Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೈತೋಟದಲ್ಲಿ ಕೀಟಗಳ ಕಾಟವೇ? ಇನ್ನು ಚಿಂತೆ ಬಿಡಿ!
ನಿಮ್ಮ ಮನೆಯಂಗಳದ ಅಥವಾ ಬಾಲ್ಕನಿಯಲ್ಲಿ ನೀವು ಅಕ್ಕರೆಯಿಂದ ಬೆಳೆಸಿದ ಗಿಡಗಳಿಗೆ ಕೀಟಬಾಧೆಯಾದರೆ ನಿಮಗೆಷ್ಟು ನಿರಾಸೆಯಾಗಬಹುದು? ನಿಮ್ಮ ನೆಚ್ಚಿನ ಹೂಗಿಡಗಳಿಗೆ, ತರಕಾರಿ ಗಿಡಗಳಿಗೆ, ಬಳ್ಳಿ, ಹೂ, ಎಲೆಗಳಿಗೆ ಇರುವೆ, ಕಡ್ಡಿಹುಳ ಮೊದಲಾದ ಕೀಟಗಳು ಧಾಳಿಯಿಟ್ಟು ತಿನ್ನಲು ಪ್ರಾರಂಭಿಸಿದರೆ ಇನ್ನು ನಿರಾಶರಾಗಬೇಕಿಲ್ಲ. ಏಕೆಂದರೆ ವಿಷಯುಕ್ತ ಕೀಟನಾಶಕದ ಬದಲು ಸುಲಭವಾಗಿ ಲಭ್ಯವಾಗುವ ಸಾರಭೂತ ತೈಲ (Essential Oils) ಅಥವಾ ಸಸ್ಯಜನ್ಯ ತೈಲಗಳನ್ನು ಬಳಸಿ ಈ ಕೀಟಗಳ ಕಾಟವನ್ನು ಹತೋಟಿಗೆ ತರಬಹುದು.
ಉದಾಹರಣೆಗೆ ಪುದಿನಾ ಎಲೆಗಳನ್ನು ಭಟ್ಟಿ ಇಳಿಸಿ ಶೇಖರಿಸಲಾದ ಪುದಿನಾ ಸಾರಭೂತ ತೈಲದ ಕೆಲವು ಹನಿಗಳನ್ನು ಹೂಗಿಡಗಳ ಅಕ್ಕಪಕ್ಕ ಚಿಮುಕಿಸಿದರೆ ಅಲ್ಲಿ ಇರುವೆಗಳು ಬರುವುದಿಲ್ಲ, ಏಕೆಂದರೆ ಇರುವೆಗಳಿಗೆ ಈ ಪರಿಮಳ ಹಿಡಿಸುವುದಿಲ್ಲ. ಅಲ್ಲದೇ ಶಿಲೀಂಧ್ರದಿಂದ ಬಾಧಿತ ಬೇರು, ಇತರ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕಿನಿಂದ ಗಿಡಗಳು ಬಾಧೆಗೊಳಗಾಗುವುದನ್ನು ತಪ್ಪಿಸಬಹುದು.
ಕೀಟಗಳು ಮತ್ತು ಕ್ರಿಮಿಗಳಿಗೆ ಕೆಲವು ಪರಿಮಳಗಳು ಇಷ್ಟವಾಗುವುದಿಲ್ಲ ಮತ್ತು ಈ ಪರಿಮಳಗಳಿಂದ ದೂರವಿರಲು ನಿರ್ಧರಿಸುತ್ತವೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಈ ಮಾಹಿತಿಯೇ ಈ ಸಾರಭೂತ ತೈಲಗಳ ಬಳಕೆಗೆ ಪ್ರೇರಣೆ ನೀಡಿದೆ. ಮಾರುಕಟ್ಟೆಯಲ್ಲಿ ವಿವಿಧ ಪರಿಮಳಗಳ ಸಾರಭೂತ ಎಣ್ಣೆಗಳು ಲಭ್ಯವಿವೆ. ಪುದಿನಾ, ಸಿಟ್ರೋನೆಲ್ಲಾ, ಲೆಮನ್ ಗ್ರಾಸ್ ಮೊದಲಾದವು ಕ್ರಿಮಿ, ಕೀಟ ಅಷ್ಟೇ ಏಕೆ ರಕ್ತ ಹೀರುವ ಸೊಳ್ಳೆಗಳನ್ನೂ ಹೊರದೋಡಿಸಲು ಶಕ್ತವಾಗಿವೆ. ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ!
