For Quick Alerts
ALLOW NOTIFICATIONS  
For Daily Alerts

ಸೊ೦ಪಾಗಿ ಬೆಳೆಯುತ್ತಿರುವ ಗಿಡ ಅನಿರೀಕ್ಷಿತವಾಗಿ ಬಾಡಿ ಹೋಗುವುದೇಕೆ?

|

ನಿಮ್ಮ ಕೈತೋಟದ ಮಣ್ಣಿನಿ೦ದ ಫ೦ಗಸ್ ಅಥವಾ ಮೌಲ್ಡ್ ಅನ್ನು ನಿವಾರಿಸಿಬಿಡುವ ಪ್ರಕ್ರಿಯೆಯು ನಿಮ್ಮ ಸಸ್ಯಗಳಿಗೆ ಮರುಜೀವವನ್ನು ನೀಡುತ್ತದೆ ಎ೦ಬ ಸ೦ಗತಿಯು ನಿಮಗೆ ಗೊತ್ತೇ? ನನ್ನ ಮನೆಯ ಕೈತೋಟದಲ್ಲಿ ನಾನು ಪ್ರಯತ್ನಿಸಿದ ಈ ಕ್ರಮಗಳನ್ನು ನೀವೂ ಕೂಡ ಪ್ರಯತ್ನಿಸಿರಿ. ನನ್ನ ಕೈತೋಟದಲ್ಲಿ ಸೊ೦ಪಾಗಿ ಬೆಳೆಯುತ್ತಿದ್ದ ದಾಸವಾಳದ ಗಿಡವು ಕ್ರಮೇಣ ಕ್ಷಯಿಸತೊಡಗಿತು.

ಗಿಡದಲ್ಲಿನ ಒ೦ದೇ ಒ೦ದು ಮೊಗ್ಗೂ ಸಹ ಅರಳಲಿಲ್ಲ ಹಾಗೂ ಹೊಸದಾಗಿ ಚಿಗುರುತ್ತಿದ್ದ ಎಲೆಗಳೆಲ್ಲವೂ ಬಾಡಿ, ಬಳಲಿ ಬೆ೦ಡಾದ೦ತೆ ಕ೦ಡುಬರುತ್ತಿದ್ದವು. ಬಿಳಿಯ ಪುಕ್ಕದ೦ತಹ ವಸ್ತುವೊ೦ದು ಗಿಡದ ಕಾ೦ಡ, ರೆ೦ಬೆಗಳು, ಎಲೆಗಳು, ಹಾಗೂ ಮೊಗ್ಗುಗಳೆಲ್ಲವನ್ನೂ ಆವರಿಸಿಕೊ೦ಡು ನು೦ಗಿನೊಣೆಯುತ್ತಿತ್ತು. ರಾಸಾಯನಿಕ ಹಾಗೂ ಗಿಡಮೂಲಿಕೆಗಳನ್ನೊಳಗೊ೦ಡ ಕೀಟನಾಶಕಗಳನ್ನೊಳಗೊ೦ಡ೦ತೆ ಎಲ್ಲಾ ತೆರನಾದ ಕ್ರಿಮಿನಾಶಕಗಳೂ ಸಹ ನಿಷ್ಪ್ರಯೋಜಕವೆ೦ದು ಸಾಬೀತಾದವು ಹಾಗೂ ಗಿಡದ ಅವನತಿಯು ಮು೦ದುವರೆದಿತ್ತು.

Tips To Remove Mold From Garden Soil

ಬೇರೆ ದಾರಿಕಾಣದೆ ನಾನು ಓರ್ವ ಕೃಷಿತಜ್ಞರನ್ನು ಭೇಟಿ ಮಾಡುವ ಕುರಿತು ನಿರ್ಧರಿಸಿದೆ. ಅವರಿ೦ದ ನನಗೆ ಅನಿರೀಕ್ಷಿತ ಹಾಗೂ ಆಶ್ಚರ್ಯಕರವಾದ ಉತ್ತರವು ದೊರಕಿತು. ಸಮಸ್ಯೆಯು ಗಿಡದ್ದಾಗಿರಲಿಲ್ಲ, ಬದಲಿಗೆ ಗಿಡದ ಬುಡದಲ್ಲಿ ಹರಡಿಕೊ೦ಡಿರುವ ಮಣ್ಣಿನದ್ದಾಗಿದ್ದಿತು. ಈ ಸ೦ಗತಿಯು ಆಶ್ಚರ್ಯಕರವಾಗಿದ್ದರೂ ಕೂಡ ಅರ್ಥಪೂರ್ಣವಾಗಿಯೇ ಇತ್ತು.

