For Quick Alerts
ALLOW NOTIFICATIONS  
For Daily Alerts

ಕಣ್ತುಂಬಾ ನಿದ್ದೆಗಾಗಿ ಕೊಠಡಿಯಲ್ಲಿರಬೇಕಾದ ಸಸ್ಯಸಂಕುಲ

|

ಅಲಂಕಾರಕ್ಕೆಂದೇ ನಾವು ಮನೆಯೊಳಗೆ ಸಾಕಷ್ಟು ಗಿಡಗಳನ್ನಿಡುತ್ತೇವೆ. ಮನೆಯೊಳಗಿನ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಕೆಲವೊಂದು ಗಿಡಗಳು ಅವುಗಳು ಸೂಸುವ ಸುವಾಸನೆ ಮತ್ತು ಅರಳಿಸುವ ಹೂವುಗಳಿಂದ ಮಸಸ್ಸಿಗೆ ಮುದ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಇಂತಹ ಕೆಲವೊಂದು ಗಿಡಗಳು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮನೆಗೆ ಆಮ್ಲಜನಕವನ್ನೂ ನೀಡುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಮಲಗುವ ಕೋಣೆಯಲ್ಲಿ ನಾವು ಇಡಬೇಕಾದ ಗಿಡಗಳ ಬಗ್ಗೆ. ಮನಸ್ಸಿಗೆ ಉಲ್ಲಾಸ ನೀಡುವ ಗಿಡಗಳ ಆರೈಕೆ ಹೇಗಿರಬೇಕು?

ಹೌದು ಮಲಗುವ ಕೋಣೆಗೆ ಸೂಕ್ತವಾದ ಗಿಡಗಳನ್ನು ಆಯ್ಕೆ ಮಾಡುವುದರಿಂದ ಸರಿಯಾಗಿ ನಿದ್ರೆ ಹಾಗೂ ಶಾಂತಿ ಪಡೆಯಲು ಸಾಧ್ಯ. ಹಲವಾರು ಜಾತಿಯ ಗಿಡಗಳನ್ನು ಇದಕೋಸ್ಕರ ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಕೆಲವೊಂದು ಕಡೆಗಣಿಸಲ್ಪಟ್ಟಿದೆ. ಜನರು ತಮ್ಮ ಮನೆಗಳಿಗೆ ಹಾಗೂ ಮಲಗುವ ಕೋಣೆಗೆ ಕೆಲವೊಂದು ಗಿಡಗಳನ್ನು ತರಲಿ ಎನ್ನುವುದೇ ಈ ಲೇಖನದ ಉದ್ದೇಶ. ಇಲ್ಲಿ ಕೊಟ್ಟಿರುವ ಐದು ಗಿಡಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿಟ್ಟರೆ ಅದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ನೆರವಾಗುತ್ತದೆ...

ಮಲ್ಲಿಗೆ

ಮಲ್ಲಿಗೆ

ಮಲ್ಲಿಗೆಯಲ್ಲಿ ನೈಸರ್ಗಿಕವಾಗಿ ಉತ್ತಮ ನಿದ್ರೆ ಕೊಡುವ ಗುಣವಿದೆ ಎಂದು ವೀಲಿಂಗ್ ಜೆಸ್ಯೂಟ್ ಯೂನಿವರ್ಸಿಟಿಯ ಅಧ್ಯಯನವು ಹೇಳಿದೆ. ಇದರಲ್ಲಿನ ಧನಾತ್ಮಕ ಪರಿಣಾಮಗಳೆಂದರೆ ನಿದ್ರೆಯ ಗುಣಮಟ್ಟ, ಒತ್ತಡ ಕಡಿಮೆ ಮಾಡುವುದು ಮತ್ತು ನಿದ್ರೆಯಿಂದ ಎದ್ದಾಗ ಮೂಡ್ ನ್ನು ಉತ್ತಮಪಡಿಸುವುದು. ಜಾಸ್ಮಿನ್ ಪಾಲ್ಯಾಂತಮ್ ಗಿಡವು ಯಾವಾಗಲೂ ಹೂ ಬಿಡುವುದಿಲ್ಲ. ಅಲ್ಲದೆ ಇತರ ಗಿಡಗಳಿಗೆ ಹೋಲಿಸಿದರೆ ಇದನ್ನು ಮನೆಯಲ್ಲಿ ನೋಡಿಕೊಳ್ಳುವುದು ತುಂಬಾ ಸುಲಭ.

