For Quick Alerts
ALLOW NOTIFICATIONS  
For Daily Alerts

ಆರೋಗ್ಯ ರಕ್ಷಕ ಶುಂಠಿಯನ್ನು ಮನೆಯಲ್ಲಿ ಬೆಳೆಸುವುದು ಹೇಗೆ?

|

ಬಹುತೇಕ ಭಾರತೀಯ ತಿಂಡಿ-ತಿನಿಸುಗಳನ್ನು ತಯಾರಿಸುವಲ್ಲಿ ಶುಂಠಿಯು ಅತ್ಯಂತ ಅಗತ್ಯವಾದ ಪದಾರ್ಥವಾಗಿರುತ್ತದೆ. ಇದರಲ್ಲಿ ಹಲವಾರು ಔಷಧೀಯ ಪದಾರ್ಥಗಳು ಇರುತ್ತವೆ. ಆದ್ದರಿಂದ ಇದು ನಿಮ್ಮ ಅಡುಗೆ ಮನೆಯ ಶೆಲ್ಫ್‌ನಲ್ಲಿ ತಪ್ಪದೆ ಇರುವಂತೆ ನೋಡಿಕೊಳ್ಳಿ. ಹರ್ಬಲ್ ಟೀ, ಕೆಮ್ಮಿನ ಔಷಧಿ ಮತ್ತು ನೋವು ನಿವಾರಕವಾಗಿ ಶುಂಠಿಯನ್ನು ತಪ್ಪದೆ ಬಳಸುತ್ತಾರೆ. ಆದರೆ ನೀವು ಮಾರುಕಟ್ಟೆಯಿಂದ ತರುವ ಶುಂಠಿಯು ತಾಜಾ, ಸುರಕ್ಷಿತ ಮತ್ತು ಕೀಟ ನಾಶಕ ಮುಕ್ತ ಆಗಿರುತ್ತದೆ ಎಂಬ ನಂಬಿಕೆ ನಿಮಗಿದೆಯೇ?

ಒಂದು ವೇಳೆ ಇಲ್ಲದಿದ್ದಲ್ಲಿ, ಮನೆಯಲ್ಲಿಯೇ ಶುಂಠಿಯನ್ನು ಬೆಳೆಯುವ ಆಲೋಚನೆ ಮಾಡಿ! ಶುಂಠಿಯನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೆಲದಲ್ಲಿ ಅಥವಾ ಕುಂಡದಲ್ಲಿ ಸಹ ಬೆಳೆಯಬಹುದು. ಇದು ಅಧಿಕವಾದ ಆರೈಕೆ ಮತ್ತು ಶ್ರಮವನ್ನು ಬಯಸುತ್ತದೆ. ಒಂದು ವೇಳೆ ನೀವು ಅಧಿಕ ಕೆಲಸ ಮಾಡುವ ಮಹಿಳೆಯಾಗಿದ್ದಲ್ಲಿ, ಕುಂಡದಲ್ಲಿ ಬೆಳೆಯಲು ಆಧ್ಯತೆ ನೀಡಿ. ಬನ್ನಿ ನಿಮ್ಮ ಮನೆಯಲ್ಲಿ ಶುಂಠಿಯನ್ನು ಬೆಳೆಯಲು ನಾವು ಈ ಅಂಕಣದಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಬನ್ನಿ ಅದರ ಕುರಿತು ನೋಡೋಣ...

How To Grow Ginger At Home

ಶುಂಠಿ ಬೇರನ್ನು ಆರಿಸಿಕೊಳ್ಳಿ
ಒಂದು ಆರೋಗ್ಯಕರವಾದ ಶುಂಠಿ ಬೇರನ್ನು ತೆಗೆದುಕೊಳ್ಳಿ. ಶುಂಠಿಯನ್ನು ಬೆಳೆಯಲು ಹೋಗುವಾಗ ಮಾರುಕಟ್ಟೆಯಿಂದ ತಂದ ಒಂದು ಆರೋಗ್ಯಕರವಾದ ಬೇರನ್ನು ಆರಿಸಿಕೊಳ್ಳಿ. "ಕಣ್ಣುಗಳು" ಇರುವ ಅಥವಾ ಕುಡಿ ಬಂದಿರುವ ಶುಂಠಿಯನ್ನು ತೆಗೆದುಕೊಳ್ಳಿ. ಇದು ಶುಂಠಿಯನ್ನು ಮನೆಯಲ್ಲಿ ಬೆಳೆಯಲು ಇರುವ ಅತ್ಯುತ್ತಮವಾದ ಮಾರ್ಗವಾಗಿದೆ. ಮನೆಯ ಕೈತೋಟದಲ್ಲಿ ಸಿಹಿ ಗೆಣಸನ್ನು ಬೆಳೆಸುವುದು ಹೇಗೆ?

