್ಲಿ ಮುಳುಗಿಸಿ ಇಡಲಾಗುತ್ತದೆ, ಅಥವಾ ಇದನ್ನು ರುಚಿಯನ್ನು ವರ್ಧಿಸುವ ದ್ರಾವಣವಾಗಿ ಸಹ ಅಡುಗೆಯಲ್ಲಿ ಬಳಸಲಾಗುತ್ತದೆ. ಹೀಗೆ ಪಟ್ಟಿ ಮಾಡುತ್ತ ಹೋದಲ್ಲಿ ವಿನೆಗರ್‌ನ ಬಳಕೆಗಳ ವಿಧಾನಕ್ಕೆ ಅಂತ್ಯವೇ ಇಲ್ಲ. ಬನ್ನಿ ವಿನೆಗರ್‌ನ ಉಪಯೋಗ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.... ತ್ವಚೆ ಪೋಷಣೆ ಮಾಡುತ್ತೆ ಈ ವಿನೆಗರ್ ರೆಸಿಪಿ

ಕಳೆಗಳನ್ನು ಕೊಲ್ಲುತ್ತದೆ
ಗಿಡಗಳ ಮಧ್ಯೆ ಬೆಳೆದು ಕಾಟ ಕೊಡುವಂತಹ ಕಳೆ ಮತ್ತು ಹುಲ್ಲನ್ನು ಕೊಲ್ಲಲು ವಿನೆಗರ್ ತುಂಬಾ ಪ್ರಯೋಜನಕಾರಿ. ವಿನೆಗರ್ ಕಳೆಯನ್ನು ತಕ್ಷಣ ಕೊಲ್ಲಲು ಸಹಾಯ ಮಾಡುತ್ತದೆ.

ಇರುವೆಗಳ ಕಾಟದಿಂದ ಮುಕ್ತಿ
ಇರುವೆಗಳನ್ನು ತೊಲಗಿಸಲು ಮನೆಯಲ್ಲಿ ಇರುವೆಗಳ ಸಾಲನ್ನು ನೋಡಿ ನೋಡಿ ಬೇಸತ್ತಿರಾ? ಏಕೆ ಯೋಚನೆ ಮಾಡುವಿರಿ. ಈ ಇರುವೆಗಳು ವಿನೆಗರ್ ಅನ್ನು ಭಾರಿ ದ್ವೇಷಿಸುತ್ತವೆ. ಹಾಗಾಗಿ ವಿನೆಗರ್ ಅನ್ನು ನೀರಿನೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಚಿಮುಕಿಸಿ. ಇರುವೆಗಳು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ.

ಹೂಗಳನ್ನು ಸಂರಕ್ಷಿಸಲು
ಹೂಗಳನ್ನು ಹೂದಾನಿಯಲ್ಲಿ ಹಾಕಿ ದೀರ್ಘ ಕಾಲ ಇಡಬೇಕು ಎಂದು ಬಯಸುತ್ತೀರಾ? ಹಾಗಾದರೆ ಹೂದಾನಿಯಲ್ಲಿ ಸ್ವಲ್ಪ ವಿನೆಗರ್ ಅನ್ನು ಹಾಕಿ ಇಡಿ. ಇದರಿಂದ ಹೂಗಳು ತುಂಬಾ ದಿನಗಳ ಕಾಲ ಬಾಡದೆ ಇರಬಲ್ಲವು.

