For Quick Alerts
ALLOW NOTIFICATIONS  
For Daily Alerts

ನಿಮ್ಮ ಅನುಪಸ್ಥಿತಿಯಲ್ಲಿ ಮನೆಯ ಗಿಡಗಳ ಆರೈಕೆ ಮಾಡುವುದು ಹೇಗೆ?

|

ಮನೆಗೆ ಸ್ವಲ್ಪ ಮಟ್ಟಿಗೆ ಹಸಿರನ್ನು ಸೇರಿಸುವುದು ಒಳ್ಳೆಯದೆ, ಅದಕ್ಕಾಗಿಯೇ ಅಲ್ಲವೇ ನಾವು ಮನೆಯ ಹೊರಗೆ ಮತ್ತು ಒಳಗೆ ಗಿಡಗಳನ್ನು ನೆಡುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಕೆಲವೊಂದು ಬಗೆಯ ಗಿಡಗಳನ್ನು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಇರಿಸಿಕೊಳ್ಳುವುದರಿಂದ ಅಲ್ಲಿ ವಾಸ ಮತ್ತು ಕೆಲಸ ಮಾಡುವವರಿಗೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಬೇರೆ ಮನೆ ಮಾಡಿದೆ. ಒಂದು ವೇಳೆ ನಿಮಗೆ ಗಿಡಗಳೆಂದರೆ ಇಷ್ಟವಿದ್ದಲ್ಲಿ, ನಾವು ನೀಡುವ ಸಲಹೆಗಳನ್ನು ಪಾಲಿಸಿ, ನಿಮ್ಮ ಗಿಡಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಿ.

ಮನೆಯಲ್ಲಿದ್ದಾಗ ನಿಮಗೆ ಗಿಡಗಳನ್ನು ನೋಡಿಕೊಳ್ಳಲು ಅಗತ್ಯವಾದ ಕಾಲಾವಕಾಶವಿರುತ್ತದೆ. ಆದರೆ ಕೆಲವೊಂದು ಸಮಸ್ಯೆಗಳಿಂದ ಅಥವಾ ರಜಾ ದಿನಗಳ ಸಲುವಾಗಿ ನೀವು ಊರಿಂದ ಹೊರಗೆ ಹೋಗಬೇಕಾಗಿ ಬಂದಲ್ಲಿ ನಿಮ್ಮ ಗಿಡಗಳನ್ನು ಆರೈಕೆ ಮಾಡುವವರು ಯಾರು?

Tips To Keep Plants Alive On Vacation

ಇದಕ್ಕಾಗಿ ನಾವು ಇಂದು ನಿಮ್ಮೊಂದಿಗೆ ಕೆಲವೊಂದು ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ನೀವು ಒಂದು ವೇಳೆ ರಜೆಯ ಮೇಲೆ ಮನೆಯಿಂದ ಹೊರಗೆ ತೆರಳುತ್ತಿದ್ದಲ್ಲಿ, ಈ ಸಲಹೆಗಳನ್ನು ತಪ್ಪದೆ ಪಾಲಿಸಿ, ನಿಮ್ಮ ಮನೆಯಲ್ಲಿನ ಗಿಡಗಳನ್ನು ಕಾಪಾಡಿಕೊಳ್ಳಿ. ಬನ್ನಿ ಆ ಸಲಹೆಗಳನ್ನು ಮೊದಲು ತಿಳಿದುಕೊಳ್ಳಿ, ನಂತರ ನಿಮ್ಮ ಪ್ರಯಾಣವನ್ನು ನಿಶ್ಚಿಂತೆಯಾಗಿ ಮಾಡಿ. ಹಿತ್ತಲ ತೋಟಗಾರಿಕೆಗೆ ಟಿಪ್ಸ್ ಗಳು

ಕುಂಡದಲ್ಲಿ ಸರಿಯಾದ ಮಿಶ್ರಣ
ಒಂದು ವೇಳೆ ನಿಮ್ಮ ಗಿಡಗಳಿಗೆ ತುಂಬಾ ದಿನಗಳವರೆಗೆ ನೀರು ಹಾಕಲು ಸಾಧ್ಯವಾಗಲಿಲ್ಲವಾದಲ್ಲಿ, ಆದಷ್ಟು ತೇವಾಂಶವನ್ನು ಉಳಿಸಿಕೊಳ್ಳುವ ಪಾಲಿಮರ್‌ಗಳಿಂದ ಕೂಡಿದ ಕುಂಡಗಳನ್ನು ಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಗಿಡಗಳು ನಿರಮ್ಮಳವಾಗಿರುತ್ತವೆ. ಪಾಲಿಮರ್‌ಗಳು ನೀರನ್ನು ತುಂಬಾ ದಿನಗಳ ಕಾಲ ಹಿಡಿದಿಟ್ಟುಕೊಳ್ಳುತ್ತವೆ.