ಕುಂಡವನ್ನು ಆಯ್ದುಕೊಳ್ಳಿ
14 ಇಂಚು ಅಗಲ ಮತ್ತು 12 ಇಂಚು ಆಳವಿರುವ ಕುಂಡವನ್ನು ತೆಗೆದುಕೊಳ್ಳಿ. ಮಣ್ಣನ್ನು ಸಡಿಲವಾಗಿ ಇರಿಸಿಕೊಳ್ಳಿ. ಇದರಿಂದ ನಿಮಗೆ ನೀರು ಹಾಕಲು ಸುಲಭವಾಗುತ್ತದೆ. ಇದಕ್ಕೆ ಗೊಬ್ಬರವನ್ನು ಹಾಕಿ. ಕುಂಡದಲ್ಲಿರುವ ನೀರು ಸರಾಗವಾಗಿ ಹರಿದು ಹೋಗುವಂತಿರಬೇಕು. ಒಂದು ಕುಂಡದಲ್ಲಿ ನೀವು ಮೂರು ಶುಂಠಿಯನ್ನು ಇರಿಸಿಕೊಳ್ಳಬಹುದು.

ನೆಡುವ ವಿಧಾನ
ನೆಲದಲ್ಲಿ ಶುಂಠಿಯನ್ನು ನೆಡುವುದು ಸ್ವಲ್ಪ ವ್ಯತ್ಯಾಸಗಳಿಂದ ಕೂಡಿರುತ್ತದೆ. ಶುಂಠಿಗಳ ನಡುವೆ ಸ್ವಲ್ಪ ಸ್ಥಳಾವಕಾಶವನ್ನು ಬಿಡಿ. ಕುಡಿಗಳು ಮೇಲಕ್ಕೆ ಇರುವಂತೆ ನೋಡಿಕೊಳ್ಳಿ. ಕುಂಡದಲ್ಲಿ ನೆಡುವಾಗಲು ಸಹ ಇದೇ ಮಾರ್ಗವನ್ನು ಅನುಸರಿಸಿ. ಆರೋಗ್ಯಕಾರಿ ತರಕಾರಿಗಳನ್ನು ಕೈತೋಟದಲ್ಲೇ ಬೆಳೆಸಬಹುದಲ್ಲವೇ?

ಉಷ್ಣಾಂಶ
ಶುಂಠಿಗೆ "ಬಿಸಿ"ಯಾದ ಉಷ್ಣಾಂಶ ಅಗತ್ಯವಿರುತ್ತದೆ. ಈ ಶುಂಠಿಯ ಸಸಿಗಳನ್ನು ನೀವು ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇರಿಸಿದರೆ ಖಂಡಿತ ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. 24-26 ° ಸೆಲ್ಶಿಯಸ್ ಉಷ್ಣಾಂಶದಲ್ಲಿ ಶುಂಠಿಯನ್ನು ಬೆಳೆಯಿರಿ. ಇದರಿಂದ ಶುಂಠಿಯು ಸರಾಗವಾದ ಬೆಳವಣಿಗೆಯನ್ನು ಕಾಣುತ್ತದೆ. ಸೊ೦ಪಾಗಿ ಬೆಳೆಯುತ್ತಿರುವ ಗಿಡ ಅನಿರೀಕ್ಷಿತವಾಗಿ ಬಾಡಿ ಹೋಗುವುದೇಕೆ?

ನೀರು ಹಾಕುವುದು
ಶುಂಠಿ ಗಿಡಗಳಿಗೆ ನೀರು ಹಾಕುವಾಗ ಜಾಗರೂಕತೆಯಿಂದ ಇರಿ. ಗಿಡಗಳನ್ನು ನೆಟ್ಟಾಗ ಅದಕ್ಕೆ ಸ್ವಲ ನೀರನ್ನು ಹಾಕಿ. ಆನಂತರ ಕುಡಿಗಳು ಕಾಣಿಸಿಕೊಂಡ ಮೇಲೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ. ಚಳಿಗಾಲದಲ್ಲಿ ಗಿಡವು ಸುಪ್ತವಾಗಿದ್ದಾಗ, ಅದಕ್ಕೆ ನೀರನ್ನು ಹಾಕಬೇಡಿ.

English summary

How To Grow Ginger At Home

Ginger is an essential ingredient of most of the Indian recipes. It also has numerous medicinal benefits that make it a must-have in the kitchen shelf. Ginger is widely used in herbal tea, cough 
 medicines and pain relievers as well...Follow few tips to grow ginger at home in this article of ours. Read on, to find more.
Story first published: Saturday, March 7, 2015, 18:54 [IST]
X
Desktop Bottom Promotion