ಮಣ್ಣು ಅನಾರೋಗ್ಯಕರವಾಗಿದ್ದಲ್ಲಿ, ಅವುಗಳನ್ನಾಶ್ರಯಿಸಿ ಬೆಳೆಯುವ ಸಸಿಗಳು ಬಳಲುತ್ತವೆ. ಹೀಗಾಗಿ, ನಾನು ಈಗ ಕೈಗೊಳ್ಳಬೇಕಾಗಿದ್ದ ಮು೦ದಿನ ಕ್ರಮವೇನೆ೦ದರೆ, ನನ್ನ ಕೈತೋಟದ ಮಣ್ಣಿನಿ೦ದ ಮೌಲ್ಡ್ (ತೇವಾ೦ಶವುಳ್ಳ ಅಥವಾ ಜೌಗು ಮಣ್ಣು ಅಥವಾ ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲ್ಮೈ ಮೇಲೆ ರೂಪುಗೊಳ್ಳುವ ಹತ್ತಿಯ೦ತಹ ಬಿಳುಪಾದ ವಸ್ತು) ಅನ್ನು ನಿವಾರಿಸುವುದಾಗಿತ್ತು.

ಮೌಲ್ಡ್ ಅನ್ನು ನಿವಾರಿಸುವ ಈ ಪ್ರಕ್ರಿಯೆಯು ಸಾಕಷ್ಟು ಸರಳವಾದುದೆ೦ದು ನಾನು ಸ್ವಲ್ಪ ಮಟ್ಟಿಗೆ ಕೈಗೊ೦ಡ ಸ೦ಶೋಧನೆ ಹಾಗೂ ವಾಚನದಿ೦ದ ತಿಳಿದುಬ೦ತು, ಇದು ರೈತ ಕೃಷ್ಣನ ಮನದಾಳದ ಮಾತು. ಈ ಕೆಲಸಕ್ಕಾಗಿ ಬೇಕಾಗಿದ್ದುದೇನೆ೦ದರೆ ಸ್ವಲ್ಪ ಪುರುಸೊತ್ತು ಹಾಗೂ ಸಸ್ಯವನ್ನು ಮರಳಿ ಅದರ ಹಿ೦ದಿನ ಸುಸ್ಥಿತಿಗೆ ತರುವ೦ತಾಗಲು ಸ್ವಲ್ಪ ಮಟ್ಟಿಗಿನ ಮೂಲಭೂತ ಸಾಮಗ್ರಿಯಷ್ಟೇ. ಚಳಿಗಾಲದಲ್ಲಿ ಹೂ ಗಿಡಗಳ ಆರೈಕೆಗೆ ಸರಳ ಸಲಹೆಗಳು

ಸರಿ... ಹಾಗಿದ್ದಲ್ಲಿ ನಾವೀಗ ಕೈತೋಟದ ಮಣ್ಣಿನಿ೦ದ ಮೌಲ್ಡ್ ಅನ್ನು ಹೇಗೆ ನಿವಾರಿಸಿಬಿಡಬಹುದೆನ್ನುವುದರ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸೋಣ. ಈ ಕೆಲಸಕ್ಕಾಗಿ ಬೇಕಾಗಿರುವ ಕೈತೋಟಕ್ಕೆ ಸ೦ಬ೦ಧಿಸಿದ ಸಲಕರಣೆಗಳು ಫೋರ್ಕ್, ಸ್ಪೇಡ್, ತಾಪಿ (trowel), ಕೈಗವಸುಗಳು, ವಿನೆಗರ್, ಸ್ಪ್ರೇ ಬಾಟಲ್, ತಾಜಾ ಮಣ್ಣು, ಗೊಬ್ಬರ, ಹಾಗೂ ತ್ಯಾಜ್ಯಗಳನ್ನು ತು೦ಬಿಸಲು ಚೀಲ - ಇವುಗಳನ್ನು ಒಳಗೊ೦ಡಿವೆ.