ಲ್ಯಾವೆಂಡರ್

ಲ್ಯಾವೆಂಡರ್

ಲ್ಯಾವೆಂಡರ್ ಹಲವಾರು ಮನೆಮದ್ದುಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಇದನ್ನು ಸೋಪ್, ಶಾಂಪೂ ಮತ್ತು ಸುವಾಸಿತ ಬಟ್ಟೆಗಳಲ್ಲಿ ಬಳಸಲ್ಪಡುತ್ತದೆ. ಇದರಲ್ಲಿ ಸ್ವಚ್ಛ ಮಾಡುವಂತಹ ಅತ್ಯುತ್ತಮ ಗುಣಗಳಿವೆ. ಆದರೆ ಇದರ ಶಕ್ತಿ ಇಲ್ಲಿಗೆ ಮಾತ್ರ ನಿಲ್ಲುವುದಿಲ್ಲ. ಲ್ಯಾವೆಂಡರ್ ಗಿಡಗಳು ನಿದ್ರಾಹೀನತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಲ್ಯಾವೆಂಡರ್ ಗಿಡಗಳಿಂದ ಬರುವಂತಹ ಸುವಾಸನೆಯನ್ನು ನಾವು ಉಸಿರಾಡಿದಾಗ ಹಿತ ಹಾಗೂ ಉಲ್ಲಾಸಭರಿತ ಪ್ರಭಾವವನ್ನು ಬೀರುತ್ತದೆ.

ಗಾರ್ಡೆನಿಯಾ

ಗಾರ್ಡೆನಿಯಾ

ಗಾರ್ಡೆನಿಯಾ ಜಾಸ್ಮಿನೊಡೆಸ್ ನ್ನು ಯಾವಾಗಲೂ ಬೆಟ್ಟದ ಮಲ್ಲಿಗೆ ಎಂದು ಕರೆಯಲಾಗುತ್ತದೆ. ಇದರಲ್ಲಿ ನಿದ್ರೆಯ ಮಾತ್ರೆಯಷ್ಟೇ ನಿದ್ರೆ ಮಾಡಿಸುವ ಶಕ್ತಿ ಇದೆ. ಜರ್ಮನಿಯಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಹೊರಬಿದ್ದ ಅಂಶವೆಂದರೆ, ಈ ಗಿಡಗಳು ಗಾಬಾ ಎಂದು ಕರೆಯಲ್ಪಡುವ ನ್ಯೂರೋಟ್ರಾನ್ಸ್ ಮಿಟ್ಟರ್ ನಷ್ಟೇ ಪ್ರಭಾವವನ್ನು ಹೊಂದಿದೆ. ಉನ್ನತ ಮಟ್ಟದಲ್ಲಿ ಸುವಾಸನೆಯನ್ನು ಹರಡಿ ಗೂಡಿನಲ್ಲಿ ಹಾಕಲ್ಪಟ್ಟ ಇಲಿಗಳು ಮೂಲೆಯೊಂದರಲ್ಲಿ ತುಂಬಾ ಕ್ರಿಯಾತ್ಮಕವಾಗಿ ಹಾಗೂ ಆರಾಮವಾಗಿ ಕುಳಿತ್ತಿದ್ದವು. ಮಾನವನ ಮೇಲೆ ಇದನ್ನು ಪ್ರಯೋಗಿಸಿದಾಗ ಅದೇ ರೀತಿಯ ಫಲಿತಾಂಶ ಬಂದಿದೆ. ಇದು ನಿಮ್ಮನ್ನು ಅದ್ಭುತ ಜಗತ್ತಿನಿಂದ ಹೊರಬರಲು ನೆರವಾಗುವುದು.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್