ಈ ಎಣ್ಣೆಗಳನ್ನು ಮನೆಯ ಹಜಾರ, ಕೈತೋಟ, ಹಿತ್ತಲು ಮೊದಲಾದ ಸ್ಥಳಗಳಲ್ಲಿ ಚಿಮುಕಿಸುವುದರಿಂದ ವಾತಾವರಣವನ್ನು ಶುದ್ಧಗೊಳಿಸಿ ಮನೆಯಲ್ಲಿ ಪರಿಮಳವನ್ನು ಪಸರಿಸುವ ಜೊತೆಗೇ ನೊಣ, ನುಸಿ, ಸೊಳ್ಳೆ, ತಿಗಣೆ, ನೆಮಟೋಡ್ (nematodes) ಎಂಬ ಕೀಟ ಮೊದಲಾದವುಗಳನ್ನು ಒಳನುಸುಳಲು ಬಿಡದೇ ಇವುಗಳಿಂದ ಒದಗಬಹುದಾದ ತೊಂದರೆಗಳಿಂದ ರಕ್ಷಿಸುತ್ತದೆ. ಇವುಗಳ ಕೆಲವು ಉಪಯೋಗಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ, ಮುಂದೆ ಓದಿ...
ಸೊಳ್ಳೆ ಮೊದಲಾದ ಕೀಟಗಳನ್ನು ಹೊರದೋಡಿಸುತ್ತದೆ
ರೋಸ್ಮರಿ ಸಾರಭೂತ ತೈಲದ ಕೆಲವು ಹನಿಗಳನ್ನು ಬಾಟಲಿಯಲ್ಲಿ ಹಾಕಿ ಕೀಟಗಳು ಒಳಬರುವ ಸ್ಥಳಗಳಲ್ಲಿ ಅಂದರೆ ಕಿಟಕಿ ಬಾಗಿಲುಗಳಿಗೆ ನೇರವಾಗಿ ಚಿಮುಕಿಸುವುದರಿಂದ ಹಲವು ಕೀಟಗಳಿಗೆ ಪ್ರವೇಶ ನಿಷೇದ್ಧವಾಗಿಸಬಹುದು. ನೊಣ, ನುಸಿ, ಸೊಳ್ಳೆ ಮೊದಲಾದ ಹಾರಿ ಬರುವ ಕೀಟಗಳನ್ನು ಈ ಪರಿಮಳ ಒಳಬರಲು ಬಿಡದೇ ಹೊರದೂಡುತ್ತದೆ.
ನಿಮ್ಮ ಗಿಡಗಳಿಗೆ ಶಿಲೀಂಧ್ರದಿಂದ ರಕ್ಷಣೆ ನೀಡುತ್ತದೆ
ನಿಮ್ಮ ನೆಚ್ಚಿನ ಗಿಡಗಳ ಕಾಂಡ, ಎಲೆ ಮೊದಲಾದವುಗಳ ಮೇಲೆ ಶಿಲೀಂಧ್ರ ಬೆಳೆದು ಗಿಡದ ಸೌಂದರ್ಯವನ್ನೇ ಕುಗ್ಗಿಸಿದ್ದರೆ ಟೀ ಟ್ರೀ ತೈಲವನ್ನು (tea tree oil) ಇದರ ಮೇಲೆ ಚಿಮುಕಿಸಿ. ಇದರಿಂದ ಶಿಲೀಂಧ್ರದಿಂದ ಗಿಡಗಳು ಇನ್ನಷ್ಟು ಹಾಳಗುವುದನ್ನು ತಡೆಯಬಹುದು ಹಾಗೂ ಈಗಾಗಲೇ ಗಿಡವನ್ನು ಆವರಿಸಿರುವ ಬ್ಯಾಕ್ಟೀರಿಯಾಗಳನ್ನೂ ಕೊಂದು ಗಿಡದ ನೈಜ ಸೌಂದರ್ಯವನ್ನು ಮರಳಿಸಬಹುದು.