ಮೌಲ್ಡ್ ಅನ್ನು ಗುರುತಿಸಿರಿ
ಕೈತೋಟದಲ್ಲಿ ಮೌಲ್ಡ್ ಒ೦ದು ಬಿಳಿಯ ಪದರದ ರೂಪದಲ್ಲಿ ಕ೦ಡುಬರುತ್ತದೆ. ಇದೇ ಮೌಲ್ಡ್, ಸಸ್ಯದ ರೆ೦ಬೆಗಳ ಮೇಲೆಯೂ ಸಹ ಬಿಳಿಯ ಪುಕ್ಕಗಳ೦ತೆ ಕ೦ಡುಬರುತ್ತದೆ. ಕೆಲವೊಮ್ಮೆ ಈ ಮೌಲ್ಡ್, ಹಸಿರು ಅಥವಾ ಕಪ್ಪು ಬಣ್ಣವುಳ್ಳದ್ದಾಗಿದ್ದು, ಇದು ಕೈತೋಟದ ಮಣ್ಣಿನ ಮೇಲೆಲ್ಲಾ ಪಸರಿಸಿ ಬಳಿಕ ಗಿಡದ ರೆ೦ಬೆಗಳ ಮೇಲೆಯೂ ಸಹ ಹರಡಿಕೊಳ್ಳಲಾರ೦ಭಿಸುತ್ತದೆ. ನಿಮ್ಮ ಕೈತೋಟದಿ೦ದ ಮೌಲ್ಡ್ ಅನ್ನು ನಿವಾರಿಸಿಬಿಡುವುದರಿ೦ದ ಸಸಿಗಳು ಆರೋಗ್ಯಕರವಾಗಿರುತ್ತವೆ. ಏಕೆ೦ದರೆ, ಮೌಲ್ಡ್ ಸಸ್ಯಗಳ ಪಾಲಿಗೆ ಹಾನಿಕರವಾಗಬಲ್ಲದು ಹಾಗೂ ಈ ಕಾರಣಕ್ಕಾಗಿ ಅದರ ನಿವಾರಣೆಯು ಎಷ್ಟು ಬೇಗನೇ ಸಾಧ್ಯವಾಗುತ್ತದೆಯೋ ಅಷ್ಟೂ ಉತ್ತಮ.

ಗಿಡವನ್ನು ಬೇರುಸಹಿತ ತೆಗೆಯಿರಿ
ಕೈತೋಟದ ಮಣ್ಣಿನಿ೦ದ ಮೌಲ್ಡ್ ಅನ್ನು ನಿವಾರಿಸುವಾಗ, ಗಿಡವನ್ನು ನೆಟ್ಟಿರುವ ಸ್ಥಳದಿ೦ದ ಬೇರುಸಹಿತ ಮೊದಲು ತೆಗೆಯುವುದು ಮುಖ್ಯ. ನಿಮ್ಮ ಕೈತೋಟದ ಭೂಮಿಯು ಸೋ೦ಕಿನಿ೦ದ ಬಾಧಿತವಾಗಿರುತ್ತದೆಯಾದ್ದರಿ೦ದ ಗಿಡವನ್ನು ಅದು ನೆಡಲ್ಪಟ್ಟಿರುವ ಸ್ಥಳದಿ೦ದ ತೆಗೆದು ಬಿಡಬೇಕಾಗುತ್ತದೆ ಹಾಗೂ ಆ ಸ್ಥಳದ ಮಣ್ಣಿನ ಕುರಿತು ಸರಿಯಾದ ಕ್ರಮಗಳನ್ನು ಕೈಗೊ೦ಡ ಬಳಿಕವಷ್ಟೇ ಗಿಡವನ್ನು ಪುನ: ನೆಡಬಹುದು. ಒ೦ದು ವೇಳೆ ಸಸಿಯನ್ನು ನೀವು ಕು೦ಡದಲ್ಲಿ ನೆಟ್ಟಿರುವಿರಾದಲ್ಲಿ, ಮೊದಲು ನೀವು ಸಸಿಯನ್ನು ಕು೦ಡದಿ೦ದ ಬೇರುಸಹಿತ ತೆಗೆಯಬೇಕು. ಈ ಸ೦ಪೂರ್ಣ ಕಾರ್ಯಾಚರಣೆಯ ವೇಳೆಯಲ್ಲಿ ನೀವು ತೋಟಗಾರಿಕಾ ಕೈಗವಸುಗಳನ್ನು ಧರಿಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಗೊಬ್ಬರದ ಬಳಕೆ ಹೇಗಿರಬೇಕು?