ಹೂದಾನಿಯನ್ನು ಸ್ವಚ್ಛಗೊಳಿಸಲು
ನೀರಿನ ಕಲೆಗಳು ನಿಮ್ಮ ಹೂದಾನಿಯಲ್ಲಿ ಹಾಗೆಯೇ ಉಳಿದಿವೆಯೇ? ಅದಕ್ಕಾಗಿ ಚಿಂತಿಸಬೇಡಿ. ಸ್ವಲ್ಪ ನೀರಿಗೆ, ಡಿಸ್ಟಿಲ್ ಮಾಡಲಾದ ವಿನೆಗರ್ ಅನ್ನು ಬೆರೆಸಿ. ಇದನ್ನು ಕಲೆಗಳು ಇರುವ ಭಾಗ ಮುಳುಗುವವರೆಗೆ ತುಂಬಿಸಿ. ಇದನ್ನು ಹಾಗೆಯೆ ಕೆಲವು ಗಂಟೆಗಳ ಕಾಲ ಇರಿಸಿದರೆ, ಆ ಕಲೆಗಳು ಮಾಯವಾಗುತ್ತವೆ. ಇದನ್ನು ನೀವು ಸ್ವಚ್ಛ ಮಾಡಿದಾಗ ಇರುವ ಕಲೆಗಳು ಸಹ ಹೊರಟು ಹೋಗುತ್ತದೆ.

ಕುಂಡಗಳ ಮೇಲೆ ಇರುವ ಕಲೆಗಳನ್ನು ನಿವಾರಿಸಿಕೊಳ್ಳಲು
ಮನೆಯ ಗಾರ್ಡನ್‌ನಲ್ಲಿರುವ ಕುಂಡಗಳ ಮೇಲೆ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದನ್ನು ವಿನೆಗರ್‌ನಲ್ಲಿ ನೆನೆಸಿರುವ ಬಟ್ಟೆಯಲ್ಲಿ ಒರೆಸುವ ಮೂಲಕ ನಿವಾರಿಸಿಕೊಳ್ಳಬಹುದು. ಇದು ಕುಂಡಗಳ ಮೇಲೆ ಇರುವ ಎಲ್ಲಾ ಕಲೆಗಳನ್ನು ನಿವಾರಿಸಿ, ಕುಂಡವನ್ನು ಹೊಸ ಕುಂಡದಂತೆ ಕಾಣುವಂತೆ ಮಾಡುತ್ತದೆ. ವೀಕೆಂಡ್ ನಲ್ಲಿ ವಿನೆಗರ್ ನಿಂದ ಹೇರ್ ಕೇರ್ ಮಾಡಿ

ಇಷ್ಟೇ ಅಲ್ಲದೆ ಅಡುಗೆ ಮನೆಯ ಪ್ರಕ್ರಿಯೆಯಲ್ಲಿ ಕೂಡ ವಿನೆಗರ್‌ನ ಪ್ರಯೋಜನಗಳು ವಿಫುಲವಾಗಿದೆ, ಹೌದು ವಿನೆಗರ್, ತೀರಾ ಸಾಮಾನ್ಯವಾದ ಒ೦ದು ಅಡುಗೆ ಪದಾರ್ಥವಾಗಿದ್ದು, ಇದು ಪ್ರಾಥಮಿಕವಾಗಿ ಅಸೆಟಿಕ್ ಆಮ್ಲ ಹಾಗೂ ನೀರಿನಿ೦ದ ಮಾಡಲ್ಪಟ್ಟಿರುತ್ತದೆ. ವಿನೆಗರ್ ನಾನಾ ರೂಪಗಳಲ್ಲಿ ಲಭ್ಯವಿದ್ದರೂ ಕೂಡಾ, ಅತೀ ಸಾಮಾನ್ಯವಾಗಿ ಬಳಸಲ್ಪಡುವ ಪ್ರಕಾರಗಳೆ೦ದರೆ ಬಿಳಿಯ ವಿನೆಗರ್ ಹಾಗೂ ಆಪಲ್ ಸೈಡರ್ ವಿನೆಗರ್ ಗಳಾಗಿವೆ. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ಮುಂದೆ ಓದಿ...

ಮೊಟ್ಟೆ ಹೊಡೆದು ಹೋಗದಿರುವಂತೆ ಮಾಡಲು
ಇನ್ನು ಮುಂದೆ ಮೊಟ್ಟೆಯನ್ನು ಬೇಯಿಸುವಾಗ, ನೀರಿಗೆ ಸ್ವಲ್ಪ ವಿನೆಗರ್ ಬೆರೆಸಿ. ಇದರಿಂದ ಮೊಟ್ಟೆ ಬೆಂದ ನಂತರ ಸುಲಿಯಲು ನೆರವಾಗುತ್ತದೆ. ಜೊತೆಗೆ ಮೊಟ್ಟೆಯಲ್ಲಿರುವ ಬಿಳಿ ಭಾಗವು ಸಹ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ.