ಸುರಕ್ಷಿತವಾದ ಸ್ಥಳಕ್ಕೆ ಸರಿಸಿ
ಒಂದು ವೇಳೆ ನೀವು ದೀರ್ಘಾವಧಿ ರಜೆಯ ಮೇಲೆ ಹೋಗುತ್ತಿದ್ದಲ್ಲಿ, ನಿಮ್ಮ ಗಿಡಗಳನ್ನು ಸ್ವಲ್ಪ ಸುರಕ್ಷಿತವಾದ ಸ್ಥಳಕ್ಕೆ ಸರಿಸಿ. ದೀರ್ಘಾವಧಿ ಕಾಲದವರೆಗೆ ನೇರವಾದ ಸೂರ್ಯನ ಕಿರಣಗಳಿಗೆ ಬೀಳದಂತೆ ಇದನ್ನು ನೋಡಿಕೊಳ್ಳಿ. ಆದರೆ ಆ ಗಿಡಗಳಿಗೆ ಅಗತ್ಯವಾದ ಸೂರ್ಯನ ಕಿರಣಗಳು ಅದಕ್ಕೆ ದೊರೆಯುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದಕ್ಕಾಗಿ ನೀವು ಗಿಡಗಳನ್ನು ತೆಳುವಾದ ಪರದೆಗಳು ಹಾಕಿರುವ ಕಿಟಕಿಯ ಪಕ್ಕದಲ್ಲಿ ಇಟ್ಟು ಹೋಗಬಹುದು.

ಸೂರ್ಯನ ಬೆಳಕನ್ನು ಖಾತ್ರಿಪಡಿಸಿಕೊಳ್ಳಿ
ಯಾವುದೇ ಕಾರಣಕ್ಕು ನಿಮ್ಮ ಮನೆಯಲ್ಲಿ ಗಿಡಗಳನ್ನು ಮನೆಯ ಒಳಗೆ ಇಟ್ಟು ತುಂಬಾ ದಿನ ಮನೆಯಿಂದ ಹೊರಗೆ ಹೋಗಬೇಡಿ. ಋತುಗಳಿಗೆ ತಕ್ಕಂತೆ ಗಿಡಗಳು ಬೆಳೆಯಲು ಅವಕಾಶ ಮಾಡಿಕೊಡಿ. ಅವುಗಳನ್ನು ಆದಷ್ಟು ಕಿಟಕಿಯ ಪಕ್ಕ ಇಟ್ಟು ಹೋಗಿ. ಇದರಿಂದ ಅವುಗಳ ಬೆಳವಣಿಗೆಗೆ ಅಗತ್ಯವಾದ ಸೂರ್ಯನ ಬೆಳಕು ಅವುಗಳಿಗೆ ದೊರೆಯುತ್ತದೆ. ಜೊತೆಗೆ ಇದರಿಂದ ಇವು ನೀವು ರಜೆ ಮುಗಿಸಿಕೊಂಡು ಬರುವವರೆಗೆ ಬದುಕಿರುತ್ತದೆ. ಬಹುಪಯೋಗಿ ಲಿಂಬೆಯನ್ನು ಕೈತೋಟದಲ್ಲಿ ಬೆಳೆಸುವುದು ಹೇಗೆ?

ಸಹಾಯವನ್ನು ಕೋರಿ
ನಿಮ್ಮ ನೆರೆ-ಹೊರೆಯವರ ಸಹಾಯವನ್ನು ಪಡೆಯಲು ಹಿಂದೆ ಮುಂದೆ ನೋಡಬೇಡಿ. ಅವರು ಬಂದು ನಿಮ್ಮ ಗಿಡಗಳಿಗೆ ನೀರು ಹಾಕಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವುದನ್ನು ಮರೆಯಬೇಡಿ. ಒಂದು ವೇಳೆ ಅವರು ಒಪ್ಪಿದಲ್ಲಿ, ನಿಮ್ಮ ಮನೆಯ ಗಿಡಗಳನ್ನು ತಾತ್ಕಾಲಿಕವಾಗಿ ಅವರ ಮನೆಗೆ ವರ್ಗಾಯಿಸಲು ಸಹ ಸಂಕೋಚ ಪಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರ ಗಿಡಗಳಿಗೆ ನೀವು ರಕ್ಷಣೆಯನ್ನು ಒದಗಿಸಿದಂತಾಗುತ್ತದೆ ಮತ್ತು ನೆಮ್ಮದಿಯಾಗಿ ನಿಮ್ಮ ಪ್ರವಾಸವನ್ನು ಸಹ ನೀವು ಮುಗಿಸಿಕೊಂಡು ಬರಬಹುದು.

English summary

Tips To Keep Plants Alive On Vacation

Adding some green to your home is one of the best things that you can do to make your home more fresh and lively. Moreover, it is believed that having certain plants in homes and offices can bring prosperity to the members living or working there. Follow few tips to keep your plants healthy in this article
Story first published: Thursday, April 2, 2015, 19:55 [IST]
X
Desktop Bottom Promotion