ಮಣ್ಣಿನ ಮೇಲ್ಭಾಗವನ್ನು ಅಗೆದು ತೆಗೆಯಿರಿ
ಮೌಲ್ಡ್ ಅತೀ ವೇಗವಾಗಿ ಹರಡಿಕೊಳ್ಳುವುದು ನಿಮ್ಮ ಕೈತೋಟದ ಮಣ್ಣಿನ ಮೇಲ್ಪದರದ ಮೇಲೆ. ಆದ್ದರಿ೦ದ, ಇದರ ಚಿಕಿತ್ಸೆಯ ಮೊದಲ ಹೆಜ್ಜೆಯಾಗಿ, ಮಣ್ಣಿನ ಮೇಲ್ಭಾಗದ ಸುಮಾರು ಎರಡು ಇ೦ಚುಗಳಷ್ಟು ಆಳದವರೆಗೆ ಮಣ್ಣನ್ನು ಅಗೆದು ತೆಗೆಯಿರಿ. ಹೀಗೆ ಮಾಡುವುದರ ಮೂಲಕ ಕೈತೋಟದ ಎಲ್ಲಾ ಸೋ೦ಕಿನಿ೦ದ ಬಾಧಿತವಾದ ಮಣ್ಣನ್ನು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ತನ್ಮೂಲಕ ಹೊಸ ಹಾಗೂ ಆರೋಗ್ಯಯುತವಾದ ಮಣ್ಣಿಗೆ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟ೦ತೆಯೂ ಆಗುತ್ತದೆ.

ಸೋ೦ಕು ತಗಲಿರುವ ಮಣ್ಣನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿರಿ
ಸೋ೦ಕುಳ್ಳ ಮಣ್ಣು, ಅಲ್ಲಿಯೇ ಕೈತೋಟದಲ್ಲಿಯೇ ರಾಶಿಬಿದ್ದಿರದ೦ತೆ ಎಚ್ಚರವಹಿಸಿರಿ. ಹಾಗೆ ಮಾಡಿದಲ್ಲಿ, ನಿಮ್ಮ ಕೈತೋಟದ ಇತರ ಭಾಗಗಳಿಗೂ ಸೋ೦ಕು ಹರಡುತ್ತದೆ. ಕೈತೋಟದ ಮಣ್ಣಿನ ಮೇಲ್ಪದರವನ್ನು ಅಗೆದು ತೆಗೆದ ಬಳಿಕ, ಆ ಸೋ೦ಕುಳ್ಳ ಮಣ್ಣನ್ನು ಕಸದ ಚೀಲಗಳಲ್ಲಿ ತು೦ಬಿಸಿರಿ. ಕಸದ ಈ ಚೀಲಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಕೈತೋಟದ ಇತರೆಡೆಗಳಿಗೂ ಸೋ೦ಕು ತಗಲದ೦ತೆ ಮುತುವರ್ಜಿವಹಿಸಿರಿ.

ಸೋ೦ಕು ನಿವಾರಕ ದ್ರಾವಣವನ್ನು ಸಿ೦ಪಡಿಸಿರಿ
ಸೋ೦ಕಿನಿ೦ದ ಬಾಧಿತವಾಗಿದ್ದ ಮಣ್ಣಿನಲ್ಲಿ ಜಾಗದಲ್ಲಿ ಆರೋಗ್ಯಯುತವಾದ ಮಣ್ಣನ್ನು ಹಾಕಬೇಕಾಗಿರುವುದಾದರೂ ಸಹ, ಅದನ್ನು ಹಾಗೆಯೇ ನೇರವಾಗಿ ಹಾಕುವ೦ತಿಲ್ಲ. ಆರೋಗ್ಯಯುತವಾದ ಮಣ್ಣನ್ನು ಹಾಕಿದ ಬಳಿಕ ಮು೦ದೆ೦ದೂ ಆ ಮಣ್ಣಿಗೂ ಸೋ೦ಕು ತಗುಲದ೦ತೆ ಎಚ್ಚರವಹಿಸಬೇಕು ಹಾಗೂ ಈ ನಿಟ್ಟಿನಲ್ಲಿ ಆ ಸ್ಥಳವನ್ನು ಸೋ೦ಕಿನಿ೦ದ ನಿವಾರಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಸಮಪ್ರಮಾಣಗಳಲ್ಲಿ ವಿನಿಗರ್ ಹಾಗೂ ನೀರನ್ನು ಮಿಶ್ರಗೊಳಿಸಿ ಈ ಮಿಶ್ರಣವನ್ನು ಕೈತೋಟಕ್ಕೆ ಅಥವಾ ಕು೦ಡಕ್ಕೆ ಸಿ೦ಪಡಿಸಿರಿ. ನೀವು ಹೊಸ ಮಣ್ಣನ್ನು ಆ ಸ್ಥಳದಲ್ಲಿ ತು೦ಬಿಸುವಾಗಲೂ ಸಹ ನಡುನಡುವೆ ಈ ದ್ರಾವಣವನ್ನು ಸಿ೦ಪಡಿಸುವುದನ್ನು ಮು೦ದವರೆಸಬೇಕು.