ಅತ್ತೆಯ ನಾಲಗೆ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಸ್ನೇಕ್ ಪ್ಲಾಂಟ್ ಮನೆಯಲ್ಲಿ ಆಮ್ಲಜನಕವನ್ನು ಶುದ್ಧೀಕರಿಸಲು ತುಂಬಾ ನೆರವಾಗುತ್ತದೆ. ಇದರ ನಿರ್ವಹಣೆ ಮತ್ತು ವೆಚ್ಚ ಕಡಿಮೆ ಇರುವುದರಿಂದ ಮಲಗುವ ಕೋಣೆಗೆ ಇದು ಹೇಳಿ ಮಾಡಿಸಿದ ಗಿಡ. ನಾಸಾ ಕೈಗೊಂಡ ಅಧ್ಯಯನದಲ್ಲಿ ಗಾಳಿಯನ್ನು ಶುದ್ಧೀಕರಿಸುವ 12 ಗಿಡಗಳಲ್ಲಿ ಸ್ನೇಕ್ ಪ್ಲಾಂಟ್ ಕೂಡ ಒಂದಾಗಿದೆ. ವಿಜ್ಞಾನ ಎಲ್ಲವನ್ನು ತಿಳಿದುಕೊಳ್ಳುತ್ತದೆ ಮತ್ತು ನಾಸಾವೇ ಹೇಳಿರುವುದರಿಂದ ನೀವು ಮಲಗುವ ಕೋಣೆಯಲ್ಲಿ ಅಳವಡಿಸುವ ಗಿಡಗಳ ಪಟ್ಟಿಗೆ ಇದನ್ನು ಸೇರಿಸಿ.

ಅಲೋ ಗಿಡ

ಅಲೋ ಗಿಡ

ಇದು ಗಾಯ, ಸುಟ್ಟಗಾಯ ಮತ್ತು ನೋವನ್ನು ಗುಣ ಮಾಡುವಂತಹ ನೈಸರ್ಗಿಕ ಮದ್ದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆಡಹುತ್ತದೆ. ಆದರೆ ಇದನ್ನು ಹೊರತುಪಡಿಸಿ ಅಲೋ ಗಿಡದಲ್ಲಿ ಹಲವಾರು ರೀತಿಯ ಗುಣಗಳಿವೆ. ಅಲೋ ಗಿಡವು ಕಲ್ಮಶವನ್ನು ಉಂಟುಮಾಡುವ ರಾಸಾಯನಿಕವನ್ನು ಪತ್ತೆ ಹಚ್ಚುತ್ತದೆ ಮತ್ತು ಮಲಗುವ ಕೋಣೆ ಹಾಗೂ ಮನೆಯ ಇತರ ಭಾಗಗಳಲ್ಲಿ ಗಾಳಿಯನ್ನು ಶುದ್ಧವಾಗಿಡುತ್ತದೆ. ನಿಮ್ಮ ಮನೆಯಲ್ಲಿ ಹಾನಿಕಾರಕ ರಾಸಾಯನಿಕಗಳು ಉನ್ನತ ಮಟ್ಟದಲ್ಲಿದ್ದಾಗ ಗಿಡವು ಕಂದು ಚುಕ್ಕೆಗಳನ್ನು ಮೂಡಿಸಿ ಪರಿಸ್ಥಿತಿ ಬಗ್ಗೆ ನಿಮಗೆ ಮುನ್ಸೂಚನೆ ನೀಡುತ್ತದೆ.

English summary

Plants to keep in your bedroom for better sleep

House plants filter air and oxygenate your home, they also add much needed colour and life to your abode. Choosing the right plants for your bedroom can be a fantastic way to help give you a relaxing night of sleep too. Below are 5 plants listed that can improve the feel of your bedroom and improve your quality of sleep,
Story first published: Tuesday, June 23, 2015, 19:51 [IST]
X
Desktop Bottom Promotion