ಸಿಂಕ್ ಅಥವಾ ಡ್ರೈನ್ ಕಟ್ಟಿದಾಗ ಬ್ಲಾಕ್ ಆದಾಗ
ಕಟ್ಟಿಕೊಂಡ ಡ್ರೈನ್‍ಗಳನ್ನು ಮತ್ತು ಕಸವಿರುವ ಸ್ಥಳದಲ್ಲಿ ತಾಜಾತನವನ್ನು ತರಲು ಅವಶ್ಯಕ ನಿಮ್ಮ ಸಿಂಕ್ ಅಥವಾ ಇನ್ನಿತರ ಡ್ರೈನ್‍ಗಳು ಕಟ್ಟಿಕೊಂಡಾಗ ಅಥವಾ ಬ್ಲಾಕ್ ಆದಾಗ ವಿನೆಗರ್ ಬಳಸಿ, ಅವುಗಳನ್ನು ಸರಿಪಡಿಸಿಕೊಳ್ಳಬಹುದು. ಮುಕ್ಕಾಲು ಕಪ್ ಬೇಕಿಂಗ್ ಸೋಡದ 1/2 ಕಪ್ ಪ್ರಮಾಣಕ್ಕೆ ಕಾಲು ಭಾಗ ವೈಟ್ ವಿನೆಗರ್ ಹಾಕಿ. ಕಸ ಕೊಚ್ಚಿ ಕೊಂಡು ಹೋಗುತ್ತದೆ

ತುಕ್ಕನ್ನು ನಿವಾರಿಸಲು
ವಿನೆಗರ್ ನಲ್ಲಿರುವ ಅಸಿಟಿಕ್ ಆಮ್ಲವು ಕಬ್ಬಿಣದ ಮೇಲೆ ಇರುವ ಕಬ್ಬಿಣದ ಆಕ್ಸೈಡ್ ಅಥವಾ ತುಕ್ಕನ್ನು ನಿವಾರಿಸುತ್ತದೆ. ನಿಮ್ಮ ಮನೆಯಲ್ಲಿ ಬಾಗಿಲು- ಕಿಟಕಿಗಳಿಗೆ ಇರುವ ಹಿಂಜೆಸ್, ನಟ್ ಮತ್ತು ಬೋಲ್ಟುಗಳಲ್ಲಿರುವ ತುಕ್ಕನ್ನು ತೆಗೆಯಲು ವಿನೆಗರ್ ಬಳಸಿ. ಇದಕ್ಕಾಗಿ ಸ್ವಲ್ಪ ವಿನೆಗರ್ ಅನ್ನು ತುಕ್ಕು ಇರುವ ಭಾಗಕ್ಕೆ ಹಚ್ಚಿ, ನಂತರ ಅದನ್ನು ನೀರಿನಿಂದ ತೊಳೆಯಿರಿ. ಏಕೆಂದರೆ ವಿನೆಗರ್ ತೊಳೆಯದಿದ್ದರೆ, ಅದೇ ನಿಮ್ಮ ಲೋಹದ ವಸ್ತುಗಳನ್ನು ಹಾಳು ಮಾಡಿ ಬಿಡಬಹುದು.

English summary

Uses Of Vinegar In The Garden

Vinegar is a magic potion. It can be used in many things including beauty, health, cooking and many more. There are few clever uses of vinegar in the garden. Vinegar is an all purpose liquid. There are many uses of this great liquid. In this article we bring you the most unique uses of vinegar. Read on to know more. 
Story first published: Wednesday, July 29, 2015, 17:38 [IST]
X
Desktop Bottom Promotion