ಸೋ೦ಕಿನಿ೦ದ ಬಾಧಿತವಾಗಿರುವ ಮಣ್ಣನ್ನು ತೆಗೆದು ಆ ಸ್ಥಳದಲ್ಲಿ ಹೊಸ ಆರೋಗ್ಯಯುತವಾದ ಮಣ್ಣನ್ನು ತು೦ಬಿಸಿರಿ ಈಗ ನಿಮ್ಮ ಕೈತೋಟ ಅಥವಾ ಕು೦ಡವು ಹೊಸ ಮಣ್ಣು ಹಾಗೂ ಸಸಿಯನ್ನೂ ಕೂಡ ಪಡೆದುಕೊಳ್ಳಲು ಸಿದ್ಧವಾಗಿದೆ. ಈ ಹೊಸ ಮಣ್ಣಿಗೆ ಯೋಗ್ಯ ಪ್ರಮಾಣದಲ್ಲಿ ಗೊಬ್ಬರವನ್ನು ಬೆರೆಸಿ ಹಾಗೂ ಬಳಿಕ ಈ ಮಣ್ಣು-ಗೊಬ್ಬರಗಳ ಮಿಶ್ರಣವನ್ನು, ಸಸಿಯನ್ನು ಬೆಳೆಸಬೇಕೆ೦ದಿರುವ ಕೈತೋಟದ ಜಾಗದಲ್ಲಿ ಅಥವಾ ಕು೦ಡದಲ್ಲಿ ತು೦ಬಿಸಿರಿ. ಕೈತೋಟದ ಮಣ್ಣಿನಿ೦ದ ಮೌಲ್ಡ್ ಅನ್ನು ನಿವಾರಿಸಿ, ಹೊಸ ಮಣ್ಣನ್ನು ತು೦ಬಿಸುವ ವೇಳೆ, ಹೊಸ ಮಣ್ಣಿಗೆ ಪೋಷಕಾ೦ಶವನ್ನು ಒದಗಿಸುವುದು ಒಳ್ಳೆಯದು.

ಹೀಗೆ ಮಾಡುವುದರಿ೦ದ ಸಸ್ಯವು ಆರೋಗ್ಯಕರವಾಗಿರುತ್ತದೆ ಹಾಗೂ ಮು೦ದಿನ ದಿನಗಳಲ್ಲಿ ಬೆಳೆಯುವ ಸಸ್ಯಕ್ಕೆ ಮೌಲ್ಡ್ ಹರಡದ೦ತೆ ತಡೆಗಟ್ಟುತ್ತದೆ. ಸಸ್ಯಗಳ೦ತೂ ಸ೦ತೃಪ್ತಿ ಹಾಗೂ ಮಹದಾನ೦ದದ ಆಗರವಾಗಿರುತ್ತವೆ. ತಾಜಾ ಹಸಿರೆಲೆಗಳ ದೃಶ್ಯವು ಕಣ್ಣುಗಳಿಗೆ ತ೦ಪನ್ನಿತ್ತು, ಆರಾಮವನ್ನೀಯುತ್ತದೆ. ಅ೦ತಹ ಆನ೦ದೋಲ್ಲಾಸವನ್ನು ಪಡೆದುಕೊಳ್ಳಬೇಕೆ೦ದು ನೀವು ಬಯಸಿದಲ್ಲಿ, ಕೈತೋಟದ ಸಸಿಗಳ ಕುರಿತು ಮುತುವರ್ಜಿವಹಿಸುವುದು ಅಗತ್ಯ ಹಾಗೂ ಅವಶ್ಯಕವೆನಿಸಿದಾಗ, ಕೈತೋಟದ ಮಣ್ಣು ಹಾಗೂ ಸಸಿಗಳಿಗೆ ಹರಡಿರಬಹುದಾದ ಮೌಲ್ಡ್ ಅನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿರಿ.

English summary

Tips To Remove Mold From Garden Soil

Do you know that removing mold from soil revives the life of a plant? Try these tips which I tried at my home garden. My hibiscus plant gradually turned from a blossoming plant to a withering one. No bud could survive and all the new growing leaves started taking a stunted look.
Story first published: Monday, February 9, 2015, 12:20 [IST]
X
Desktop Bottom Promotion