ಹುಳಗಳಿಂದ ರಕ್ಷಿಸುತ್ತದೆ
ಅದಾವುದೋ ಮಾಯೆಯಲ್ಲಿ ರಾತ್ರಿ ಗಿಡಹತ್ತಿದ್ದು ಬೆಳಿಗ್ಗೆ ನೋಡಿದರೆ ನಿಮ್ಮ ನೆಚ್ಚಿನ ಗಿಡದ ಎಲೆ ತಿನ್ನುತ್ತಿರುವ ಬಸವನಪಾದ ಮತ್ತು ಗೊಂಡೆಹುಳಗಳನ್ನು ತಡೆಯಲು ಪೈನ್ ಮತ್ತು ಸಿಡಾರ್ ಮರಗಳ ತೈಲವನ್ನು (Pine and Cedarwood oils) ನಿಮ್ಮ ಗಿಡಗಳ ಮೇಲೆ ಸಿಂಪಡಿಸಿ. ಒಂದೆರಡು ದಿನ ಈ ಜೀವಿಗಳು ಆಗಮಿಸುವ ಸ್ಥಳದಲ್ಲಿ ಸಿಂಪಡಿಸಿದರೆ ಮೂರನೆಯ ದಿನಕ್ಕೇ ಅವುಗಳ ಆಗಮನ ನಿಂತುಹೋಗುತ್ತದೆ.
ಕೀಟಗಳು ಕಚ್ಚಿದ ಉರಿಯನ್ನು ಶಮನಗೊಳಿಸುತ್ತದೆ
ಸೊಳ್ಳೆಯ ಸಹಿತ ಹಲವು ಕೀಟಗಳು ನಮ್ಮನ್ನು ಕಚ್ಚುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಕೀಟ ಅಥವಾ ಸೊಳ್ಳೆ ಕಚ್ಚಿದರೆ ಕೊಂಚ ಸಮಯದಲ್ಲಿಯೇ ಅಲ್ಲಿನ ಚರ್ಮ ಊದಿಕೊಂಡು ಅಸಾಧ್ಯ ಉರಿ ತರಿಸುತ್ತದೆ. ಇದನ್ನು ಶಮನಗೊಳಿಸಲು ಸ್ವಚ್ಛವಾದ ಹತ್ತಿಯುಂಡೆಯಲ್ಲಿ ಕೆಲವು ಹನಿ ಸೇಬಿನ ಶಿರ್ಕಾ (organic apple cider vinegar) ಅದ್ದಿ ಕೀಟ ಕಚ್ಚಿರುವ ಸ್ಥಳವನ್ನು ಅದ್ದಿರಿ. ಕೀಟ ಕಚ್ಚಿದಾಕ್ಷಣ (ವಾಸ್ತವವಾಗಿ ಇವುಗಳಲ್ಲಿರುವ ಮುಳ್ಳನ್ನು ಚುಚ್ಚಿ ಅಲ್ಲಯೇ ಬಿಟ್ಟು ಹೋಗುವುದು) ಕಚ್ಚಿರುವ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿ ಒಂದು ವೇಳೆ ಚಿಕ್ಕ ಮುಳ್ಳೇನಾದರೂ ಕಂಡುಬಂದರೆ ಕೂಡಲೇ ಹೊರತೆಗೆಯಿರಿ.
ಇದರಿಂದ ಉರಿ ಶೀಘ್ರವಾಗಿ ಶಮನಗೊಳ್ಳಲು ಮತ್ತು ಹೊಸಚರ್ಮ ಬೆಳೆಯಲು ನೆರವಾಗುತ್ತದೆ. ಈ ತೈಲದೊಂದಿಗೆ ಲ್ಯಾವೆಂಡರ್ ಎಣ್ಣೆ, ಕ್ಯಾಮೋಮೈಲ್, ಜೊಜೊಬಾ ಎಣ್ಣೆ (jojoba oil) ಮತ್ತು ಬಾಸಿಲ್ ಎಲೆಗಳ ಸಾರಭೂತ ತೈಲಗಳನ್ನು ಮಿಶ್ರಣ ಮಾಡಿದರೆ ಹೆಚ್ಚೂ ಕಡಿಮೆ ಎಲ್ಲ ಕೀಟಗಳ ಕಡಿತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.